ವಾಸ್ತು ದೋಷ ನಿವಾರಣೆಗೆ ಕರ್ಪೂರದ ಪರಿಹಾರ

By Suvarna News  |  First Published Sep 4, 2021, 4:33 PM IST

ಮನೆಯ ಸುಖ ಸಮೃದ್ಧಿ ಮತ್ತು ನೆಮ್ಮದಿಗೆ ವಾಸ್ತುಶಾಸ್ತ್ರ ಹಲವಾರು ರೀತಿಯಲ್ಲಿ ಸಹಾಯಕವಾಗಿದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಕೆಲವು ನಿಯಮಗಳನ್ನು ಪಾಲಿಸಿದಲ್ಲಿ ವಾಸ್ತುದೋಷವನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಅಂತಹ ಸುಲಭ ಪರಿಹಾರಗಳಲ್ಲಿ ಕರ್ಪೂರದ ಬಳಕೆಯೂ ಒಂದಾಗಿದೆ. ಹಾಗಾದರೆ ಅದರ ಬಗ್ಗೆ ಇನ್ನಷ್ಟು ತಿಳಿಯೋಣ..


ವಾಸ್ತು ಶಾಸ್ತ್ರಕ್ಕೆ ಇರುವ ಮಹತ್ವದ ಬಗ್ಗೆ ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ವಾಸ್ತು ದೋಷದಿಂದ ಉಂಟಾಗುವ ತೊಂದರೆಗಳ ಬಗ್ಗೆ ಸಹ ವಾಸ್ತುಶಾಸ್ತ್ರದಲ್ಲಿ ತಿಳಿಸಿದ್ದಾರೆ. ವ್ಯಕ್ತಿಯ ಜೀವನದಲ್ಲಿ ಮುಖ್ಯವಾದ ಹಲವಾರು ವಿಚಾರಗಳು ವಾಸ್ತು ಪ್ರಕಾರ  ಇದ್ದಾಗ ಮಾತ್ರ ಮನೆ ಮತ್ತು ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಅದೇ ವಾಸ್ತು ದೋಷವಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಸಮಸ್ಯೆಗಳಿಂದ ಪಾರಾಗುವ ಬಗೆ ಹೇಗೆ ಎಂದು ಚಿಂತೆ ಕಾಡುತ್ತದೆ. ಪರಿಹಾರ ಕಂಡುಕೊಳ್ಳಬೇಕೆಂದು ಹಲವಾರು ರೀತಿಯಲ್ಲಿ ಪ್ರಯತ್ನಿಸಿ ಸೋತಿದ್ದರೆ, ಸುಲಭ ಉಪಾಯವೊಂದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ವಾಸ್ತು ದೋಷ ಪರಿಹಾರ ಕರ್ಪೂರವನ್ನು ಬಳಸುವುದರಿಂದ ಸಾಧ್ಯವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.  

ಪೂಜಾ ಕಾರ್ಯಕ್ರಮಗಳಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರದ ಆರತಿಯನ್ನು ಮಾಡಲಾಗುತ್ತದೆ. ಕರ್ಪೂರದ ಸುಗಂಧವು ಭಗವಂತನ ಭಗವಂತನಿಗೆ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಕರ್ಪೂರದ ಬಳಕೆಯಿಂದ ವಾಸ್ತುದೋಷ ನಿವಾರಣೆ ಸಾಧ್ಯವಿದೆ ಎಂದು ವಾಸ್ತುಶಾಸ್ತ್ರ ಉಲ್ಲೇಖಿಸುತ್ತದೆ. 

ಇದನ್ನು ಓದಿ: ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!

ವಾಸ್ತು ಶಾಸ್ತ್ರದ ಅನುಸಾರ ಕರ್ಪೂರವನ್ನು ಬಳಸಿ ಅನೇಕ ವಾಸ್ತು ದೋಷಗಳನ್ನು ನಿವಾರಿಸಿಕೊಳ್ಳಲಾಗುತ್ತದೆ. ಕರ್ಪೂರವನ್ನು ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ   ಶಕ್ತಿ ಹೆಚ್ಚುವುದಲ್ಲದೆ, ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ. ವಾಸ್ತು ದೋಷ ನಿವಾರಣೆಗೆ ಕರ್ಪೂರದ ಬಳಕೆ ಹೇಗೆ ಎಂಬುದನ್ನು ತಿಳಿಯೋಣ...

- ಮನೆಯಲ್ಲಿ ಸದಾ ಜಗಳಗಳು ನಡೆಯುತ್ತಿದ್ದರೆ ಅಂತಹ ಸಂದರ್ಭದಲ್ಲಿ ಮನೆಯ ಪ್ರತಿ ಮೂಲೆಯಲ್ಲೂ ಕರ್ಪೂರವನ್ನು ಇಡಬೇಕು. ಇದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗಿ ಮನೆಯ ವಾತಾವರಣ ತಿಳಿಗೊಳ್ಳುತ್ತದೆ.

Tap to resize

Latest Videos

undefined


- ವಾಸ್ತು ಶಾಸ್ತ್ರದ ಅನುಸಾರ ವಿವಾಹಕ್ಕೆ ಅಡೆ ತಡೆಗಳು ಬರುತ್ತಿದ್ದರೆ ಅದಕ್ಕೆ 6 ಕರ್ಪೂರದ ತುಂಡು ಮತ್ತು 36 ಲವಂಗದ ತುಂಡುಗಳನ್ನು ಅರಿಶಿಣದ ಜೊತೆ ಅಕ್ಕಿಯಲ್ಲಿ ಸೇರಿಸಿ ದುರ್ಗಾದೇವಿಗೆ ಅರ್ಪಿಸಬೇಕು. ಇದರಿಂದ ವಿವಾಹಕ್ಕೆ ಬರುವ ಅಡೆತಡೆಗಳು ದೂರವಾಗುತ್ತವೆ. ವಾಸ್ತುದೋಷವಿದ್ದಲ್ಲಿ ನಿವಾರಣೆಯಾಗುತ್ತದೆ.

- ವಾಸ್ತುಶಾಸ್ತ್ರದ ಪ್ರಕಾರ ಕುಟುಂಬದ ಸದಸ್ಯರು ಯಾರಾದರೂ ಅನಾರೋಗ್ಯ ಪೀಡಿತರಾಗಿದ್ದರೆ, ಅಂತಹ ಮನೆಯಲ್ಲಿ ಪ್ರತಿನಿತ್ಯ ಸಂಜೆ ಕರ್ಪೂರವನ್ನು ಬೆಳಗಿಸಬೇಕೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುವುದಲ್ಲದೆ, ರೋಗ ಗುಣವಾಗಲು ಸಹಾಯಕವಾಗುತ್ತವೆ. 

- ವಾಸ್ತುಶಾಸ್ತ್ರದಲ್ಲಿ ಗ್ರಹಗಳ ಶಾಂತಿ ಗೆ ಸಹ ಕರ್ಪೂರವನ್ನು ಬಳಸಲಾಗುತ್ತದೆ. ಅಷ್ಟೆ ಅಲ್ಲದೆ ಮನೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಧ್ಯಾಕಾಲದಲ್ಲಿ ತುಪ್ಪದಲ್ಲಿ ಅದ್ದಿದ ಕರ್ಪೂರವನ್ನು ಬೆಳಗಿಸಬೇಕೆಂದು ಹೇಳಲಾಗುತ್ತದೆ. ವಾಸ್ತು ದೋಷ ನಿವಾರಣೆಗೆ ಸಹ ಈ ರೀತಿ ಮಾಡಲಾಗುತ್ತದೆ.

ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..

- ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಅಥವಾ ಧನ ಹಾನಿ ಉಂಟಾಗುತ್ತಿದೆ ಎಂದಾದರೆ ಸೂರ್ಯ ಮುಳುಗಿದ ನಂತರ ಕರ್ಪೂರವನ್ನು ಬೆಳಗಿಸಿ ಇಡೀ ಮನೆಗೆ ಬೆಳಗಬೇಕು. ನಂತರ ಲಕ್ಷ್ಮೀದೇವಿಗೆ ಪೂಜೆ  ಸಲ್ಲಿಸಬೇಕು. ಅಷ್ಟೆ ಅಲ್ಲದೆ ಮನೆಯ ಪ್ರತಿ ಕೋಣೆಯಲ್ಲಿ ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಇಟ್ಟು ಬೆಳಗಿಸಬೇಕು. ಇದರಿಂದ ಮನೆಯಲ್ಲೇ ಇರುವ ನಕಾರಾತ್ಮಕ ಶಕ್ತಿಗಳ ನಾಶವಾಗುತ್ತವೆ. 

- ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದರೆ ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಇಟ್ಟುಕೊಂಡು ಮಲಗಬೇಕು. ಇದರಿಂದ ಭಿನ್ನಾಭಿಪ್ರಾಯಗಳು ದೂರವಾಗಿ ಸಂಬಂಧಗಳು ಗಟ್ಟಿಯಾಗುತ್ತದೆ.

- ಜಾತಕದಲ್ಲಿ ಪಿತೃದೋಷ ಅಥವಾ ಕಾಳಸರ್ಪ ದೋಷ ಇದ್ದಲ್ಲಿ ಪ್ರತಿದಿನ ರಾತ್ರಿ ತುಪ್ಪದಲ್ಲಿ ಕರ್ಪೂರವನ್ನು ಅದ್ದಿ ಬೆಳಗಿಸುವುದರಿಂದ ದೋಷ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ   ರಾಹು - ಕೇತುಗಳ ಅಶುಭ ಪ್ರಭಾವ ಸಹ ತಗ್ಗುತ್ತದೆ. 

ಇದನ್ನು ಓದಿ: ಶರೀರದ ಭಾಗಗಳು ಅದುರುತ್ತಿದ್ದರೆ ಶುಭವೋ..? ಅಶುಭವೋ.. ?

- ಪರಿಶ್ರಮದಿಂದ ದುಡಿದರೂ ಸಹ ಹೆಚ್ಚು ಸಂಪಾದನೆ ಮಾಡಲು ಆಗದೇ ಇದ್ದಲ್ಲಿ ಅಥವಾ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೆಂದಾದರೆ ಶುಕ್ರವಾರದ ದಿನ ಕೆಂಪು ಗುಲಾಬಿಯನ್ನು ದೇವಿಗೆ ಅರ್ಪಿಸಿ, ಕರ್ಪೂರವನ್ನು ಬೆಳಗಬೇಕು. ಹೀಗೆ ಮಾಡುವುದರಿಂದ ಸಫಲತೆ ಪ್ರಾಪ್ತವಾಗುತ್ತದೆ.

click me!