ಈ ಮೂರು ರಾಶಿಯವರು ಲವ್ ಮ್ಯಾರೇಜೇ ಆಗೋದು, ನಿಮ್ಮದೂ ಸೇರಿದ್ಯಾ?

By Suvarna NewsFirst Published Aug 30, 2021, 3:39 PM IST
Highlights

ಪ್ರತಿ ರಾಶಿಯ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನರಾಗಿರುತ್ತಾರೆ. ಸ್ವಭಾವ ಭಿನ್ನತೆಗೆ ಆಯಾ ರಾಶಿಯ ಅಧಿಪತಿ ಗ್ರಹ ಮತ್ತು ವ್ಯಕ್ತಿಯ ನಕ್ಷತ್ರ ಕಾರಣವಾಗಿರುತ್ತದೆ. ಅಷ್ಟೆ ಅಲ್ಲದೆ ಜಾತಕದ ಯೋಗ ಮತ್ತು ಅದೃಷ್ಟಗಳು ಸಹ ಕಾರಣವಾಗಿರುತ್ತವೆ. ಇನ್ನು  ವಿವಾಹದ ವಿಷಯ ಬಂದಾಗ ಕೆಲವರು ಪ್ರೇಮ ವಿವಾಹವನ್ನು ಆಗುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಇದು ಅವರವರ ರಾಶಿ ಚಕ್ರಕ್ಕನುಸಾರ ಆಗಲಿದೆಯಂತೆ. ಹಾಗಾದರೆ, ಆ ರಾಶಿಯವರು ಯಾರು ಎಂದು ನೋಡೋಣ...

ರಾಶಿ ಚಕ್ರಗಳ ಸ್ವಭಾವಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಕೆಲವರದು ಸೌಮ್ಯ ಸ್ವಭಾವವಾದರೆ, ಇನ್ನು ಕೆಲವು ರಾಶಿಯವರದ್ದು ಒರಟು ಸ್ವಭಾವವಾಗಿರುತ್ತದೆ. ಆಯಾ ರಾಶಿಗೆ ತಕ್ಕಂತೆ ವ್ಯಕ್ತಿಗಳ ಗುಣ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಪ್ರತಿ ರಾಶಿಯ ಗುಣಗಳು ಆಯಾ ರಾಶಿಯ ಅಧಿಪತಿ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಗ್ರಹ, ರಾಶಿ, ನಕ್ಷತ್ರಗಳ ಪ್ರಭಾವದಿಂದ ವ್ಯಕ್ತಿಗಳು ರೂಪ, ಸ್ವಭಾವ, ವ್ಯಕ್ತಿತ್ವಗಳಲ್ಲಿ ಭಿನ್ನರಾಗಿರುತ್ತಾರೆ. ಕೆಲವು ರಾಶಿಯವರು ಪ್ರೇಮ ವಿವಾಹವಾಗಲು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. 

ಹಾಗೆಯೇ ಕೆಲವು ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಆಗೋದು ಲವ್ ಮ್ಯಾರೇಜ್ ಅನ್ನುತ್ತೆ ಶಾಸ್ತ್ರ. ಈ ರಾಶಿಯವರು ಲವ್ ಮಾಡಬೇಕೆಂದು ಬಯಸಿದರೆ ಹೇಗೂ ಆಯಿತು, ಆದರೆ, ಬಯಸಿದಿದ್ದರೂ ಲವ್ ಮಾಡುವಂತಾಗುತ್ತದೆ. ಅದಕ್ಕೆ ಅವರ ಅದೃಷ್ಟವೂ ಕಾರಣವಾಗಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. 

ಹಲವು ಮಂದಿಗೆ ತಮ್ಮ ಮನಸ್ಸಿನ ಇಚ್ಛೆಯಂತೆ ಪ್ರೀತಿಸಿ ಮದುವೆಯಾಗಬೇಕೆಂದು ಇರುತ್ತದೆ. ಮೊದಲೇ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು, ಪ್ರೀತಿಸಿ ಮದುವೆಯಾಗಬೇಕೆಂದು ಕೆಲವು ರಾಶಿಯವರು ಅಂದುಕೊಂಡಿರುತ್ತಾರೆ. ಕುಟುಂಬದವರ ಒಪ್ಪಿಗೆಯ ಮೇರೆಗೆ ಅನೇಕರು ಮದುವೆಯಾಗುತ್ತಾರೆ. ಕೆಲವು ರಾಶಿಯವರಿಗೆ ಲವ್ ಮ್ಯಾರೇಜ್ ವಿಷಯದಲ್ಲಿ ಅದೃಷ್ಟವೂ ಅವರ ಕೈ ಹಿಡಿಯುತ್ತದೆ.. 

ಇದನ್ನು ಓದಿ: ಮನೆಯಲ್ಲಿ ಈ ಗಿಡವಿದ್ದರೆ ಲಕ್ಷ್ಮೀ ಕೃಪೆ, ನಿಮ್ಮ ಮನೆಯಲ್ಲೂ ಇದೆಯಾ..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಹನ್ನೆರಡು ರಾಶಿ ಚಕ್ರಗಳಿವೆ. ಪ್ರತಿ ರಾಶಿಗೂ ಒಂದೊಂದು ಅಧಿಪತಿ ಗ್ರಹ ಇರುತ್ತದೆ. ಜನಿಸಿದ ಸಮಯ, ದಿನಾಂಕ, ಘಳಿಗೆಗಳ ಆಧಾರದ ಮೇಲೆ ರಾಶಿ ನಿರ್ಧರಿತವಾಗುತ್ತದೆ. ಜ್ಯೋತಿಷ್ಯದ ಅನುಸಾರ ವ್ಯಕ್ತಿಯ ಗುಣಸ್ವಭಾವಗಳು ಈ ರಾಶಿ, ನಕ್ಷತ್ರ ಮತ್ತು ಗ್ರಹಗಳಿಂದ ಪ್ರೇರಿತವಾಗಿರುತ್ತವೆ. ಕೆಲವು ರಾಶಿಯವರು ಪ್ರೀತಿಯ ವಿಷಯದಲ್ಲಿ ಅದೃಷ್ಟವಂತರು ಆಗಿರುತ್ತಾರೆ. ಮನಸ್ಸಿಗೆ ಹಿಡಿಸಿದವರ ಜೊತೆ ವಿವಾಹವಾಗಿ ಸುಖಜೀವನ ನಡೆಸುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಅಂತಹ ಕೆಲವು ರಾಶಿಗಳ ಬಗ್ಗೆ ತಿಳಿಯೋಣ...
 



ಮೇಷ ರಾಶಿ 
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ನೋಡಲು ಆಕರ್ಷಕವಾಗಿರುವುದಲ್ಲದೆ, ಬಲಶಾಲಿಗಳಾಗಿರುತ್ತಾರೆ. ನೇತೃತ್ವದ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. ಯಾವುದೇ ವಿಷಯವನ್ನು ಸರಿಯಾಗಿ ಯೋಚಿಸಿ ದೃಢ ನಿಶ್ಚಯದಿಂದ ನಿರ್ಣಯ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಹಾಗಾಗಿ ಈ ರಾಶಿಯವರ ವ್ಯಕ್ತಿತ್ವಕ್ಕೆ ಹಲವರು ಆಕರ್ಷಿತರಾಗುತ್ತಾರೆ. ಸ್ವತಂತ್ರ ಸ್ವಭಾವದ ಈ ರಾಶಿಯವರು ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕೆ ಇವರ ಅದೃಷ್ಟವೂ ಸಾಥ್ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ರಾಶಿಯವರ ಸ್ವಭಾವದಿಂದ ವಿವಾಹವಾದ ಮೊದಲು ಹೊಂದಾಣಿಕೆಯ ವಿಚಾರದಲ್ಲಿ ಕಷ್ಟವಾದರೂ ನಂತರ ಎಲ್ಲವೂ ಸರಿಯಾಗುತ್ತದೆ.

ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..!

ಮಕರ ರಾಶಿ 
ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಅತ್ಯಂತ ಸ್ವಾಭಿಮಾನಿಗಳಾಗಿರುತ್ತಾರೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವ ಶನಿದೇವರ ಪ್ರಿಯವಾದ ರಾಶಿ ಸಹ ಮಕರ ಆಗಿದೆ. ಮಕರ ರಾಶಿಯವರು ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಗುಣದೋಷಗಳ ಬಗ್ಗೆ ಹೆಚ್ಚು ಯೋಚಿಸಿ ನಿರ್ಧರಿಸುತ್ತಾರೆ. ಈ ರಾಶಿಯವರು ಪ್ರೇಮ ವಿವಾಹದ ವಿಷಯದಲ್ಲಿ ಭಾಗ್ಯಶಾಲಿಗಳು ಆಗಿರುತ್ತಾರೆ. ಈ ರಾಶಿಯವರು ತಮ್ಮ ಸಂಗಾತಿಗೆ ಪ್ರಾಮಾಣಿಕರಾಗಿರುತ್ತಾರೆ. ಈ ರಾಶಿಯವರ ಗುಣಗಳ ಕಾರಣದಿಂದಾಗಿ ಪ್ರೇಮ ಮತ್ತು ವಿವಾಹದ ವಿಷಯದಲ್ಲಿ ಈ ರಾಶಿಯವರು ಹೆಚ್ಚು ಕಷ್ಟಪಡಬೇಕಾಗಿಲ್ಲ. ಈ ರಾಶಿಯವರ ಪ್ರೇಮವಿವಾಹ ಸಾಮಾನ್ಯವಾಗಿ ಸಫಲವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ಸ್ಪಟಿಕ ಧರಿಸುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?

ಕುಂಭ ರಾಶಿ
ಕುಂಭ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಈ ರಾಶಿಯವರು ತಮ್ಮ ಜೀವನದ ನಿರ್ಧಾರಗಳನ್ನು ಸರಿಯಾಗಿ ಯೋಚಿಸಿ ತೆಗೆದುಕೊಳ್ಳುತ್ತಾರೆ. ಕುಂಭ ರಾಶಿಯವರ ಅಧಿಪತಿ ಗ್ರಹ ಶನಿ ದೇವನಾಗಿದ್ದಾನೆ. ಈ ರಾಶಿಯ ವ್ಯಕ್ತಿಗಳು  ತಮ್ಮ ಪ್ರೀತಿಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಪ್ರೇಮ ವಿವಾಹವನ್ನೇ ಆಗುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ವೈವಾಹಿಕ ಜೀವನ ಅತ್ಯಂತ ಉತ್ತಮವಾಗಿರುತ್ತದೆ. ಸಂಗಾತಿಯನ್ನು ಅರ್ಥೈಸಿಕೊಂಡು ಹೊಂದಾಣಿಕೆಯ ಜೀವನ ನಡೆಸುತ್ತಾರೆ.  

click me!