ಶುಕ್ರ ಗ್ರಹದ ರಾಶಿ ಪರಿವರ್ತನೆ ಈ ರಾಶಿಗಳಿಗೆ ಶುಭಫಲ, ನಿಮ್ಮ ರಾಶಿ ಇದೆಯಾ?

By Suvarna News  |  First Published May 26, 2021, 12:44 PM IST

ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಶುಭಾಶುಭ ಪರಿಣಾಮಗಳನ್ನು ಬೀರುತ್ತವೆ. ಇದೇ ಮೇ 28ರಂದು ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರ ಗ್ರಹದ ಈ ಗೋಚಾರವು ಕೆಲವು ರಾಶಿಯವರಿಗೆ ಉತ್ತಮ ಫಲವನ್ನು ನೀಡಲಿದೆ. ಹಾಗಾದರೆ ಶುಭ ಫಲವನ್ನು ಪಡೆಯುವ ರಾಶಿಗಳ ಬಗ್ಗೆ ತಿಳಿಯೋಣ...
 


ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಅದು ಶುಭವು ಆಗಿರಬಹುದು, ಕೆಲವೊಮ್ಮೆ ಅಶುಭ ಫಲಗಳನ್ನು ಬೀರುತ್ತದೆ. ಈಗ ಶುಕ್ರ ಗ್ರಹವು ಮಿಥುನ ರಾಶಿಗೆ ಪರಿವರ್ತನೆ ಹೊಂದಲಿದ್ದು, ಇದರ ಪರಿಣಾಮವಾಗಿ ಕೆಲವು ರಾಶಿಯವರು ಶುಭ ಫಲವನ್ನು ಪಡೆಯಲಿದ್ದಾರೆ.

ಶುಕ್ರ ಗ್ರಹವು ಸಮೃದ್ಧಿ, ಬಾಂಧವ್ಯ, ಪ್ರೇಮ, ಸಂಗಾತಿ, ಸೌಂದರ್ಯ, ಆಭರಣ, ವಾಹನ ಮತ್ತು ವಿವಾಹ ಇತ್ಯಾದಿಗಳಿಗೆ ಕಾರಕ ಗ್ರಹವಾಗಿದೆ. ಜೀವನದಲ್ಲಿ ಸುಖ-ಸಮೃದ್ಧಿಗಳು ಶುಕ್ರಗ್ರಹದ ಶುಭ ಪ್ರಭಾವದಿಂದ ದೊರೆಯುತ್ತದೆ. ದಾಂಪತ್ಯ ಜೀವನವು ಹೆಚ್ಚು ಮಧುರವಾಗಿರುವುದಕ್ಕೆ ಶುಕ್ರ ಗ್ರಹವು ಕಾರಣವಾಗಿರುತ್ತದೆ. ಶುಕ್ರ ಗ್ರಹವು ಮೀನ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುತ್ತದೆ ಮತ್ತು ಕನ್ಯಾ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತದೆ. ಈ ಬಾರಿಯ ಶುಕ್ರ ಗ್ರಹದ ರಾಶಿ ಪರಿವರ್ತನೆಯು ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತಿದ್ದು, ಇದು ಮೇ 28ರ ರಾತ್ರಿ ಮಿಥುನ ರಾಶಿಗೆ ಪ್ರವೇಶಿಸಲಿದೆ. ಹಾಗಾದರೆ ಈ ಪರಿವರ್ತನೆಯಿಂದ ಯಾವ್ಯಾವ ರಾಶಿಗೆ ಶುಭ ಸಿಗಲಿದೆ ಎಂಬುದನ್ನು ನೋಡೋಣ.....

ಇದನ್ನು ಓದಿ : ಬುಧನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಶುಭ ಯೋಗ, ನಿಮ್ಮ ರಾಶಿ ಇದೆಯಾ..? 

ಮೇಷ ರಾಶಿ
ಶುಕ್ರ ಗ್ರಹವು ಮಿಥುನ ರಾಶಿಗೆ ಪರಿವರ್ತನೆ ಹೊಂದುವುದರಿಂದ ಮೇಷ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ದಾಂಪತ್ಯ ಜೀವನವೂ ಸಹ ಉತ್ತಮವಾಗಲಿದ್ದು, ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಲು ಮುಂದಾದರೂ ಧೈರ್ಯ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಧೈರ್ಯದಿಂದ ಕಾರ್ಯಪ್ರವೃತ್ತರಾದಲ್ಲಿ ಸಫಲತೆ ಖಚಿತವಾಗಿ ಸಿಗಲಿದೆ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಕೆಲಸ ವೈಖರಿಯು ಪ್ರಶಂಸೆಗೆ ಪಾತ್ರವಾಗಲಿದೆ. ನಿಮ್ಮ ಖರ್ಚು ಹೆಚ್ಚಿದ್ದರೂ, ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ.

Tap to resize

Latest Videos



ವೃಷಭ ರಾಶಿ
ಶುಕ್ರ ಗ್ರಹದ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಅಷ್ಟೇ ಅಲ್ಲದೆ ನೂತನ ವಾಹನ ಅಥವಾ ಮನೆಯನ್ನು ಖರೀದಿಸುವ ಶುಭಯೋಗವಿದೆ. ಇದರಿಂದ ಪ್ರೇಮ ಸಂಬಂಧಗಳಲ್ಲಿ ಮಧುರತೆ ಮೂಡಲಿದೆ, ಈ ಅವಧಿಯಲ್ಲಿ ಖರ್ಚು ಹೆಚ್ಚಲಿದ್ದು, ಖರ್ಚಿನಲ್ಲಿ ನಿಯಂತ್ರಣವಿಡುವುದು ಉತ್ತಮ. ಈ ಗೋಚಾರವು ಆರ್ಥಿಕ ದೃಷ್ಟಿಯಿಂದ ಹೆಚ್ಚು ಉತ್ತಮ ಫಲವನ್ನು ನೀಡಲಿದ್ದು ಆರ್ಥಿಕ ಸಮಸ್ಯೆಗಳು ದೂರಾಗಲಿದೆ.

ಇದನ್ನು ಓದಿ : ವೃಷಭ ರಾಶಿಯಲ್ಲಿ ರಾಹು ಗ್ರಹ, ಈ 5 ರಾಶಿಯವರಿಗೆ ಹಾನಿ ಭಯ..! 

ಮಿಥುನ ರಾಶಿ
ಈ ರಾಶಿಯವರಿಗೆ ಶುಕ್ರ ಗ್ರಹದ ಪರಿವರ್ತನೆಯ ಪರಿಣಾಮವಾಗಿ ಸಮಾಜದಲ್ಲಿ ಗೌರವಾದರಗಳು ಹೆಚ್ಚಲಿವೆ. ಕಾರ್ಯ ಕ್ಷೇತ್ರದಲ್ಲಿ ಈ ರಾಶಿಯವರ ಕೆಲಸ ಪ್ರಶಂಸೆಗೆ ಪಾತ್ರವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ದೊರೆಯಲಿದೆ. ಹೊಸ  ಉದ್ಯೋಗ ಅವಕಾಶಗಳು ಲಭಿಸುವುದರ ಜೊತೆಗೆ ವಿವಾಹ ಯೋಗವು ಸಹ ಇದೆ. ಶುಭ ಫಲಗಳನ್ನು ಪಡೆಯುವ ಈ ರಾಶಿಯವರು ಮಾತಿನ ಮೇಲೆ ಕೊಂಚ ನಿಯಂತ್ರಣವಿಟ್ಟುಕೊಳ್ಳುವುದು ಉತ್ತಮ.

ಕನ್ಯಾ ರಾಶಿ
ಈ ರಾಶಿಯವರಿಗೆ ಶುಕ್ರ ಗ್ರಹದ ರಾಶಿ ಪರಿವರ್ತನೆಯು ಉತ್ತಮ ಫಲಗಳನ್ನು ನೀಡಲಿದ್ದು, ಆರ್ಥಿಕ ಸ್ಥಿತಿಯು ಹೆಚ್ಚು ಉತ್ತಮವಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವವು ಒದಗಿ ಬರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ತಂದುಕೊಂಡುವಂತಹ ಪ್ರಸ್ತಾವನೆಗಳು ಅಂತಿಮಗೊಳ್ಳುವ ಸಂಭವವಿದ್ದು, ಇದು ಹೆಚ್ಚಿನ ಅದೃಷ್ಟವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ದಿಕ್ಕುಗಳ ವಿಶೇಷತೆಯೊಂದಿಗೆ ದಿಕ್ಪಾಲಕರ ಮಹತ್ವ.. 

ಧನು ರಾಶಿ
ಶುಕ್ರ ಗ್ರಹವು ಮಿಥುನ ರಾಶಿಗೆ ಪರಿವರ್ತನೆ ಹೊಂದುವುದರಿಂದ ಈ ರಾಶಿಯವರ ಜೀವನವು ಸಮೃದ್ಧಿಯಿಂದ ಕೂಡಿರಲಿದೆ. ಧನು ರಾಶಿಯವರ ವೈವಾಹಿಕ ಜೀವನ ಹೆಚ್ಚು ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಸಫಲತೆಯನ್ನು ಮತ್ತು ವ್ಯಾಪಾರದಲ್ಲಿ ಲಾಭವನ್ನು ಗಳಿಸುವ ಸಾಧ್ಯತೆ ಹೆಚ್ಚಿದೆ. ತಂದೆ-ತಾಯಿಯ ಆರೋಗ್ಯ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಹೊಸ ಕೆಲಸಗಳನ್ನು ಆರಂಭಿಸಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ. ಕೆಲಸದ ನಿಮಿತ್ತು ಮಾಡುವ ಪ್ರಯಾಣವು ಲಾಭವನ್ನು ತಂದುಕೊಡಲಿದೆ.

click me!