Sringeri Sharadamba Temple: ವಿದ್ಯೆಗೆ ಅಧಿದೇವಿ ಶೃಂಗೇರಿ ಶಾರದಾಂಬೆ

Published : Dec 08, 2021, 12:57 PM ISTUpdated : Dec 08, 2021, 12:59 PM IST
Sringeri Sharadamba Temple: ವಿದ್ಯೆಗೆ ಅಧಿದೇವಿ ಶೃಂಗೇರಿ ಶಾರದಾಂಬೆ

ಸಾರಾಂಶ

ಶೃಂಗೇರಿ ದೇವಸ್ಥಾನದ ಹೆಸರು ಕೇಳದವರಾರು? ದೇವಸ್ಥಾನ ಹಾಗೂ ಶಾರಾದಾಂಬೆಯ ಸೌಂದರ್ಯಕ್ಕೆ ಸೋಲದವರಾರು? ಈ ಪ್ರಸಿದ್ಧ ದೇವಸ್ಥಾನದ ಹತ್ತು ಹಲವು ವಿಶೇಷತೆಗಳನ್ನಿಲ್ಲಿ ಕೊಡಲಾಗಿದೆ. 

ಶ್ರೀ ಕ್ಷೇತ್ರ ಶೃಂಗೇರಿ(Sringeri) ಎಂದರೆ ಜ್ಞಾನದಾತೆ ಶಾರದಾಂಬೆಯ ಪರಮ ಪವಿತ್ರ ಕ್ಷೇತ್ರ. ಹೊಳೆವ ಮೂಗುತಿ, ಜ್ಞಾನದ ಸಾಕಾರ ಮೂರ್ತಿಯಂಥ ಮುಖ, ಅಗಾಧ ಚೆಲುವು, ಸಕಲವನ್ನೂ ಪೊರೆವಂಥ ನೋಟ- ಅವಳ ಮುಖಾರವಿಂದ ನೋಡುತ್ತಾ ನಿಂತರೆ ಕಳೆದೇ ಹೋಗುವಂಥ ಆಕರ್ಷಣೆ ಶೃಂಗೇರಿಯ ಶಾರದಾಂಬೆ(Sharadamba)ಯದು. ಶ್ರೀ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬಂದು ಧನ್ಯರಾಗುತ್ತಾರೆ.  ಈ ಚೆಂದದ ದೇವಾಲಯದ ವಿಶೇಷಗಳು, ವಿಸ್ಮಯಗಳು, ಆಸಕ್ತಿಕರ ಮಾಹಿತಿಗಳನ್ನಿಲ್ಲಿ ನೀಡುತ್ತೇವೆ. 

ತುಂಗಾ ತಟದಲ್ಲಿ
ಶಾರದಾಂಬಾ ದೇವಾಲಯವು ಚಿಕ್ಕಮಗಳೂರು(Chikmagaluru) ಜಿಲ್ಲೆಯ ಶೃಂಗೇರಿಯಲ್ಲಿ ತುಂಗಾ ನದಿ ತಟದಲ್ಲಿ ನಿಂತಿದೆ. ಶೃಂಗೇರಿ ಎಂಬುದು ಶೃಂಗಗಿರಿ ಎಂಬ ಪದದಿಂದ ಬಂದಿದೆ. ಅಂದರೆ ಬೆಟ್ಟದ ತುದಿ ಎಂದರ್ಥ. 

8ನೇ ಶತಮಾನದಲ್ಲಿ ನಿರ್ಮಾಣ(Built in the 8th Century)
8ನೇ ಶತಮಾನದಲ್ಲಿ ಶ್ರೀ ಆದಿ ಶಂಕರಾಚಾರ್ಯರು(Shri Adi Shankaracharya) ದೇವಾಲಯವನ್ನು ನಿರ್ಮಿಸಿದ್ದಾರೆ. ಧರ್ಮ ಸಂಸ್ಥಾಪನೆಗಾಗಿ ಶಂಕರಾಚಾರ್ಯರು ದೇಶದಲ್ಲಿ ನಾಲ್ಕು ಮಠಗಳ ನಿರ್ಮಾಣದಲ್ಲಿ ತೊಡಗಿದರು. ಉತ್ತರದಲ್ಲಿ ಬದ್ರಿಕಾಶ್ರಮದ ಜ್ಯೋತಿರ್ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ, ಪೂರ್ವದಲ್ಲಿ ಪುರಿಯ ಗೋವಿಂದ ಪೀಠ ಹಾಗೂ ದಕ್ಷಿಣದಲ್ಲಿ ಶೃಂಗೇರಿಯ ಶಾರದಾ ಪೀಠವನ್ನು ಶಂಕರಾಚಾರ್ಯರು ನಿರ್ಮಿಸಿದರು. ಇಲ್ಲಿ ಮಠ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ಎಂದೇ ಹೆಸರಾಗಿದೆ. ಸ್ಮಾರ್ಥ ಆಚರಣೆಗಳನ್ನು ಮಠ ಹೊಂದಿದ್ದು, ಇಲ್ಲಿನ ಮುಖ್ಯಸ್ಥರನ್ನು ಜಗದ್ಗುರು(Jagadguru) ಎಂದು ಸಂಭೋದಿಸಲಾಗುತ್ತದೆ. 

Dharmasthala: ಜೈನ, ಶೈವರ ಜನಪ್ರಿಯ ದೇಗುಲ ಧರ್ಮಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

ಗಂಧದ ಶಾರದೆ
ಆದಿ ಶಂಕರಾಚಾರ್ಯರು ಶ್ರೀಗಂಧದಲ್ಲಿ ನಿರ್ಮಾಣವಾದ ನಿಂತ ಭಂಗಿಯಲ್ಲಿದ್ದ ಶಾರದೆಯನ್ನು ಇಲ್ಲಿ  ಪ್ರತಿಷ್ಠಾಪಿಸಿದ್ದರಂತೆ. 14ನೇ ಶತಮಾನದಲ್ಲಿ ವಿಜಯನಗರದ ಅರಸ(Vijayanagara empire)ರು ಈ ನೆಲವನ್ನು ಆಳುವಾಗ, ಶ್ರೀ ವಿದ್ಯಾರಣ್ಯರು ಕುಳಿತ ಭಂಗಿಯಲ್ಲಿರುವ ಬಂಗಾರದ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದ್ದಾರೆ.  ಉಭಯ ಭಾರತೀ ಎಂದೂ ಹೆಸರಾಗಿರುವ ಇಲ್ಲಿನ ಶಾರದೆಗೆ ಭಕ್ತಿಯಿಂದ ಪೂಜಿಸಿದರೆ ಬ್ರಹ್ಮ, ಶಿವ ಹಾಗೂ ವಿಷ್ಣುವಿನ ಆಶೀರ್ವಾದ ದೊರಕುತ್ತದೆ ಎಂಬ ಪ್ರತೀತಿ ಇದೆ. 

ಹಾವಿನಿಂದ ಕಪ್ಪೆಯ ರಕ್ಷಣೆ
ಈ ಸ್ಥಳಕ್ಕೆ ಶಂಕರರು ಭೇಟಿ ನೀಡಿದಾಗ ಇಲ್ಲಿ ಹಾವೊಂದು ಗರ್ಭಿಣಿ ಕಪ್ಪೆ(frog)ಗೆ ಸುಡುಬಿಸಿಲು ತಾಗದಂತೆ ರಕ್ಷಣೆ ನೀಡುವುದನ್ನು ನೋಡಿದರು. ಅದು ಅವರಿಗೆ ಈ ಸ್ಥಳದ ವಿಶೇಷತೆ ಪರಿಚಯಿಸಿತು. ಇಂದಿಗೂ ಕೂಡಾ ಇಲ್ಲಿನ ತುಂಗಾ ನದಿ ತಟದಲ್ಲಿ ಹಾವು ಕಪ್ಪೆಗೆ ರಕ್ಷಣೆ ನೀಡುತ್ತಿರುವ ಕಲ್ಲಿನ ವಿಗ್ರಹವನ್ನು ಕಾಣಬಹುದು. ಈ ಶಿಲ್ಪಕ್ಕೆ ಕಪ್ಪೆಶಂಕರ ಎಂಬ ಹೆಸರು ಇದೆ.  

Temple special: ಮಣ್ಣಿನ ಗೊಂಬೆಯ ಹರಕೆ ಕೇಳುವ ಸದಾಶಿವ ರುದ್ರ

ಚಂದ್ರಮೌಳೇಶ್ವರ
ಶಿವನು ಶಂಕರರ ಭಕ್ತಿಗೆ ಮೆಚ್ಚಿ ಇಲ್ಲಿ ಚಂದ್ರಮೌಳೇಶ್ವರನ ಸ್ಪಟಿಕದ ಮೂರ್ತಿಯನ್ನು ಆಶೀರ್ವಾದವಾಗಿ ನೀಡಿದ್ದನು. ಇಂದಿಗೂ ಕೂಡಾ ಪ್ರತಿ ರಾತ್ರಿ 8.30ಕ್ಕೆ ದೇವಾಲಯದಲ್ಲಿ ಚಂದ್ರಮೌಳೇಶ್ವರ ಪೂಜೆ ನಡೆಸಲಾಗುತ್ತದೆ. 

ಅಕ್ಷರಾಭ್ಯಾಸ(Aksharabhyasa)
ಶೃಂಗೇರಿಯ ಶಾರದಾ ದೇವಾಲಯವು ಅಕ್ಷರಾಭ್ಯಾಸಕ್ಕೆ ಹೆಸರಾಗಿದೆ. 2-5 ವರ್ಷದ ಮಕ್ಕಳಿಗೆ ಶ್ರೀ ಶಾರದಾಂಬೆಯ ಮಡಿಲಲ್ಲಿ ಅಕ್ಷರ ಬರೆಯುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಆ ಮಕ್ಕಳ ಮೇಲೆ ಶಾರದೆಯ ಕೃಪಾಕಟಾಕ್ಷ ಸದಾ ಇರುತ್ತದೆ, ವಿದ್ಯೆ ಒಲಿಯುತ್ತದೆ ಎಂಬ ನಂಬಿಕೆ ಇದೆ. 

40 ದೇಗುಲಗಳು(temples)
ಶೃಂಗೇರಿಯಲ್ಲಿ ಒಟ್ಟು 40 ದೇಗುಲಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಸ್ಥಂಭ ಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯ, ಜನಾರ್ಧನ ದೇವಸ್ಥಾನ, ಹರಿಹರ ದೇವಾಲಯ ಹಾಗೂ ಕಾಲಭೈರವ ದೇಗುಲ. ಶಾರದಾ ದೇವಾಲಯದ ಪಕ್ಕದಲ್ಲಿರುವ ವಿದ್ಯಾಶಂಕರ ದೇವಾಲಯವು ತನ್ನ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇದರೊಳಗೆ 12 ರಾಶಿಯ ಕಂಬಗಳಿವೆ. ಇವಕ್ಕೆ ರಿಶಿ ಸ್ಥಂಭ ಎನ್ನಲಾಗುತ್ತದೆ. 

PREV
Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ