Name And Luck: ಈ ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಸಖತ್ ಟ್ಯಾಲೆಂಟೆಡ್!

By Suvarna News  |  First Published Dec 28, 2021, 5:52 PM IST

ಹಿಂದೂ ಧರ್ಮದಲ್ಲಿ ನಾಮಕರಣಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ಕೆಲವೊಂದು ಪದಗಳಿಂದ ಪ್ರಾರಂಭವಾಗುವ ಹೆಸರುಗಳಿಗೆ ಭಾರಿ ಶಕ್ತಿ, ಪ್ರಭಾವ, ಅದೃಷ್ಟ ಇರಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹೀಗಾಗಿ ಹೆಸರಿಡಬೇಕಾದರೆ ಸ್ವಲ್ಪ ತಿಳಿದು ಇಟ್ಟರೆ ಒಳ್ಳೆಯದು. ಈಗ ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ... 


ಜ್ಯೋತಿಷ್ಯಶಾಸ್ತ್ರದ (Astrology) ಅನುಸಾರ ಕೆಲವು ಅಕ್ಷರಗಳು (Letter ) ತುಂಬಾ ಲಕ್ಕಿ (Luck). ಹಿಂದೂ ಧರ್ಮದಲ್ಲಿ (Hindu Religion) ಹೆಸರಿಗೆ ತುಂಬಾ ಪ್ರಾಮುಖ್ಯತೆಯನ್ನು (Importance) ಕೊಡಲಾಗುತ್ತದೆ. ಕಾರಣ ಆ ಹೆಸರು (Name) ಆ ವ್ಯಕ್ತಿಯ ಜೀವನದ (Life) ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬ ನಂಬಿಕೆ (Belief) ಬಹಳವಾಗಿದೆ. ಹುಟ್ಟಿದ ನಕ್ಷತ್ರ (Star), ರಾಶಿ (Zodiac), ಸಮಯಗಳ (Time) ಆಧಾರದ ಮೇಲೆ ಯಾವ ಹೆಸರನ್ನೂ ಇಡಬಹುದು ಎಂಬ ಅಂಶವನ್ನು ಜ್ಯೋತಿಷ್ಯಶಾಸ್ತ್ರದ ಅನುಸಾರ ತಿಳಿಯಲಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ಸ್ವಭಾವ, ಗುಣ, ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ ಮತ್ತು ಇನ್ನಿತರ ಹಲವಾರು ವಿಷಯಗಳನ್ನು ಮತ್ತು ಭವಿಷ್ಯದ (Future) ಆಗುಹೋಗುಗಳನ್ನು ತಿಳಿಯಬಹುದಾಗಿದೆ. ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಹಸ್ತ ಸಾಮುದ್ರಿಕಾ ಶಾಸ್ತ್ರ ಹೀಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ವಿಧಾನಗಳಿವೆ. ಇವುಗಳ ಮೂಲಕ ಪ್ರತ್ಯೇಕವಾಗಿ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಅಷ್ಟೆ ಅಲ್ಲದೆ ಹೆಸರಿನ (Name) ಮೊದಲ ಅಕ್ಷರದಿಂದ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದೆಂದು ಶಾಸ್ತ್ರ ಹೇಳುತ್ತದೆ. ಯಾವ ಅಕ್ಷರಗಳ ಮೊದಲಿನಿಂದ ಪ್ರಾರಂಭಿಸಿದರೆ ಉತ್ತಮ ಎಂಬುದು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದು. 

ಹೀಗಾಗಿ ಕೆಲವು ಅಕ್ಷರಗಳು ಅದೃಷ್ಟವನ್ನು (Fortune)  ಹೊತ್ತು ತರುತ್ತದೆ. ಮತ್ತೆ ಆ ಅಕ್ಷರಗಳ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳು ತುಂಬಾ ಟ್ಯಾಲೆಂಟೆಡ್ (Talent )  ವ್ಯಕ್ತಿಗಳು ಎಂದು ಸಹ ಹೇಳಲಾಗುತ್ತದೆ. ಈಗ ನಾವು P M K L ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರ (Girls) ಬಗ್ಗೆ ತಿಳಿಯೋಣ.

ಪಿ (P) :
ಪಿ ಅಕ್ಷರದಿಂದ ಆರಂಭವಾಗುವ (Starting letter ) ಹೆಸರಿನ ಹುಡುಗಿಯರು ಹೆಚ್ಚು ಬುದ್ಧಿವಂತರಾಗಿರುತ್ತಾರೆ (Intelligent). ಈ ಹುಡುಗಿಯರು ಯಾವುದೇ ಕೆಲಸವನ್ನು (Work) ಮಾಡಿದರೂ ಅದರಲ್ಲಿ ಯಶಸ್ಸನ್ನು (Success) ಗಳಿಸುತ್ತಾರೆ. ಗೆಲ್ಲಲೇ ಬೇಕೆಂಬ ಆತ್ಮವಿಶ್ವಾಸ (Confidence) ಅವರಲ್ಲಿ ಹೆಚ್ಚು ಇರುತ್ತದೆ. ಸಮಾಜದಲ್ಲಿ (Society ) ಈ ಅಕ್ಷರದ ಹುಡುಗಿಯರಿಗೆ ವಿಶೇಷವಾದ ಗೌರವವಿರುತ್ತದೆ (Respect). ಇವರಿಗೆ ಅದೃಷ್ಟವೂ ಜೊತೆ ನೀಡುತ್ತದೆ. ವೃತ್ತಿ ಕ್ಷೇತ್ರದಲ್ಲೂ (Career) ಯಶಸ್ಸನ್ನು  ಪಡೆಯುತ್ತಾರೆ. 

ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಎಮ್ (M) :
ಎಮ್ ಅಕ್ಷರದಿಂದ (Letter M) ಆರಂಭವಾಗುವ ಹೆಸರಿನ ಹುಡುಗಿಯರು ಚತುರ (Brave) ನಡೆ ಉಳ್ಳವರಾಗಿರುತ್ತಾರೆ. ಇವರ ಯಶಸ್ಸು (Success) ಪಡೆಯಲು ಕಠಿಣ ಪರಿಶ್ರಮವನ್ನು (Effort) ಪಡುತ್ತಾರೆ. ಈ ಹುಡುಗಿಯರು ಯಾವುದೇ ಕೆಲಸವನ್ನಾದರೂ ಪ್ರಾಮಾಣಿಕತೆಯಿಂದ (Prompt) ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಕಾರ್ಯಕ್ಷೇತ್ರದಲ್ಲಿ (Career) ಬುದ್ಧಿವಂತಿಕೆಯಿಂದ ಕೆಲಸ ಮಾಡುವುದರ ಮೂಲಕ ಪ್ರಶಂಸೆಗೆ  ಪಾತ್ರರಾಗುತ್ತಾರೆ. ಹಾಗಾಗಿ ಈ ಹುಡುಗಿಯರು ಬಹುಬೇಗ ಸಫಲತೆಯನ್ನು (Success) ಕಾಣುತ್ತಾರೆ. 

ಕೆ (K) :
ಕೆ ಅಕ್ಷರದಿಂದ ಆರಂಭವಾಗುವ ಹೆಸರಿನ ಹುಡುಗಿಯರು (Girl) ಚುರುಕು ಸ್ವಭಾವವನ್ನು ಹೊಂದಿರುತ್ತಾರೆ. ಇವರು ವೃತ್ತಿ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆಯುತ್ತಾರೆ. ಯಾವುದೇ ಕೆಲಸವನ್ನಾದರೂ ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಾರೆ. ಬಹುಬೇಗ ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಇದನ್ನು ಓದಿ: New Year Mantra: ಹೊಸ ವರ್ಷದ ಸುಖ-ಸಮೃದ್ಧಿಗೆ ಗ್ರಹದೋಷ ನಿವಾರಣಾ ಮಂತ್ರಗಳು!

ಎಲ್ (L) :
ಎಲ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ಓದುವುದು (Reading) ಮತ್ತು ಬರೆಯುವುದುರಲ್ಲಿ (Writing) ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿಕ್ಷೇತ್ರದಲ್ಲಿ (Job) ಸಫಲತೆಯನ್ನು ಕಾಣುತ್ತಾರೆ. ಇವರಲ್ಲಿ ನಾಯಕತ್ವದ ಕ್ಷಮತೆ (Leadership quality) ಕೂಡ ಇರುತ್ತದೆ. ಕಚೇರಿಯಲ್ಲಿ (Office) ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಕಾರ್ಯಸ್ಥಳದಲ್ಲಿ ಇವರ ಕೆಲಸವನ್ನು ಎಲ್ಲರೂ ಪ್ರಶಂಸಿಸುತ್ತಾರೆ.

click me!