‘ದೇವರ ಮನೆ’ ಹೀಗಿರಲಿ; ಇಲ್ಲಿವೆ ಕೆಲವು ವಾಸ್ತು ಟಿಪ್ಸ್‌...

By Sushma HegdeFirst Published Jul 4, 2023, 12:08 PM IST
Highlights

ವಾಸ್ತುಶಾಸ್ತ್ರದ ಪ್ರಕಾರ ದೇವರ ಮನೆಯನ್ನು ನಿರ್ಮಿಸಲು ಮನೆಯ ಈಶಾನ್ಯ ಮತ್ತು ಬ್ರಹ್ಮಸ್ಥಾನವನ್ನು ಗುರುತಿಸಲಾಗುತ್ತೆ. ದೇವರ ಮನೆ ನಿರ್ಮಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕು. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಸ್ತುಶಾಸ್ತ್ರದ ಪ್ರಕಾರ ದೇವರ ಮನೆಯನ್ನು ನಿರ್ಮಿಸಲು ಮನೆಯ ಈಶಾನ್ಯ (North East)  ಮತ್ತು ಬ್ರಹ್ಮಸ್ಥಾನವನ್ನು ಗುರುತಿಸಲಾಗುತ್ತೆ. ದೇವರ ಮನೆ ನಿರ್ಮಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕು. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಹಿಂದೂಗಳ ಮನೆಯಲ್ಲಿ ಪೂಜೆಗಾಗಿ ಕಡ್ಡಾಯವಾಗಿ ಒಂದು ಕೋಣೆ ಇರುತ್ತದೆ. ದೇವರ ಮನೆಯು ಮನೆಯ ಪವಿತ್ರ ಸ್ಥಳ (holy place) . ವಾಸ್ತು ಪ್ರಕಾರ ಮನೆಯಲ್ಲಿ ಪಾಸಿಟಿವ್‌ ಎನರ್ಜಿಗಾಗಿ ಪೂಜಾ ಮಂದಿರವು ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ದೇವರ ಮನೆಯ ವಾಸ್ತು ಬಗ್ಗೆ ಇಲ್ಲಿವೆ ಕೆಲವು ಟಿಪ್ಸ್‌ಗಳು.

Latest Videos

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಸ್ತುವಿನ ಪೂಜೆಯು ಮನೆಯಲ್ಲಿ ಸಕಾರಾತ್ಮಕತೆ (positivity) ಯನ್ನು ಉಂಟುಮಾಡುತ್ತದೆ. ಇದರಿಂದ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳು ನಾಶವಾಗುತ್ತವೆ. ಇದಕ್ಕಾಗಿ ಮನೆಯಲ್ಲಿ ದೇವರ ಮನೆ ನಿರ್ಮಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ದೇವರ ಮನೆ ಕುರಿತು ಗಮನ ವಹಿಸಬೇಕಾದ ಕೆಲವು ವಿಷಯಗಳನ್ನು ತಿಳಿಯಿರಿ.

ಬಾಗಿಲು ಪೂರ್ವ ದಿಕ್ಕಿನಲ್ಲಿರಲಿ

ಮನೆಯಲ್ಲಿ ಪೂಜೆ (worship) ಮಾಡುವವರ ಮುಖವು ಪಶ್ಚಿಮಕ್ಕೆ ಮುಖ ಮಾಡಿದರೆ ತುಂಬಾ ಶುಭ. ಇದಕ್ಕಾಗಿ ದೇವರ ಮನೆಯ ಬಾಗಿಲು ಪೂರ್ವ ದಿಕ್ಕಿನಲ್ಲಿರಬೇಕು. ಈ ದಿಕ್ಕಿನ ಹೊರತಾಗಿ, ಪೂಜೆ ಮಾಡುವಾಗ ವ್ಯಕ್ತಿಯು ಪೂರ್ವಕ್ಕೆ ಮುಖ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹಾಗೇ ಹಗಲಿನಲ್ಲಿ ಸ್ವಲ್ಪ ಸಮಯವಾದರೂ ಸೂರ್ಯನ ಬೆಳಕು ಖಂಡಿತವಾಗಿ ತಲುಪುವ ಮನೆಯ ಒಳಗೆ ತಲುಪುವಂತೆ ನೋಡಿಕೊಳ್ಳ ಬೇಕು. 

ಇನ್ನು ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯು ಹರಿಯುವ ಮನೆಗಳಲ್ಲಿ ಅನೇಕ ವಾಸ್ತು ದೋಷ (Vastu Dosha) ಗಳನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ . ಸೂರ್ಯನ ಬೆಳಕು ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿ (Positive energy) ಯನ್ನು ಹೆಚ್ಚಿಸುತ್ತದೆ. 

Shravana 2023: ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಏನು ಮಾಡಬೇಕು?

 

ಸತ್ತವರ ಫೋಟೋ ಇಡಬೇಡಿ

ದೇವರ ಮನೆಯಲ್ಲಿ ಸತ್ತವರ ಮತ್ತು ಪೂರ್ವಜ (ancestor) ರ ಚಿತ್ರಗಳನ್ನು ಇಡುವುದನ್ನು ತಪ್ಪಿಸಬೇಕು. ಪೂರ್ವಜರ ಚಿತ್ರಗಳನ್ನು ಇರಿಸಲು ದಕ್ಷಿಣ ದಿಕ್ಕು ಉತ್ತಮವಾಗಿದೆ. ಸತ್ತವರ ಚಿತ್ರಗಳನ್ನು ಮನೆಯ ದಕ್ಷಿಣ ಗೋಡೆಯ ಮೇಲೆ ಇಡಬಹುದು, ಆದರೆ ದೇವರ ಮನೆಯಲ್ಲಿ ಇಡಬಾರದು.

ಪೂಜಾ ಕೋಣೆ ಬಳಿ ಶೌಚಾಲಯ ಅಶುಭ 

ಪೂಜಾ ಕೋಣೆಯಲ್ಲಿ ಪೂಜೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮಾತ್ರ ಇಡಬೇಕು. ಯಾವುದೇ ಇತರ ವಸ್ತುಗಳನ್ನು ಇಡುವುದನ್ನು ತಪ್ಪಿಸಿ. ಪೂಜಾ ಕೋಣೆ ಬಳಿ ಶೌಚಾಲಯ (Toilet) ಹೊಂದುವುದು ಕೂಡ ಅಶುಭ. ಆದ್ದರಿಂದ ಹತ್ತಿರದಲ್ಲಿ ಶೌಚಾಲಯ ಇಲ್ಲದ ಜಾಗದಲ್ಲಿ ಪೂಜಾಗೃಹ ನಿರ್ಮಿಸಬೇಕು. 

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯ ಪೂಜಾ ಕೋಣೆಯಲ್ಲಿ ಪೂಜೆಯನ್ನು ಮಾಡಬೇಕು. ಪೂಜೆಯ ನಂತರ ಗಂಟೆ ಬಾರಿಸಲು ಮರೆಯದಿರಿ, ಮತ್ತು ಇಡೀ ಮನೆಯಲ್ಲಿ ಒಮ್ಮೆ ಗಂಟೆ ಬಾರಿಸಿ. ಹೀಗೆ ಮಾಡುವುದರಿಂದ ಗಂಟೆಯ ಬಾರಿಸುವಿಕೆಯು ನಕಾರಾತ್ಮಕತೆ (Negativity) ಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ.

ದೇವಸ್ಥಾನದಲ್ಲಿ 'ಘಂಟೆಯ ನಾದ' ಕೇಳಿ; ಈ ನಿಗೂಢ ಶಕ್ತಿ ಪಡೆಯಿರಿ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!