Zodiac Signs : ಮೀನ ರಾಶಿಗೆ ಶುಕ್ರ ಬರ್ತಿದ್ದಂತೆ ಬದಲಾಗುತ್ತೆ ಇವರ ಅದೃಷ್ಟ

By Suvarna News  |  First Published Jan 31, 2023, 3:53 PM IST

ನಮ್ಮ ಭವಿಷ್ಯ ಹೇಗಿರುತ್ತೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವೊಮ್ಮೆ ನಾವು ನಿರೀಕ್ಷಿಸಿದ ಮೂಲದಿಂದ ಹಣ ಬಂದಾಗ ಅಚ್ಚರಿಯಾಗುತ್ತದೆ. ದಾಂಪತ್ಯದಲ್ಲಿ ಸುಖ ಸಿಕ್ಕಾಗ ಖುಷಿಯಾಗುತ್ತದೆ. ಇದಕ್ಕೆಲ್ಲ ಶುಕ್ರನ ರಾಶಿ ಬದಲಾವಣೆಯೂ ಕಾರಣವಾಗಿರುತ್ತದೆ. 
 


ಗ್ರಹಗಳು ರಾಶಿ ಬದಲಿಸಿದಂತೆ ಅದ್ರ ಪ್ರಭಾವ ನಮ್ಮ ಜೀವನದ ಮೇಲಾಗುತ್ತದೆ. ಯಾವುದೇ ಗ್ರಹ ರಾಶಿ ಬದಲಾವಣೆ ಮಾಡಿದ್ರೂ ಎಲ್ಲ ರಾಶಿಯವರು ಅದ್ರ ಫಲ ಅನುಭವಿಸಬೇಕು. ಕೆಲ ರಾಶಿಯವರಿಗೆ ಒಳ್ಳೆ ಫಲ ಪ್ರಾಪ್ತಿಯಾದ್ರೆ ಮತ್ತೆ ಕೆಲ ರಾಶಿಯವರಿಗೆ ಅಶುಭ ಫಲ ಸಿಗುತ್ತದೆ. ಇದೇ ಫೆಬ್ರವರಿ 15ರಂದು ಶುಕ್ರನು ಮೀನ ರಾಶಿಯಲ್ಲಿ ಸಂಚರಿಸಲಿದ್ದಾನೆ. ಮಾರ್ಚ್ 12ರವರೆಗೆ ಮೀನ ರಾಶಿಯಲ್ಲಿಯೇ ಶುಕ್ರನಿರಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ಮೀನ ರಾಶಿಯಲ್ಲಿ ಸಂಚರಿಸುವುದು ಬಹಳ ಮಹತ್ವದ ವಿಷ್ಯವಾಗಿದೆ. ಶುಕ್ರ, ಭೌತಿಕ ಸುಖವನ್ನು ನೀಡುವ ಗ್ರಹವಾಗಿದೆ. ಮೀನ ರಾಶಿಯಲ್ಲಿ ಅದು ಉಚ್ಛ ಸ್ಥಿತಿಯಲ್ಲಿರುತ್ತದೆ. ಶುಕ್ರನು ತನ್ನ ಉಚ್ಛ ಸ್ಥಿತಿಯಲ್ಲಿದ್ದಾಗ, ಎಲ್ಲಾ ರೀತಿಯ ಸೌಕರ್ಯಗಳು ಲಭ್ಯವಾಗುತ್ತವೆ. ಮುಂಬರುವ ಶುಕ್ರ ಸಂಕ್ರಮವು ಯಾವ ರಾಶಯವರಿಗೆ ಶುಭ ಫಲ ನೀಡಲಿದೆ ಎಂಬುದು ಇಲ್ಲಿದೆ.

ಶುಕ್ರ (Venus) ರ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಲಾಭ : 
ಕರ್ಕ (Cancer) ರಾಶಿ :
ಶುಕ್ರನು ಮೀನ ರಾಶಿಯಲ್ಲಿ ಸಂಚರಿಸುವುದು ಕರ್ಕ ರಾಶಿಗೆ ಲಾಭ ನೀಡಲಿದೆ. ಕರ್ಕನ ಅಧಿಪತಿ ಗುರು. ಹಾಗಾಗಿ ಇದ್ರಿಂದ ಅದೃಷ್ಟ ಹೆಚ್ಚಾಗುತ್ತದೆ. ಜೀವನದಲ್ಲಿ ಕಾಡ್ತಿದ್ದ ಸಮಸ್ಯೆ ಕಡಿಮೆಯಾಗಲಿದೆ. ಅಶಾಂತಿ ದೂರವಾಗಲಿದೆ. ಯಾವುದೋ ಮೂಲದಿಂದ ನಿಮಗೆ ಧನ ಪ್ರಾಪ್ತಿಯಾಗುತ್ತದೆ.  ಹಣದ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಕೆಲಸ ಈಗ ಪೂರ್ಣಗೊಳ್ಳಲಿದೆ. ನೌಕರಿ ಬದಲಿಸಬೇಕು ಎನ್ನುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಹಾಗೆಯೇ ಈ ಸಂದರ್ಭದಲ್ಲಿ ಕರ್ಕ ರಾಶಿಯವರಿಗೆ ವೃತ್ತಿ (Career) ಯಲ್ಲಿ ಒಳ್ಳೆ ಕೆಲಸ ಪ್ರಾಪ್ತಿಯಾಗಲಿದೆ.

Shani Asta 2023: ಮೇಷದಿಂದ ಕುಂಭದವರೆಗೆ 5 ರಾಶಿಗಳಿಗೆ ಶನಿ ಕಾಟ ಶುರು

Tap to resize

Latest Videos

ಸಿಂಹ (Leo) ರಾಶಿ : ಶುಕ್ರನ ಬದಲಾವಣೆ ಸಿಂಹ ರಾಶಿಯವರ ಜೀವನದಲ್ಲೂ ನಾವು ಕಾಣಬಹುದಾಗಿದೆ. ಅಚಾನಕ್ ಹಣ ಪ್ರಾಪ್ತಿಯಾಗುವ ಸಾಧ್ಯತೆಯಿದೆ. ನಿರೀಕ್ಷಿಸಲು ಸಾಧ್ಯವಾಗದ ಮೂಲದಿಂದ ಹಣ ಬರಲಿದೆ. ಹಿಂದೆ ಮಾಡಿದ ಹೂಡಿಕೆಯಿಂದ ನಿಮಗೆ ಒಳ್ಳೆಯ ಲಾಭ ಸಿಗಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ಕನ್ಯಾ ರಾಶಿ : ಇನ್ನು ಕನ್ಯಾ ರಾಶಿಯವರ ಅದೃಷ್ಟ ಕೂಡ ಬದಲಾಗಲಿದೆ. ವ್ಯಾಪಾರದಲ್ಲಿ ವೃದ್ಧಿಯನ್ನು ಈ ರಾಶಿಯವರು ಕಾಣ್ತಾರೆ. ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದ್ದು, ಸಂಗಾತಿ ಜೊತೆ ಪ್ರವಾಸಕ್ಕೆ ಹೋಗುವ ಅವಕಾಶವೂ ನಿಮಗೆ ಸಿಗಲಿದೆ. ವ್ಯಕ್ತಿತ್ವದಲ್ಲಿ ಬದಲಾವಣೆಯಾಗುವ ಕಾರಣ, ಜನರು ನಿಮಗೆ ಆಕರ್ಷಿತರಾಗ್ತಾರೆ. ಸಂಬಂಧಿಕರು ಹಾಗೂ ಕುಟುಂಬಸ್ಥರ ನಡುವೆ ಇದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. 

ವೃಶ್ಚಿಕ ರಾಶಿ : ಶುಕ್ರನ ಈ ನಡೆಯಿಂದಾಗಿ ವೃಶ್ಚಿಕ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಒಳ್ಳೆ ಫಲಿತಾಂಶ ಸಿಗಲಿದೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ.  ಜೀವನ ಸಂಗಾತಿ ಜೊತೆ ಒಳ್ಳೆಯ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಒಟ್ಟಿನಲ್ಲಿ ಈ ಸಮಯ ವೃಶ್ಚಿಕ ರಾಶಿಯವರಿಗೆ ಹೆಚ್ಚು ಸಂತೋಷದಿಂದ ಕೂಡಿರುತ್ತದೆ. 

ಕಂಭ ರಾಶಿ : ವೃತ್ತಿ ಜೀವನಕ್ಕೆ ಇದು ಹೇಳಿ ಮಾಡಿಸಿದ ಸಮಯವಾಗಿದೆ. ಸಂಪತ್ತನ್ನು ಕೊಡು – ಕೊಳ್ಳುವುದ್ರಿಂದ ನಿಮಗೆ ಲಾಭವಾಗಲಿದೆ. ದೀರ್ಘ ಪ್ರಯಾಣದಿಂದ ಆರ್ಥಿಕ ಲಾಭವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಮನೆಯಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ರುಚಿಯಾದ ಭೋಜನ ಸೇವನೆ ಮಾಡುವ ಅವಕಾಶವಿದ್ದು, ಪಾರ್ಟಿ, ಸಮಾರಂಭಕ್ಕೆ ಆಹ್ವಾನ ಸಿಗಲಿದೆ.

Vastu Tips For Flat: ಫ್ಲಾಟ್ ಕೊಳ್ಳುವಾಗ ಈ ವಾಸ್ತು ನಿಯಮಗಳನ್ನು ಗಮನಿಸಿ..

ಮೀನ ರಾಶಿ : ಶುಕ್ರ, ಮೀನ ರಾಶಿಯಲ್ಲಿ ಗೋಚರಿಸುವುದ್ರಿಂದ ಈ ರಾಶಿಯವರ ವೈವಾಹಿಕ ಜೀವನ ಸುಖಕರವಾಗಿರಲಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ವ್ಯಾಪಾರ ವಿಸ್ತರಣೆ ಅಥವಾ ಬೆಳವಣಿಗೆಗೆ ಇದು ಒಳ್ಳೆಯ ಅವಕಾಶ. ಹೊಸದಾಗಿ ವ್ಯಾಪಾರ ಮಾಡುವ ಆಲೋಚನೆಯಲ್ಲಿದ್ದರೆ ಇದು ಒಳ್ಳೆಯ ಅವಕಾಶ. 
 

click me!