ಕೆಲವೊಮ್ಮೆ ನಮ್ಮ ಅರಿವಿಲ್ಲದೆ ಕೆಟ್ಟ ಕೆಲಸಗಳು, ಪಾಪಕಾರ್ಯಗಳು ನಮ್ಮಿಂದ ಆಗುತ್ತವೆ. ಈದಕ್ಕೆ ಕಾರಣ ನಿಮ್ಮ ಜಾತಕದಲ್ಲಿರುವ ಒಂದು ಗ್ರಹದ ಪ್ರಭಾವ ಎಂಬುದು ನಿಮಗೆ ಗೊತ್ತಾದರೆ ಆಶ್ಚರ್ಯಪಡುತ್ತೀರಿ. ಯಾವುದಾ ಗ್ರಹ? ಏನಿದಕ್ಕೆ ಪರಿಹಾರ?
ಕೆಲವೊಮ್ಮೆ ಕೆಲವು ಪಾಪದ ಕಾರ್ಯಗಳು ನಮ್ಮಿಂದ ನಮ್ಮ ಅರಿವೇ ಇಲ್ಲದೆ ಆಗಿಹೋಗುತ್ತವೆ. ನಿಜಕ್ಕೂ ಅದನ್ನು ಮಾಡಬೇಕೆಂದು ನಮ್ಮ ಮನಸ್ಸಿನಲ್ಲಿರುವುದಿಲ್ಲ. ಆದರೆ ಪ್ರಮಾದ ಘಟಿಸಿರುತ್ತದೆ. ಇದಕ್ಕೆ ಕಾರಣವೇನು? ನಿಮ್ಮ ಜಾತಕದಲ್ಲಿ ಒಂದು ನಿರ್ದಿಷ್ಟ ಮನೆಯಲ್ಲಿ ಇರುವ ಒಂದು ಗ್ರಹದಿಂದ ಈ ಆಟ ಆಡಿಸುತ್ತಿರಬಹುದು. ಅದು ಬೇರೆ ಯಾವುದೂ ಅಲ್ಲ, ರಾಹು ಗ್ರಹ. ಜ್ಯೋತಿಷ್ಯದಲ್ಲಿ ರಾಹುವನ್ನು ದುರಾಸೆ ಮತ್ತು ಸ್ವಾರ್ಥಿ ಗ್ರಹವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ರಾಹುವು ಪ್ರಬಲನಾಗಿದ್ದರೆ, ಆ ವ್ಯಕ್ತಿ ರಾಹುವಿನ ಪ್ರಭಾವದಿಂದಾಗಿ ಅನೇಕ ತಪ್ಪು ಕಾರ್ಯಗಳನ್ನು ಮಾಡಬಹುದು. ಅದು ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು.
ರಾಹು ಏನು ಮಾಡಬಲ್ಲ? ಆತ ನಿಮ್ಮ, ಜನರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸಬಲ್ಲ. ತಲೆಯಲ್ಲಿ ಗೊಂದಲ ಉಂಟುಮಾಡುತ್ತಾನೆ. ನಕಾರಾತ್ಮಕ ಪ್ರಭಾವಗಳನ್ನು ಬೀರುತ್ತಾನೆ. ಜಾತಕನಿಂದ ಕೆಟ್ಟ ನಡವಳಿಕೆ ಉಂಟುಮಾಡಿಸುತ್ತಾನೆ. ಪಾಪ ಮಾಡುತ್ತಿದ್ದೇನೆ ಎಂದು ತಿಳಿದಿದ್ದರೂ ತಪ್ಪು ಕಾರ್ಯಗಳನ್ನು ಮಾಡುತ್ತೀರಿ. ರಾಹು ವ್ಯಕ್ತಿಯ ಜಾತಕದಲ್ಲಿ ಪ್ರಬಲನಾಗುವುದು ಎಂದರೆ ಹಿಂದಿನ ಜೀವನದ ಕರ್ಮ ಬಂಧನದ ಬಾಧೆ ಎಂದರ್ಥ.
ಹಾಗಾದರೆ ರಾಹುವಿನ ಪ್ರತಿಕೂಲ ಪ್ರಭಾವದಿಂದ ಪಾರಾಗುವುದು ಹೇಗೆ? ಕೆಲವು ಪರಿಹಾರಗಳು ಇಲ್ಲಿವೆ ನೋಡಿ.
- ನಿಮ್ಮ ಕೋಪ ಮತ್ತು ಭಯದ ಮೇಲೆ ರಾಹುವಿನ ಋಣಾತ್ಮಕ ಪರಿಣಾಮವಿದೆ. ಅದನ್ನು ಕಡಿಮೆ ಮಾಡಲು ನೀವು ನೀಲಿ ದಾರದಲ್ಲಿ ಕಟ್ಟಿದ ಶ್ರೀಗಂಧವನ್ನು ಧರಿಸಬೇಕು.
- ಗುರುಗ್ರಹವು ರಾಹುವನ್ನು ಆಳುವ ಶಕ್ತಿಯನ್ನು ಹೊಂದಿರುವ ಏಕೈಕ ಗ್ರಹ. ಆದ್ದರಿಂದ ನೀವು ಈ ಗ್ರಹವನ್ನು ಪೂಜಿಸಬೇಕು. ಇದು ರಾಹುವಿನ ನಕಾರಾತ್ಮಕ ಪ್ರಭಾವಗಳ ವಿರುದ್ಧ ರಕ್ಷಣೆ ಪಡೆಯಲು ಉತ್ತಮ ಮಾರ್ಗವಾಗಿದೆ.
- ರಾಹು ಬೀಜ ಮಂತ್ರವನ್ನು 40 ದಿನಗಳಲ್ಲಿ 18000 ಬಾರಿ ಪಠಿಸಬೇಕು.
- ನೀರು ಕುಡಿಯಲು ಬೆಳ್ಳಿಯ ಲೋಟವನ್ನು ಬಳಸುವುದು ಅಥವಾ ಬೆಳ್ಳಿಯಿಂದ ಮಾಡಿದ ಆನೆಯನ್ನು ಇಟ್ಟುಕೊಳ್ಳುವುದು ರಾಹುವಿನ ನಕಾರಾತ್ಮಕ ಪ್ರಭಾವವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಈ ಏಳು ತಾಣಗಳಲ್ಲಿ ಆಂಜನೇಯ ಇಂದಿಗೂ ಜೀವಂತ ಇದ್ದಾನೆ!
- 8 ಮುಖಿ ರುದ್ರಾಕ್ಷಿಯನ್ನು ಸಹ ಧರಿಸಬಹುದು, ಇದು ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ.
- ಆದಷ್ಟು ಕಡು ನೀಲಿ ಬಣ್ಣದ ಬಟ್ಟೆ ಧರಿಸಿ
- ಶನಿವಾರದಂದು ಉಪವಾಸವನ್ನು ಆಚರಿಸಿ ಮತ್ತು ಸೂರ್ಯಾಸ್ತದ ನಂತರವೇ ನಿಮ್ಮ ಊಟವನ್ನು ಮಾಡಿ
- ಆಹಾರ ಪದಾರ್ಥಗಳು, ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಅಗತ್ಯವಿರುವ ಜನರಿಗೆ ದಾನ ಮಾಡಿ. ಅದು ನಿಮಗೆ ಪ್ರಯೋಜನಕಾರಿ ಮತ್ತು ರಾಹುವನ್ನು ಮೆಚ್ಚಿಸುತ್ತದೆ.
- ನಿಮ್ಮ ನೀರಿನ ಬಕೆಟ್‌ಗೆ ಒಂದು ಕಪ್ ಹಾಲು ಹಾಕಿ ಸತತ 43 ದಿನಗಳವರೆಗೂ ಸ್ನಾನವನ್ನು ಮಾಡಿದರೆ ನೀವು ಪ್ರಯೋಜನಗಳನ್ನು ಪಡೆಯುತ್ತೀರಿ.
- ರಾಹುಕಾಲದಲ್ಲಿ ನೀವು ಪ್ರತಿದಿನ ಧ್ಯಾನ ಮಾಡಬೇಕು. ಏಕೆಂದರೆ ಅದು ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನದ ಋಣಾತ್ಮಕ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
- ಅಮಾವಾಸ್ಯೆಯಂದು ದೇವಾಲಯಕ್ಕೆ ನೀರು ಮತ್ತು ನಾಲ್ಕು ತೆಂಗಿನಕಾಯಿಗಳನ್ನು ದಾನ ಮಾಡಿ.
ಏಕಾಂತದಲ್ಲಿ ಮಾಡಬೇಕಾದ ಕೆಲಸ ಸೇರಿದಂತೆ ಕಾಗೆಯಿಂದ ಮನುಷ್ಯ ಕಲಿಯಬೇಕಾದ 5 ನೀತಿಗಳು