Vijaya Ekadashi 2023: ಈ ದಿನ ವಿಷ್ಣು ಪೂಜೆಯಿಂದ ಶತ್ರುಗಳ ವಿನಾಶ

By Suvarna NewsFirst Published Feb 15, 2023, 12:29 PM IST
Highlights

ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಕರ್ನಾಟಕದಲ್ಲಿ ವಿಜಯ ಏಕಾದಶಿ ಎನ್ನಲಾಗುತ್ತದೆ. ಈ ಏಕಾದಶಿ ಉಪವಾಸವು ಶತ್ರುಗಳ ವಿರುದ್ಧ ಜಯ ಸಾಧಿಸಲು ನೆರವಾಗುತ್ತದೆ. ಈ ಬಾರಿ ವಿಜಯ ಏಕಾದಶಿಯ ದಿನಾಂಕ, ಸಮಯ ಇತ್ಯಾದಿ ವಿವರಗಳನ್ನು ತಿಳಿಯೋಣ. 

ಏಕಾದಶಿ ದಿನಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವ ಇದೆ. ಈ ವಿಶೇಷ ದಿನವು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆರಾಧನೆಗೆ ಪ್ರಮುಖವಾಗಿದೆ. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ, ಎಲ್ಲಾ ತೊಂದರೆಗಳು ಮತ್ತು ದುಃಖಗಳು ದೂರವಾಗುತ್ತವೆ. ಈ ವಿಶೇಷ ದಿನದ ದಿನಾಂಕ, ಪೂಜಾ ಸಮಯ ಹಾಗೂ ಪೂಜಾ ವಿಧಾನ ತಿಳಿಯೋಣ. 

ವಿಜಯ ಏಕಾದಶಿ 2023 
ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿ ಉಪವಾಸವನ್ನು ನಾಳೆ ಅಂದರೆ 16 ಫೆಬ್ರವರಿ 2023, ಗುರುವಾರ ಆಚರಿಸಲಾಗುತ್ತದೆ. ವಿಜಯ ಏಕಾದಶಿ ವ್ರತದ ದಿನದಂದು, ಭಕ್ತರು ಶುಭ ಸಮಯದಲ್ಲಿ ಮಾಡುವ ಪೂಜೆ ಮತ್ತು ದಾನದಿಂದ ವಿಶೇಷ ಲಾಭವನ್ನು ಪಡೆಯುತ್ತಾರೆ. ವಿಜಯ ಏಕಾದಶಿ ವ್ರತದಂದು ಶ್ರೀ ಹರಿಯನ್ನು ಯಾವ ಸಮಯದಲ್ಲಿ ಪೂಜಿಸಬೇಕು ಮತ್ತು ಪೂಜೆಯ ವಿಧಾನವನ್ನು ತಿಳಿಯೋಣ.

Latest Videos

ವ್ರತ ಮಹಿಮೆ
ಪದ್ಮ ಪುರಾಣ ಮತ್ತು ಸ್ಕಂದ ಪುರಾಣದ ಪ್ರಕಾರ, ಶ್ರೀರಾಮನು ಲಂಕಾವನ್ನು ವಶಪಡಿಸಿಕೊಳ್ಳಲು ಈ ಏಕಾದಶಿ ಉಪವಾಸವನ್ನು ಆಚರಿಸಿದನು. ವಿಜಯ ಏಕಾದಶಿಯಂದು ಉಪವಾಸವಿದ್ದು, ನಿಯಮಾವಳಿಗಳ ಪ್ರಕಾರ ಪೂಜಿಸುವುದರಿಂದ ಪ್ರತಿಕೂಲ ಪರಿಸ್ಥಿತಿಗಳು ವ್ಯಕ್ತಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ ಮತ್ತು ಶತ್ರುಗಳ ಮೇಲೆ ವಿಜಯವನ್ನು ಸಾಧಿಸಲಾಗುತ್ತದೆ ಎಂದು ನಂಬಲಾಗಿದೆ. ವಿಜಯ ಏಕಾದಶಿ ವ್ರತವನ್ನು ಆಚರಿಸುವುದರಿಂದ ಸ್ವರ್ಣದಾನ, ಭೂದಾನ, ಅನ್ನದಾನ, ಗೋದಾನಕ್ಕಿಂತ ಹೆಚ್ಚಿನ ಪುಣ್ಯ ಫಲಗಳು ಲಭಿಸುತ್ತವೆ ಮತ್ತು ಅಂತಿಮವಾಗಿ ಜೀವಿಯು ಮೋಕ್ಷವನ್ನು ಪಡೆಯುತ್ತಾನೆ ಎಂದು ವಿಜಯ ಏಕಾದಶಿ ವ್ರತವನ್ನು ಕುರಿತು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಿಮ್ಮ ಶತ್ರುಗಳಲ್ಲಿ ಯಾರಾದರೂ ನಿಮಗೆ ತೊಂದರೆ ನೀಡಿದರೆ, ಅವರನ್ನು ಸೋಲಿಸಲು ಈ ಉಪವಾಸವನ್ನು ಆಚರಿಸುವುದು ಒಳ್ಳೆಯದು.

MahaShivratri 2023ಯಂದೇ ಶನಿ ಪ್ರದೋಷ ವ್ರತ; ಶನಿ ದೋಷ ನಿವಾರಣೆಗೆ ಸುದಿನ

ವಿಜಯ ಏಕಾದಶಿ ವ್ರತ ಪೂಜಾ ಸಮಯ
ವೈದಿಕ ಕ್ಯಾಲೆಂಡರ್ ಪ್ರಕಾರ, ಏಕಾದಶಿ ತಿಥಿ ಫೆಬ್ರವರಿ 16, 2023 ರಂದು 04:02 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 17, 2023 ರಂದು 01:09 PM ಕ್ಕೆ ಕೊನೆಗೊಳ್ಳುತ್ತದೆ. ಈ ದಿನ, ಬೆಳಗಿನ ಪೂಜೆಯ ಬ್ರಹ್ಮ ಮುಹೂರ್ತವು 04:32 AM ರಿಂದ 05:17 AM ವರೆಗೆ ಮತ್ತು ಸಂಧ್ಯಾ ಆರತಿಗಾಗಿ ಗೋಧೂಳಿ ಮುಹೂರ್ತವು ಸಂಜೆ 06:45 ರಿಂದ 07:08 ರವರೆಗೆ ಇರುತ್ತದೆ. ಪಂಚಾಂಗದ ಪ್ರಕಾರ, ಉಪವಾಸದ ಸಮಯವು 17 ಫೆಬ್ರವರಿ 2023ರಂದು ಬೆಳಿಗ್ಗೆ 06:31 ರಿಂದ 08:35 ರವರೆಗೆ ಇರುತ್ತದೆ.

ವಿಜಯ ಏಕಾದಶಿ ಪೂಜಾ ವಿಧಾನ
ಬ್ರಹ್ಮ ಮುಹೂರ್ತದಲ್ಲಿ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಧ್ಯಾನ ಮಾಡಿ ಮನೆಯ ದೇವಸ್ಥಾನದಲ್ಲಿ ದೀಪ ಹಚ್ಚಬೇಕು.
ಭಗವಾನ್ ವಿಷ್ಣುವಿಗೆ ಗಂಗೆಯ ನೀರಿನಿಂದ ಅಭಿಷೇಕ ಮಾಡಿ ಮತ್ತು ತುಳಸಿ ದಳ ಮತ್ತು ಹೂವುಗಳು ಇತ್ಯಾದಿಗಳನ್ನು ಅರ್ಪಿಸಿ.
ಇದರ ನಂತರ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಮಂತ್ರಗಳನ್ನು ಪಠಿಸಿ ಮತ್ತು ಆರತಿ ಮಾಡಿ.
ಏಕಾದಶಿ ವ್ರತದ ದಿನದಂದು ಸಾಧಕರು ಶುದ್ಧವಾದ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು ಮತ್ತು ಸಾಧ್ಯವಾದರೆ ಉಪವಾಸವನ್ನು ಆಚರಿಸಬೇಕು.
ಸಂಜೆಯ ಪೂಜೆಯ ಸಮಯದಲ್ಲಿ, ವಿಷ್ಣುವನ್ನು ಯಥಾವತ್ತಾಗಿ ಪೂಜಿಸಿದ ನಂತರ, ಮತ್ತೊಮ್ಮೆ ಆರತಿ ಮಾಡಿ ಮತ್ತು ತುಳಸಿಯ ಮುಂದೆ ದೀಪವನ್ನು ಬೆಳಗಿಸಿ.

ಏಕಾದಶಿ ಮಂತ್ರವನ್ನು ಪಠಿಸಿ
ಶ್ರೀ ವಿಷ್ಣು ಮಂತ್ರ
ಮಂಗಳಂ ಭಗವಾನ್ ವಿಷ್ಣು: ಮಂಗಳಂ ಗರಡಧ್ವಜ
ಮಂಗಲಂ ಪುಂಡರೀಕಾಕ್ಷ, ಮಂಗಲಾಯ ತನೋ ಹರಿ ॥

Mahashivratri 2023: ಶಿವನ ನೆಚ್ಚಿನ ಈ ಹೂವಿನಿಂದ ಪೂಜಿಸಿದರೆ ಪಾಪ ದೋಷಗಳಿಂದ ಮುಕ್ತಿ

ವಿಷ್ಣು ಸ್ತುತಿ
ಶಾನ್ತಾಕರಂ ಭುಜಂಗಶಯನಂ ಪದ್ಮನಾಭಂ ಸುರೇಶ
ವಿಶ್ವಾಧರಂ ಗಗನ ಸದೃಶಂ ಮೇಘವರ್ಣಂ  ಶುಭಾಂಗಂ.
ಲಕ್ಷ್ಮೀಕಾಂತ ಕಮಲನಯನಂ ಯೋಗಿಭುರ್ಧ್ಯಾನಗಮ್ಯಮ್
ವನ್ದೇ ವಿಷ್ಣು ಭವಭಯಹರಂ ಸರ್ವ ಲೋಕೈಕನಾಥಮ್ ।
ಯಂ ಬ್ರಹ್ಮ ವರುಣೈಂದ್ರು ರುದ್ರಮಾರುತ್ ಸ್ತುವನಿ ದಿವ್ಯೈ ಸ್ತ್ವೈವೇದ:
ಸಂಗ ಪದಕ್ರಮೋಪನಿಷದೈ ಗೈರನ್ತಿ ಯಾಂ ಸಾಮಗಾಃ ।
ಧ್ಯಾನ ತದ್ಗತೇನ್ ಮನಸಾ ಪಶ್ಯತಿ ಯಂ ಯೋಗಿನೋ
ಯಸ್ಯತಾಂ ನ ವಿದು: ಸುರಾಸುರಗಣ ದೈವಾಯ ತಸ್ಮೈ ನಮಃ ।

click me!