ಮಹಾಶಿವರಾತ್ರಿಗೆ ದಿನಗಣನೆ ಶುರುವಾಗಿದೆ. ಶಿವರಾತ್ರಿಯಂದು ಬಹುತೇಕ ಭಕ್ತರು ಇಡೀ ಹಗಲು ರಾತ್ರಿ ಶಿವ ಪೂಜೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಶಿವನನ್ನು ಮೆಚ್ಚಿಸಲು ಅವನಿಗೆ ಯಾವ ಹೂಗಳನ್ನು ಅರ್ಪಿಸಬೇಕು ಎಂದು ನಿಮಗೆ ತಿಳಿದಿದೆಯೇ? ಶಿವನ ನೆಚ್ಚಿನ ಹೂಗಳಿವು.
ಭಗವಾನ್ ಶಿವ ಭಕ್ತಿಗೊಲಿಯುವ ದೇವರು. ಹೃದಯದಿಂದ ಆರಾಧಿಸಿದರೆ ಅದಕ್ಕಿಂತ ಹೆಚ್ಚಿನದೇನನ್ನೂ ಬಯಸದವ ಮಹದೇವ. ಆದರೆ ಖಂಡಿತವಾಗಿಯೂ ನಾವು ದೈವತ್ವಕ್ಕೆ ಹತ್ತಿರವಾಗಲು ನಾವು ಅನುಸರಿಸುವ ಕೆಲವು ಆಚರಣೆಗಳಿವೆ. ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ನಾವು ಅವನಿಗೆ ಅರ್ಪಿಸಬೇಕು.
ಸಾಮಾನ್ಯವಾಗಿ ಎಲ್ಲ ದೇವರಿಗೆ ಅರ್ಪಿಸುವ ಹೂಗಳು ಶಿವನಿಗಲ್ಲ. ಆತನಿಗೆ ಕಾಡು ಹೂಗಳ ಮೇಲೆ ಹೆಚ್ಚಿನ ಪ್ರೀತಿ. ವೇಷಭೂಷಣ, ಇಷ್ಟಕಷ್ಟಗಳೆಲ್ಲದರಲ್ಲೂ ಕೊಂಚ ಭಿನ್ನವಾಗಿಯೇ, ಸರಳವಾಗಿರುವ ಶಿವನಿಗೆ ಎಲ್ಲರೂ ಕಡೆಗಣಿಸುವ ಕಾಡು ಹೂಗಳು ಇಷ್ಟ. ಈ ಮಹಾಶಿವರಾತ್ರಿಯಲ್ಲಿ(Mahashivratri 2023) ಶಿವನ ಪೂಜೆ ಮಾಡುವಾಗ ಆತನಿಗಿಷ್ಟದ ಹೂಗಳನ್ನು ಬಳಸಿ ಭಕ್ತಿ ಮೆರೆಸಿ. ಅಂದ ಹಾಗೆ, ಶಿವನ ಮೆಚ್ಚಿನ ಹೂಗಳು(Lord Shiva's favourite flowers) ಯಾವೆಲ್ಲ ಎಂಬ ವಿವರ ಇಲ್ಲಿದೆ..
ಶಿವನ ಆರಾಧನೆಯಲ್ಲಿ ಕೆಂಪು ಮತ್ತು ಬಿಳಿ ಆಕೃತಿಗಳ ಹೂವುಗಳನ್ನು ವಿಶೇಷವಾಗಿ ಅರ್ಪಿಸಲಾಗುತ್ತದೆ. ಅಂಥ ಹೂಗಳು ಯಾವೆಲ್ಲ ನೋಡೋಣ.
ಶಮಿ ಪುಷ್ಪ, ಬೇಲದ ಹೂವು, ಹಲಸಿನ ಪುಷ್ಪ
ಹೌದು, ಹಲಸಿನ ಮರದಲ್ಲಿ ಬೆಳೆವ ಪುಷ್ಪವನ್ನು ಸಾಮಾನ್ಯವಾಗಿ ಯಾವ ದೇವರಿಗೂ ಅರ್ಪಿಸುವುದಿಲ್ಲ. ಆದರೆ, ಶಿವನಿಗೆ ಆ ಹೂವಿನ ಮೇಲೆ ಪ್ರೀತಿ ಇದೆ. ಶಮಿ ಪುಷ್ಪ, ಬೇಲದ ಹೂವು ಬಳಕೆಗೆ ಶಿವನ ಆರಾಧನೆಯಲ್ಲಿ ವಿಶೇಷ ಮಹತ್ವವಿದೆ.
ಧತುರಾ
ಧತುರಾ ಶಿವನ ನೆಚ್ಚಿನ ಹೂವು. ಅಮೃತ ಮಥನದಿಂದ ಹೊರಕ್ಕೆ ಬಂದ ವಿಷವನ್ನು ಶಿವನು ಕುಡಿದಾಗ, ಈ ಹೂವು ಶಿವನ ಎದೆಯಿಂದ ಕಾಣಿಸಿಕೊಂಡಿತು. ಆದ್ದರಿಂದ ಅಹಂಕಾರ, ಪೈಪೋಟಿ, ಅಸೂಯೆ ಮತ್ತು ದ್ವೇಷದ ವಿಷವನ್ನು ತೊಡೆದುಹಾಕಲು ಶಿವಪೂಜೆಯ ಸಮಯದಲ್ಲಿ ಧತುರಾವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ಹೂವುಗಳಿಂದ ಶಿವನನ್ನು ಪೂಜಿಸಿದರೆ, ವಾಗ್ದಾನ ಮಾಡದ ಕಾರಣದಿಂದ ಉಂಟಾಗುವ ಪಾಪ ಮತ್ತು ಸುಳ್ಳು ಹೇಳುವ ಪಾಪವು ನಾಶವಾಗುತ್ತದೆ.
ಬಿಲ್ವ ಪತ್ರೆ (bel Patra)
ಹಿಂದೂ ಪೂಜಾ ಸಂಪ್ರದಾಯದಲ್ಲಿ ಕೇವಲ ಹೂಗಳಲ್ಲ, ಎಲೆಗಳನ್ನೂ ದೇವರಿಗೆ ಅರ್ಪಿಸಲಾಗುತ್ತದೆ. ಅಂತೆಯೇ ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸಲಾಗುತ್ತದೆ. ಅವನಿಗೆ ಇದನ್ನು ತ್ರಿಕೋನ ಎಲೆಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಬಿಲ್ವಪತ್ರೆ ನೈವೇದ್ಯವಿಲ್ಲದೆ ಶಿವನ ಪೂಜೆಯು ಫಲಪ್ರದವಾಗುವುದಿಲ್ಲ ಎಂದು ಹೇಳಲಾಗುತ್ತದೆ.
Mahashivratri 2023 : ಶಿವನಿಗೆ ಬಿಲ್ವಪತ್ರೆ ಏರಿಸುವ ಮುನ್ನ ಈ ವಿಷಯಗಳ ಇರಲಿ ಲಕ್ಷ್ಯ
ದಾಸವಾಳದ ಹೂವು (hibiscus)
ಈ ಹೂವಿನಿಂದ ಪೂಜಿಸಿದರೆ ಕೈಲಾಸದಲ್ಲಿ ವಾಸಿಸುವ ವರವನ್ನು ಪಡೆಯುತ್ತೀರಿ.
ಕರವೀರ ಪುಷ್ಪ
ಗುಲಾಬಿಯ ಜಾತಿಗೆ ಸೇರಿದ ಕರವೀರ ಪುಷ್ಪವು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಅಸ್ವಸ್ಥರಾದವರು ಶಿವನಿಗೆ ಈ ಹೂವನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸಿದರೆ ಖಂಡಿತವಾಗಿಯೂ ಗುಣಮುಖರಾಗುತ್ತಾರೆ.
ಮಲ್ಲಿಗೆ (Jasmine)
ಶಿವನಿಗೆ ಮಲ್ಲಿಗೆಯನ್ನು ಅರ್ಪಿಸುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಸಂಪತ್ತು ತುಂಬುತ್ತದೆ. ಇದರಿಂದ ನಿಮ್ಮ ಮನೆ ಧಾನ್ಯಗಳಿಂದ ತುಂಬಿರುತ್ತದೆ.
ಗುಲಾಬಿ ಹೂವು (Rose)
ಶಿವನನ್ನು ಗುಲಾಬಿ ಹೂವುಗಳಿಂದ ಪೂಜಿಸಿದಾಗ ಅದು ಹತ್ತು ಕುದುರೆಗಳಿಗೆ ಮಾಡಿದ ಯಜ್ಞಕ್ಕೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇರವಂತಿ/ಮೋಗ್ರಾ (Mogra)
ಕಾಡು ಮಲ್ಲಿಗೆ ಹೂವನ್ನು ಶಿವನಿಗೆ ಅರ್ಪಿಸಿದಾಗ, ಹೆಂಡತಿ, ಮಗು ಇತ್ಯಾದಿ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ.
Mahashivaratri 2023: ಉಜ್ಜಯನಿ ಮಹಾಕಾಲನಿಗೆ 21 ಲಕ್ಷ ದೀಪಗಳ ಸೇವೆ
ದೂರ್ವೆ (Doorva)
ದೂರ್ವೆಯು ಸಕಾರಾತ್ಮಕತೆಯಿಂದ ವ್ಯಕ್ತಿಯ ಮನಸ್ಸನ್ನು ತುಂಬಲು ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಇದನ್ನು ಶಿವನಿಗೆ ಅರ್ಪಿಸಲಾಗುತ್ತದೆ.
ಕಮಲದ ಹೂವು (Lotus)
ಕಮಲದ ಹೂಗಳಿಂದ ಶಿವನನ್ನು ಪೂಜಿಸಿದರೆ ಇತರರನ್ನು ಟೀಕಿಸುವುದರಿಂದ, ಇತರರನ್ನು ನಿಂದಿಸುವುದರಿಂದ ಉಂಟಾಗುವ ಪಾಪಗಳು ನಿವಾರಣೆಯಾಗುತ್ತವೆ.
ನೈದಿಲೆ(Blck lilly)
ನೈದಿಲೆ ಹೂವುಗಳಿಂದ ಶಿವನನ್ನು ಪೂಜಿಸಿದರೆ ಐದು ಮಹಾ ಪಾಪಗಳ ದೋಷವು ನಿವಾರಣೆಯಾಗುತ್ತದೆ.