Fertility Astrology: ಗರ್ಭ ಕಟ್ಟುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ..

By Suvarna News  |  First Published Dec 22, 2021, 4:27 PM IST

ಜಾತಕದಲ್ಲಿ ಪಿತೃದೋಷ, ಸರ್ಪದೋಷ, ಗುರುವಿನ ಅವಕೃಪೆ, ಸಂತಾನ ದೋಷವಿದ್ದರೆ ಮಕ್ಕಳಾಗುವುದು ಕಷ್ಟವಾಗುತ್ತದೆ. ಇದಕ್ಕೆ ಪರಿಹಾರಗಳೇನು?


ಬದಲಾದ ಜೀವನಶೈಲಿ, ರಾಸಾಯನಿಕ ತುಂಬಿದ ಆಹಾರ, ಕಲುಶಿತ ವಾತಾವರಣ ಮುಂತಾದ ಕಾರಣಗಳಿಗಾಗಿ ಇಂದು ಬಹುತೇಕ ದಂಪತಿ ಮಕ್ಕಳನ್ನು ಪಡೆಯಲು ಪರದಾಡುವಂತಾಗಿದೆ. ಹೀಗೆ ಸಮಸ್ಯೆಯಾದಾಗ ಕೆಲವರು ವೈದ್ಯಕೀಯವಾಗಿ ಹಲವಾರು ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಮತ್ತೆ ಕೆಲವರು ವಾಸ್ತು, ಜ್ಯೋತಿಷ್ಯ(astrology)ದ ಸಹಾಯ ಬೇಡುತ್ತಾರೆ. ಜ್ಯೋತಿಷ್ಯದಲ್ಲಿ ಗರ್ಭಿಣಿ(pregnant)ಯಾಗಲು ಪರದಾಡುವ ಮಹಿಳೆಗೆ ಕೆಲ ಸಲಹೆಗಳಿವೆ. ಅವೇನೆಂದು ನೋಡೋಣ.

ಎರಡು ಗಂಟೆಯ ಬೆಳಕಿಂಡಿ
ಮಹಿಳೆ ಜನಿಸಿದ ಸಂದರ್ಭದಲ್ಲಿ ಸೂರ್ಯ ಚಂದ್ರನಿಗಿರುವ ಅಂತರ ಎಷ್ಟಿತ್ತೋ ಅದೇ ಅಂತರ ಪ್ರತಿ ತಿಂಗಳು ಒಮ್ಮೆ ಎರಡು ಗಂಟೆಗಳ ಕಾಲ ಇರುತ್ತದೆ. ಹೀಗಾಗಿ, ನಿಮ್ಮ ಜನ್ಮ ಸಮಯ ಹಾಗೂ ದಿನಾಂಕ (birth date) ತಿಳಿದುಕೊಂಡು- ಅಂದು ಆ ಸಮಯದಲ್ಲಿ ಸೂರ್ಯ ಚಂದ್ರನ ಅಂತರ ಎಷ್ಟಿತ್ತು ತಿಳಿಯಿರಿ. ಬಳಿಕ ಪಂಚಾಂಗದಲ್ಲಿ ಅದೇ ಅಂತರ ಬರುವುದು ಯಾವಾಗ ಎಂದು ಪರಿಶೀಲಿಸಿ. ಆ ಎರಡು ಗಂಟೆ ಯಾವಾಗ ಎಂದು ತಿಳಿಯಿರಿ. ಆ ಸಂದರ್ಭದ್ಲಲಿ ನಿಮ್ಮ ಫಲವತ್ತತೆ ಹೆಚ್ಚಿರುತ್ತದೆ. ಹಾಗಾಗಿ, ಈ ಸಮಯದಲ್ಲಿ ಪ್ರಯತ್ನಿಸಿದರೆ ಗರ್ಭ ಕಟ್ಟುವ ಸಂಭವ ಹೆಚ್ಚು. 

Tap to resize

Latest Videos

ಮುಹೂರ್ತ
ಶುಭ ಕಾರ್ಯಗಳಿಗೆ ಶುಭ ದಿನಾಂಕ(Auspicious Dates) ಹಾಗೂ ಮುಹೂರ್ತ ನೋಡುವಂತೆ, ಗರ್ಭಿಣಿಯಾಗಲು ಕೂಡಾ ಶುಭ ದಿನ, ಶುಭ ಸಮಯ ನೋಡಿ ಪ್ರಯತ್ನಿಸಬೇಕು. ಈ ಸಂದರ್ಭದಲ್ಲಿ ಮಹಿಳೆಯ ಅದೃಷ್ಟ ಹೆಚ್ಚಿರುತ್ತದೆ. 

Vaastu for debt free life: ಸಾಲ ಮುಕ್ತರಾಗೋಕೆ ಸುಲಭ ಪರಿಹಾರಗಳು..

ಉಪವಾಸ
ಗುರುವಾರದಂದು ಉಪವಾಸ ಆಚರಿಸಬೇಕು. ಕೇವಲ ಹಣ್ಣುಗಳನ್ನು ಮಾತ್ರ ಸೇವಿಸಬೇಕು. ನಂತರ ವಿಷ್ಣುವನ್ನು ಪೂಜಿಸಬೇಕು. ಈ ದಿನ ಆಹಾರದಲ್ಲಿ ಉಪ್ಪನ್ನು ಬಳಸಬಾರದು. ಇದರಿಂದ ಗುರು(Jupiter) ದೋಷವಿದ್ದರೆ ನಿವಾರಣೆಯಾಗಿ ಗರ್ಭಿಣಿಯಾಗಲು ಆಶೀರ್ವಾದ ದೊರೆಯುತ್ತದೆ. 

ಆಲದ ಎಲೆ(banyan leaf)
ಯಾವುದೇ ತಿಂಗಳ ಶುಕ್ಲ ಪಕ್ಷದಲ್ಲಿ ಆಲದ ಎಲೆಯನ್ನು ತಂದು ತೊಳೆದು ಅದರ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆ ಬರೆಯಬೇಕು. ನಂತರ ಅದರ ಮೇಲೆ ಅಕ್ಕಿ ಹಾಗೂ ಅಡಕೆ ಇಡಬೇಕು. ಇದನ್ನು ಸೂರ್ಯಾಸ್ತದೊಳಗೆ ಯಾವುದೇ ದೇವಾಲಯಕ್ಕೆ ಹೋಗಿ ದೇವರಿಗೆ ಸಮರ್ಪಿಸಬೇಕು. ನಂತರ ನಿಮ್ಮ ಸಮಸ್ಯೆ ಹೇಳಿಕೊಂಡು ನೀಗಿಸಲು ಕೋರಿದರೆ ಖಂಡಿತಾ ಆಶೀರ್ವಾದ ಸಿಗಲಿದೆ. 

Planetary Influence: ಈ ಗ್ರಹಗಳ ಪ್ರಭಾವದಿಂದ ಅಪರಾಧಿಗಳಾದೀರಿ ಹುಷಾರ್!

ಶ್ರಾದ್ಧ
ಕೆಲವೊಮ್ಮೆ ಪಿತೃಗಳಿಗೆ ಸರಿಯಾದ ಕ್ರಮದಲ್ಲಿ ಶ್ರಾದ್ಧ ಕ್ರಿಯೆ ನಡೆದಿರುವುದಿಲ್ಲ. ಇದರಿಂದ ಜಾತಕದಲ್ಲಿ ಪಿತೃದೋಷ(Pitra Dosh) ಉಂಟಾಗಿ ಮಕ್ಕಳಾಗಲು ಸಮಸ್ಯೆಯಾಗುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ಅಮಾವಾಸ್ಯೆಯ ದಿನ ನೋಡಿ ಪಿತೃಗಳಿಗೆ ಶ್ರಾದ್ಧ ಕ್ರಿಯೆ ನಡೆಸಬೇಕು. 

ಗರ್ಭ ಗೌರಿ ರುದ್ರಾಕ್ಷಿ(Garbh Gauri Rudraksha)
ಮಕ್ಕಳಾಗುತ್ತಿಲ್ಲ ಎನ್ನುವ ಮಹಿಳೆಯು ಗರ್ಭ ಗೌರಿ ರುದ್ರಾಕ್ಷಿ ಧರಿಸಬೇಕು. ಈ ರುದ್ರಾಕ್ಷಿಯಲ್ಲಿ ಎರಡು ಬಾಗಗಳಿರುತ್ತವೆ. ಒಂದು ದೊಡ್ಡದು ಹಾಗೂ ಮತ್ತೊಂದು ಚಿಕ್ಕದಿರುತ್ತದೆ. ಮೊದಲ ಭಾಗವು ಪಾರ್ವತಿ ದೇವಿಯ ಚಿಹ್ನೆಯಾಗಿದ್ದರೆ, ಎರಡನೆಯದು ಆಕೆಯ ಪುತ್ರ ಗಣೇಶನ ಚಿಹ್ನೆ. ಇದನ್ನು ಧರಿಸಿ, ಪ್ರತಿದಿನ 108 ಬಾರಿ 'ಓಂ ನಮಃ ಶಿವಾಯ' ಮಂತ್ರ ಪಠಿಸಬೇಕು. ಇದರಿಂದ ಮಕ್ಕಳ ಸಂಬಂಧಿ ಸಮಸ್ಯೆ ದೂರಾಗುತ್ತದೆ. 

ಇವಲ್ಲದೆ, ವಾಸ್ತುವಿನ ಈ ಸರಳ ಸಲಹೆಗಳನ್ನು ಕೂಡಾ ಜೊತೆಯಲ್ಲಿ ಪಾಲಿಸಿ

  • ಮಲಗುವ ಕೋಣೆಯಲ್ಲಿ ನಗುಮೊಗದ ಮಗುವಿನ ಚಿತ್ರ ಹಾಕಿಕೊಳ್ಳಿ.
  • ಲೈಟಿನ ಕೆಳಗೆ ನಿದ್ರಿಸಬೇಡಿ.
  • ನೈಋತ್ಯ(southwest) ದಿಕ್ಕಿನಲ್ಲಿ ಮಲಗುವ ಕೋಣೆಯಿದ್ದರೆ ರೊಮ್ಯಾನ್ಸ್ ಹಾಗೂ ಫಲವತ್ತತೆ ಹೆಚ್ಚುತ್ತದೆ.
  • ತಲೆಯನ್ನು ಯಾವಾಗಲೂ ದಕ್ಷಿಣಕ್ಕೆ ಹಾಕಿ ಮಲಗಬೇಕು. 
  • ಮಂಚದ ಕೆಳಗೆ ಯಾವುದೇ ಸಾಮಾನು ಸರಂಜಾಮಿರಬಾರದು. 
  • ಪತ್ನಿಯು ಪತಿಯ ಎಡಭಾಗದಲ್ಲಿ ಮಲಗಬೇಕು. 
  • ಮನೆಯ ಎದಿರು ಬಾಗಿಲನ್ನು ಪ್ರತಿದಿನ ಒರೆಸಿ ಸ್ವಚ್ಛಗೊಳಿಸುತ್ತಿರಬೇಕು.
click me!