Virgo Personality traits: ಪರಿಪೂರ್ಣತೆ, ರಚನಾತ್ಮಕತೆ- ಇದು ಕನ್ಯಾ ರಾಶಿಯ ಸ್ವಭಾವ

By Suvarna News  |  First Published Mar 6, 2022, 12:35 PM IST

ಕನ್ಯಾ ರಾಶಿಯದು ಭೂಮಿ ತತ್ವ. ಇವರನ್ನಾಳುವ ಗ್ರಹ ಬುಧ. ಈ ಕಾರಣದಿಂದ ಇವರು ಭೂಮಿಯಂಥ ತಾಳ್ಮೆಯನ್ನು ಹೊಂದಿರುತ್ತಾರೆ. ಹಾಗೆಯೇ ಬುಧನ ಅನುಗ್ರಹದಿಂದ ಬಹಳ ಬುದ್ಧಿವಂತರಾಗಿರುತ್ತಾರೆ. ಈ ರಾಶಿಯವರ ಮತ್ತಷ್ಟು ಗುಣ ಸ್ವಭಾವಗಳನ್ನು ತಿಳಿಯೋಣ. 


ಭೂಮಿ ತತ್ವಕ್ಕೆ ಸೇರಿಯೂ ಬುಧ ಗ್ರಹ(Mercury)ದಿಂದ ಆಳಲ್ಪಡುವ ಏಕೈಕ ರಾಶಿ ಕನ್ಯಾ(Virgo). ಬುಧವು ಸಂವಹನ ಹಾಗೂ ಯೋಚನಾ ವಿಧಾನಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ, ಕನ್ಯಾ ರಾಶಿಯವರು ಹುಟ್ಟಾ ಬುದ್ಧಿವಂತರು. ಒಳ್ಳೆಯ ಮಾತುಗಾರರು. 

ಈ ರಾಶಿಯವರ ಕೆಲ ಸಾಮಾನ್ಯ ಗುಣಗಳಿವು. 

Tap to resize

Latest Videos

ಅಚ್ಚುಕಟ್ಟು
ಕನ್ಯಾ ರಾಶಿಯವರು ಸಿಕ್ಕಾಪಟ್ಟೆ ಡಿಮ್ಯಾಂಡಿಂಗ್. ಸ್ವಚ್ಛತೆ ಹಾಗೂ ನೀಟ್‌ನೆಸ್ ವಿಷಯಕ್ಕೆ ಬಂದಾಗ ಎಲ್ಲವೂ ತಮ್ಮ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತಾರೆ. ಎಲ್ಲ ಕೆಲಸಗಳೂ ತಾವಂದುಕೊಂಡಂತೆಯೇ ಆಗಬೇಕೆಂದು ಬಯಸುವವರು ಇವರು. ಬಟ್ಟೆಯೆಂದರೆ ಐರನ್ ಆಗಿದ್ದರೆ ಮಾತ್ರ ಅದು ಧರಿಸತಕ್ಕದ್ದು, ಇಲ್ಲದಿದ್ದಲ್ಲಿ ಅಲ್ಲ ಎಂಬಷ್ಟು ಪ್ರತಿಯೊಂದರಲ್ಲಿಯೂ ಅದೇ ಸ್ವಚ್ಚತೆ, ನೀಟ್‌ನೆಸ್ ಬಯಸುವವರು. ಇದರಿಂದ ಇವರ ಸಂಗಾತಿಗೆ ಒತ್ತಡವೆನಿಸಬಹುದು. ಆದರೆ, ಮನೆಯಾಗಲೀ, ಟೇಬಲ್ಲಾಗಲೀ- ಕನ್ಯಾ ರಾಶಿಯವರನ್ನು ನೋಡಿ ಹೇಗಿಟ್ಟುಕೊಳ್ಳಬೇಕೆಂದು ಕಲಿಯಬೇಕು. 

ರಚನಾತ್ಮಕತೆ(creativity)
ಕ್ರಿಯೇಟಿವಿಟಿ ವಿಷಯಕ್ಕೆ ಬಂದರೆ ಇರು ಜೀನಿಯಸ್. ಇವರ ಕಲ್ಪನೆಗಳಿಗೆ ಮಿತಿಯಿಲ್ಲ. ಬರವಣಿಗೆ, ನೃತ್ಯ, ಕಲೆ ಯಾವುದೇ ಇರಲಿ, ಕನ್ಯಾ ರಾಶಿಯವರು ಅದನ್ನು ವ್ಯಕ್ತಪಡಿಸುವ ರೀತಿಯೇ ಸೂಪರ್. ಸಂವಹನ(communication), ತಿರುಗಾಟ, ಅನ್ವೇಷಣೆ ಇವರ ಆಸಕ್ತಿಯ ವಿಷಯಗಳು. ಮನೆಯಲ್ಲಿ ಯಾವುದೇ ಹಳೆಯ ವಸ್ತುಗಳಿರಲಿ, ಅದಕ್ಕೆ ಹೊಸ ರೂಪ ನೀಡುವುದರಲ್ಲಿ ಎತ್ತಿದ ಕೈ ಇವರದು. ಆರ್ಟ್ ಆ್ಯಂಡ್ ಕ್ರಾಫ್ಟ್ ಇವರಿಗೆ ನೀರು ಕುಡಿದಷ್ಟು ಸಲೀಸು. 

ವಿಶ್ವಾಸಾರ್ಹರು(reliable partner)
ಕನ್ಯಾ ರಾಶಿಯವರು ಪ್ರಾಮಾಣಿಕರು ಹಾಗೂ ವಿಶ್ವಾಸಾರ್ಹರು. ಅವರ ಬದ್ಧತೆ ಮಾದರಿಯಾದದ್ದು. ಅವರು ಕಾಳಜಿ ವಹಿಸುವ ಜನರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವವರಲ್ಲ. ಆದರೆ, ಎಲ್ಲವನ್ನೂ ಮಾತಲ್ಲೇ ವ್ಯಕ್ತಪಡಿಸತ್ತಾರೆ ಎಂದಿಲ್ಲ. ಜಾವನ ಸಂಗಾತಿಯ ಅಗತ್ಯಗಳನ್ನು ಪೂರೈಸುವುದು ಇವರಿಗೆ ಮುಖ್ಯವೆನಿಸುತ್ತದೆ. ಈ ಎಲ್ಲ ಗುಣಗಳು ಅವರನ್ನು ಉತ್ತಮ ಗೆಳೆಯರನ್ನಾಗಿಯೂ ತೋರಿಸುತ್ತದೆ. ಅಷ್ಟೇ ಉತ್ತಮ ಸಹೋದ್ಯೋಗಿ(colleague)ಗಳೆನಿಸುತ್ತಾರೆ. ಇತರರಿಗೆ ಬೇಗ ಸಹಾಯಕ್ಕಾಗಿ ಮುನ್ನುಗ್ಗುತ್ತಾರೆ. ಜೊತೆಗೆ, ತಾವಿದ್ದೇವೆ ಎಂಬ ಭರವಸೆ ನೀಡುವ ಗುಣ ಇವರದು. ಇನ್ನೊಬ್ಬರಿಗೆ ಪ್ರಾಯೋಗಿಕವಾದ ಸಲಹೆ ಸೂಚನೆ ನೀಡುವುದರಲ್ಲಿ ಸಿದ್ಧಹಸ್ತರು. ನಿಮ್ಮ ಕರೆ ಎತ್ತುವಲ್ಲಿ ಮೊದಲಿಗರು ಹಾಗೂ ಯಾವುದೇ ಸಂದರ್ಭದಲ್ಲಿ ಜೊತೆ ಬಿಟ್ಟು ಹೋಗುವವರಲ್ಲಿ ಕೊನೆಯವರು. 

ತಾಳ್ಮೆ ಹೆಚ್ಚು(patient)
ಶಾಂತಚಿತ್ತದಿಂದ ಸ್ಥಿತಪ್ರಜ್ಞರ ಹಾಗಿರುತ್ತಾರೆ. ಅವರ ತಾಳ್ಮೆ ಹಾಗೂ ಪರ್ಫೆಕ್ಷನಿಸಂ ಒಟ್ಟೊಟ್ಟಿಗೇ ಹೋಗುತ್ತವೆ. ತಾಳ್ಮೆ ಕಳೆದುಕೊಂಡರೆ ಅವರು ತುಂಬಾ ಕಿರಿಕಿರಿಗೊಳಗಾಗುತ್ತಾರೆ. ಯಾವುದಕ್ಕೂ ಪರಿಹಾರ ಸಿಗುವುದಿಲ್ಲ. ಅರ್ಧಕ್ಕೇ ಬಿಡುವುದು ಇವರ ಸ್ವಭಾವವಲ್ಲ. ಹಾಗಾಗಿ, ತಾಳ್ಮೆಯಿಂದ ಕೆಲಸ ಸಂಪೂರ್ಣವಾಗುವವರೆಗೂ ಕಾರ್ಯ ನಿರ್ವಹಿಸುತ್ತಾರೆ. 

Mahabharata Weapons: ಇಂದಿನ ಅಣ್ವಸ್ತ್ರವೇ ಮಹಾಭಾರತದ ಬ್ರಹ್ಮಾಸ್ತ್ರನಾ?

ಜೀವನಶೈಲಿ(lifestyle)
ಜೀವನಶೈಲಿ ಚೆನ್ನಾಗಿರಬೇಕು ಎಂದು ಬಯಸುವವರು ಇವರು. ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಪ್ರಾಮುಖ್ಯತೆ ನೀಡುವ ಇವರು ಆಹಾರದ ಬಗೆಗೆ ಹಾಗೂ ದೈಹಿಕ ವ್ಯಾಯಾಮಗಳ ಕಡೆ ಗಮನ ವಹಿಸುತ್ತಾರೆ. ಜೊತೆಗಿರುವವರೂ ಆರೋಗ್ಯದ ಕಡೆ ಎಚ್ಚರ ವಹಿಸಬೇಕು ಎಂದುಕೊಳ್ಳುತ್ತಾರೆ.

Weekly Horoscope: ತುಲಾ, ಮಿಥುನ ರಾಶಿಗೆ ಅದೃಷ್ಟದ ವಾರ, ಕಟಕಕ್ಕೆ ಸಂಕಷ್ಟ

ಪರ್ಫೆಕ್ಷನಿಸ್ಟ್
ಇವರಿಗೆ ತಮ್ಮ ಸುತ್ತಲಿರುವವರು ಪ್ರತಿಯೊಬ್ಬರೂ ತಾವಂದುಕೊಂಡ ಮಟ್ಟಕ್ಕೇ ಕೆಲಸ ಮಾಡಬೇಕು. ಅದೇ ಗುಣಮಟ್ಟದಲ್ಲಿ ಮಾಡಬೇಕು. ಇಲ್ಲದಿದ್ದಲ್ಲಿ ಮನಸ್ಸು ಹಾಳಾಗುತ್ತದೆ. ತಾವಂದುಕೊಂಡ ಫಲಿತಾಂಶ ಬರುವವರೆಗೆ ಬಿಡುವವರೂ ಅಲ್ಲ. ಇವರ ಸಣ್ಣ ವಿವರಗಳನ್ನೂ ಕಲೆ ಹಾಕುತ್ತಾರೆ. ಇವರು ಬಾಸ್ ಆಗಿ ಬಂದರೆ ಉದ್ಯೋಗಿಗಳಿಗೆ ತಲೆ ಕೆಡಬಹುದು. ಆದರೆ, ಉದ್ಯೋಗಿಯಾಗಿದ್ದರೆ ಬಾಸ್‌ಗೆ ಅಚ್ಚುಮೆಚ್ಚಿನವರಾಗಿರುತ್ತಾರೆ. ಯಾವುದೇ ಜವಾಬ್ದಾರಿ ಹೆಗಲಿಗೆ ಹಾಕಿ, ಅದನ್ನು ದಡ ಮುಟ್ಟಿಸುವವರೆಗೆ ವಿಶ್ರಮಿಸುವ ಸ್ವಭಾವ ಇವರದಲ್ಲ. ಹಾಗಂಥ ಕಾಟಾಚಾರಕ್ಕೆ ಮಾಡುವವರೂ ಅಲ್ಲ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!