ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಶರೀರದ ಭಾಗಗಳು ಹೊಡೆದುಕೊಳ್ಳುವುದು ಒಂದೊಂದು ಅರ್ಥವನ್ನು ನೀಡುತ್ತವೆ. ಕೆಲವು ಶುಭ ಸೂಚಕಗಳಾದರೆ ಮತ್ತೆ ಕೆಲವು ಅಶುಭ ಸಂಕೇತವನ್ನು ನೀಡುತ್ತವೆ. ಹಾಗಾದರೆ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಶರೀರದ ಭಾಗಗಳು ಹೊಡೆದುಕೊಳ್ಳುವುದು ಯಾವುದರ ಸಂಕೇತ ಎಂಬುದನ್ನು ನೋಡೋಣ...
ಶರೀರದ ಕೆಲವು ಭಾಗಗಳು ಒಮ್ಮೊಮ್ಮೆ ಹೊಡೆದುಕೊಳ್ಳುತ್ತದೆ. ಇದಕ್ಕೆ ಹೊಡೆದುಕೊಳ್ಳುವುದು / ಕುಣಿಯುವುದು/ ಹಾರುವುದು /ಅದರುವುದು ಹೀಗೆ ನಾನಾ ವಿಧವಾಗಿ ಹೇಳುತ್ತಾರೆ. ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಇವೆಲ್ಲ ಕೆಲವು ಶುಭ- ಅಶುಭ ಸಂಕೇತಗಳನ್ನು ಸೂಚಿಸುವ ಚಿಹ್ನೆಗಳಾಗಿರುತ್ತವೆ. ದೇಹದ ಬೇರೆ ಬೇರೆ ಭಾಗಗಳ ಅದುರುವುದು ಬೇರೆ ಬೇರೆ ಅರ್ಥಗಳನ್ನು ಸೂಚಿಸುತ್ತವೆ. ತುಳಸೀದಾಸರು ತಮ್ಮ 'ರಾಮಚರಿತ ಮಾನಸ'ದಲ್ಲಿ ಶರೀರದ ಭಾಗಗಳು ಹೊಡೆದುಕೊಳ್ಳುವ ಬಗ್ಗೆ ವಿಸ್ತಾರವಾಗಿ ಉಲ್ಲೇಖಿಸಿದ್ದಾರೆ.
ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಶರೀರವು ಸಂವೇದನಾಶೀಲತೆಯನ್ನು ಹೊಂದಿರುವುದಲ್ಲದೆ, ಬಲಶಾಲಿಯೂ ಆಗಿರುತ್ತದೆ. ಇದು ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಮೊದಲೇ ಸಂಕೇತವನ್ನು ಸಹ ನೀಡುತ್ತದೆ. ಶರೀರದ ಕೆಲವು ಭಾಗಗಳು ಅದುರುವುದು ಇಲ್ಲವೇ ಹೊಡೆದುಕೊಳ್ಳುವುದು ಶುಭ ಸಂಕೇತವಾಗಿರುತ್ತವೆ. ಕೆಲವು ಬಾರಿ ಅಶುಭ ವಿಚಾರಗಳನ್ನು ಇದು ತಿಳಿಸುತ್ತದೆ. ಈ ಎಲ್ಲವುಗಳ ಬಗ್ಗೆ ತಿಳಿಯೋಣ.....
ಇದನ್ನು ಓದಿ: ಮನೆಯಲ್ಲಿ ಈ ಗಿಡವಿದ್ದರೆ ಲಕ್ಷ್ಮೀ ಕೃಪೆ, ನಿಮ್ಮ ಮನೆಯಲ್ಲೂ ಇದೆಯಾ..?
ಶಾಸ್ತ್ರದ ಪ್ರಕಾರ ಪುರುಷರಿಗೆ ಬಲ ಭಾಗದ ಅಂಗ ಹೊಡೆದುಕೊಳ್ಳುವುದು ಶುಭವಾದರೆ, ಎಡಭಾಗ ಹೊಡೆದುಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ. ಮಹಿಳೆಯರಿಗೆ ಎಡಭಾಗಗಳು ಹೊಡೆದುಕೊಳ್ಳುವುದು ಶುಭವಾದರೆ, ಬಲ ಭಾಗದ ಅಂಗ ಹೊಡೆದುಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ.
ಕಣ್ಣು ಅದುರುವಿಕೆ
ಮಹಿಳೆಯರಿಗೆ ಬಲಗಣ್ಣು ಅದುರುತ್ತಿದ್ದರೆ ಮತ್ತು ಪುರುಷರಿಗೆ ಎಡಗಣ್ಣು ಹೊಡೆದುಕೊಂಡರೆ ಅಶುಭ. ಹೀಗೆ ಹೊಡೆದುಕೊಂಡರೆ ದುಃಖದ ಸಮಾಚಾರ ಕಿವಿಗೆ ಬೀಳಲಿದೆ ಎಂಬ ಸಂಕೇತದ ಸೂಚನೆ ಇದಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಮಹಿಳೆಯರಿಗೆ ಎಡಗಣ್ಣು, ಪುರುಷರಿಗೆ ಬಲಗಣ್ಣು ಹೊಡೆದುಕೊಳ್ಳುವುದರಿಂದ ಶುಭವಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.
ಕಣ್ಣಿನ ರೆಪ್ಪೆಗಳು
ಬಲಗಣ್ಣಿನ ರೆಪ್ಪೆಗಳು ಹೊಡೆದುಕೊಂಡರೆ ಅದೃಷ್ಟದ ಸಂಕೇತವಾಗಿರುತ್ತದೆ. ಇದರಿಂದ ಶುಭ ಸಮಾಚಾರವೂ ಕೇಳಿ ಬರುತ್ತದೆ ಎಂದು ಸಹ ಹೇಳಲಾಗುತ್ತದೆ.
undefined
ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..!
ಕೆನ್ನೆ ಅದುರುವುದು
ಶಾಸ್ತ್ರದ ಪ್ರಕಾರ ವ್ಯಕ್ತಿಯ ಎರಡೂ ಕೆನ್ನೆ ಒಮ್ಮೆಲೆ ಹೊಡೆದುಕೊಂಡರೆ ಶುಭವೆಂದು ಹೇಳಲಾಗುತ್ತದೆ. ಇದು ಎಲ್ಲಿಂದಾದರೂ ಧನಲಾಭವಾಗುವ ಸಂಕೇತವನ್ನು ತೋರಿಸುತ್ತದೆ.
ಕಿವಿ ಹೊಡೆದುಕೊಳ್ಳುವುದು
ವ್ಯಕ್ತಿಯ ಬಲಗಿವಿ ಬಡಿದುಕೊಂಡರೆ ಶುಭ ಎಂದು ಹೇಳುತ್ತಾರೆ. ಇದರಿಂದ ಭವಿಷ್ಯದಲ್ಲಿ ಶುಭ ಸಮಾಚಾರವನ್ನು ಕೇಳುವುದಲ್ಲದೆ, ಉನ್ನತ ಪದವಿ ಪ್ರಾಪ್ತವಾಗುವ ಸೂಚನೆಯೂ ಇದಾಗಿರುತ್ತದೆ ಎಂಬ ನಂಬಿಕೆ ಇದೆ.
ಭುಜ ಹೊಡೆದುಕೊಳ್ಳುವುದು
ಬಲ ಭುಜ ಹೊಡೆದುಕೊಂಡರೆ ಬಹುಬೇಗ ಧನ ಲಾಭವಾಗುವ ಸೂಚನೆಯಾಗಿರುತ್ತದೆ. ಅದೇ ಎಡ ಭುಜ ಹೊಡೆದುಕೊಂಡರೆ ರಕ್ತ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ.
ಹಣೆ ಹೊಡೆದುಕೊಳ್ಳುವುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಗೆ ಹಣೆ ಹೊಡೆದುಕೊಂಡರೆ ಶುಭವೆಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿಗೆ ಭೌತಿಕ ಸುಖ ಮತ್ತು ಐಷಾರಾಮಿ ವಸ್ತುಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚುತ್ತವೆ ಎಂಬ ಸೂಚನೆಯನ್ನು ಇದು ನೀಡುತ್ತದೆ.
ಬಲಭಾಗ ಅಂಗ ಹೊಡೆದುಕೊಳ್ಳುವುದು
ವ್ಯಕ್ತಿಯ ಬಲ ಭಾಗದ ಅಂಗ ಹೊಡೆದುಕೊಂಡರೆ ಅದು ಬಂಗಾರದ ಆಭರಣಗಳು ದೊರಕುವ ಸಂಕೇತವಾಗಿರುತ್ತದೆ. ಎಡ ಮೊಣಕಾಲು ಹೊಡೆದುಕೊಂಡರೆ ಎಲ್ಲ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ.
ಇದನ್ನು ಓದಿ: ಸ್ಪಟಿಕ ಧರಿಸುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?
ಹಸ್ತ ಅದುರುತ್ತಿದ್ದರೆ
ವ್ಯಕ್ತಿಯ ಹಸ್ತ ಅದುರುತ್ತಿದ್ದರೆ ಬಹುಬೇಗ ಧನ ಲಾಭ ಉಂಟಾಗುತ್ತದೆ ಎಂಬ ಸಂಕೇತವನ್ನು ನೀಡುತ್ತದೆ.
ಬೆರಳು ಅದುರುವುದು
ಬೆರಳುಗಳು ಹೊಡೆದುಕೊಳ್ಳುವ ಅಥವಾ ಅದುರುವ ಸೂಚನೆಯನ್ನು ಕೊಡುತ್ತಿದ್ದರೆ ಶುಭವೆಂದೇ ಹೇಳಬಹುದು. ಸ್ನೇಹಿತರು ಆಕಸ್ಮಿಕವಾಗಿ ಸಿಗುತ್ತಾರೆ ಎಂದು ಸಹ ಇದನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಇನ್ನು ಬಲ ಹೆಬ್ಬೆರಳು ಮತ್ತು ಎಡಗಾಲಿನ ಹೆಬ್ಬೆರಳು ಹೊಡೆದುಕೊಳ್ಳುವುದು ಆಗುತ್ತಿದ್ದರೆ, ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬುದರ ಸೂಚಕ ಇದಾಗಿರುತ್ತದೆ. ಶತ್ರುಗಳ ವಿರುದ್ಧ ಜಯ ಸಿಗುತ್ತದೆ. ಅಷ್ಟೇ ಅಲ್ಲದೆ ಮನೋ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದರ ಸಂಕೇತ ಇದಾಗಿರುತ್ತದೆ.