
ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಬಡವರಿಗೆ, ಸಂತ್ರಸ್ತರಿಗೆ, ಅಗತ್ಯವಿರುವವರಿಗೆ ನಮ್ಮ ಕೈಲಾದ ವಸ್ತುಗಳನ್ನು ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿಯೇ ಹೇಳಲಾಗಿದೆ. ಅನ್ನದಾನ, ರಕ್ತದಾನ, ಅಂಗದಾನ ಮಾತ್ರವಲ್ಲ ಹಣ, ಬಟ್ಟೆ ಹೀಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ವಸ್ತುಗಳನ್ನು ದಾನ ಮಾಡಬೇಕು. ದಾನಕ್ಕೆ ಸಂಬಂಧಿಸಿದಂತೆ ವಾಸ್ತುಶಾಸ್ತ್ರದಲ್ಲಿ ಕೆಲವು ಮಹತ್ವದ ವಿಷ್ಯಗಳನ್ನು ಉಲ್ಲೇಖಿಸಲಾಗಿದೆ.
ನೀವು ನಿಮಗೆ ಇಷ್ಟ ಬಂದ ದಿನ, ಇಷ್ಟಬಂದ ವಸ್ತು (Material) ಗಳನ್ನು ದಾನ ಮಾಡಲು ಸಾಧ್ಯವಿಲ್ಲ. ಗ್ರಹ, ನಕ್ಷತ್ರ, ದಿನಗಳನ್ನು ಗಣನೆಗೆ ತೆಗೆದುಕೊಂಡು ವಸ್ತುಗಳನ್ನು ದಾನಮಾಡ್ಬೇಕು ಎನ್ನಲಾಗುತ್ತದೆ. ಬಟ್ಟೆ ದಾನದ ವಿಷ್ಯದಲ್ಲೂ ನಾವು ಕೆಲ ಮುಖ್ಯವಾದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಪಿತೃ ಪಕ್ಷದಲ್ಲಿ ಈ ಕೆಲಸ ಮಾಡ ಬೇಡಿ, ಜೀವನವೇ ಬರ್ಬಾದ್
ಅನೇಕ ಬಾರಿ ನೀವು ಧರಿಸಿದ್ದ ಬಟ್ಟೆ (Clothes) ಯನ್ನು ದಾನ ಮಾಡಿರುತ್ತೀರಿ. ನಿಮ್ಮ ಎನರ್ಜಿ ನಿಮ್ಮ ಬಟ್ಟೆಯನ್ನು ಸೇರಿರುತ್ತದೆ. ನೀವು ದಾನ ಮಾಡಿದ ನಂತ್ರ ಆರೋಗ್ಯ (health) ಸಮಸ್ಯೆ, ಆರ್ಥಿಕ ನಷ್ಟ ನಿಮ್ಮನ್ನು ಕಾಡುತ್ತದೆ. ಯಾಕೆಂದ್ರೆ ನೀವು ಧರಿಸಿದ ಬಟ್ಟೆಯಲ್ಲಿ ನಿಮ್ಮ ಶಕ್ತಿ ಹಾಗೂ ನಿಮ್ಮ ಅಬಾಮಂಡಲ ಇರುತ್ತದೆ. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಧರಿಸಿದ ಬಟ್ಟೆಯನ್ನು ಹಾಗೆಯೇ ದಾನ ಮಾಡಬಾರದು.
ಹಳೆ ಬಟ್ಟೆ ದಾನ ಮಾಡುವ ಮೊದಲು ಏನು ಮಾಡಬೇಕು? : ಎಂದೋ ಧರಿಸಿದ ಬಟ್ಟೆಯನ್ನು ಹಾಗೆಯೇ ಎತ್ತಿಟ್ಟಿರುತ್ತೀರಿ. ಮನೆಗೆ ಭಿಕ್ಷುಕರು ಬಂದಾಗ ಅಥವಾ ಮನೆ ಸ್ವಚ್ಛಗೊಳಿಸುವ ವೇಳೆ ಇದನ್ನು ತೆಗೆದು, ಬೇರೆಯವರಿಗೆ ದಾನ ಮಾಡ್ತೀರಿ. ಹೀಗೆ ಮಾಡಿದಲ್ಲಿ ದಾನದ ಫಲ ನಿಮಗೆ ಸಿಗೋದಿಲ್ಲ. ಇದ್ರಿಂದ ನಷ್ಟವೇ ಹೆಚ್ಚು. ಯಾವುದೇ ಹಳೆ ಬಟ್ಟೆಯನ್ನು ದಾನ ಮಾಡುವ ಮೊದಲು ನೀವು, ಆ ಬಟ್ಟೆಯನ್ನು ಸ್ವಚ್ಛಗೊಳಿಸಿ ನೀಡಬೇಕು. ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ನಂತ್ರ ಬಟ್ಟೆಯನ್ನು ಸ್ವಚ್ಛಗೊಳಿಸಿ. ಬಟ್ಟೆ ಒಣಗಿದ ನಂತ್ರ ಅದನ್ನು ನೀವು ಅವರಿಗೆ ನೀಡಿ.
ನಾಯಿಯ ಈ ಶಕುನದಿಂದ ಹಣ ನಿಮ್ಮನ್ನು ಹುಡುಕಿ ಬರುತ್ತದೆ
ಮೂರು ಬಾರಿ ಬಟ್ಟೆಯನ್ನು ಸ್ವಚ್ಛಗೊಳಿಸಿ ನೀವು ದಾನ ಮಾಡಿದ್ರೆ ಬಹಳ ಒಳ್ಳೆಯದು. ನಿಮ್ಮ ಪ್ರಭೆ, ಶಕ್ತಿ ಬಟ್ಟೆಯಲ್ಲಿ ಇರದಂತೆ ನೀವು ನೋಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದ್ರೆ ಬಟ್ಟೆ ನೀಡಿದ ನಂತ್ರ ನೀವು ಸಣ್ಣ ಮೊತ್ತ ಅಥವಾ ಸ್ಟೀಲ್ ಪಾತ್ರೆಯನ್ನು ಅವರಿಂದ ಪಡೆದ್ರೆ ಒಳ್ಳೆಯದು. ಯಾಕೆಂದ್ರೆ ನೀವು ಹಣ ಅಥವಾ ಪಾತ್ರೆಯನ್ನು ಪಡೆದಾಗ ಅದು ದಾನ ಎನ್ನಿಸಿಕೊಳ್ಳುವುದಿಲ್ಲ. ಆಗ ಅದ್ರ ದೋಷ ನಿಮಗೆ ಬರುವುದಿಲ್ಲ. ನೀವು ಬಟ್ಟೆಯನ್ನು ಕ್ಲೀನ್ ಮಾಡದೆ ಹಾಗೆಯೇ ದಾನ ಮಾಡಿದ್ರೆ ನಿಮ್ಮ ಬಟ್ಟೆಯನ್ನು ಧರಿಸಿದ ವ್ಯಕ್ತಿಯ ದೇಹದ ಜೊತೆ ನಿಮ್ಮ ಪ್ರಭೆ ಸಂಪರ್ಕಕ್ಕೆ ಬರುತ್ತದೆ. ಅದ್ರಿಂದ ಅವರ ದೌರ್ಭಾಗ್ಯ ನಿಮಗೆ ಅಂಟಿಕೊಳ್ಳುತ್ತದೆ. ಇದಲ್ಲದೆ ಶುಕ್ರ ನಿಮ್ಮ ಜಾತಕದಲ್ಲಿ ಒಳ್ಳೆ ಸ್ಥಾನದಲ್ಲಿರುವಾಗ ನೀವು ಹಳೆ ಬಟ್ಟೆಯನ್ನು ದಾನ ಮಾಡಿದ್ರೆ ನಿಮ್ಮ ಅದೃಷ್ಟ ಕೆಟ್ಟಂತೆ.
ದಾನ ಮಾಡುವಾಗ ನೀವು ಎಂದೂ ಹರಿದ ಬಟ್ಟೆಯನ್ನು ನೀಡಬೇಡಿ. ಸರಿಯಾಗಿರುವ, ಧರಿಸಲು ಯೋಗ್ಯವಾದ ಬಟ್ಟೆಯನ್ನು ನೀವು ದಾನ ಮಾಡಬೇಕು. ವ್ಯಕ್ತಿಯ ಜಾತಕದಲ್ಲಿ ನಾಲ್ಕನೇ ಮನೆಯಲ್ಲಿ ಮಂಗಳನಿದ್ದರೆ ವಸ್ತ್ರದಾನ ಮಾಡಬೇಡಿ. ಜಾತಕದಲ್ಲಿ ಶುಕ್ರನ ಸ್ಥಾನವು ಬಲವಾಗಿದ್ದರೆ ಬಟ್ಟೆ, ಸುಗಂಧ ದ್ರವ್ಯ, ಆಭರಣ, ಔಷಧಿ ಇತ್ಯಾದಿಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು. ವ್ಯಕ್ತಿಯ ಜಾತಕದಲ್ಲಿ ಬುಧನು ಪ್ರಬಲ ಸ್ಥಾನದಲ್ಲಿದ್ದರೆ ಪೆನ್ನು, ಪುಸ್ತಕ ದಾನ ಮಾಡಬೇಡಿ. ಸೂರ್ಯ ಉತ್ತಮ ಸ್ಥಾನದಲ್ಲಿದ್ದರೆ ಚಿನ್ನ, ಗೋಧಿ, ಬೆಲ್ಲ ದಾನ ಮಾಡಬೇಡಿ. ಗುರು ಪ್ರಬಲನಾಗಿದ್ದರೆ ಬಟ್ಟೆ, ಪುಸ್ತಕ, ಹಣ ದಾನ ನೀಡಬೇಡಿ. ಚಂದ್ರ ಬಲವಾಗಿದ್ದರೆ ಹಾಲು, ನೀರನ್ನು ಮತ್ತು ಶನಿ ಬಲವಾಗಿದ್ದರೆ ಆಹಾರ, ಬಟ್ಟೆಯನ್ನನು ದಾನ ಮಾಡಬೇಡಿ.