ಈ ತಾರೀಖಿನಲ್ಲಿ ಹುಟ್ಟಿದೋರು ತುಂಬಾ ದುಡ್ಡು ಮಾಡ್ತಾರೆ!

By Suvarna News  |  First Published May 24, 2022, 5:41 PM IST

ಸಂಖ್ಯೆಗಳು ಮನುಷ್ಯನ ಅದೃಷ್ಟವನ್ನೇ ಬದಲಿಸುತ್ತದೆ. ಕೆಲವು ಸಂಖ್ಯೆಗಳು ಅದೃಷ್ಟವನ್ನು ತಂದುಕೊಟ್ಟರೆ ಮತ್ತೆ ಕೆಲವು ನಷ್ಟಕ್ಕೆ ಕಾರಣವಾಗುತ್ತದೆ. ಯಾವುದೇ ತಿಂಗಳ 1, 10, 19, 28ನೇ ತಾರೀಖಿನಲ್ಲಿ ಹುಟ್ಟಿದವರ ಭವಿಷ್ಯ, ಅದೃಷ್ಟ ಹಾಗೂ ಆರ್ಥಿಕ ಸ್ಥಿತಿ ಬಗ್ಗೆ ತಿಳಿಯೋಣ...


ಸಂಖ್ಯೆಗಳು (Numbers) ಅದೃಷ್ಟವನ್ನು ತರುತ್ತವೆ ಎಂಬುದು ಸುಳ್ಳಲ್ಲ. ಜ್ಯೋತಿಷ್ಯ ಶಾಸ್ತ್ರದ (Astrology) ಭಾಗವಾಗಿ ಸಂಖ್ಯಾಶಾಸ್ತ್ರ ಇದೆ. ಸಂಖ್ಯಾಶಾಸ್ತ್ರದಿಂದ ಅದೃಷ್ಟದ ಬಗ್ಗೆ ನಾವು ತಿಳಿಯಬಹುದು. ಕೆಲವು ಸಂಖ್ಯೆಗಳು ಕೆಲವರಿಗೆ ಭಾರಿ ಅದೃಷ್ಟವನ್ನು ಹೊತ್ತು ತರುತ್ತದೆ. ಅವರು ಎಂತಹ ಕಾರ್ಯವನ್ನು ಮಾಡಬೇಕಿದ್ದರೂ ಆ ಸಂಖ್ಯೆಯು ಬರುವಂತೆ ಮಾಡಿಕೊಳ್ಳುತ್ತಾರೆ. ತಮ್ಮ ಮನೆ ನಂಬರ್ (House Number), ಮೊಬೈಲ್ ನಂಬರ್ (Mobile Number), ವೆಹಿಕಲ್ ನಂಬರ್ ಹೀಗೆ ಎಲ್ಲದರಲ್ಲೂ ತಮಗೆ ಆಗಿಬರುವ, ಅದೃಷ್ಟವನ್ನು ಹೊತ್ತು ತರುವ ಸಂಖ್ಯೆಯನ್ನೇ ಹೊಂದಿರುತ್ತಾರೆ. ಹೊಸ ಕೆಲಸವನ್ನು ಮಾಡಬೇಕೆಂದರೂ ಸಹ ಅಷ್ಟೇ ಅದಕ್ಕೆ ಅವರ ಅದೃಷ್ಟದ ಸಂಖ್ಯೆ (Lucky number) ಇರುವ ತಾರೀಖನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.  

ಹೀಗೆ ಕ್ರಿಯೇಟಿವ್ ವ್ಯಕ್ತಿತ್ವದ ಜೊತೆಗೆ ಆರ್ಥಿಕವಾಗಿ ಲಾಭ ತರುವಂತಹ ಸಂಖ್ಯೆಗಳು ಯಾವುದು..? ಯಾವುದೇ ತಿಂಗಳ 1, 10, 19, 28ನೇ ತಾರೀಖಿಗೆ ಹುಟ್ಟಿದ ವ್ಯಕ್ತಿಗಳ ಭವಿಷ್ಯ ಏನು? ಅವರ ಅದೃಷ್ಟ ಹೇಗೆ ಇರಲಿದೆ? ಅವರ ಆರ್ಥಿಕ ಪರಿಸ್ಥಿತಿ ಹೇಗಿರಲಿದೆ? ಎಂಬಿತ್ಯಾದಿ ಅಂಶಗಳ ಬಗ್ಗೆ ತಿಳಿಯೋಣ...

ಸಖತ್ ಕ್ರಿಯೇಟಿವ್ (Creative)
ಈ ತಾರೀಖುಗಳಲ್ಲಿ ಹುಟ್ಟಿದವರು ಸಖತ್ ಕ್ರಿಯೇಟಿವ್ ಆಗಿದ್ದಾರೆ. ಜೊತೆಗೆ ಮಾತಿನ ಮಲ್ಲರಾಗಿದ್ದು, ಎಂಥವರನ್ನೂ ಮಾತಿನಿಂದಲೇ ಮೋಡಿ ಮಾಡಿ ಬಿಡುತ್ತಾರೆ. ಇವರು ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಲು ಎಂದೂ ತಯಾರಿರುವುದಿಲ್ಲ. ಜೊತೆಗೆ ಕೆಲಸದ ವಿಷಯಕ್ಕೆ ಬಂದರೆ ಇವರು ಹೆಚ್ಚಿನ ಪ್ರಾಮುಖ್ಯತೆಯನ್ನು (Importance) ನೀಡುತ್ತಾರೆ. ಕೆಲಸದ ಆಲಸ್ಯವನ್ನು ಎಂದೂ ಮಾಡುವುದಿಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನು ತೋರುತ್ತಾರೆ.

ಮಹತ್ವಾಕಾಂಕ್ಷೆ
1, 10, 19, 28ನೇ ತಾರೀಖಿನಲ್ಲಿ ಹುಟ್ಟಿದವರದ್ದು ಪಾದಾಂಕ 1 ಆಗಿರುತ್ತದೆ. ಒಂದನೇ ಪಾದಾಂಕದ ಸ್ವಾಮಿ ದೇವರು ಸೂರ್ಯನಾಗಿದ್ದಾನೆ. ಈ ತಾರೀಖುಗಳಲ್ಲಿ ಜನಿಸಿದ ವ್ಯಕ್ತಿಗಳು ಪ್ರಾಮಾಣಿಕರಾಗಿರುತ್ತಾರೆ. ಜೊತೆಗೆ ಸೃಜನಶೀಲರೂ ಆಗಿರುತ್ತಾರೆ. ಇವರಲ್ಲಿ ನೇತೃತ್ವ ವಹಿಸುವ ಕ್ಷಮತೆ ಇರುತ್ತದೆ. ಅಲ್ಲದೆ, ಇವರು ಮಹಾತ್ವಾಕಾಂಕ್ಷಿಗಳೂ ಆಗಿರುತ್ತಾರೆ. ನೋಡಲು ಆಕರ್ಷಕರಾಗಿ (Attractive), ದಕ್ಷ ಕೆಲಸಗಾರರಾಗಿದ್ದಾರೆ. ಸರಿಯಾದ ಸಮಯಕ್ಕೆ ಸರಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. 

ಇದನ್ನು ಓದಿ: Vastu Tips: ಮನೆಯಲ್ಲಿ ಈ ಬದಲಾವಣೆ ತನ್ನಿ, ದುಪ್ಪಟ್ಟು ಹಣ ಗಳಿಸಿ

ಸ್ವತಂತ್ರರು 
ಇವರಿಗೆ ತಮ್ಮ ಕೆಲಸದಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡುವುದು ಇಷ್ಟವಿಲ್ಲ. ಸಾಹಸಿಗಳಾಗಿದ್ದು, ಧೈರ್ಯವಂತರಾಗಿರುತ್ಥಾರೆ. ಸ್ವಾಭಿಮಾನಿ ಸ್ವಭಾವ ಇವರದ್ದಾಗಿರುತ್ತದೆ. 

ಸ್ವಾರ್ಥಿಗಳು
ಇವರು ಜೀವನದಲ್ಲಿ ಎಂಥ ಸಂಕಷ್ಟಕ್ಕೂ ಹೆದರುವವರಲ್ಲ. ಈ ದಿನಾಂಕದಲ್ಲಿ ಹುಟ್ಟಿದವರಲ್ಲಿ ಕೆಲವರು ತಮ್ಮ ಅನುಕೂಲ ಇಲ್ಲದೇ, ಸ್ವಾರ್ಥವಿಲ್ಲದೆ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಆದರೆ, ಇವರ ಈ ಗುಣವೇ ಯಶಸ್ಸನ್ನು ತಂದು ಕೊಡಲಿದೆ. 

ಗೌರವಾದರಕ್ಕಾಗಿ ಹಾತೊರೆಯಲ್ಲ
ಪಾದಾಂಕ 1ರಲ್ಲಿ ಹುಟ್ಟಿದವರು ಸಾಮಾನ್ಯವಾಗಿ ಉನ್ನತ ಶಿಕ್ಷಣ (Higher Education ) ಪಡೆಯುತ್ತಾರೆ. ಗೌರವಾದರ ಬೇಕು ಎಂದು ಎಂದೂ ಸಹ ಹಿಂದೆ ಹೋಗುವವರು ಇವರಲ್ಲ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳದ ಇವರು, ಗೌರವ ಬರಬೇಕೆಂದಿದ್ದರೆ ತಾನಾಗಿಯೇ ಬರಲಿದೆ ಎಂದು ನಂಬಿದವರು.

ಆರ್ಥಿಕ ಏಳ್ಗೆ
ಇವರು ಆರ್ಥಿಕವಾಗಿ ಒಳ್ಳೆಯ ಸ್ಥಿತಿ ಹೊಂದಲಿದ್ದು, ಹಣಕ್ಕೆ ಎಂದೂ ಕೊರತೆ ಕಾಣದು. ಇವರು ಕೈ ಹಾಕಿದ ಕಾರ್ಯಕ್ಷೇತ್ರದಲ್ಲಿ ಲಾಭ – ಯಶಸ್ಸು (Profit – Success) ಕಟ್ಟಿಟ್ಟಬುತ್ತಿ. ಹಣದ ಅಭಾವ ಸೃಷ್ಟಿಯಾದರೂ ಸ್ನೇಹಿತರು ಇಲ್ಲವೇ ಸಂಬಂಧಿಕರ ಸಹಾಯ ಲಭ್ಯ ಆಗಲಿದೆ. ಐಷಾರಾಮಿ ಜೀವನವನ್ನು ಇಷ್ಟಪಡುವ ಇವರು, ಸದಾ ಖುಷಿಯಲ್ಲಿಯೇ ಇರಲು ಇಷ್ಟಪಡುತ್ತಾರೆ. ಹಾಗಾಗಿ ಇವರು ತುಂಬಾ ದುಡ್ಡು ಮಾಡುತ್ತಾರೆ ಅನ್ನತ್ತೆ ಸಂಖ್ಯಾಶಾಸ್ತ್ರ.

ಇದನ್ನು ಓದಿ: Vastu tips: ಹೊಸ ಮನೆ ಪ್ರವೇಶ ಹೀಗಾದರೆ ಫಲ ಮಂಗಳಕರ..

ಈ ತಾರೀಖಿನಲ್ಲಿ ಜನಿಸಿದವರು ಮೃದು ಸ್ವಭಾವಿಗಳು ಹಾಗೂ ಹೃದಯವಂತರು. ಎದುರಿನಿಂದ ಕಠೋರವಾಗಿ ಕಂಡರೂ ಬಹಳ ಮೃದು ಮನಸ್ಸನ್ನು ಹೊಂದಿದ್ದಾರೆ. ಇಂಥವರನ್ನು ವರಿಸುವ ಸಂಗಾತಿ (Life Partner) ಅದೃಷ್ಟವಂತರಾಗಿರುತ್ತಾರೆ. 

click me!