ಶ್ರೀ ವೆಂಕಟೇಶ್ವರನ ಸನ್ನಿಧಾನದಲ್ಲಿ ಮುಸ್ಲಿಂ ಭಕ್ತರಿಗೂ ಶ್ರೀವಾರಿ ಸೇವೆಗೆ ಅವಕಾಶ ಕಲ್ಪಿಸುವ ವಿಷಯವನ್ನು ಪರಿಶೀಲಿಸುವುದಾಗಿ ತಿರುಪತಿ ತಿರುಮಲ ದೇಗುಲ ಮಂಡಳಿ(ಟಿಟಿಡಿ) ತಿಳಿಸಿದೆ.
ತಿರುಮಲ: ಶ್ರೀ ವೆಂಕಟೇಶ್ವರನ ಸನ್ನಿಧಾನದಲ್ಲಿ ಮುಸ್ಲಿಂ ಭಕ್ತರಿಗೂ ಶ್ರೀವಾರಿ ಸೇವೆಗೆ ಅವಕಾಶ ಕಲ್ಪಿಸುವ ವಿಷಯವನ್ನು ಪರಿಶೀಲಿಸುವುದಾಗಿ ತಿರುಪತಿ ತಿರುಮಲ ದೇಗುಲ ಮಂಡಳಿ(ಟಿಟಿಡಿ) ತಿಳಿಸಿದೆ. ಟಿಟಿಡಿ ಆಡಳಿತಾಧಿಕಾರಿಯೊಂದಿಗೆ ಮಾಸಿಕವಾಗಿ ನಡೆಸುವ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಾಯ್ಡುಪೇಟದ ಮುಸ್ಲಿಂ ಭಕ್ತ ಹುಸೇನ್ ಭಾಷಾ ತಮಗೂ ಶ್ರೀವಾರಿ ಸೇವೆಗೆ ಅವಕಾಶ ಕೊಡುವಂತೆ ಅವಕಾಶ ಕೇಳಿದ್ದರು. ಈ ರೀತಿ ಇತರ ಧಾರ್ಮಿಕ ಪಂಥಕ್ಕೆ ಸೇರಿದ ವ್ಯಕ್ತಿಗಳು ತಿಮ್ಮಪ್ಪನ ಸೇವೆ ಮಾಡಲು ಆಸಕ್ತಿ ತೋರಿರುವುದು ನಿಜಕ್ಕೂ ಹರ್ಷದ ಸಂಗತಿ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಭಕ್ತರಿಗೆ ಶ್ರೀವಾರಿ ಸೇವೆಗೆ ಅವಕಾಶ ಕಲ್ಪಿಸುವ ಕುರಿತು ಟಿಟಿಡಿ ಪರಿಶೀಲಿಸಲಿದೆ ಎಂದು ಟಿಟಿಡಿ ಕಾರ್ಯ ನಿರ್ವಹಣಾ ಅಧಿಕಾರಿ ಧರ್ಮಾರೆಡ್ಡಿ ಭರವಸೆ ನೀಡಿದರು.
ಶ್ರೀವಾರಿ ಸೇವೆ ಎಂದರೇನು?
undefined
ಶ್ರೀವಾರಿ ಎಂದರೆ ಸ್ವಯಂಸೇವೆ ಎಂದರ್ಥ. ತಿಮ್ಮಪ್ಪನ ಸನ್ನಿಧಾನದಲ್ಲಿ ಭಕ್ತರು ಬಯಸಿದಲ್ಲಿ ದೇಗುಲದ 60 ವಿಭಾಗಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಬಹುದು. ಇದರಲ್ಲಿ ಅನ್ನಶಾಲೆ, ಆರೋಗ್ಯ, ಉದ್ಯಾನ, ವೈದ್ಯಕೀಯ, ಲಾಡು ಸಮರ್ಪಣೆ, ದೇಗುಲ, ಸಾರಿಗೆ, ಕಲ್ಯಾಣ ಮಂದಿರ, ಪುಸ್ತಕ ಮಳಿಗೆ ಮೊದಲಾದವುಗಳಿವೆ. ಹಾಲಿ ಇದಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶವಿದೆ.
5142 ಕೋಟಿ ರೂಪಾಯಿಗೆ ಏರಿದ ತಿರುಪತಿ ತಿಮ್ಮಪ್ಪನ ಬಜೆಟ್, ವಧು-ವರರಿಗೆ ಗುಡ್ ನ್ಯೂಸ್ ನೀಡಿದ ಟಿಟಿಡಿ!
1000 ಅಧಿಕಾರಿಗಳ ತರಬೇತಿಗೆ ಭಾರತಕ್ಕೆ ಮಾಲ್ಡೀವ್ಸ್ ಮನವಿ
ನವದೆಹಲಿ: ಭಾರತದೊಂದಿಗಿನ ಸಂಬಂಧ ಪೂರ್ಣ ಹಳಸಿದ್ದರೂ, ತನ್ನ ಅಧಿಕಾರಿಗಳಿಗೆ ತರಬೇತಿ ನೀಡಿ ಎಂದು ಭಾರತಕ್ಕೆ ಮಾಲ್ಡೀವ್ಸ್ ಮನವಿ ಮಾಡಿದೆ. ಈ ಕುರಿತು 2019ರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಹಿಲ್ ಮಾಡಿಕೊಂಡಿದ್ದ ಒಪ್ಪಂದವನ್ನು ನವೀಕರಿಸುವಂತೆ ಭಾರತ ಸರ್ಕಾರಕ್ಕೆ ಕೋರಿದೆ.
ಒಂದು ವೇಳೆ ಭಾರತ ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರೆ, ಮಾಲ್ಡೀವ್ಸ್‌ನ 1000 ಸಾವಿರ ಅಧಿಕಾರಿಗಳು ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ತರಬೇತಿ ಪಡೆಯಲಿದ್ದಾರೆ. 2019ರಲ್ಲಿ ಮಾಲ್ಡೀವ್ಸ್ ನಾಗರಿಕ ಸೇವಾ ಆಯೋಗ ಹಾಗೂ ಕೇಂದ್ರ ಆಡಳಿತ ಸುಧಾರಣೆ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ವೈಕುಂಠ ಏಕಾದಶಿ ದಿನದ ತಿರುಪತಿ ಹುಂಡಿ ಸಂಗ್ರಹದಲ್ಲಿ ಭಾರಿ ಇಳಿಕೆ