ಪರ್ವತದ ಮೇಲಿಂದ ಬಿದ್ದು ಸಾವನ್ನಪ್ಪಿದಳೇ ದ್ರೌಪದಿ? ಪಾಂಚಾಲಿಯ ಕುರಿತ Amazing Facts

By Suvarna News  |  First Published Feb 7, 2022, 5:05 PM IST

ಮಹಾಭಾರತದ ಅತಿ ಮುಖ್ಯ ಪಾತ್ರಧಾರಿ ದ್ರೌಪದಿ. ಪಂಚ ಪಾಂಡವರಿಗೆ ಪತ್ನಿಯಾಗಿ, ಕೌರವರ ಪತನಕ್ಕೆ ಸಕಾರಣವಾಗಿದ್ದ ಆಕೆಯನ್ನು ಕೆಲವೆಡೆ ದೇವರೆಂದು ಪೂಜಿಸುವುದೂ ಇದೆ. ದ್ರೌಪದಿಯ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ. 


ಮಹಾಭಾರತವು ಜಗತ್ತು ಕಂಡ ಅತಿ ದೊಡ್ಡ, ಅಷ್ಟೇ ಅಪರೂಪದ ಮಹಾಕಾವ್ಯ. ಈ ಕತೆಯಲ್ಲಿ ದ್ರೌಪದಿಯದು ಪ್ರಮುಖ ಪಾತ್ರ. ಪಂಚ ಪಾಂಡವರ ಪತ್ನಿಯಾಗಿ, ಅತಿ ಲೋಕ ಸುಂದರಿಯಾಗಿ, ಕೌರವರ ಪತನಕ್ಕೆ ಕಾರಣವಾಗಿದ್ದ ದ್ರೌಪದಿಯ ಕುರಿತ ಆಸಕ್ತಿಕರ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. 

ದ್ರೌಪದಿಯ ಹುಟ್ಟು
ದ್ರೌಪದಿ ತಾಯಿಯ ಹೊಟ್ಟೆಯಲ್ಲಿ ಹುಟ್ಟಲಿಲ್ಲ. ಆಕೆ ಯಜ್ಞಕುಂಡದಿಂದ ಉದ್ಭವಿಸಿದವಳು. ಆಕೆಗ ಬಾಲ್ಯವಿಲ್ಲ. ಹುಟ್ಟುತ್ತಲೇ ಯೌವನದಲ್ಲಿದ್ದವಳು. 
ದ್ರುಪದ ಹಾಗೂ ದ್ರೋಣ ಭಾರಧ್ವಾಜ ಮುನಿಗಳಲ್ಲಿ ಕಲಿಯುವಾಗ ಸ್ನೇಹಿತರಾಗಿದ್ದವರು. ಭಾರಧ್ವಾಜ ಮುನಿಗಳು ದ್ರೋಣಾಚಾರ್ಯರ ತಂದೆ. ದ್ರಪದ ತನಗೆ ರಾಜ್ಯ ಸಿಕ್ಕಾಗ ಅದರಲ್ಲಿ ಅರ್ಧವನ್ನು ದ್ರೋಣನಿಗೆ ಕೊಡುವುದಾಗಿ ಮಾತು ಕೊಟ್ಟಿದ್ದ. ಆದರೆ, ತಂದೆಯಿಂದ ಪಾಂಚಾಲ ರಾಜ್ಯದ ಆಡಳಿತ ಸಿಕ್ಕಾಗ ಬಡತನದಲ್ಲಿ ನಲುಗುತ್ತಿದ್ದ ದ್ರೋಣನಿಗೆ ಅಂತಸ್ತಿನ ಅಂತರ ಹೇಳಿ ಅವಮಾನ ಮಾಡಿ ಕಳುಹಿಸಿದ. ನಂತರ ದ್ರೋಣಾಚಾರ್ಯರು ಭೀಷ್ಮನ ಆಸ್ಥಾನದಲ್ಲಿ ಕುರು ಯುವರಾಜರಿಗೆ ಯುದ್ಧ ವಿದ್ಯೆ ಕಲಿಸಲು ಸೇರಿಕೊಂಡರು. ಕೌರವರು ಹಾಗೂ ಪಾಂಡವರ ವಿದ್ಯೆ ಮುಗಿದಾಗ ಗುರುದಕ್ಷಿಣೆ ಏನು ಬೇಕೆಂದು ಕೇಳಿದಾಗ ದ್ರುಪದ ರಾಜನನ್ನು ಗೆದ್ದು ಬರುವಂತೆ ಹೇಳಿದರು. ಅರ್ಜುನನು ದ್ರುಪದನನ್ನು ಸೋಲಿಸಿ ರಾಜ್ಯ ಗೆಲ್ಲುತ್ತಾನೆ. ಅವಮಾನದಿಂದ ಕುಗ್ಗಿದ ದ್ರುಪದ ಸೇಡಿನ ಅಗ್ನಿ ಹೊತ್ತಿಸುತ್ತಾನೆ. ಆ ಅಗ್ನಿಕುಂಡದಿಂದ ಬಂದಾಕೆಯೇ ದ್ರೌಪದಿ. 

Tap to resize

Latest Videos

undefined

ದ್ರೌಪದಿಗಿವೆ ಹಲವು ಹೆಸರುಗಳು(Multiple names)
ದ್ರೌಪದಿಯನ್ನು ಮಹಾಭಾರತದಲ್ಲಿ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ದ್ರೌಪದಿ, ಪಾಂಚಾಲಿ, ಕೃಷ್ಣಾ, ಮಾಲಿನಿ, ಸೈರಂಧ್ರಿ, ಯಜ್ಞಸೇನಿ, ಪರ್ಶತಿ, ನಿತ್ಯಯೌವನಿ ಎಲ್ಲ ಹೆಸರುಗಳೂ ದ್ರೌಪದಿಯ ಬಣ್ಣನೆಗಾಗಿ ಹುಟ್ಟಿದವು. 

Guidelines For Men: ಧರ್ಮ ಶಾಸ್ತ್ರದ ಪ್ರಕಾರ, ಉತ್ತಮ ಪತಿಯಾದವನ ಆರು ಗುಣಗಳಿವು

ದ್ರೌಪದಿಯ ವಿವಾಹ(Marriage of Draupadi)
ಕಪ್ಪು ವರ್ಣದವಳಾದರೂ ಅತ್ಯಂತ ಸುಂದರಿಯಾಗಿದ್ದ ದ್ರೌಪದಿ, ಅತಿ ಧೈರ್ಯಶಾಲಿ ಹಾಗೂ ಬುದ್ಧಿವಂತೆ ಕೂಡಾ. ಅವಳಿಗಾಗಿ ದ್ರುಪದ ರಾಜನು ಸ್ವಯಂವರ ಏರ್ಪಡಿಸಿದಾಗ ಬರುವ ರಾಜರಿಗೆ ಒಂದು ಪಂದ್ಯ ಏರ್ಪಡಿಸುತ್ತಾನೆ. ಯಾರು ಮೇಲೆ ತಿರುಗುತ್ತಿರುವ ಮೀನಿನ ಕಣ್ಣಿಗೆ ನೀರಿನಲ್ಲಿ ಪ್ರತಿಬಿಂಬ ನೋಡಿಕೊಂಡು ಬಾಣ ಪ್ರಯೋಗ ಮಾಡಲು ಯಶಸ್ವಿಯಾಗುವರೋ ಅವರಿಗೆ ಆಕೆಯನ್ನು ಕೊಡುವುದಾಗಿ ಘೋಷಿಸುತ್ತಾನೆ. ಕರ್ಣನನ್ನು ಬಿಟ್ಟರೆ ಅರ್ಜುನನಿಂದ ಮಾತ್ರ ಇದನ್ನು ಗೆಲ್ಲಲು ಸಾಧ್ಯವಿತ್ತು. ಕರ್ಣನನ್ನು ಸೂತಪುತ್ರ ಎಂದು ನಿಂದಿಸಿದ ದ್ರೌಪದಿ, ಪಂದ್ಯ ಗೆದ್ದ ಅರ್ಜುನನನ್ನು ವರಿಸುತ್ತಾಳೆ. ತನ್ನ ಸಹೋದರರೊಂದಿಗೆ ದ್ರೌಪದಿಯನ್ನು ಮನೆಗೆ ಕರೆ ತಂದ ಅರ್ಜುನ ತಾಯಿ ಕುಂತಿಗೆ ತಾನಿಂದು ವಿಶೇಷ ಭಿಕ್ಷೆ ತಂದಿರುವುದಾಗಿ ಹೇಳುತ್ತಾನೆ. ಅದೇನೆಂದು ನೋಡದ ಕುಂತಿ ಎಲ್ಲ ಸಹೋದರರು ಅದನ್ನು ಸಮವಾಗಿ ಹಂಚಿಕೊಳ್ಳುವಂತೆ ಹೇಳುತ್ತಾಳೆ. ಹಾಗಾಗಿ, ದ್ರೌಪದಿ ಐವರನ್ನೂ ವಿವಾಹವಾಗಿ ಪಾಂಚಾಲಿ ಎನಿಸಿಕೊಳ್ಳುತ್ತಾಳೆ. 

Narmada Jayanti: ಪರಶಿವನ ಬೆವರಾಗಿ ನದಿ ನರ್ಮದೆ ಹುಟ್ಟಿದ ದಿನವಿಂದು, ಏನು ಆಕೆಯ ಕತೆ?

ಪೂರ್ವಜನ್ಮದ ಕೋರಿಕೆ
ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಶಿವನಲ್ಲಿ ತನಗೆ ಧರ್ಮಾರ್ಥನಾದ, ಬಾಣವಿದ್ಯೆ ಪರಿಣತನಾದ(best archer), ಬಲಶಾಲಿಯಾದ, ಬಹಳ ಸುಂದರನಾದ ಹಾಗೂ ತಾಳ್ಮೆ ಛಲ ಹೊಂದಿದ ಪತಿ ನೀಡುವಂತೆ ಕೋರಿರುತ್ತಾಳೆ. ಅವೆಲ್ಲವೂ ಒಬ್ಬನಲ್ಲೇ ಇರುವುದು ಸಾಧ್ಯವಿಲ್ಲವಾದ್ದರಿಂದ ಅವಳ ಕೋರಿಕೆಯನ್ನು ಪಂಚ ಪಾಂಡವರನ್ನು ವರಿಸುವ ಮೂಲಕ ಈಡೇರಿಸಿರುತ್ತಾನೆ ಶಿವ. 

ಪಾಂಡವರನ್ನು ವಿವಾಹವಾಗಲು ಶರತ್ತು
ಕುಂತಿಯ ಮಾತಿನಿಂದ ನೊಂದಿದ್ದ ದ್ರೌಪದಿ ಐವರನ್ನೂ ವಿವಾಹವಾಗಲು ಒಪ್ಪಿರುವುದಿಲ್ಲ. ಆಗ ಕೃಷ್ಣನು ಅವಳ ಮನವೊಲಿಸುತ್ತಾನೆ. ಪಾಂಡವರನ್ನು ವಿವಾಹವಾಗಲು ಒಪ್ಪುವ ದ್ರೌಪದಿ ಅವರಿಗೆ ಶರತ್ತೊಂದನ್ನು ಹಾಕುತ್ತಾಳೆ. ಅದರಂತೆ ಯಾವೊಬ್ಬ ಪಾಂಡವ ಕೂಡಾ ಬೇರೆ ಪತ್ನಿಯನ್ನು ಇಂದ್ರಪ್ರಸ್ಥ(Indraprastha)ಕ್ಕೆ ಕರೆತರುವಂತಿರುವುದಿಲ್ಲ. 

ಕೃಷ್ಣನ ಋಣಸಂದಾಯ
ಒಮ್ಮೆ ಸುದರ್ಶನ ಚಕ್ರದಿಂದ ಕೃಷ್ಣನ ಬೆರಳಿಗೆ ಏಟಾಗುತ್ತದೆ. ಗಾಯಕ್ಕೆ ಸುತ್ತುವ ಬಟ್ಟೆಗಾಗಿ ಅವನ ತಂಗಿ ಸುಭದ್ರೆ ಹುಡುಕಾಡತೊಡಗುತ್ತಾಳೆ. ಆದರೆ, ಅಲ್ಲಿಯೇ ಇದ್ದ ದ್ರೌಪದಿ ಕೂಡಲೇ ತನ್ನ ರೇಶ್ಮೆ ಸೀರೆಯ ಅಂಚನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಇದೇ ಬಟ್ಟೆ ಅಕ್ಷಯವಾಗುವಂತೆ ಮಾಡಿ ಕೃಷ್ಣ ದ್ರೌಪದಿಯ ಮಾನ ರಕ್ಷಿಸುತ್ತಾನೆ.

ಕಾಳಿಯ ಅವತಾರ
ದ್ರೌಪದಿಯನ್ನು ಕಾಳಿಯ ಅವತಾರ ಎನ್ನಲಾಗುತ್ತದೆ. ಕೃಷ್ಣನಿಗೆ ಎಲ್ಲ ಅಹಂಕಾರಿ ರಾಜರಿಗೆ ಬುದ್ಧಿ ಕಲಿಸಲು ಸಹಾಯ ಮಾಡಲು ದ್ರೌಪದಿಯಾಗಿ ಹುಟ್ಟಿರುತ್ತಾಳೆ. 

Ratha Saptami: ಇಂದು ಜಗದ ಹುಟ್ಟಿನ ಕಾರಣಕರ್ತ ಸೂರ್ಯ ಹುಟ್ಟಿದ ದಿನ- ರಥಸಪ್ತಮಿ

ದೌಪದಿಯ ಸಾವು
ಶ್ರೀ ಕೃಷ್ಣ ತನ್ನ ದೇಹತ್ಯಾಗ ಮಾಡಿದ ಬಳಿಕ ಪಾಂಡವರಲ್ಲಿ ವೈರಾಗ್ಯ ಮೂಡುತ್ತದೆ. ಎಲ್ಲರೂ ಹಿಮಾಲಯದತ್ತ ತೆರಳುತ್ತಾರೆ. ಅಲ್ಲಿನ ಸುಮೇರು ಪರ್ವತ ಹತ್ತುವಾಗ ದ್ರೌಪದಿಯ ಕಾಲುಗಳು ಮರಗಟ್ಟಿ ಆಕೆ ಮೇಲಿನಿಂದ ಬಿದ್ದು ಸಾವನ್ನಪ್ಪುತ್ತಾಳೆ. 

click me!