ದೈವಾರಾಧನೆ ಅಥವಾ ಭೂತಾರಾಧನೆಯ ವಿವಿಧ ಸ್ವರೂಪಗಳು

By Govindaraj S  |  First Published Nov 5, 2022, 7:50 PM IST

ಕರ್ನಾಟಕದ ಕರಾವಳಿ ತುಳುನಾಡು ಎಂದೇ ಪ್ರಸಿದ್ಧಿ. ಇಲ್ಲಿ ನಡೆಯುವ ಪ್ರಮುಖ ಆಚರಣೆಯ ದೈವಾರದ ದಿನ ಅಥವಾ ಭೂತಾರಾಧನೆ. ಭೂತ ಅಂದ ಕೂಡಲೇ ಭಯದ ವಾತಾವರಣ ನಿರ್ಮಾಣವಾಗುತ್ತದೆ. 


ಕರ್ನಾಟಕದ ಕರಾವಳಿ ತುಳುನಾಡು ಎಂದೇ ಪ್ರಸಿದ್ಧಿ. ಇಲ್ಲಿ ನಡೆಯುವ ಪ್ರಮುಖ ಆಚರಣೆಯ ದೈವಾರದ ದಿನ ಅಥವಾ ಭೂತಾರಾಧನೆ. ಭೂತ ಅಂದ ಕೂಡಲೇ ಭಯದ ವಾತಾವರಣ ನಿರ್ಮಾಣವಾಗುತ್ತದೆ. ತುಳುವರಿಗೆ ಭೂತ ಅಂದ ಕೂಡಲೇ ಭಯ ಭಕ್ತಿಯ ಆರಾಧ್ಯಮೂರ್ತಿ ಕಣ್ಣ ಮುಂದೆ ಬರುತ್ತದೆ. ದೈವ ಅಥವಾ ಭೂತ ಎಂಬುದು ಭಕ್ತಿಯ ಸಂಕೇತವಾಗಿ ಬಳಸಲ್ಪಡುವ ಶಬ್ದಗಳು. 

ದೈವಾರಾಧನೆಯಲ್ಲಿ ಪರಂಪರೆ ಇದೆ. ಸುಮಾರು ಮೂರು ಶತಮಾನಗಳಿಗಿಂತ ಹಿಂದಿನ ಇತಿಹಾಸವಿರುವ ಕರಾವಳಿಯ ದೈವಾರಾಧನೆಯನ್ನು ಇಂದಿಗೂ ಭಯ ಭಕ್ತಿಯಿಂದ ಪ್ರತಿಯೊಬ್ಬ ಆರಾಧಿಸುತ್ತಾ ಬಂದಿದ್ದಾನೆ. ಪುರಾಣ ಸಂಬಂಧ ಪ್ರಾಣಿ ಸಂಬಂಧ ಮನುಷ್ಯ ಸಂಬಂಧವಾದ ದೈವಗಳನ್ನು ನಾವು ಆರಾಧಿಸುತ ಬಂದಿದ್ದೇವೆ.

Tap to resize

Latest Videos

ಭೂತಗಳ ಮುಖವರ್ಣಿಕೆಗಳ ಪ್ರಭೇದ, ಪ್ರಾದೇಶಿಕ ಭಿನ್ನತೆಗಳ ಬಗ್ಗೆ ಗೊತ್ತಾ?

ದಲಿತ ವರ್ಗದಿಂದ ಬಂದ ವ್ಯಕ್ತಿಗಳ ಹೋರಾಟದ ಬದುಕು ಮುಂದೆ ಅದು ದೈವತ್ವವಾಗಿದೆ. ಜೀವಿತಾವಧಿಯಲ್ಲಿ ಅಸಾಧಾರಣ ಬದುಕನ್ನು ಬದುಕಿ,  ಅಕಾಲಿಕ ಮತ್ತು ಅಸಹಜವಾದ ಸಾವಿಗೆ ಈಡಾಗಿರುತ್ತಾನೆ. ಜೀವಿತಾವಧಿಯಲ್ಲಿ ಸಹಿಸಿಕೊಂಡ ನೋವುಗಳನ್ನು ಸತ್ತ ಮೇಲೆ ತೀರಿಸಿಕೊಳ್ಳುತ್ತಾರೆ. ಭೂತಾರಾದನೆ ನಂಬಿಕೆ ಮತ್ತು ಮಾನಸಿಕ ಶಕ್ತಿಯು 



ಹೌದು! ಗುಡಿ ಗೋಪುರವನ್ನು ಕಟ್ಟಿ, ದೈವಗಳಿಗೆ ನಿಯಮಾನುಸಾರ ಕೋಲಗಳನ್ನು ತುಳುವರು ಕೊಡುತ್ತಾರೆ. ಅನ್ಯಾಯಕ್ಕೆ ಒಳಗಾಗಿ ಜೀವಿಸಲು ಸಾಧ್ಯವಾಗದ ಜೀವನ ಕಳೆದುಕೊಂಡವರು ದೈವಗಳಾಗಿ ಮಾರ್ಪಾಟಾದರು. ತುಳುನಾಡಿನ ದೈವಾರಾಧನೆಯಲ್ಲಿ ಕೃಷಿ ಸಂಸ್ಕೃತಿ ಇದೆ. ಕೃಷಿಯ ಸಂರಕ್ಷಣೆ ಇದೆ. ದೈವಾರಾಧನೆ ಅಕ್ಷರಶಃ ಪ್ರಕೃತಿಯ ಆರಾಧನೆ. ಭೂತಾರಾಧನೆ ಎಂಬುದು ತುಳುವರ ನಂಬಿಕೆ. ಕೆಲವು ದೈವಗಳಿಗೆ ಹಿನ್ನೆಲೆ ಇದೆ, ಕಥೆ ಇದೆ. 

ಲೋಕ ಕಲ್ಯಾಣಾರ್ಥವಾಗಿ ಲಾಸ್ ಏಂಜಲೀಸ್‌ನಲ್ಲಿ ಮಹಾರುದ್ರಯಾಗ

ದೈವರಾದನೆ ದಿನ ಅದನ್ನ ಪಾಡ್ದನ ಅಂದ್ರೆ ಹಾಡಿನ ರೂಪದಲ್ಲಿ ದೈವ ನರ್ತಕನ ತಾಯಿ, ಪತ್ನಿ ತೆಂಬರೆ ಬಡಿಯುತ್ತಾ ಹೇಳುತ್ತಾರೆ. ಶಿವನ ಗಣಗಳಿಗೆ ಪ್ರಾಮುಖ್ಯವಾಗಿ ದೈವಾರಾಧನೆ ನಡೆಯುತ್ತದೆ.ದೈವಕೋಲ ಮಾಡಿಸುವ ಮನೆತನಗಳು ದೈವಗಳಿಗೆ ಆಹಾರ ಅರ್ಪಿಸುವ ಪದ್ಧತಿ ಅನುಸರಿಸುತ್ತಾರೆ. ತಮ್ಮ ಆಹಾರ ಪದ್ಧತಿಯನ್ನೇ ದೈವಗಳಿಗೂ ಸಮರ್ಪಿಸುತ್ತಾರೆ ಸಸ್ಯಹಾರ ಮತ್ತು ಮಾಂಸಹಾರದ ಸೇವೆಗಳು ದೈವಗಳಿಗೆ ಅರ್ಪಣೆಗೊಳ್ಳುತ್ತದೆ.

click me!