ಗುರುವಾರ ವ್ರತದಿಂದ ಅವಿವಾಹಿತರಿಗೆ ಹೆಚ್ಚುತ್ತೆ ಗುರುಬಲ, ಬೇಗ ವಿವಾಹ ಸಾಧ್ಯ

By Suvarna News  |  First Published Sep 15, 2022, 11:25 AM IST

ಗುರುವಾರ ವ್ರತ ಮಾಡುವುದರಿಂದ ಅವಿವಾಹಿತರಿಗೆ ಬೇಗ ವಿವಾಹ ನೆರವೇರುತ್ತದೆ. ಜೊತೆಗೆ ಶ್ರೀ ವಿಷ್ಣುವಿನ ಕೃಪೆಯಿಂದ ಜೀವನದ ಸಮಸ್ಯೆಗಳು ದೂರವಾಗುತ್ತವೆ. ಅವುಗಳನ್ನು ಎದುರಿಸುವ ಶಕ್ತಿ ಹೆಚ್ಚುತ್ತದೆ. ಗುರು ಗ್ರಹಕ್ಕೆ ಜಾತಕದಲ್ಲಿ ಬಲ ಹೆಚ್ಚುತ್ತದೆ. ಗುರುವಾರ ವ್ರತ ಆಚರಿಸಿವುದು ಹೇಗೆ, ನಿಮಯಗಳೇನು? 


ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವು ಯಾವುದಾದರೂ ದೇವತೆಗೆ ಅಥವಾ ಇನ್ನೊಂದಕ್ಕೆ ಸಮರ್ಪಿತವಾಗಿದೆ. ಸೋಮವಾರವು ಶಿವನಿಗೆ ಸಮರ್ಪಿತವಾದಂತೆ,  ಗುರುವಾರ ಭಗವಾನ್ ಶ್ರೀ ಹರಿ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ವ್ಯಕ್ತಿಯ ಜಾತಕದಲ್ಲಿ ಬಲವಾಗಿಲ್ಲದಿದ್ದರೆ ಮತ್ತು ಮದುವೆಯಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಗುರುವಾರ ಉಪವಾಸವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಹೀಗಾಗಿ ಜ್ಯೋತಿಷಿಗಳು ಅವಿವಾಹಿತರು ಗುರುವಾರ ಉಪವಾಸವನ್ನು ಆಚರಿಸಲು ಸಲಹೆ ನೀಡುತ್ತಾರೆ. ಗುರುವಾರ ವ್ರತವನ್ನು ಆಚರಿಸುವುದರಿಂದ ಗುರುಬಲ ಹೆಚ್ಚುತ್ತದೆ. ಗುರುವಾರದ ವ್ರತ(Thursday Vrat)ದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. 

ಗುರುವಾರ ಉಪವಾಸವನ್ನು ಯಾವಾಗ ಪ್ರಾರಂಭಿಸಬೇಕು?
ಜ್ಯೋತಿಷಿಗಳ ಪ್ರಕಾರ, ಪುಷ್ಯ ನಕ್ಷತ್ರವು ಗುರುವಾರ ಬಂದರೆ, ಈ ದಿನ ಉಪವಾಸವನ್ನು ಪ್ರಾರಂಭಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇಷ್ಟೇ ಅಲ್ಲ, ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಗುರುವಾರದಿಂದ ಉಪವಾಸವನ್ನು ಪ್ರಾರಂಭಿಸುವುದು ಮಂಗಳಕರವಾಗಿದೆ.

Tap to resize

Latest Videos

ಹಿರಿಯರಿಗೆ ಋಣ ತೀರಿಸುವ ಕಾಲ ಮಹಾಲಯ ಅಮಾವಾಸ್ಯೆ

ಎಷ್ಟು ಗುರುವಾರದ ಉಪವಾಸ ಮಂಗಳಕರ?
ಭಗವಾನ್ ವಿಷ್ಣು(Lord Vishnu) ಮತ್ತು ಬೃಹಸ್ಪತಿ ದೇವನ ಆಶೀರ್ವಾದವನ್ನು ಪಡೆಯಲು, ಸತತ 16 ಗುರುವಾರಗಳ ಉಪವಾಸವನ್ನು ಆಚರಿಸಬೇಕು. ಕೆಲ ವಾರದಲ್ಲಿ ಮುಟ್ಟಿನ ಕಾರಣದಿಂದ ಮಹಿಳೆಯರು ಉಪವಾಸ ಇರಲಾರರಾದರೆ, ನಂತರದ ವಾರಗಳಲ್ಲಿ ವ್ರತ ಆಚರಿಸಬೇಕು. ಇದರ ಹೊರತಾಗಿ, ಗುರುವಾರದ ಉಪವಾಸವನ್ನು 1,3,5,7 ಮತ್ತು 9 ವರ್ಷಗಳವರೆಗೆ ಅಥವಾ ಜೀವನಪರ್ಯಂತವೂ ಇಡಬಹುದು.

  • ಗುರುವಾರ ವ್ರತ ಪೂಜೆ ವಿಧಿ(Puja Vidhi)
  • ಗುರುವಾರದಂದು ಸೂರ್ಯೋದಯಕ್ಕೆ ಮುನ್ನವೇ ಎದ್ದು ಸ್ನಾನ ಮಾಡಿ. ವಿಷ್ಣುವಿಗೆ ಹಳದಿ ಬಣ್ಣ ಎಂದರೆ ತುಂಬಾ ಇಷ್ಟ. ಆದ್ದರಿಂದ ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸಿ.
  • ಭಗವಾನ್ ವಿಷ್ಣುವಿನ ಪೂಜೆ ಮಾಡಿ, ಉಪವಾಸದ ಪ್ರತಿಜ್ಞೆ ಮಾಡಿ.
  • ವಿಧಿವಿಧಾನಗಳೊಂದಿಗೆ ಭಗವಾನ್ ಬೃಹಸ್ಪತಿ ದೇವನನ್ನು ಆರಾಧಿಸಿ.
  • ಹಳದಿ ಹೂವುಗಳು, ಹಳದಿ ಶ್ರೀಗಂಧದೊಂದಿಗೆ ಹಳದಿ(Yellow colour) ಬಣ್ಣದ ನೈವೇದ್ಯವನ್ನು ದೇವರಿಗೆ ಅರ್ಪಿಸಿ. ನೈವೇದ್ಯಕ್ಕೆ ಬೇಳೆ ಮತ್ತು ಬೆಲ್ಲವನ್ನು ತೆಗೆದುಕೊಳ್ಳಬಹುದು.
  • ಇದರ ನಂತರ, ಧೂಪ, ದೀಪ ಇತ್ಯಾದಿಗಳನ್ನು ಬೆಳಗಿಸಿ, ಗುರು ದೇವನ ಕಥೆಯನ್ನು ಪಠಿಸಿ.
  • ಇದಾದ ನಂತರ ಆರತಿ ಮಾಡಿ ತಪ್ಪಿಗೆ ಕ್ಷಮೆ ಯಾಚಿಸಿ.
  • ಬಾಳೆಹಣ್ಣಿನ ಬೇರಿಗೆ ನೀರನ್ನು ಅರ್ಪಿಸಿ ಮತ್ತು ಭೋಗ್ ಇತ್ಯಾದಿಗಳನ್ನು ಅರ್ಪಿಸಿ.
  • ನಂತರ ಇಡೀ ದಿನ ಉಪವಾಸ(Fast) ಮಾಡಿ, ಸಂಜೆ ಹಳದಿ ಬಣ್ಣದ ಆಹಾರವನ್ನು ಸೇವಿಸಿ.
  • ಪ್ರಾಮಾಣಿಕ ಹೃದಯದಿಂದ ದೇವರ ಸ್ಮರಣೆಯಲ್ಲಿ ಇಡೀ ದಿನ ಕಳೆಯಿರಿ. 

    Vaastu Plants: ಮನೆಯೊಳಗೆ ಧನ ಹರಿಸುವ ಅದೃಷ್ಟದ ವಾಸ್ತು ಗಿಡಗಳಿವು

ವ್ರತದ ದಿನ ಈ ನಿಯಮಗಳನ್ನು ಅನುಸರಿಸಿ..(rules to follow)

  • ನೀವು ಗುರುವಾರ ಭಗವಾನ್ ವಿಷ್ಣುವನ್ನು ಪೂಜಿಸಿದರೆ, ಆ ದಿನ ಬಾಳೆಹಣ್ಣು ಸೇವಿಸಬೇಡಿ. ಹಿಂದೂ ಧರ್ಮದ ಪ್ರಕಾರ, ವಿಷ್ಣುವು ಬಾಳೆ ಮರದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಗುರುವಾರ ಬಾಳೆಗಿಡಕ್ಕೆ ನೀರು ಹಾಕಿ. ಹಣ್ಣನ್ನು ಕೀಳಬೇಡಿ.
  • ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸಿದ ನಂತರ, ದೇವರಿಗೆ ಬೆಲ್ಲ, ಹಳದಿ ಬಟ್ಟೆ, ಬೇಳೆ ಮತ್ತು ಬಾಳೆಹಣ್ಣುಗಳನ್ನು ಅರ್ಪಿಸಿ. ನಂತರ ಅದನ್ನು ಬಡವರಿಗೆ ದಾನ(donate) ಮಾಡಿ. ಇದರಿಂದ ವಿಷ್ಣುವಿನ ಕೃಪೆ ಉಳಿಯುತ್ತದೆ.
  • ನೀವು ಗುರುವಾರದಂದು ಭಗವಾನ್ ವಿಷ್ಣುವಿನ ಉಪವಾಸ ಮಾಡುತ್ತಿದ್ದರೆ, ಉಪವಾಸ ಮುರಿಯುವಾಗ ಹಳದಿ ಆಹಾರವನ್ನು ಮಾತ್ರ ಸೇವಿಸಿ. ಈ ದಿನ ಹೆಸರುಬೇಳೆಯ ಖಿಚಡಿ ಮಾಡಿ ಸೇವಿಸಿ. ಈ ದಿನ ಅನ್ನ ತಿನ್ನುವುದರಿಂದ ಧನಹಾನಿಯಾಗುತ್ತದೆ ಎಂಬ ನಂಬಿಕೆ ಇದೆ. 
  • ಧಾರ್ಮಿಕ ಗ್ರಂಥಗಳ ಪ್ರಕಾರ, ಹಲವಾರು ಕೋಟಿ ದೇವತೆಗಳು ಗೋವಿನಲ್ಲಿ ನೆಲೆಸಿರುತ್ತಾರೆ. ಶಾಸ್ತ್ರಗಳ ಪ್ರಕಾರ, ಗುರುವಾರ ಹಸುವಿಗೆ(cow) ರೊಟ್ಟಿ ಮತ್ತು ಬೆಲ್ಲವನ್ನು ತಿನ್ನಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.
  • ಗುರುವಾರದಂದು ಉಗುರು ಮತ್ತು ಕೂದಲನ್ನು ಕತ್ತರಿಸುವುದರಿಂದ(Nailcut and haircut) ಜಾತಕದಲ್ಲಿ ಗುರು ದುರ್ಬಲನಾಗುತ್ತಾನೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಇದು ಹಣದ ನಷ್ಟಕ್ಕೂ ಕಾರಣವಾಗುತ್ತದೆ. ಈ ದಿನದಂದು ಮಹಿಳೆಯರು ತಮ್ಮ ಕೂದಲು ಮತ್ತು ಬಟ್ಟೆಗಳನ್ನು ತೊಳೆಯುವುದದರಿಂದ ಗೌರವ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ.
click me!