Shivamogga: ಮಲೆನಾಡಿನಲ್ಲಿ ನೋಡುಗರ ಕಣ್ಮನ ಸೆಳೆದ ಕೆರೆಬೇಟೆ ಹಬ್ಬ!

By Govindaraj S  |  First Published May 12, 2022, 10:37 AM IST

ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮೇ ತಿಂಗಳಲ್ಲಿ ಮಲೆನಾಡಿನ ಕೆರೆಗಳಲ್ಲಿ ಮೀನು ಬೇಟೆಗಳು ಆರಂಭವಾಗುತ್ತವೆ. ಕೆರೆಬೇಟೆ ಎಂಬುದು ಮಲೆನಾಡು ಭಾಗದ ಜನರ ಸಂಸ್ಕೃತಿಯೂ ಆಗಿದೆ. 


ಶಿವಮೊಗ್ಗ (ಮೇ.12): ಬೇಸಿಗೆಯಲ್ಲಿ (Summer) ನೀರು (Water) ಕಡಿಮೆಯಾಗುತ್ತಿದ್ದಂತೆ ಮೇ ತಿಂಗಳಲ್ಲಿ ಮಲೆನಾಡಿನ ಕೆರೆಗಳಲ್ಲಿ ಮೀನು ಬೇಟೆಗಳು ಆರಂಭವಾಗುತ್ತವೆ. ಕೆರೆಬೇಟೆ (Kerebete) ಎಂಬುದು ಮಲೆನಾಡು ಭಾಗದ ಜನರ ಸಂಸ್ಕೃತಿಯೂ ಆಗಿದೆ. ಅಂತೆಯೇ ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ದೊಡ್ಡಕೆರೆಯಲ್ಲಿ ನಡೆದ ಹಬ್ಬದ (Festival) ಮೀನು ಕೆರೆಬೇಟೆಗೆ (Fish Kerebete) ಸಾವಿರಾರು ಮಂದಿ ಆಗಮಿಸಿದ್ದರು. 

ಏಕಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆ ಮಾಡಲಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು. ಗ್ರಾಮ ಸಲಹಾ ಸಮಿತಿಯಿಂದ ಬಸವೇಶ್ವರ ಗೆಳೆಯರ ಬಳಗಕ್ಕೆ ಮೀನು ಸಾಕಾಣಿಕೆ ಮಾಡಲು ಟೆಂಡರ್ ನೀಡಲಾಗಿತ್ತು. ಮೀನು ಬೇಟೆಗೆ ಇಳಿಯುವವರಿಗೆ ಕೂಣಿಯೊಂದಕ್ಕೆ 600 ರೂ., ನಿಗದಿ ಮಾಡಲಾಗಿತ್ತು. ಜನತೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ವಿವಿಧ ಗ್ರಾಮಗಳು, ನೆರೆಯ ತಾಲೂಕಿನಿಂದಲೂ ಮೀನು ಬೇಟೆಗೆ ಆಗಮಿಸಿದ್ದರು. 

Tap to resize

Latest Videos

Shivamogga: ಸಚಿವ ಆರಗ ಜ್ಞಾನೇಂದ್ರ ವರ್ಸಸ್ ಮಾಜಿ ಸಿಎಂ ಬಿಎಸ್‌ವೈ ಜುಗಲ್ ಬಂದಿ?

ಕೆರೆ ಬೇಟೆಯಲ್ಲಿ ಸಾಗರ ತಾಲೂಕಿನ ಕೈರಾ ಗ್ರಾಮಸ್ಥರೊಬ್ಬರು ಬರೋಬ್ಬರಿ 31 ಕೆ.ಜಿ ತೂಕದ ಮೀನು ಹಿಡಿದರೆ, ಶಿರಸಿ ಸಮೀಪದ ರಾಮಾಪುರದ ಯುವಕ 25 ಕೆ.ಜಿ. ತೂಕದ ಮೀನು ಹಿಡಿದು ಗಮನ ಸೆಳೆದರು. ಭಾರೀ ಗಾತ್ರದ ಮೀನುಗಳು ಸಿಕ್ಕಿದ್ದು, ಇಡೀ ಕೆರೆಬೇಟೆಯಲ್ಲಿ ವಿಶೇಷವಾಗಿತ್ತು. ಇದರಿಂದ ಚನ್ನ ಶೆಟ್ಟಿಕೊಪ್ಪ ಗ್ರಾಮಕ್ಕೆ 14 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಕೆರೆ ಬೇಟೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ (Viral) ಆಗಿವೆ.

click me!