ತೃತೀಯ ಲಿಂಗಿಗಳ ಮುಖ್ಯ ದೇವಾಲಯವಾದ ಇಲ್ಲಿ ಮಕ್ಕಳಿಲ್ಲದ ದಂಪತಿಯೂ ವರ ಪಡೆಯುತ್ತಾರೆ. ಈ ದೇವಾಲಯದ ಮಹಿಮೆಯ ಬಗ್ಗೆ ಹಲವಾರು ಕತೆಗಳಿವೆ.. ಎಲ್ಲಿದೆ ಈ ದೇವಾಲಯ?
ಹಿಂದೂ ಧರ್ಮಗ್ರಂಥಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಹೊರತುಪಡಿಸಿ, ಯಕ್ಷ, ಗಂಧರ್ವ ಮತ್ತು ತೃತೀಯ ಲಿಂಗಿಗಳ ವಿವರಣೆಗಳು ಅನೇಕ ಇವೆ. ಟ್ರಾನ್ಸ್ಜೆಂಡರ್ ಎಂದರೆ ಪ್ರಸ್ತುತ ದಿನಗಳಲ್ಲಿ ಅವರನ್ನು ಮೂರನೇ ಲಿಂಗ ಎಂದು ಕರೆಯಲಾಗುತ್ತದೆ. ತೃತೀಯ ಲಿಂಗಿಗಳ ಪ್ರಪಂಚ ಬಹಳ ನಿಗೂಢವಾಗಿದೆ. ಪ್ರತಿಯೊಬ್ಬರೂ ಅವರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ತೃತೀಯ ಲಿಂಗಿಗಳ ಜೀವನದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದೆ, ಹಾಗೆಯೇ ಅನೇಕ ಕಿರುಚಿತ್ರಗಳನ್ನು ಸಹ ಮಾಡಲಾಗಿದೆ. ನೀವು ಎಂದಾದರೂ ತೃತೀಯ ಲಿಂಗಿಗಳು ಯಾವ ದೇವತೆಯನ್ನು ಪೂಜಿಸುತ್ತಾರೆ ಎಂದು ಯೋಚಿಸಿದ್ದೀರಾ?
ತೃತೀಯ ಲಿಂಗಿಗಳು ಈ ದೇವಿಯನ್ನು ಪೂಜಿಸುತ್ತಾರೆ..
ತೃತೀಯ ಲಿಂಗಿಗಳ ಕುಲದೇವಿಯ ಹೆಸರು ಬಹುಚರ ದೇವಿ. ಆಕೆಯ ವಾಹನವು ಹುಂಜವಾದ್ದರಿಂದ ಆಕೆಯನ್ನು ಹುಂಜದ ತಾಯಿ ಎಂದೂ ಕರೆಯುತ್ತಾರೆ. ತೃತೀಯ ಲಿಂಗಿಗಳು ಈಕೆಯನ್ನು ಆರಾಧಿಸುತ್ತಾರೆ. ಇವರು ಬಹುಚರ ಮಾತೆಯನ್ನು ಅರ್ಧ ನಾರೀಶ್ವರನ ರೂಪದಲ್ಲಿ ಪೂಜಿಸುತ್ತಾರೆ. ಅವರು ಪೂಜಿಸುವ ಅನೇಕ ದೇವಾಲಯಗಳಿದ್ದರೂ, ಬಹುಚರ ದೇವಿಯ ಮುಖ್ಯ ದೇವಾಲಯವು ಗುಜರಾತ್‌ನ ಮೆಹ್ಸಾನಾದಲ್ಲಿದೆ. ಈ ದೇವಾಲಯದಲ್ಲಿ ಹುಂಜದ ಮೇಲೆ ತಾಯಿ ಕುಳಿತಿದ್ದಾಳೆ. ಬಹಳ ದೊಡ್ಡದಾದ ಹಾಗೂ ಸುಂದರವಾದ ಈ ದೇವಾಲಯಕ್ಕೆ ತೃತೀಯ ಲಿಂಗಿಗಳಷ್ಟೇ ಅಲ್ಲದೆ, ಮಕ್ಕಳಿಲ್ಲದ ದಂಪತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯನ್ನು ಪೂಜಿಸಿ ಫಲ ಪಡೆಯುತ್ತಾರೆ.. ಈ ದೇವಾಲಯವನ್ನು 1739ರಲ್ಲಿ ವಡೋದರದ ರಾಜಾ ಮನಾಜಿರಾವ್ ಗಾಯಕ್ವಾಡ್ ನಿರ್ಮಿಸಿದರು.
ವಕ್ರಿ ಶನಿಯಿಂದ ಈ ರಾಶಿಗಳಿಗೆ ಧನಯೋಗ, ಶಶ ರಾಜಯೋಗದ ಬಲ
ಬೆಳ್ಳಿ ಹುಂಜಗಳ ಅರ್ಪಣೆ
ತೃತೀಯ ಲಿಂಗಿಗಳು ತಮ್ಮ ಕುಲದೇವಿ ಬಹುಚಾರಳಿಗೆ ಬೆಳ್ಳಿಯಿಂದ ಮಾಡಿದ ಹುಂಜವನ್ನು ಅರ್ಪಿಸುತ್ತಾರೆ. ಹಿಂದೆಲ್ಲ ಬಹುಚರ ಮಾತೆಗೆ ಕಪ್ಪು ಹುಂಜವನ್ನು ಅರ್ಪಿಸಲಾಗುತ್ತಿತ್ತು. ನಂತರ ಸರ್ಕಾರ ಅದನ್ನು ನಿಷೇಧಿಸಿತು. ಅಂದಿನಿಂದ ಅವರು ಬೆಳ್ಳಿ ಹುಂಜವನ್ನು ನೀಡುತ್ತಾರೆ. ತಾಯಿಯ ರೂಪವು ತುಂಬಾ ಸೌಮ್ಯವಾಗಿದೆ. ಆಕೆಯ ಒಂದು ಕೈಯಲ್ಲಿ ಖಡ್ಗ ಮತ್ತು ಇನ್ನೊಂದು ಕೈಯಲ್ಲಿ ಅಭಯ ಮುದ್ರೆ ಇದೆ. ಬಹುಚರ ಮಾತೆಯನ್ನು ಪೂಜಿಸುವುದರಿಂದ ಮಕ್ಕಳಿಲ್ಲದ ದಂಪತಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ.
undefined
ಈ ಕಥೆ ಜನಪ್ರಿಯವಾಗಿದೆ
ದಂತಕಥೆಯ ಪ್ರಕಾರ, ಒಮ್ಮೆ ಅಲ್ಲಾವುದ್ದೀನ್ II ಪಟಾನ್ ಗೆದ್ದ ನಂತರ ಈ ದೇವಾಲಯವನ್ನು ಕೆಡವಲು ಬಂದಾಗ, ಇಲ್ಲಿ ದೇವತೆಯ ವಾಹನವಾದ ಹುಂಜಗಳು ಅಲ್ಲಿ ಇಲ್ಲಿ ತಿರುಗಾಡುತ್ತಿದ್ದವು. ಅಲ್ಲಾವುದ್ದೀನನ ಸೈನಿಕರು ಆ ಹುಂಜಗಳನ್ನು ಬೇಯಿಸಿ ತಿಂದರು. ಒಂದು ಹುಂಜ ಉಳಿದಿತ್ತು. ಈ ಹುಂಜವು ಬೆಳಗ್ಗೆ ಕೂಗಲು ಆರಂಭಿಸಿದಾಗ ಸೈನಿಕರ ಹೊಟ್ಟೆ ಸೇರಿದ್ದ ಹುಂಜಗಳೂ ಕೂಗತೊಡಗಿ ಹೊಟ್ಟೆ ಹರಿದುಕೊಂಡು ಹೊರಬಂದವು. ಭಯಭೀತರಾದ ಸೈನಿಕರು ದೇವಾಲಯವನ್ನು ಒಡೆಯದೆ ಓಡಿ ಹೋದರು.
ಶಿವ ಬುಡಕಟ್ಟು ಪಂಗಡಕ್ಕೆ ಸೇರಿದವ: ದೇವರ ಜಾತಿಯನ್ನು ಹುಡುಕಿದ ಕೈ ನಾಯಕ!
ದಂತಕತೆ
ದಂತಕಥೆಯ ಪ್ರಕಾರ ಬಹುಚರಾ ಮಾತೆ ಚರಣ್ ಸಮುದಾಯದ ಬಾಪಾಲ್ ದೇತಾ ಅವರ ಮಗಳು. ಅವಳು ಮತ್ತು ಅವಳ ಸಹೋದರಿ ಪ್ರಯಾಣಿಸುತ್ತಿದ್ದಾಗ ಬಾಪಿಯಾ ಎಂಬ ದರೋಡೆಕೋರನು ಅವರ ಮೇಲೆ ದಾಳಿ ಮಾಡಿದನು. ಈ ವೇಳೆ ಬಹುಚರ ಮತ್ತು ಆಕೆಯ ಸಹೋದರಿ ತಮ್ಮ ಸ್ತನಗಳನ್ನು ಕತ್ತರಿಸಿ ಆತ್ಮಹತ್ಯೆ ಮಾಡಿಕೊಂಡರು. ಬಾಪಿಯಾ ಶಾಪಗ್ರಸ್ತನಾಗಿ ಗಂಡಸ್ತನ ಕಳೆದುಕೊಂಡನು. ಬಹುಚರ ಮಾತೆಯನ್ನು ಹೆಣ್ಣಿನ ವೇಷ ಧರಿಸಿ ಪೂಜಿಸಿದಾಗ ಮಾತ್ರ ಅವನ ಶಾಪ ವಿಮೋಚನೆಯಾಯಿತು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.