ಪೂರ್ವಜರು ಅನುಸರಿಸಿದ ನಿಯಮಗಳು, ಪಾಲಿಸಿದ ವ್ರತ ಉಪಾಸನೆಗಳಿಗೆ ಅದರದ್ದೇ ಆದ ಮಹತ್ವವಿದೆ. ಜ್ಯೋತಿಷ್ಯದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಗ್ರಹಗತಿಗಳಿಂದಾದ ತೊಂದರೆಗೆ ಗ್ರಹಗಳ ಉಪಾಸನೆಯಿಂದ, ದೋಷಗಳ ಪರಿಹಾರದಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೆಯೇ ವಾರದ ಪ್ರತಿದಿನವೂ ಕೆಲವು ಉಪಾಯಗಳನ್ನು ಮಾಡಿದರೆ, ಗ್ರಹಕ್ಕನುಗುಣವಾಗಿ ವಸ್ತ್ರ ಧರಿಸಿದರೆ ಮತ್ತು ಆಯಾ ದೇವತೆಗಳ ಉಪಾಸನೆ ಮಾಡಿದರೆ ಒಳಿತಾಗುತ್ತದೆ. ವಾರದ ಈ ಉಪಾಯಗಳ ಬಗ್ಗೆ ತಿಳಿಯೋಣ.
ಪ್ರತಿಯೊಬ್ಬ ವ್ಯಕ್ತಿಯು ಸುಖ-ಸಂತೋಷ ಹಾಗೂ ನೆಮ್ಮದಿಯಿಂದ ಜೀವಿಸಬೇಕೆಂಬ ಇಚ್ಛೆ ಹೊಂದಿರುತ್ತಾನೆ. ಗ್ರಹಗತಿಗಳ ಸ್ಥಾನ ಬದಲಾವಣೆಯಿಂದ ಜೀವನದಲ್ಲಿ ಕಷ್ಟ-ಸುಖಗಳು ಬಂದುಹೋಗುತ್ತವೆ. ಜಾತಕದ ಗ್ರಹಗಳ ಸ್ಥಿತಿಯಲ್ಲಿ ವ್ಯತ್ಯಾಸವಾದಾಗ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವುದು ಸಹಜ. ಹಾಗಾಗಿ ಅದಕ್ಕೆ ತಕ್ಕ ಪರಿಹಾರವನ್ನು ಜ್ಯೋತಿಷ್ಯದಲ್ಲಿ ಸೂಚಿಸಿರುತ್ತಾರೆ. ಕೆಲವು ಉಪಾಯಗಳು ಗ್ರಹಗಳ ಬಲವರ್ಧನೆಗಾಗಿಯಾದರೆ, ಇನ್ನು ಕೆಲವು ಗ್ರಹಗಳಿಂದ ಉಂಟಾಗುವ ದೋಷವನ್ನು ನಿವಾರಿಸುತ್ತವೆ.
ಗ್ರಹಗಳ ದೋಷವಷ್ಟೇ ಅಲ್ಲದೇ ಇನ್ನೂ ಅನೇಕ ಸಮಸ್ಯೆಗಳು ದಿನನಿತ್ಯ ಕಾಡುತ್ತವೆ. ಅದೃಷ್ಟ ಕೈ ಹಿಡಿಯದಿರುವುದು, ರೋಗರುಜಿನಗಳ ಬಾಧೆ ಹೀಗೆ ನೆಮ್ಮದಿ ಮತ್ತು ಸುಖವನ್ನು ಕಾಣಲು ಕಷ್ಟವಂತಾಗುತ್ತದೆ. ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಜ್ಯೋತಿಷ್ಯದಲ್ಲಿ ಉಲ್ಲೇಖಿಸಿದ್ದರೆ, ಇನ್ನು ಪೂರ್ವಜರು ತಿಳಿಸಿದ ಪರಿಹಾರಗಳು ಜನರ ಬಾಯಿಂದ ಬಾಯಿಗೆ ಹರಿದು ಬಂದಿರುವಂಥದ್ದು. ಹಾಗಾಗಿ ಕೆಲವು ಸರಳ ಉಪಾಯಗಳನ್ನು ಮನೆಯಿಂದ ಹೊರಡುವಾಗ ಮಾಡಿದರೆ. ಅದೃಷ್ಟ ನಿಮ್ಮದಾಗುತ್ತದೆ.
ಇದನ್ನು ಓದಿ: ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಸುಖ-ಸಮೃದ್ಧಿಗಾಗಿ ವಾರದ ಪ್ರತಿದಿನ ಹೀಗೆಮಾಡಿ
ಭಾನುವಾರ
ಭಾನುವಾರದಂದು ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿದರೆ ಶುಭ. ಈ ದಿನ ಮನೆಯಿಂದ ಹೊರಡುವ ಮುನ್ನ ಪಾನ್ (ಎಲೆ-ಅಡಿಕೆ) ಅಥವಾ ತುಪ್ಪವನ್ನು ತಿನ್ನುಬೇಕು. ಇದರಿಂದ ಅಂದುಕೊಂಡ ಕಾರ್ಯದಲ್ಲಿ ಸಫಲತೆಯನ್ನು ಕಾಣಬಹುದಾಗಿದೆ. ಈ ದಿನ ಸೂರ್ಯದೇವನನ್ನು ಆರಾಧಿಸಿದರೆ ಶುಭಫಲ ಪ್ರಾಪ್ತಿಯಾಗುತ್ತದೆ.
ಸೋಮವಾರ
ಸೋಮವಾರದಂದು ಯಾವುದಾದರೂ ಮುಖ್ಯ ಕಾರ್ಯ ನಿಮಿತ್ತ ಹೊರಗಡೆ ಹೋಗುವುದಾದರೆ ಗೆರೆ ಇರುವ ಅಂಗಿಯನ್ನು ಧರಿಸಿದರೆ ಉತ್ತಮ. ಮನೆಯಿಂದ ಹೊರಡುವಾಗ ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡು ಹೋಗುವುದರಿಂದ, ಆ ಕಾರ್ಯ ಸಫಲವಾಗುತ್ತದೆ. ಈ ದಿನ ಶಿವ ಮತ್ತು ಚಂದ್ರನನ್ನು ಆರಾಧಿಸಬೇಕು.
ಮಂಗಳವಾರ
ಮಂಗಳವಾರದಂದು ಕೆಂಪು ಅಥವಾ ಗುಲಾಬಿ ಬಣ್ಣದ ಉಡುಪನ್ನು ಧರಿಸುವುದು ಉತ್ತಮ. ಮನೆಯಿಂದ ಹೊರಡುವಾಗ ಬೆಲ್ಲದಿಂದ ಬಾಯಿ ಸಿಹಿ ಮಾಡಿಕೊಳ್ಳಬೇಕು. ಇದರಿಂದ ಹೋಗುವ ಕಾರ್ಯದಲ್ಲಿ ಯಶಸ್ಸು ದೊರೆಯುವುದಲ್ಲದೇ, ಶತ್ರುಗಳಿಂದ ಯಾವುದೇ ರೀತಿಯ ಅಪಾಯವುಂಟಾಗುವುದಿಲ್ಲ. ಈ ದಿನ ಮಂಗಳ ಗ್ರಹ ಮತ್ತು ಹನುಮಂತನನ್ನು ಆರಾಧಿಸಬೇಕು.
ಇದನ್ನು ಓದಿ: ಈ ರಾಶಿಯವರಿಗೆ ಬ್ರೇಕ್‌ಅಪ್ ಆದ್ರೆ ಒಪ್ಪಿಕೊಳ್ಳೋದು ತುಂಬಾ ಕಷ್ಟ; ನಿಮ್ಮದು ಯಾವ ರಾಶಿ..?
ಬುಧವಾರ
ಈ ದಿನ ಹಸಿರು ಬಣ್ಣದ ವಸ್ತ್ರವನ್ನು ಧರಿಸಿದರೆ ಒಳ್ಳೆಯದು. ಬುಧವಾರದಂದು ಮನೆಯಿಂದ ಹೊರಡುವಾಗ ಕೊತ್ತಂಬರಿ ಸೊಪ್ಪಿನ ಒಂದು ಎಲೆಯನ್ನು ಬಾಯಿಯಲ್ಲಿ ಹಾಕಿಕೊಂಡು ಹೊರಡುವುದರಿಂದ ಯಾವುದೇ ಅಡೆ-ತಡೆಯಿಲ್ಲದೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬುಧವಾರದಂದು ಬುಧ ಗ್ರಹ ಮತ್ತು ಗಣೇಶನ ಆರಾಧನೆಯಿಂದ ಕಾರ್ಯಸಿದ್ಧಿಸುತ್ತದೆ.
ಗುರುವಾರ
ಗುರುವಾರದಂದು ಶ್ವೇತ ವರ್ಣದ ಅಥವಾ ಹಳದಿ ಬಣ್ಣದ ಉಡುಪು ಧರಿಸಿದರೆ ಒಳಿತು. ಇದರಿಂದ ಶುಭಫಲ ಪ್ರಾಪ್ತಿಯಾಗುತ್ತದೆ. ಮನೆಯಿಂದ ಹೊರಡುವ ಮುಂಚೆ ಸ್ವಲ್ಪ ಜೀರಿಗೆಯನ್ನು ತಿಂದು ಹೊರಟರೆ ಉತ್ತಮ. ಗುರುವಾರದಂದು ಗುರುರಾಯರನ್ನು, ಗುರು ಬೃಹಸ್ಪತಿಯನ್ನು ಮತ್ತು ಶ್ರೀ ಮಹಾವಿಷ್ಣುವನ್ನು ಆರಾಧಿಸಬೇಕು.
ಶುಕ್ರವಾರ
ಶುಕ್ರವಾರದಂದು ಬಿಳಿ ಬಣ್ಣದ ಅಥವಾ ತಿಳಿ ಹಳದಿ ಬಟ್ಟೆಯನ್ನು ತೊಟ್ಟರೆ ಒಳ್ಳೆಯದು. ಈ ದಿನ ಯಾವುದಾದರೂ ಪ್ರಮುಖ ಕಾರ್ಯ ನಿಮಿತ್ತ ಹೊರಗಡೆ ಹೊರಟಿದ್ದರೆ, ಹೊರಡುವ ಮುನ್ನ ಮೊಸರು ಸಕ್ಕರೆಯ ಮಿಶ್ರಣವನ್ನು ತಿನ್ನುವುದು ಉತ್ತಮ. ಶುಕರವಾರದಂದು ಲಕ್ಷ್ಮೀ ದೇವಿಯನ್ನು, ದುರ್ಗಾಮಾತೆಯನ್ನು,ವೈಭವ ಲಕ್ಷ್ಮೀಯನ್ನು ಮತ್ತು ಶುಕ್ರ ಗ್ರಹವನ್ನು ಆರಾಧಿಸಬೇಕು.
ಇದನ್ನು ಓದಿ: ಇವರು ಹಣ ವ್ಯಯಿಸಿದರೆ, ಅವರು ಉಳಿಸುತ್ತಾರೆ, ನಿಮ್ಮ ರಾಶಿ ತತ್ವ ಯಾವುದು?
ಶನಿವಾರ
ಶನಿವಾರದಂದು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಇದರಿಂದ ಶುಭಫಲವನ್ನು ಪಡೆಯಬಹುದಾಗಿದೆ. ಹೀಗೆ ಮಾಡುವುದರಿಂದ ಶನಿದೇವರ ಪ್ರಸನ್ನತೆಗೆ ಪಾತ್ರರಾಗಬಹುದು ಮತ್ತು ಕಾರ್ಯದಲ್ಲಿ ಯಶಸ್ಸುಲಭಿಸುವುದು. ಈ ದಿನ ಮನೆಯಿಂದ ಹೊರಡುವಾಗ ಸ್ವಲ್ಪ ಶುಂಠಿಯನ್ನು ತಿನ್ನುವುದು ಉತ್ತಮ. ಈ ದಿನ ಶನಿದೇವನ ಆರಾಧನೆಯ ದಿನವೇ ಆದರೂ ಹನುಮಂತನನ್ನು ಪೂಜಿಸುವುದರಿಂದ ವಿಶೇಷ ಫಲವನ್ನು ಪಡೆಯಬಹುದಾಗಿದೆ.