ಗ್ರಹಗಳ ಅಶುಭ ಪ್ರಭಾವದಿಂದ ಪಾರಾಗಲು ಧರಿಸಿ ಈ ರುದ್ರಾಕ್ಷಿ ...!!!

By Adarsha AFirst Published Sep 7, 2021, 4:03 PM IST
Highlights

ರುದ್ರಾಕ್ಷಿಯ ಮಹಿಮೆ ಅಪಾರ. ರುದ್ರಾಕ್ಷಿಯನ್ನು ಧರಿಸುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕ ಸಹಿತ ಇನ್ನೂ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ಗ್ರಹಗಳ ಶುಭ ಪ್ರಭಾವಗಳಿಂದ ರಕ್ಷಿಸಿಕೊಳ್ಳಲು ರುದ್ರಾಕ್ಷಿಧಾರಣೆ ಅತ್ಯಂತ ಸಹಕಾರಿ ಎಂದು ಹೇಳಲಾಗುತ್ತದೆ.  ಗ್ರಹಗಳ ಅಶುಭ ಪ್ರಭಾವದಿಂದ ರಕ್ಷಿಸಿಕೊಳ್ಳಲು ಯಾವ ರುದ್ರಾಕ್ಷಿಯನ್ನು ಸೇರಿಸಬೇಕು ಎಂಬುದರ ಬಗ್ಗೆ ತಿಳಿಯೋಣ...

ಪುರಾಣಗಳಲ್ಲಿ ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವಾದದ್ದೆಂದು ಉಲ್ಲೇಖಿಸಿದ್ದಾರೆ. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವವಾಯಿತೆಂದು ಹೇಳಲಾಗುತ್ತದೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಿವೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ. ಒಂದೊಂದು ಬಗೆಯ ರುದ್ರಾಕ್ಷಿಯ ಧಾರಣೆಯು ಅನೇಕ ಲಾಭಗಳನ್ನು ನೀಡುತ್ತದೆ.

ಹದಿನಾಲ್ಕು ಪ್ರಕಾರದ ರುದ್ರಾಕ್ಷಿ ಇರುವುದಾಗಿ ಶಿವ ಪುರಾಣದ ವಿಘ್ನೇಶ್ವರ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ.

ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಸೇರಿ ಹಲವು ಪುರಾಣಗಳಲ್ಲಿ ಇದರ ಮಹತ್ವದ ಬಗ್ಗೆ ವಿವರಿಸಲಾಗಿದೆ. ಹಾಗೆಯೇ ರುದ್ರಾಕ್ಷಿಯನ್ನು ಧರಿಸುವುದರಿಂದ ಗ್ರಹಗಳ ಅಶುಭ ಪ್ರಭಾವದಿಂದ ಮುಕ್ತರಾಗಬಹುದಾಗಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯೋಣ...

ಇದನ್ನು ಓದಿ: ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!

ಯಾವ ಗ್ರಹಕ್ಕೆ ಯಾವ ರುದ್ರಾಕ್ಷಿ ಧರಿಸಿದರೆ ಉತ್ತಮ..?



ಸೂರ್ಯ 
ಸೂರ್ಯ ಗ್ರಹದ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ಏಕ ಮುಖಿ ರುದ್ರಾಕ್ಷಿ ಧರಿಸುವುದು ಉತ್ತಮ.  

ಚಂದ್ರ
ಚಂದ್ರ ಗ್ರಹದ ಅನುಗ್ರಹಕ್ಕೆ ದ್ವಿಮುಖಿ ರುದ್ರಾಕ್ಷಿಯನ್ನು ಧರಿಸುವುದು ಲಾಭದಾಯಕವಾಗುತ್ತದೆ. 

ಮಂಗಳ ಗ್ರಹ
ಮಂಗಳ ಗ್ರಹದ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ತ್ರಿಮುಖಿ ಅಥವಾ ಏಕಾದಶ ಮುಖಿ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ. 

ಬುಧ ಗ್ರಹ
ಬುಧ ಗ್ರಹದ ಅಶುಭ ಪ್ರಭಾವಗಳಿಂದ ಪಾರಾಗಲು ಚತುರ್ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಗುರು ಗ್ರಹ
ಗುರು ಗ್ರಹವನ್ನು ಬಲಪಡಿಸಲು ಮತ್ತು ಅದರ ಕೆಟ್ಟ ಪ್ರಭಾವಗಳಿಂದ ರಕ್ಷಣೆ ಪಡೆಯಲು ಪಂಚಮುಖಿ ಅಥವಾ ದಶಮುಖಿ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು. 

ಶುಕ್ರ ಗ್ರಹ
ಶುಕ್ರಗ್ರಹದ ಕೃಪೆಗೆ ಮತ್ತು ನೀಚ ಸ್ಥಿತಿಯಲ್ಲಿರುವ ಶುಕ್ರಗ್ರಹವನ್ನು ಬಲಪಡಿಸಲು ಷಷ್ಠಮುಖಿ ಅಥವಾ ತ್ರಯೋದಶ ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಇದನ್ನು ಓದಿ: ಈ 3 ರಾಶಿ ಹುಡುಗಿಯರದು ಆಕರ್ಷಕ ವ್ಯಕ್ತಿತ್ವ.... ಇವರಿಗೆ ಆಗ್ತಾರೆ ಎಲ್ಲರೂ ಫಿದಾ..!!

ಶನಿ ಗ್ರಹ
ಶನಿ ಗ್ರಹದ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ಸಪ್ತಮುಖಿ ಅಥವಾ ಚತುರ್ದಶ ಮುಖದ ರುದ್ರಾಕ್ಷಿಯನ್ನು ಧರಿಸಬೇಕು.

ರಾಹು ಗ್ರಹ
ರಾಹು ಗ್ರಹದ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ಅಷ್ಟಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಕೇತು ಗ್ರಹ
ಕೇತು ಗ್ರಹಗಳ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ಮಾನವಮುಖಿ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ. 

ಅಶುಭ ಯೋಗ / ದೋಷಗಳಿಂದ ಪಾರಾಗಲು ಈ ರುದ್ರಾಕ್ಷಿ ಧರಿಸಿ

ಕಾಳಸರ್ಪ ದೋಷ 

ಅಷ್ಟಮುಖಿ ಅಥವಾ ನವ ಮುಖಿ ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಶನಿವಾರ ಅಥವಾ ಬುಧವಾರ ಧಾರಣೆ ಮಾಡಬೇಕು. 

ಶಕಟ ಯೋಗ 
ಜಾತಕದಲ್ಲಿ ಎಲ್ಲ ಗ್ರಹಗಳು ಲಗ್ನ, ಸಪ್ತಮದಲ್ಲಿ ಸ್ಥಿತವಾಗಿದ್ದರೆ ಈ ಯೋಗ ಉಂಟಾಗುತ್ತದೆ. ಜಾತಕದಲ್ಲಿ ಶಕಟ ಯೋಗವಿದ್ದಾಗ ದ್ವಿಮುಖಿ ಅಥವಾ ದಶಮುಖಿ ರುದ್ರಾಕ್ಷಿಯನ್ನು ಬಿಳಿ ಅಥವಾ ಹಳದಿ ಬಣ್ಣದ ದಾರದಲ್ಲಿ ಸೋಮವಾರ ಅಥವಾ ಗುರುವಾರ ಧರಿಸಬೇಕು. 

ಕೇಮದ್ರುಮ ಯೋಗ
ಚಂದ್ರನಿಂದ ಯಾವ ಗ್ರಹಗಳು ಇಲ್ಲದಿದ್ದರೆ ಈ ಯೋಗ ಉಂಟಾಗುತ್ತದೆ. ಇದಕ್ಕೆ ದ್ವಿಮುಖಿ ರುದ್ರಾಕ್ಷಿಯನ್ನು ಶ್ವೇತ ವರ್ಣದ ದಾರದಲ್ಲಿ ಸೋಮವಾರ ಧರಿಸಬೇಕು. 

ಗ್ರಹಣ ಯೋಗ 
ಸೂರ್ಯನಿಂದ ಉಂಟಾಗುವ ಗ್ರಹಣ ಯೋಗಕ್ಕೆ ಏಕಮುಖಿ, ಅಷ್ಟಮುಖಿ ಅಥವಾ ನವಮುಖಿ ರುದ್ರಾಕ್ಷಿಯನ್ನು ಕೆಂಪು ಬಣ್ಣದ ದಾರದಲ್ಲಿ ಭಾನುವಾರ ಧರಿಸಬೇಕು.

ಚಂದ್ರನಿಂದ ಉಂಟಾಗುವ ಗ್ರಹಣ ಯೋಗಕ್ಕೆ ದ್ವಿಮುಖಿ, ಅಷ್ಟಮುಖಿ ಅಥವಾ ನವಮುಖಿ ರುದ್ರಾಕ್ಷಿಯನ್ನು ಶ್ವೇತ ವರ್ಣದ ದಾರದಲ್ಲಿ ಸೋಮವಾರ ಧರಿಸಬೇಕು. 

ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಕರ್ಪೂರದ ಪರಿಹಾರ

ಮಂಗಳ ದೋಷ ಅಥವಾ ಕುಜ ದೋಷ 
ಮಂಗಳ ದೋಷವಿದ್ದರೆ ತ್ರಿಮುಖಿ ಅಥವಾ ಏಕಾದಶ ಮುಖಿ ರುದ್ರಾಕ್ಷಿಯನ್ನು ಕೆಂಪು ದಾರದಲ್ಲಿ ಮಂಗಳವಾರದಂದು ಧರಿಸಬೇಕು.  

ರುದ್ರಾಕ್ಷಿ ಧರಿಸುವ ವಿಧಾನ
ಎಲ್ಲಕ್ಕಿಂತ ಮೊದಲು ರುದ್ರಾಕ್ಷಿಗೆ ಜಲದಿಂದ ಅಭಿಷೇಕ ಮಾಡಬೇಕು. ಬಳಿಕ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಪುನಃ ಸ್ವಚ್ಛ ಜಲದಿಂದ ರುದ್ರಾಕ್ಷಿಯನ್ನು ಶುದ್ಧಗೊಳಿಸಬೇಕು. ರುದ್ರಾಕ್ಷಿಗೆ ಪಂಚೋಪಚಾರ ಪೂಜೆ ಮಾಡಿ ಅದನ್ನು ಶಿವ ಲಿಂಗಕ್ಕೆ ಅರ್ಪಿಸಿದ ಬಳಿಕ ಧಾರಣೆ ಮಾಡಬೇಕು.

click me!