Vastu Tips : ಪ್ರತಿ ದಿನ ಮನೆ ಸ್ವಚ್ಛಗೊಳಿಸಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿ

By Suvarna NewsFirst Published May 13, 2022, 10:50 AM IST
Highlights

ಕೆಲಸದ ಒತ್ತಡದಲ್ಲಿ ಮನೆ ಕ್ಲೀನಿಂಗ್ ಮರೆತು ಹೋಗಿರುತ್ತದೆ. ಮತ್ತೆ ಕೆಲವರಿಗೆ ಕ್ಲೀನಿಂಗ್ ಗೊತ್ತೇ ಇಲ್ಲ. ಆತುರದಲ್ಲಿ ಕಂಡ ಕಂಡಲ್ಲಿ ಪೊರಕೆ ಎಸೆದು ಹೋಗುವವರಿದ್ದಾರೆ. ಆದ್ರೆ ಇದೆಲ್ಲ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಾ?
 

ತಾಯಿ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರಬೇಕು. ತಾಯಿ ಲಕ್ಷ್ಮಿಯ (Lakshmi )ಕೃಪೆ ಇರುವ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಹಾಗಾಗಿಯೇ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತ (Devotee) ರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಲಕ್ಷ್ಮಿಯ ಆರಾಧನೆ, ಪೂಜೆ (Worship),ಉಪವಾಸ, ವೃತಗಳನ್ನು ಮಾಡ್ತಾರೆ. ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದ ಹೇಗೆ ಎಂಬುದನ್ನು ಹೇಳಲಾಗಿದೆ. ಹಾಗೆ ಸದಾ ಮನೆಯಲ್ಲಿ ಸಂಪತ್ತು ತುಂಬಿರಬೇಕು, ಆರ್ಥಿಕ ವೃದ್ಧಿಯಾಗ್ಬೇಕು ಅಂದ್ರೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಕೂಡ ಶಾಸ್ತ್ರದಲ್ಲಿ ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ, ಲಕ್ಷ್ಮಿ ದೇವಿಯು ಪೊರಕೆಯಲ್ಲೂ ನೆಲೆಸಿದ್ದಾಳೆ. ಮನೆಯನ್ನು ಸ್ವಚ್ಛಗೊಳಿಸಲು ನಾವೆಲ್ಲ ಪೊರಕೆ ಬಳಕೆ ಮಾಡಿಯೇ ಮಾಡ್ತೇವೆ. ಮನೆಯ ಕಸ ತೆಗೆಯುವ ಪೊರಕೆ ನಮ್ಮ ಅದೃಷ್ಟದ ಬಾಗಿಲನ್ನು ತೆಗೆಯುವ ಶಕ್ತಿ ಹೊಂದಿದೆ. ಪೊರಕೆ ಬಳಕೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಪೊರಕೆಯನ್ನು ಸರಿಯಾಗಿ ಬಳಕೆ ಮಾಡಿದ್ರೆ ಅದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ವಾಸವಾಗುತ್ತದೆ. ನಾಕಾರಾತ್ಮಕ ಶಕ್ತಿಯ ನಾಶವಾಗುತ್ತದೆ.  
ಬಹುತೇಕ ಎಲ್ಲ ಮನೆಯಲ್ಲಿ ಪ್ರತಿ ದಿನ ಮನೆಯನ್ನು ಒರೆಸಿ – ಗುಡಿಸಿ ಮಾಡ್ತಾರೆ. ವಾಸ್ತು ಶಾಸ್ತ್ರದಲ್ಲಿ ಗುಡಿಸುವ ಮತ್ತು ಒರೆಸುವ ಕೆಲವು ಮುಖ್ಯ ನಿಯಮಗಳನ್ನು ಹೇಳಲಾಗಿದೆ. ತಾಯಿ ಲಕ್ಷ್ಮಿ ಸದಾ ಮನೆಯಲ್ಲಿರಬೇಕು, ಎಲ್ಲ ಕಡೆ ಲಾಭವಾಗ್ಬೇಕೆಂದು ಬಯಸುವವರು ಮನೆ ಸ್ವಚ್ಛಗೊಳಿಸುವ ವೇಳೆ ಕೆಲ ವಿಷ್ಯ ತಿಳಿದಿರಬೇಕು.  

ಮನೆ ಸ್ವಚ್ಛತೆ ಬಗ್ಗೆ ಇದು ತಿಳಿದಿರಲಿ : 

ಸೂರ್ಯೋದಯದ ನಂತರ ಸ್ವಚ್ಛತೆ : ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ಯಾವಾಗಲೂ ಸೂರ್ಯೋದಯದ ನಂತರ ಮಾತ್ರ ಬಳಸಬೇಕು. ಇದು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಯೂ ನೆಲೆಸಿರುತ್ತದೆ. ಸೂರ್ಯೋದಯಕ್ಕೆ ಮೊದಲು ಮನೆ ಕ್ಲೀನಿಂಗ್ ಸೂಕ್ತವಲ್ಲ ಎನ್ನುತ್ತದೆ ಶಾಸ್ತ್ರ. 

ನಿಯಮಿತವಾಗಿ ಕಸ ತೆಗೆದು, ಸ್ವಚ್ಛಗೊಳಿಸಿ : ನಿಯಮಿತವಾಗಿ ಪೊರಕೆ ಮತ್ತು ಮಾಪ್ ಬಳಕೆ ಮಾಡುವುದು ಕೂಡ ಬಹಳ ಮುಖ್ಯ. ಆಗ ಮಾತ್ರ ಲಕ್ಷ್ಮಿ ನಿಮ್ಮ ಮನೆಯಲ್ಲಿರಲು ಸಾಧ್ಯ.  ವಾರದಲ್ಲಿ ಒಂದು ದಿನ ಮನೆಯನ್ನು ಒರೆಸಬಾರದು. ಗುರುವಾರ ಯಾವತ್ತೂ ಮನೆ ಒರೆಸಬೇಡಿ. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.

ಆದಾಯ ಹೆಚ್ಚಿಸುವ ಏಕಮುಖಿ ರುದಾಕ್ಷಿ, ಈ ರಾಶಿಗೆ ಧಾರಣೆಯ ವಿಶೇಷ ಫಲ

ಮಾಪ್ ನೀರಿಗೆ ಉಪ್ಪು ಬೆರೆಸಿ : ಮನೆಯನ್ನು ಕ್ಲೀನ್ ಮಾಡಲು ಸಾಕಷ್ಟು ಲಿಕ್ವಿಡ್ ಗಳು ಬಂದಿವೆ. ನಾವೇ ಅದನ್ನು ಖರೀದಿಸಿ ಮನೆ ಕ್ಲೀನ್ ಮಾಡ್ತೇವೆ. ಆದ್ರೆ ಯಾವುದೆ ಕೆಮಿಕಲ್ ಇಲ್ಲದೆ ಸುಲಭವಾಗಿ ಮನೆ ಕ್ಲೀನ್ ಆಗ್ಬೇಕೆಂದ್ರೆ ಮನೆ ಒರೆಸುವ ನೀರಿಗೆ ಉಪ್ಪು ಮಿಕ್ ಮಾಡಿ. ಉಪ್ಪು ಬೆರೆಸಿದ ನೀರಿನಲ್ಲಿ ಮನೆ ಸ್ವಚ್ಛಗೊಳಸಿ.  ಇದ್ರಿಂದ ಮನೆಯಲ್ಲಿರುವ ಬ್ಯಾಕ್ಟೀರಿಯ ದೂರವಾಗುತ್ತದೆ. ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ಹಾಗೆ ಸೂರ್ಯಾಸ್ತದ ನಂತ್ರ ಪೊರಕೆ ಬಳಕೆ ಮಾಡ್ಬೇಡಿ. 

ಪೊರಕೆಯನ್ನು ತೆರೆದ ಸ್ಥಳದಲ್ಲಿ ಇಡಬೇಡಿ : ಪೊರಕೆಯನ್ನು ಎಂದಿಗೂ ತೆರೆದ ಸ್ಥಳದಲ್ಲಿ ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ತೆರೆದ ಜಾಗದಲ್ಲಿ ಇಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಯಾವಾಗಲೂ ಪೊರಕೆಯನ್ನು ಮನೆಯ ಮೂಲೆಯಲ್ಲಿಡಿ. ಅದು ಮನೆಗೆ ಬಂದವರಿಗೆ ಕಾಣಿಸದಂತೆ ಇಡಿ. 

ಅಣ್ಣ ರಾವಣನ ಸಾವಿಗೆ ಸಂಚು ಮಾಡಿದಳೇ ಶೂರ್ಪನಖಿ?!

ಅಡುಗೆ ಮನೆಯಲ್ಲಿ ಪೊರಕೆ ಇಡಬೇಡಿ : ಅಡುಗೆ ಮನೆಯಲ್ಲಿ ಯಾವತ್ತೂ ಪೊರಕೆ ಇಡಬೇಡಿ. ಇದರಿಂದ ನಿಮ್ಮ ಮನೆಯ ಧಾನ್ಯ ಬಹುಬೇಗ ಖಾಲಿಯಾಗುತ್ತದೆ. ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

ಪೊರಕೆ ಇಡುವ ವಿಧಾನ : ಮನೆಯಲ್ಲಿ ಎಂದಿಗೂ ಪೊರಕೆಯನ್ನು ನಿಲ್ಲಿಸಿಡಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆ ಹೊಸ ಮನೆಗೆ ಹೋದಾಗ ಹಳೆ ಪೊರಕೆ ಒಯ್ಯಬೇಡಿ. ಹೊಸ ಪೊರಕೆ ಖರೀದಿ ಮಾಡಿ. ಹೀಗೆ ಮಾಡಿದ್ರೆ ಮನೆಯಲ್ಲಿ ಸದಾ  ಸಂತೋಷ ನೆಲೆಸುವಂತೆ ಲಕ್ಷ್ಮಿ ಮಾಡ್ತಾಳೆ.
 

click me!