ಅಪ್ಪಂಗೆ 3, ಅಮ್ಮಂಗೆ 2 ಮಕ್ಕಳಿಗೆ ಒಂದು… ಹೀಗೆ ನೀವೂ ಲೆಕ್ಕ ಮಾಡಿ ರೊಟ್ಟಿ ತಯಾರಿಸ್ತೀರಾ? ತಿನ್ನುವಾಗ ನಾನು ಮೂರು ರೊಟ್ಟಿ ತಿಂದೆ, ಆರು ರೊಟ್ಟಿ ತಿಂದೆ ಅಂತಾ ಎಣಿಸ್ತೀರಾ? ಈ ಅಭ್ಯಾಸ ನಿಮಗೂ ಇದ್ರೆ ಇಂದೇ ಬಿಟ್ಬಿಡಿ.
ಈಗ ಮನೆ (Home) ಯಲ್ಲಿರೋದೇ ಮೂರು, ನಾಲ್ಕು ಮಂದಿ. ಪತಿ – ಪತ್ನಿ ಇಬ್ಬರು ಅಥವಾ ಒಬ್ಬರು ಮಕ್ಕಳ ಕುಟುಂಬ (Family) ಹೆಚ್ಚಾಗಿದೆ. ಈ ವಿಭಕ್ತ ಕುಟುಂಬದಲ್ಲಿ ಮಾಡಿದ್ದೆಲ್ಲ ಆಹಾರ (Food) ಹಾಗೆ ಉಳಿಯುತ್ತೆ ಎಂಬ ಗುಣಗಾಟವನ್ನು ನಾವು ಕೇಳ್ಬಹುದು. ನಿನ್ನೆ ಮಾಡಿದ ಆಹಾರವನ್ನು ಇಂದು ಸೇವನೆ ಮಾಡುವ ಪರಿಸ್ಥಿತಿ ಇದೆ. ಸ್ವಲ್ಪ ಮಾಡಿದ್ರೆ ಕಡಿಮೆ, ಹೆಚ್ಚು ಮಾಡಿದ್ರೆ ಜಾಸ್ತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಆಹಾರವನ್ನು ಕಸಕ್ಕೆ ಹಾಕಲು ಮನಸ್ಸು ಬರುವುದಿಲ್ಲ. ಹಾಗೆ ನಿನ್ನೆ, ಮೊನ್ನೆ ಮಾಡಿದ ಅಳಿದುಳಿದ ಆಹಾರವನ್ನು ಸೇವನೆ ಮಾಡಲು ಮನಸ್ಸು ಬರುವುದಿಲ್ಲ. ಇದೇ ಕಾರಣಕ್ಕೆ ಜನರು, ತಲೆ ಲೆಕ್ಕ ಮಾಡಿ ಆಹಾರ ತಯಾರಿಸಲು ಶುರು ಮಾಡಿದ್ದಾರೆ. ರೊಟ್ಟ, ದೋಸೆ ವಿಷ್ಯದಲ್ಲೂ ಇದು ಸುಳ್ಳಲ್ಲ.
ಮನೆಯಲ್ಲಿ ಎಷ್ಟು ಜನರಿದ್ದಾರೆ? ಪ್ರತಿಯೊಬ್ಬರು ಎಷ್ಟು ರೊಟ್ಟ ತಿನ್ನುತ್ತಾರೆ? ಯಾರ್ಯಾರಿಗೆ ಎಷ್ಟೆಷ್ಟು ರೊಟ್ಟಿ ಎಂಬುದನ್ನು ಲೆಕ್ಕ ಮಾಡಿ, ರೊಟ್ಟಿ ತಯಾರಿಸಲಾಗುತ್ತದೆ. ತಲೆಗಿಷ್ಟು ಎನ್ನುವಂತೆ ರೊಟ್ಟಿ ತಯಾರಾದ್ಮೇಲೆ ತಿನ್ನುವವರು ಕೂಡ ಎಣಿಸಿಯೇ ತಿನ್ಬೇಕಲ್ವಾ? ಮೊದಲೆಲ್ಲ ಜನರು ಎಣಿಸಿ ಆಹಾರ ತಿನ್ನುತ್ತಿರಲಿಲ್ಲ. ಹೊಟ್ಟೆ ತುಂಬುವವರೆಗೂ ಆಹಾರ ಸೇವನೆ ಮಾಡಿ ನಂತ್ರ ದಣಿಯುವ ಕೆಲಸಕ್ಕೆ ಹೋಗ್ತಾ ಇದ್ದರು. ಆದ್ರೆ ಈಗ ಬೆವರು ಬರುವಂತಹ ಕೆಲಸ ಕಡಿಮೆ. ತಿಂದ ಆಹಾರ ಅರಗಿಸಿಕೊಳ್ಳೋದು ಕಷ್ಟ. ಹೆಚ್ಚಾಗ್ತಿರುವ ಬೊಜ್ಜು ಕಡಿಮೆ ಮಾಡಲು, ಮಿತ ಆಹಾರ ಬೆಸ್ಟ್ ಎನ್ನುವವರಿದ್ದಾರೆ. ಇದೇ ಕಾರಣಕ್ಕೆ ನನಗೆ ಎರಡು ರೊಟ್ಟಿ, ನಿನಗೆ ಒಂದು ರೊಟ್ಟಿ ಅಂತಾ ಪಾಲು ಮಾಡ್ತಾರೆ. ಮೇಲಿನ ಎಲ್ಲ ಕಾರಣಕ್ಕೆ ಮನೆಯಲ್ಲಿ ಮಾಡುವ ಆಹಾರವನ್ನು ನೀವು ಲೆಕ್ಕ ಹಾಕ್ತಿದ್ದರೆ ಅದನ್ನು ಇಂದೇ ಬಿಟ್ಬಿಡಿ. ಶಾಸ್ತ್ರಗಳ ಪ್ರಕಾರ ಇದು ಒಳ್ಳೆಯ ಕೆಲಸವಲ್ಲ. ಇದ್ರಿಂದ ಕುಟುಂಬದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಇದು ಜಾತಕದಲ್ಲಿರುವ ಶುಭ ಗ್ರಹಗಳ ಪ್ರಭಾವವನ್ನು ಭಂಗಗೊಳಿಸುವುದಲ್ಲದೆ, ಮನೆಯ ಸಂತೋಷ, ಶಾಂತಿ ಮತ್ತು ಸಮೃದ್ಧಿ ಮತ್ತು ಕುಟುಂಬ ಸದಸ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ. ಗ್ರಹಗಳ ಜೊತೆ ರೊಟ್ಟಿಗೆ ಏನು ಸಂಬಂಧ ? ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ರೊಟ್ಟಿಯನ್ನು ಬೇಯಿಸುವ ಬಗ್ಗೆ ಏನು ಮಾರ್ಗದರ್ಶನ ನೀಡಲಾಗಿದೆ ಎಂಬುದನ್ನು ನಾವು ಇಂದು ಹೇಳ್ತೇವೆ.
undefined
ಸಿಕ್ಕಾಪಟ್ಟೆ ಕೋಪ ಬರುತ್ತಾ? ಈ ಜ್ಯೋತಿಷ್ಯ ಪರಿಹಾರ ನಿಮ್ಮನ್ನು ಶಾಂತವಾಗಿಸುತ್ತೆ!
ಅಗತ್ಯಕ್ಕಿಂತ ನಾಲ್ಕು ರೊಟ್ಟಿ ಹೆಚ್ಚು ಮಾಡಿ : ಮನೆಯವರನ್ನು ಲೆಕ್ಕ ಮಾಡಿ 10 ರೊಟ್ಟಿ ತಯಾರಿಸ್ತಿದ್ದೇವೆ ಎಂದಿಟ್ಟುಕೊಳ್ಳಿ. ಇನ್ಮುಂದೆ 10ರ ಬದಲು 14 ರೊಟ್ಟಿಯನ್ನು ತಯಾರಿಸಿ. ನೀವು ತಯಾರಿಸಿದ ರೊಟ್ಟಿ ಇರಬಹುದು ಇಲ್ಲ ದೋಸೆಯಿರಬಹುದು, ಮೊದಲನೇಯದನ್ನು ಹಸುವಿಗೆ ನೀಡಬೇಕು. ನಿಮ್ಮ ಮನೆಯ ಪ್ಯಾನ್ ಗಾತ್ರದಷ್ಟು ದೊಡ್ಡ ರೊಟ್ಟಿಯನ್ನು ಮೊದಲು ತಯಾರಿಸಬೇಕು. ಕೊನೆಯ ರೊಟ್ಟಿಯನ್ನು ನಾಯಿಗೆ ನೀಡಬೇಕು. ಹಸು ಹಾಗೂ ನಾಯಿಗೆ ನೀಡುವ ರೊಟ್ಟಿಯನ್ನು ಒಟ್ಟಿಗೆ ಇಡಬಾರದು.
ಇನ್ನು ಮತ್ತೆರಡು ರೊಟ್ಟಿಗಳನ್ನು ಅತಿಥಿಗಳಿಗೆಂದು ತಯಾರಿಸಿ. ಸನಾತನ ಧರ್ಮದಲ್ಲಿ ಅತಿಥಿಯನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಿಂದಿನ ಕಾಲದಲ್ಲಿ ಮನೆಗಳಿಗೆ ಅನಿರೀಕ್ಷಿತವಾಗಿ ಬರುವ ಅತಿಥಿಗಳಿಗೆ ಪ್ರತಿನಿತ್ಯ ರೊಟ್ಟಿಗಳನ್ನು ಮಾಡಲಾಗುತ್ತಿತ್ತು. ಹೀಗೆ ಮಾಡಿದ್ರೆ ಆ ಮನೆಗೆ ದೇವರ ಆಶೀರ್ವಾದವಿರುತ್ತದೆ. ತಾಯಿ ಅನ್ನಪೂರ್ಣೆ ಪ್ರಸನ್ನಳಾಗ್ತಾಳೆ ಎಂದು ನಂಬಲಾಗಿದೆ. ಮನೆಗೆ ಬಂದ ಅತಿಥಿ ಹಸಿದು ಹೋಗುವುದು ಒಳ್ಳೆಯದಲ್ಲ. ಅತಿಥಿಗಳು ಬರದಿದ್ದರೆ, ಈ ರೊಟ್ಟಿಗಳನ್ನು ನೀವೇ ಬಳಸಿ ಅಥವಾ ಹಸುಗಳು ಅಥವಾ ನಾಯಿಗಳು, ಪಕ್ಷಿಗಳು ಇತ್ಯಾದಿಗಳಿಗೆ ನೀಡಿ.
ಕನಸಲ್ಲಿ ಈ ರೂಪದ ನೀರು ಕಂಡರೆ ಶುಭವೋ – ಅಶುಭವೋ..?
ಕುಟುಂಬದ ಕಲಹಕ್ಕೆ ಕಾರಣವಾಗುತ್ತೆ ಹಳಸಿದ ಆಹಾರ : ರೊಟ್ಟಿಗಳನ್ನು ಎಣಿಸಿ ತಯಾರಿಸಿದ ನಂತ್ರ ಉಳಿದ ಹಿಟ್ಟನ್ನು ಫ್ರಿಜ್ ನಲ್ಲಿ ಇಡ್ತೇವೆ. ಅದನ್ನು ಮರುದಿನ ಬಳಸ್ತೇವೆ. ವೈಜ್ಞಾನಿಕವಾಗಿ ಇದು ತಪ್ಪು. ಇದ್ರಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟುತ್ತವೆ. ಇದ್ರಿಂದ ಅನೇಕ ರೋಗಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಇದಲ್ಲದೆ ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ನೋಡಿದ್ರೂ ಇದು ತಪ್ಪು. ರೊಟ್ಟಿ ಸೂರ್ಯ ಮತ್ತು ಮಂಗಳಕ್ಕೆ ಸಂಬಂಧಿಸಿದೆ. ರೊಟ್ಟಿ ನಮಗೆ ಶಕ್ತಿಯನ್ನು ನೀಡುತ್ತದೆ, ಆದರೆ ರೊಟ್ಟಿಯನ್ನು ಹಳಸಿದ ಹಿಟ್ಟಿನಿಂದ ತಯಾರಿಸಿದಾಗ, ಹಿಟ್ಟಿನಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾದಿಂದ ಅದು ರಾಹುಗೆ ಕನೆಕ್ಟ್ ಆಗುತ್ತೆ. ಈ ರೊಟ್ಟಿಯನ್ನು ನಾವು ತಿಂದಾಗ ನಮ್ಮ ಮನಸ್ಸು ಕುಪಿತಗೊಳ್ಳುತ್ತದೆ. ಮೊದಲಿಗಿಂತ ದೊಡ್ಡ ಧ್ವನಿ ಹೊರಗೆ ಬರುತ್ತದೆ. ಇದ್ರಿಂದ ಕುಟುಂಬಸ್ಥರ ಮಧ್ಯೆ ಜಗಳವಾಗುತ್ತದೆ. ಇದ್ರಿಂದಾಗಿ ಮನೆಯ ನೆಮ್ಮದಿ ಹಾಳಾಗುತ್ತದೆ. ಕುಟುಂಬಸ್ಥರ ಮಧ್ಯೆ ಸದಾ ಸಂತೋಷ ಬಯಸುವವರು ಎಂದೂ ಹಳಸಿದ ಆಹಾರವನ್ನು ಸೇವನೆ ಮಾಡಬಾರದು.