ಯುಗಾದಿ ಹಬ್ಬದ ಅಂಗವಾಗಿ ‌ಹೋಳಿ ಆಚರಣೆ: ಪುನೀತ್ ಭಾವಚಿತ್ರಕ್ಕೆ ಬಣ್ಣ ಹಾಕಿ ಸಂಭ್ರಮಿಸಿದ ಅಭಿಮಾನಿಗಳು

By Govindaraj S  |  First Published Apr 3, 2022, 9:15 PM IST

ಯುಗಾದಿ ಮರುದಿನ ಜಿಲ್ಲೆಯ ಸಿಂಧನೂರು, ಮಸ್ಕಿ, ದೇವದುರ್ಗ ‌ಹಾಗೂ ಲಿಂಗಸೂಗೂರು ತಾಲೂಕಿನ ವಿವಿಧೆಡೆ ‌ಹೋಳಿ ಆಚರಣೆ ‌ಮಾಡುತ್ತಾರೆ. ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಯುವಕರು ಈ ವರ್ಷ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ‌ಮಾಡಿ ಸುದ್ದಿಯಾಗಿದ್ದಾರೆ. 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ , ಸುವರ್ಣ ನ್ಯೂಸ್

ರಾಯಚೂರು (ಏ.03): ಯುಗಾದಿ (Ugadi) ಮರುದಿನ ಜಿಲ್ಲೆಯ ಸಿಂಧನೂರು, ಮಸ್ಕಿ, ದೇವದುರ್ಗ ‌ಹಾಗೂ ಲಿಂಗಸೂಗೂರು ತಾಲೂಕಿನ ವಿವಿಧೆಡೆ ‌ಹೋಳಿ ಆಚರಣೆ (Holi Celebration) ‌ಮಾಡುತ್ತಾರೆ. ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಯುವಕರು ಈ ವರ್ಷ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ‌ಮಾಡಿ ಸುದ್ದಿಯಾಗಿದ್ದಾರೆ. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕನ್ನಡದ ರಾಜಕುಮಾರ ‌ಎಂದೇ ಖ್ಯಾತಿ ಪಡೆದ ನಟ ಪುನೀತ್ ರಾಜ್‍ಕುಮಾರ್ (Puneeth Rajkumar) ನಮ್ಮ ಜೊತೆಗೆ ‌ಇಲ್ಲ.  ಆದ್ರೂ ರಾಜ್ಯದ ಲಕ್ಷಾಂತರ ‌ಅಭಿಮಾನಿಗಳ ಆರಾಧ್ಯದೈವ ಅಪ್ಪು ಅಂದ್ರೆ ಎಲ್ಲರಿಗೂ ‌ಪಂಚಪ್ರಾಣ. 

Latest Videos

undefined

ಇದಕ್ಕೆ ಸಾಕ್ಷಿಯೆಂಬಂತೆ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು (Fans) ತಾವು ಅಷ್ಟೇ ಬಣ್ಣದಾಟವಾಡದೇ ಪುನೀತ್ ಪೋಟೋಗಳಿಗೂ ಬಣ್ಣ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. ಹೋಳಿ ಸಂಭ್ರಮಾಚರಣೆ ವೇಳೆ ನೂರಾರು ಯುವಕರು ಅಪ್ಪು ಫೋಟೋ ಹಿಡಿದು ತಾವುಗಳು ಕುಣಿದು‌ ಕುಪ್ಪಳಿಸಿದರು.  ಇನ್ನೂ ಕೆಲ ಪುನೀತ್ ಅಭಿಮಾನಿಗಳು ಅಪ್ಪು ಫೋಟೋಗೆ  ಬಣ್ಣ ಹಚ್ಚಿ ಸಂಭ್ರಮಿಸಿದರೆ, ಕೆಲ ಅಭಿಮಾನಿಗಳು‌ ಬಣ್ಣದಾಟದ ನಡುವೆಯೂ ಪುನೀತ್ ರಾಜ್‍ಕುಮಾರ್ ಫೋಟೋದ ಮೆರವಣಿಗೆ ‌ಮಾಡಿ, ಅಪ್ಪು ಫೋಟೊ ಹಿಡಿದು ಫೋಟೋಗಳು ಕ್ಲಿಕ್ಕಿಸಿಕೊಂಡು ಸಂಭ್ರಮಾಚರಣೆ ಮಾಡಿದರು. 

ಸದ್ಯ ಹೋಳಿ ಆಚರಣೆ ವೇಳೆಯೂ ಪುನೀತ್ ನನ್ನು ಮೆರವಣಿಗೆ ಮಾಡಿದ ಅಭಿಮಾನಿಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ‌ಪುನೀತ್ ರಾಜ್‍ಕುಮಾರ್ ‌ಅಭಿಮಾನಿಗಳು ನಮ್ಮ ಕರುನಾಡಿನ ಯುವರಾಜ್ ಬಗ್ಗೆ ‌ಮಾತನಾಡಲು ಶುರು ಮಾಡಿದ್ದಾರೆ.

Mysuru: ಮಾನಸ ಗಂಗೋತ್ರಿಗೆ ಕಾವೇರಿಯಿಂದ ಕುಡಿಯುವ ನೀರು ಪೂರೈಕೆಗೆ ಕ್ರಮ

ಬದುಕಿನ ಪಾಠ ಹೇಳುವ ಬೇವು ಬೆಲ್ಲ: ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ (Jaggery) ಸೇವಿಸುವ ಹಾಗೆ ಯುಗಾದಿ ಎಂದರೆ ಬೇವು (Neem) ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಬೇವು ಬೆಲ್ಲ ಎಂದರೆ ಸಿಹಿ ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬುದಕ್ಕೆ ರೂಪಕ ಎಂಬ ಸಾಮಾನ್ಯ ಮಾತು ಎಲ್ಲರಿಗೂ ತಿಳಿದಿದೆ. 

ಆದರೆ, ಈ ಬೇವು ಬೆಲ್ಲ ತಯಾರಿಸಲು ಆರು ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಅವೆಲ್ಲವೂ ನಮ್ಮ ಜೀವನದ ಆರು ಭಾವನೆಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಷಯ ನಿಮಗೆ ಗೊತ್ತೇ?  ಹೌದು, ಯುಗಾದಿ ಎಂದರೆ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಹೊಸ ವರ್ಷವು ಸುಖ, ಸಂತೋಷ, ಸಮೃದ್ಧಿ (Prosperity)ಯನ್ನು ತರಲೆಂದು ಆಶಿಸುವ ಹಬ್ಬ. ಇಂಥ ಯುಗಾದಿಯ ದಿನ ಬೇವು ಬೆಲ್ಲ ಏಕೆ ಸೇವಿಸಬೇಕು, ಬೇವು ಬೆಲ್ಲ ತಯಾರಿಸುವ ವಿಧಾನವೇನು? ಈ ಬೇವು ಬೆಲ್ಲದ ಪ್ರಾಮುಖ್ಯತೆ ಏನು ಎಲ್ಲವನ್ನೂ ವಿವರವಾಗಿ ನೋಡೋಣ.

ಬೇವು ಬೆಲ್ಲ ತಯಾರಿ: ಬೇವು, ಬೆಲ್ಲ, ಹಸಿ ಮಾವಿನಕಾಯಿ, ಉಪ್ಪು, ಮೆಣಸಿನ ಕಾಳು ಹಾಗೂ ಹುಣಸೆ ಹುಳಿ ರಸ ಸೇರಿಸಿ ಪೇಸ್ಟ್ ತಯಾರಿಸಲಾಗುತ್ತದೆ. ಈ ಪದಾರ್ಥಗಳೇ ಏಕೆ? ಇವುಗಳ ಬಳಕೆಯ ಮಹತ್ವವೇನು?  ಈ ಆರು ಪದಾರ್ಥಗಳು ಮಾನವ ಜೀವನದ ಪ್ರಮುಖ ಆರು ಭಾವನೆಗಳನ್ನು ಸೂಚಿಸುತ್ತವೆ. ಮಾನವನ ನೆಮ್ಮದಿಯ ಜೀವನಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತದೆ. ನೀವೇ ಯೋಚಿಸಿ ಈ ಆರೂ ಪದಾರ್ಥಗಳೂ ಆರು ವಿವಿಧ ರುಚಿಯನ್ನು ಹೊಂದಿವೆ. ಒಂದೊಂದು ರುಚಿಯೂ ಜೀವನದ ಒಂದೊಂದು ರೀತಿಯ ಏರಿಳಿತಗಳನ್ನು ಸೂಚಿಸುತ್ತದೆ. 

ರಾಯಚೂರು ಶಾಸಕ ಶಿವರಾಜ್‌ ಪಾಟೀಲ್‌ ವಿರುದ್ಧ ಕಿಡ್ನಾಪ್‌ ಕೇಸ್‌

ಇದರಲ್ಲಿ ಯಾವೊಂದೇ ರುಚಿಯನ್ನೂ ಅತಿಯಾಗಿ ಸೇವಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಸಿಹಿಯೊಂದನ್ನೇ ಸೇವಿಸುತ್ತೇವೆಂದರೆ ಮುಖ ಕಟ್ಟುತ್ತದೆ. ಕಹಿಯೊಂದನ್ನೇ ತಿನ್ನುವುದು ಸಾಧ್ಯವೇ ಇಲ್ಲ. ಇನ್ನು ಹುಳಿಯಾಗಲೀ, ಖಾರವಾಗಲೀ, ಒಗರು, ಉಪ್ಪು ಯಾವುದೇ ಇರಲಿ- ಒಂದನ್ನೇ ಸೇವಿಸಿದರೆ ವಾಂತಿಯಾಗುತ್ತದಷ್ಟೇ. ಆದರೆ ಈ ಎಲ್ಲ ರುಚಿಗಳೂ ಹದವಾಗಿ ಮಿಳಿತವಾದಾಗ ನಾಲಿಗೆ ಚಪ್ಪರಿಸುವಂಥ ರುಚಿ ಸಿಗುತ್ತದೆ. ಹೀಗೆ ಜೀವನದಲ್ಲಿ ಕೂಡಾ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಮಿಳಿತವಾಗಿದ್ದಾಗಷ್ಟೇ ಜೀವನ ಸೊಗಸು ಎಂಬ ಪಾಠ ಹೇಳುತ್ತವೆ. 

click me!