ವಿಮಾನದಲ್ಲಿ ಹೋಗುವ ಕನಸು ಬಹುತೇಕರಿಗೆ ಇರುತ್ತದೆ. ಆದರೆ, ವಿಮಾನದಲ್ಲಿ ಹೋದಂತೆ ಕನಸು ಬೀಳುವುದು ಅಪರೂಪ. ಹಾಗೆ ವಿಮಾನಕ್ಕೆ ಸಂಬಂಧಿಸಿದ ಕನಸು ಬಿದ್ದರೆ ಏನರ್ಥ ತಿಳಿಸುತ್ತೇವೆ ಕೇಳಿ.
ಪ್ರತಿಯೊಬ್ಬರಿಗೂ ಜೀವಿತಾವಧಿಯಲ್ಲಿ ಒಮ್ಮೆಯಾದರೂ ವಿಮಾನ(Airplane)ದಲ್ಲಿ ಪ್ರಯಾಣ ಮಾಡುವ ಕನಸಿರುತ್ತದೆ. ಅದೇ ಹೊತ್ತಿನಲ್ಲಿ ವಿಮಾನದಲ್ಲಿ ಹೋದಂತೆ ಕನಸು(dream) ಬೀಳುವುದೂ ಇದೆ. ಸಪ್ನ ಶಾಸ್ತ್ರದಲ್ಲಿ, ಪ್ರತಿಯೊಂದು ಕನಸಿನ ಅರ್ಥವನ್ನು ಹೇಳಲಾಗಿದೆ. ನಮ್ಮ ಸುತ್ತಲಿನ ವಸ್ತುಗಳು, ಜನರು ಮತ್ತು ಆಸೆಗಳಿಗೆ ಸಂಬಂಧಿಸಿದ ಕನಸುಗಳು ಬೀಳುತ್ತಿರುತ್ತವೆ. ಅಂತೆಯೇ, ವಿಮಾನಗಳಿಗೆ ಸಂಬಂಧಿಸಿದ ಕನಸುಗಳು ಅನೇಕ ಶುಭ ಮತ್ತು ಅಶುಭ ಸೂಚನೆಗಳನ್ನು ನೀಡುವುದನ್ನು ಸಹ ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.
ಕನಸಿನಲ್ಲಿ ವಿಮಾನದಲ್ಲಿ ಪ್ರಯಾಣಿಸುವುದು ಬಯಕೆ ಈಡೇರಿಕೆಯ(fulfillment of wishes) ಸಂಕೇತವನ್ನು ನೀಡುತ್ತದೆ, ವಿಮಾನಕ್ಕೆ ಸಂಬಂಧಿಸಿದ ಈ ಕನಸುಗಳ ಅರ್ಥವೇನು ಹೇಳುತ್ತೇವೆ ಕೇಳಿ.
ಸ್ವತಃ ವಿಮಾನದಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡುವುದು
ಕನಸಿನ ಗ್ರಂಥದ ಪ್ರಕಾರ, ಒಬ್ಬ ವ್ಯಕ್ತಿಯು ಕನಸಿನಲ್ಲಿ ಸ್ವತಃ ತಾನು ವಿಮಾನದಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಿದರೆ, ಅದನ್ನು ಮಂಗಳಕರ ಕನಸು ಎಂದು ಪರಿಗಣಿಸಲಾಗುತ್ತದೆ. ಈ ಕನಸು ಎಂದರೆ ನಿಮ್ಮ ಕೆಲವು ಆಸೆಗಳು ಶೀಘ್ರದಲ್ಲೇ ಈಡೇರಲಿವೆ ಮತ್ತು ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು(success) ಪಡೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ.
ವಿಮಾನ ಟೇಕ್‌ಆಫ್ ಆಗುವುದನ್ನು ನೋಡಿದರೆ
ಒಬ್ಬ ವ್ಯಕ್ತಿಯು ವಿಮಾನ ನಿಲ್ದಾಣದಿಂದ ಹೊರಡುವ ವಿಮಾನವನ್ನು ನೋಡುವ ಕನಸು ಕಂಡರೆ, ಈ ಕನಸನ್ನು ನಿಮ್ಮ ವ್ಯಾಪಾರ ವಿಸ್ತರಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ, ಮುಂದಿನ ದಿನಗಳಲ್ಲಿ ನಿಮ್ಮ ವ್ಯವಹಾರದಿಂದ ನೀವು ದೊಡ್ಡ ಲಾಭವನ್ನು ಗಳಿಸಬಹುದು ಎಂಬ ಸೂಚನೆ.
ನಾಲ್ಕು ಗ್ರಹಗಳ ದೋಷ ನಿವಾರಿಸುತ್ತೆ ಅಕ್ವಾಮರೀನ್ ರತ್ನ
ವಿಮಾನ ಅಪಘಾತಕ್ಕೀಡಾಗುತ್ತಿರುವುದನ್ನು ನೋಡುವುದು
ಕನಸಿನ ವಿಜ್ಞಾನದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಒಬ್ಬ ವ್ಯಕ್ತಿಯು ಕನಸಿನಲ್ಲಿ ವಿಮಾನವು ಪುಡಿಯಾಗುವುದನ್ನು ನೋಡಿದರೆ, ಅದು ಪ್ರಗತಿಯಲ್ಲಿರುವ ಅಡಚಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನೀವು ಅಂತಹ ಕನಸನ್ನು ನೋಡಿದರೆ, ನಿಮ್ಮ ಕೆಲಸದ ಬಗ್ಗೆ ನೀವು ಜಾಗರೂಕರಾಗಿರಬೇಕು.
ಪ್ರಯಾಣಿಸಬೇಕಾದ ವಿಮಾನ ತಪ್ಪಿಸಿಕೊಂಡಂತೆ ಕನಸು
ನೀವು ಪ್ರಯಾಣಿಸಬೇಕಾದ ವಿಮಾನ ಕೆಲವೇ ನಿಮಿಷಗಳಲ್ಲಿ ತಪ್ಪಿಸಿಕೊಂಡಂತೆ ಕನಸು ಬಿದ್ದರೆ ಅದರರ್ಥ, ಮಹತ್ವದ ಅವಕಾಶವೊಂದರಿಂದ ವಂಚಿತರಾಗಲಿದ್ದೀರಿ ಎಂದು. ಕೆಲವೊಮ್ಮೆ ಈಗಾಗಲೇ ತಪ್ಪಿಸಿಕೊಂಡ ಅವಕಾಶಗಳನ್ನೂ ಇದು ಹೇಳುತ್ತದೆ.
ವಿಮಾನ ಬದಲಿಸುವುದು
ಕನಸಿನಲ್ಲಿ ಒಂದು ವಿಮಾನದಿಂದ ಮತ್ತೊಂದಕ್ಕೆ ಹತ್ತಿದಂತೆ ಕನಸು ಬಿದ್ದರೆ ಅದರರ್ಥ, ಜೀವನದ ಕೆಲ ಬದಲಾವಣೆಗಳ ಬಗ್ಗೆ ನೀವು ವಿಪರೀತ ಆತಂಕಗೊಂಡಿದ್ದೀರಿ ಎಂದು. ಇದಲ್ಲದೆ, ವೃತ್ತಿ ವಿಷಯವಾಗಿ ಅಥವಾ ಜೀವನದ ಮತ್ತಾವುದೋ ಮಜಲಲ್ಲಿ ನೀವು ಬದಲಾವಣೆ ಕಾಣಲಿದ್ದೀರಿ ಎಂಬ ಸೂಚನೆಯೂ ಇದಾಗಿರಬಹುದು.
ಒಂಟಿ ಪ್ರಯಾಣ
ಇಡೀ ವಿಮಾನದಲ್ಲಿ ನೀವೊಬ್ಬರೇ ಕುಳಿತಂತೆ ಕನಸು ಬಿದ್ದರೆ ಜೀವನದ ಪ್ರಯಾಣದಲ್ಲಿ ನೀವು ಒಂಟಿತನ ಅನುಭವಿಸುತ್ತಿರುವ ಸಂಕೇತ ಇದಾಗಿದೆ. ನಿಮ್ಮ ಜೀವನದಲ್ಲಿ ಎಲ್ಲ ಇದ್ದೂ ಯಾರೂ ಇಲ್ಲದಂತೆ ಭಾಸವಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಸಾಧ್ಯವಾದಷ್ಟು ಹೊಸ ಸಂಬಂಧಗಳನ್ನು, ಗೆಳೆತನವನ್ನು ಜೀವನಕ್ಕೆ ಬರ ಮಾಡಿಕೊಳ್ಳಿ.
ಮೋಕ್ಷಕ್ಕಾಗಿ ಆಷಾಢದಲ್ಲಿ ಮಾಡಬೇಕಾದ 5 ಕಾರ್ಯಗಳು
ವಿಮಾನದಲ್ಲಿ ಕುಳಿತಾಗ ಅಪಘಾತವಾಗುವ ಭಯ
ನೀವು ವಿಮಾನದಲ್ಲಿ ಕುಳಿತಿದ್ದೀರಿ. ಆದರೆ, ಅಪಘಾತವಾದರೆ ಎಂಬ ಭಯ ನಿಮ್ಮನ್ನು ಸಿಕ್ಕಾಪಟ್ಟೆ ಆವರಿಸಿದಂತೆ ಕನಸು ಬಿದ್ದರೆ ಅದು ನಿಮ್ಮ ಬದುಕಿನ ಭಯಗಳ ಸೂಚಕವಾಗಿದೆ. ಎಲ್ಲದರ ಬಗ್ಗೆ ನೀವು ಅತಿಯಾಗಿ ಚಿಂತೆ ಮಾಡುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂಬ ಸೂಚನೆ ಇದಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.