ಪ್ರತಿ ಬಾರಿ ಅಂದುಕೊಂಡ ಕೆಲಸವನ್ನು ಮಾಡುವ ಮೊದಲೇ ನಾಲ್ಕೈದು ಜನರ ಮುಂದೆ ಹೇಳಿಕೊಳ್ಳುವ ಅಭ್ಯಾಸ ಅನೇಕರಿಗಿರುತ್ತದೆ. ಪ್ಲಾನ್ ಪೂರ್ಣಗೊಳ್ಳುವ ಮೊದಲೇ ನೀವು ಮಾಡುವ ಈ ಕೆಲಸದಿಂದ ಸಂತೋಷಕ್ಕಿಂತ ನೋವೇ ಹೆಚ್ಚು.
ಯಾವುದೋ ಕೆಲಸವನ್ನು ಆಸೆಯಿಂದ ಮಾಡೋಕೆ ಹೋಗಿರ್ತೇವೆ, ಆದ್ರೆ ಅದು ಪೂರ್ಣಗೊಳ್ಳುವ ಮೊದಲೇ ಯಡವಟ್ಟಾಗಿರುತ್ತೆ. ಇನ್ನೇನು ತುತ್ತು ಬಾಯಿಗೆ ಹೋಗ್ಬೇಕು ಎಂದಾಗ ಅದು ಜಾರಿ ಕೆಳಗೆ ಬಿದ್ದ ಅನುಭವ ಅನೇಕರಿಗಿದೆ. ಹಗಲು ರಾತ್ರಿ ದುಡಿದು ಮನೆ ಹಣ ಕೂಡಿಹಾಕಿ, ಅಲ್ಲಿ – ಇಲ್ಲಿ ಅಂತ ಜಾಗ ಹುಡುಕಿ, ಮನೆ ಖರೀದಿಗೆ ಮುಂದಾಗಿರ್ತೇವೆ, ಮನೆಯೆಂಬ ದೊಡ್ಡ ಕನಸು ಈಡೇರುವ ದಿನ ಹತ್ತಿರವಾಗಿರುತ್ತದೆ, ಆದ್ರೆ ಅದ್ಯಾವುದೋ ಘಟನೆ ನಡೆದು ಮನೆ ಖರೀದಿ ಸಾಧ್ಯವೇ ಆಗೋದಿಲ್ಲ. ಬರೀ ಮನೆ ಖರೀದಿ ಮಾತ್ರವಲ್ಲ, ಮದುವೆ, ಹೊಸ ಕೆಲಸ, ಪ್ರಪೋಷನ್ ನಂತಹ ದೊಡ್ಡ ವಿಷ್ಯ ಮಾತ್ರವಲ್ಲ ಸಣ್ಣಪುಟ್ಟ ವಿಷ್ಯಗಳಲ್ಲೂ ತೊಡಕಾಗೋದಿದೆ. ಇದಕ್ಕೆಲ್ಲ ನೀವು ಮಾಡುವ ಕೆಲಸವೇ ಮುಖ್ಯ ಕಾರಣ ಎನ್ನುತ್ತದೆ ಶಾಸ್ತ್ರ.
ಹೌದು, ನಾವು ಮಾಡುವ ಕೆಲ ಕೆಲಸ (Work)ಗಳು ನಮ್ಮ ಅರಿವಿಗೆ ಬರೋದಿಲ್ಲ. ನಾವು ಯಾವುದೋ ಖುಷಿ (Happy) ಯಲ್ಲಿ ಎಲ್ಲವನ್ನೂ ಎಲ್ಲರ ಮುಂದೆ ಹೇಳ್ತೇವೆ. ನಮ್ಮ ಖುಷಿಯನ್ನು ನಾವು ತೋಡಿಕೊಳ್ಳೋದೇ ದೊಡ್ಡ ತಪ್ಪು ಅಂದ್ರೆ ನೀವು ನಂಬ್ತೀರಾ? ನಿಮ್ಮ ಕನಸು ಈಡೇರಬೇಕೆಂದ್ರೆ ನೀವು ಮಾಡ್ಬೇಕಾದ ಸಣ್ಣ ಕೆಲಸ ಏನು ಎಂಬುದನ್ನು ನಾವು ಹೇಳ್ತೇವೆ.
ಕೆಲವರ ಸ್ವಭಾವ ತುಂಬಾ ಸರಳವಾಗಿರುತ್ತದೆ. ಅವರು ಎಲ್ಲರನ್ನು ಸುಲಭವಾಗಿ ನಂಬುತ್ತಾರೆ. ತಮ್ಮ ಖುಷಿಯನ್ನು ಎಲ್ಲರ ಮುಂದೆ ಹಂಚಿಕೊಳ್ಳಲು ಇಷ್ಟಪಡ್ತಾರೆ. ಅವರ ಈ ಬಾಯಿಬಡುಕು ತನವೇ ಅವರ ಶ್ರೇಯಸ್ಸಿಗೆ ಅಡ್ಡಿಯಾಗುತ್ತದೆ.
ನಾಯಿಯ ಈ ಶಕುನದಿಂದ ಹಣ ನಿಮ್ಮನ್ನು ಹುಡುಕಿ ಬರುತ್ತದೆ
ನೀವು ಮನೆ ಖರೀದಿ ಮಾಡ್ತಿದ್ದರೆ, ಮನೆ ಖರೀದಿ ಪೂರ್ಣಗೊಂಡು, ಗೃಹ ಪ್ರವೇಶದ ಹಂತಕ್ಕೆ ಬರುವವರೆಗೂ ಸುಮ್ಮನಿರಿ, ಕಾರು ಖರೀದಿ ಮಾಡ್ತಿದ್ದರೆ, ಮನೆ ಮುಂದೆ ಕಾರು ಬಂದು ನಿಂತ್ಮೇಲೆ ಎಲ್ಲರಿಗೂ ಹೇಳಿದ್ರೆ ಸಾಕು, ರಜೆ (vacation) ಮೇಲೆ ಹೊರಗೆ ಹೋಗ್ತಿದ್ದರೆ ಅದನ್ನು ಎಲ್ಲರ ಮುಂದೆ ಹೇಳುವ ಅಗತ್ಯವಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಂಚಿಕೊಳ್ಳುವ ಅಗತ್ಯವೂ ಇಲ್ಲ. ನೀವು ಕೆಲಸ ಬದಲಿಸ್ತಿದ್ದರೆ, ಕೆಲಸದಲ್ಲಿ ಬಡ್ತಿ ಸಿಕ್ಕಿದ್ದರೆ, ನಿಮಗೆ ಮದುವೆ ನಿಶ್ಚಯವಾಗುವ ಹಂತದಲ್ಲಿದ್ದರೆ ಹೀಗೆ ನಿಮ್ಮ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆ ಅಥವಾ ಖುಷಿ ಬರ್ತಿದ್ದರೆ ದಯವಿಟ್ಟು ಅದನ್ನು ಯಾರಿಗೂ ಹೇಳಲು ಹೋಗ್ಬೇಡಿ. ಇದೆಂಥ ವಿಚಿತ್ರ ಅಂತಾ ನಿಮಗೆ ಅನ್ನಿಸಬಹುದು.
ಶನಿಯಿಂದ ಈ ರಾಶಿಗಳಿಗೆ ಅದೃಷ್ಟ-ಸಂಪತ್ತು
ನೂರರಲ್ಲಿ ಸುಮಾರು 99 ಬಾರಿ, ನಿಮ್ಮ ಜೀವನದಲ್ಲಿ ಬರಬೇಕಾಗಿದ್ದ ವಸ್ತು, ಖುಷಿ ನಿಮಗೆ ಸಿಗೋದಿಲ್ಲ. ಅದಕ್ಕೆ ಮುಖ್ಯ ಕಾರಣ ನೀವು ಈ ವಿಷ್ಯವನ್ನು ನಿಮ್ಮ ಆಪ್ತರಲ್ಲಿ ಹೇಳಿಕೊಳ್ಳೋದು. ನೀವು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಮುಂದೆ ಖುಷಿ ವಿಷ್ಯವನ್ನು ಹಂಚಿಕೊಳ್ತೀರಿ. ನಿಮ್ಮ ಖುಷಿಯಲ್ಲಿ ಅವರು ಭಾಗಿಯಾಗ್ಲಿ ಎನ್ನುವುದು ನಿಮ್ಮ ಇಚ್ಛೆಯಾಗಿರುತ್ತದೆ ನಿಜ. ಆದ್ರೆ ನೀವು ತಪ್ಪು ಸಮಯದಲ್ಲಿ ತಪ್ಪು ಜನರ ಮುಂದೆ ಬಾಯಿ ಬಿಟ್ಟಿರ್ತೀರಿ. ನೀವು ಅವರನ್ನು ಸ್ನೇಹಿತರು, ನಿಮ್ಮ ಆಪ್ತರು ಎಂದುಕೊಂಡಿರ್ತೀರಿ. ಆದ್ರೆ ಅದು ನಿಮ್ಮ ತಪ್ಪು ತಿಳುವಳಿಕೆ ಆಗಿರುತ್ತೆ. ಅವರು ನಿಮ್ಮ ಸ್ನೇಹಿತರು ಆಗಿರೋದೇ ಇಲ್ಲ. ನಿಮ್ಮ ಏಳ್ಗೆಯನ್ನು ಅವರು ಎಂದಿಗೂ ಸಹಿಸೋದಿಲ್ಲ.
ಸದಾ ಬೇರೆಯವರ ಬಗ್ಗೆ ಅಸೂಯೆಪಡುವ ಹಾಗೂ ಬೇರೆಯವರನ್ನು ಕೆಳಮಟ್ಟದಲ್ಲಿಯೇ ನೋಡಲು ಬಯಸುವ ಜನರು ನಿಮ್ಮ ಏಳ್ಗೆಗೆ ಮರಗುತ್ತಾರೆ. ನಿಮ್ಮನ್ನು ನೋಡಿ ಅಸೂಯೆಪಡುತ್ತಾರೆ. ಅವರ ದುಷ್ಟ ಕಣ್ಣು, ದುಷ್ಟ ಮನಸ್ಸು, ನಿಮ್ಮ ಕನಸು ಈಡೇರಲು ಅಡ್ಡಿಯುಂಟು ಮಾಡುತ್ತದೆ. ಇದೇ ಕಾರಣಕ್ಕೆ ನೀವು ಬಯಸಿದ ಯಾವುದೇ ಕೆಲಸ ಆಗಲು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಅತೀ ಆಪ್ತರನ್ನು ಬಿಟ್ಟು ಮತ್ತ್ಯಾರ ಮುಂದೆಯೂ ಎಲ್ಲ ವಿಷ್ಯ ಹೇಳುವ ತಪ್ಪು ಮಾಡ್ಬೇಡಿ.