ಶ್ರಾವಣ ಮಾಸದಲ್ಲಿ ಶಿವ ಕೇಳಿದ್ದೆಲ್ಲ ಕೊಡ್ತಾನೆ ಎಂಬ ನಂಬಿಕೆಯಿದೆ. ಹಾಗಾಗಿಯೇ ಭಕ್ತರು, ಶಿವನ ಆರಾಧನೆಯಲ್ಲಿ ನಿರತರಾಗ್ತಾರೆ. ಒಳ್ಳೆಯ ಜೀವನ ಸಂಗಾತಿ ಬಯಸುವ ಹುಡುಗಿಯರು ಕೂಡ ವೃತ ಕೈಗೊಳ್ತಾರೆ. ಈ ವೇಳೆ ಕೆಲ ವಿಷ್ಯವನ್ನು ಅವರು ತಿಳಿದಿರಬೇಕು.
ಶ್ರಾವಣ ಮಾಸ ಆರಂಭವಾಗಿದೆ. ಶಿವನ ಭಕ್ತರು, ಈಶ್ವರನ ಆರಾಧನೆಯಲ್ಲಿ ನಿರತರಾಗಿದ್ದಾರೆ. ಈ ಮಾಸದಲ್ಲಿ ಹುಡುಗಿಯರು ಬಯಸಿದ ವರ ಪಡೆಯಲು ಉಪವಾಸ ಮಾಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಮಾಸದಲ್ಲಿ ಉಪವಾಸ ವ್ರತ ಕೈಗೊಳ್ಳಲು ಕೆಲವು ನಿಯಮಗಳನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ, ಸೋಮವಾರದ ಉಪವಾಸವು ಅವಿವಾಹಿತ ಹುಡುಗಿಯರಿಗೆ ತುಂಬಾ ಫಲಪ್ರದವಾಗಿದೆ. ಈ ಮಾಸದಲ್ಲಿ ಶ್ರದ್ಧಾ ಭಕ್ತಿಯಿಂದ ಉಪವಾಸ ಮಾಡಿದ್ರೆ ಹುಡುಗಿಯರ ಮೇಲೆ ಭೋಲೇನಾಥನ ಕೃಪೆ ಯಾವಾಗಲೂ ಇರುತ್ತದೆ. ಶ್ರಾವಣ ವ್ರತವನ್ನು ಆಚರಿಸುವಾಗ ಕೆಲವು ವಿಷಯಗಳನ್ನು ಹುಡುಗಿಯರು ನೆನಪಿಟ್ಟುಕೊಳ್ಳಬೇಕು. ಇಂದು ವೃತ ಮಾಡುವ ಮೊದಲು ಹುಡುಗಿಯರಿಗೆ ತಿಳಿದಿರಬೇಕಾದ ಸಂಗತಿ ಏನು ಎಂಬುದನ್ನು ಹೇಳ್ತೇವೆ.
ಅರಿಶಿನ (Turmeric) ಮತ್ತು ತುಳಸಿ (Tulsi) ಅರ್ಪಿಸಬೇಡಿ : ನಂಬಿಕೆಗಳ ಪ್ರಕಾರ, ಅವಿವಾಹಿತ (Unmarried ) ಹುಡುಗಿಯರು ಶ್ರಾವಣ (Sawan) ಮಾಸದಲ್ಲಿ ಶಿವ (Shiva) ನಿಗೆ ಅರಿಶಿನ ಮತ್ತು ತುಳಸಿ ಎಲೆಗಳನ್ನು ಅರ್ಪಿಸಬಾರದು. ಇದ್ರಿಂದ ಸಮಸ್ಯೆ ಎದುರಾಗುತ್ತದೆ.
ಓಂ ನಮಃ ಶಿವಾಯ (Om Namah Shivaya ) ಮಂತ್ರವನ್ನು ಪಠಿಸಿ : ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆ (Puja) ಮಾಡಲು ಬಯಸುವ ಅವಿವಾಹಿತ ಹುಡುಗಿ (Girl) ಯರು ಮಂತ್ರಿ ಜಪಿಸಬೇಕು. ಉತ್ತಮ ವರನನ್ನು ಬಯಸುವ ಹುಡುಗಿಯರು, ಐದು ಜಪಮಾಲೆಗಳನ್ನು ಜಪಿಸಬೇಕು. ಜಪಮಾಲೆಯನ್ನು ಪಠಿಸುವಾಗ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಹೇಳಬೇಕು.
ಶ್ರಾವಣ ಮಾಸದಲ್ಲಿ ಯಾವ ಆಹಾರ (Food) ತ್ಯಜಿಸಬೇಕು ? :
ಈ ಆಹಾರದಿಂದ ದೂರವಿರಿ : ಶ್ರಾವಣ ಮಾಸದಲ್ಲಿ ಮೊದಲೇ ಹೇಳಿದಂತೆ ಉಪವಾಸ (Fasting) ಕ್ಕೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಶ್ರಾವಣ ಸೋಮವಾರ (Monday)ದ ಉಪವಾಸ ವಿಶೇಷವಾಗಿದೆ. ಉಪವಾಸದ ಹೆಸರಿನಲ್ಲಿ ಜನರು ಕೆಲ ತಪ್ಪುಗಳನ್ನು ಮಾಡ್ತಾರೆ. ತಮಗಿಷ್ಟವಾದ ಆಹಾರ ಸೇವನೆ ಮಾಡ್ತಾರೆ. ಆದ್ರೆ ಈ ತಪ್ಪು ಮಾಡಬಾರದು. ಸೋಮವಾರ ಉಪವಾಸದ ಸಮಯದಲ್ಲಿ ಕೆಲವು ಆಹಾರವನ್ನು ಸೇವಿಸಬಾರದು. ಈ ವ್ರತದ ಸಮಯದಲ್ಲಿ ಮೈದಾ ಹಿಟ್ಟು, ಗೋಧಿ ಹಿಟ್ಟು, ಬೇಳೆ ಮುಂತಾದವುಗಳಿಂದ ದೂರವಿರಬೇಕು.
ಈರುಳ್ಳಿ (Onion) – ಬೆಳ್ಳುಳ್ಳಿ, ಮಸಾಲೆ ಆಹಾರ : ಹಾಗೆಯೇ ಸೋಮವಾರ ಉಪವಾಸದ ದಿನ ಈರುಳ್ಳಿ, ಬೆಳ್ಳುಳ್ಳಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿಯಂತಹ ಮಸಾಲೆ ಆಹಾರವನ್ನು ಸೇವನೆ ಮಾಡಬಾರದು. ಇದ್ರ ಜೊತೆಗೆ ಮಾಂಸ, ಮದ್ಯದಿಂದಲೂ ದೂರವಿರಬೇಕಾಗುತ್ತದೆ.
ಕಲ್ಲು ಉಪ್ಪು ಸೇವನೆ ಮಾಡಿ : ಶ್ರಾವಣ ಮಾಸದ ಸಮಯದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ಉಪವಾಸದ ಸಮಯದಲ್ಲಿ ಕಲ್ಲು ಉಪ್ಪನ್ನು ಸೇವಿಸಬೇಡಿ.
ಈ ರಾಶಿಯ ಪುರುಷರಿಗೆ ಮಕ್ಕಳ ಭವಿಷ್ಯದ್ದೇ ಚಿಂತೆ, ಕನಸು!
ಕಾಲೋಚಿತ ಹಣ್ಣು : ಈ ಉಪವಾಸದ ಸಮಯದಲ್ಲಿ ನೀವು ಋತುಮಾನದ ಹಣ್ಣುಗಳನ್ನು ಸೇವಿಸಬಹುದು. ಇದಲ್ಲದೆ ನೀವು ಹಾಲು, ಮೊಸರು, ಮಜ್ಜಿಗೆ ಮುಂತಾದವುಗಳನ್ನು ಸೇವಿಸಬೇಕು.
Zodiac Signs: ಈ ರಾಶಿಗಳ ಮಕ್ಕಳಿಗೆ ಅಪ್ಪ ಅಂದ್ರೆ ಸ್ಟ್ರಾಂಗೆಸ್ಟ್ ಮ್ಯಾನ್
ಶ್ರಾವಣ ಮಾಸದಲ್ಲಿ ಭಗವಂತ ಶಿವನ ಪೂಜೆ ಹೀಗಿರಲಿ :
ಉಪವಾಸದ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡುವ ನೀರಿಗೆ ಗಂಗಾಜಲ ಮತ್ತು ಕಪ್ಪು ಎಳ್ಳನ್ನು ಸೇರಿಸಿ ಸ್ನಾನ ಮಾಡಿ. ಈ ದಿನ ಶುಭ್ರವಾದ ಬಟ್ಟೆಯನ್ನು ಮಾತ್ರ ಧರಿಸಿ. ನಂತರ ಶಿವನ ವಿಗ್ರಹ ಅಥವಾ ಶಿವಲಿಂಗವನ್ನು ಪೂಜಿಸಲು, ನೀರು ಮತ್ತು ಪಂಚಾಮೃತದಿಂದ ಅಭಿಷೇಕ ಮಾಡಿ. ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಶಿವನಿಗೆ ಇಷ್ಟವಾಗುವ ಪುಷ್ಪಗಳನ್ನು ಅರ್ಪಿಸಬೇಕು. ಇದರ ನಂತರ ನೀವು ಓಂ ನಮಃ ಶಿವಾಯ ಎಂಬ ಮಂತ್ರವನ್ನು ಸಹ ಪಠಿಸಬೇಕು. ಶಿವನಿಗೆ ಪೂಜೆ ಮಾಡಿದ ನಂತ್ರ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡಬೇಕು. ನಂತ್ರ ಪ್ರಸಾದವನ್ನು ಸ್ವೀಕರಿಸಬೇಕು.