ನಿಮ್ಮ ಹೆಂಡತಿಗೆ ಡಾಮಿನೇಟ್ ಮಾಡೋ ಸ್ವಭಾವ ಇದ್ಯಾ? ಈ ರಾಶಿಯವರು ಹಾಗಿರುತ್ತಾರೆ!

Published : Feb 10, 2023, 03:20 PM IST
ನಿಮ್ಮ ಹೆಂಡತಿಗೆ ಡಾಮಿನೇಟ್ ಮಾಡೋ ಸ್ವಭಾವ ಇದ್ಯಾ? ಈ ರಾಶಿಯವರು ಹಾಗಿರುತ್ತಾರೆ!

ಸಾರಾಂಶ

ಮುಖ ನೋಡಿ ಹುಡುಗಿ ಸ್ವಭಾವ ಹೇಳಲು ಸಾಧ್ಯವಿಲ್ಲ. ಆದ್ರೆ ಆಕೆ ರಾಶಿ ನೋಡಿ ಆಕೆ ಭವಿಷ್ಯ ಹೇಳ್ಬಹುದು. ರಾಶಿ ಹಾಗೂ ಮನುಷ್ಯನ ಮಧ್ಯೆ ಗಟ್ಟಿಯಾದ ಸಂಬಂಧವಿದೆ. ರಾಶಿಗಳು ನಮ್ಮ ಜೀವನವನ್ನು ತೆರೆದಿಡುತ್ತವೆ.  

ನಮ್ಮ ಸ್ವಭಾವಕ್ಕೂ ನಮ್ಮ ರಾಶಿಗೂ ಸಂಬಂಧವಿದೆ. ರಾಶಿಗೆ ತಕ್ಕಂತೆ ಅವರ ಗುಣ, ರೂಪ, ಸ್ವಭಾವದಲ್ಲಿ ಬದಲಾವಣೆ ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ನೋಡಿ ವ್ಯಕ್ತಿಯ ಗುಣವನ್ನು ಹೇಳಲಾಗುತ್ತದೆ. ಪ್ರತಿಯೊಬ್ಬ ಮನುಷ್ಯನೂ ಭಿನ್ನವಾಗಿರುತ್ತಾನೆ ನಿಜ. ಆದ್ರೆ ಒಂದೇ ರಾಶಿಯ ವ್ಯಕ್ತಿಗಳ ಗುಣ, ಸ್ವಭಾವದಲ್ಲಿ ಸಾಕಷ್ಟು ಹೋಲಿಕೆಯಿರುತ್ತದೆ. 

ಕೆಲವರು ತುಂಬಾ ನೇರ ಸ್ವಭಾವ (Nature) ದವರಾಗಿರುತ್ತಾರೆ, ಮತ್ತೆ ಕೆಲವರು ಮೃದುವಾಗಿರುತ್ತಾರೆ. ಕೆಲವರನ್ನು ಬಗ್ಗಿಸಬಹುದು ಮತ್ತೆ ಕೆಲವರು ಏನೇ ಅಂದ್ರೂ ಮಾತು ಕೇಳಲಾರದು. ಇನ್ನು ಕೆಲವರು ಸದಾ ಅಳ್ತಿರುತ್ತಾರೆ. ಮತ್ತೊಂದಿಷ್ಟು ಮಂದಿ ಸ್ನೇಹಪರರಾಗಿರ್ತಾರೆ. ಕೆಲವರು ಒಂಟಿಯಾಗಿರ್ತಾರೆ. ಕೆಲ ಮಹಿಳೆಯರು ಪತಿ (husband) ಹೇಳಿದ್ದನ್ನು ಚಾಚುತಪ್ಪದೆ ಪಾಲಿಸ್ತಾರೆ. ಮತ್ತೆ ಕೆಲವರು ಪತಿ ಮೇಲೆ ಪ್ರಾಬಲ್ಯ ಸಾಧಿಸ್ತಾರೆ. ಜ್ಯೋತಿಷ್ಯ (Astrology) ತಜ್ಞರ ಪ್ರಕಾರ, ಈ ಕಳೆಗಿನ ರಾಶಿಯ ಹುಡುಗಿಯರು ಸ್ವಭಾವತಃ ತುಂಬಾ ಪ್ರಬಲರಾಗಿರುತ್ತಾರಂತೆ. ಯಾವಾಗಲೂ ತಮ್ಮ ಪತಿ ಅಥವಾ ಸಂಗಾತಿ (spouse) ಯ ಮೇಲೆ ಪ್ರಾಬಲ್ಯ ಸಾಧಿಸುತ್ತಾರಂತೆ. ನಾವಿಂದು ಯಾವ ರಾಶಿಯ ಹುಡುಗಿಯರು ಸಂಗಾತಿ ಮೇಲೆ ಪ್ರಾಬಲ್ಯ ಸಾಧಿಸ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ.

ಮೇಷ (Aeries) ರಾಶಿ : ಮೇಷ ರಾಶಿಯ ಹುಡುಗಿ (Girl) ಯರು ಪ್ರಾಬಲ್ಯ ಸಾಧಿಸೋದ್ರಲ್ಲಿ ಮುಂದಿದ್ದಾರೆ. ಅವರಿಗೆ ಭಯವಿಲ್ಲ. ಅವರು ಧೈರ್ಯಶಾಲಿ ಸ್ವಭಾವದವರು. ಜ್ಯೋತಿಷ್ಯ ತಜ್ಞರ ಪ್ರಕಾರ, ಈ ರಾಶಿಯ ಹುಡುಗಿಯರು ತಮ್ಮ ಜೀವನದುದ್ದಕ್ಕೂ ತಮ್ಮ ಜೀವನ ಸಂಗಾತಿಯನ್ನು ಆಳುತ್ತಾರೆ.

ಸಿಂಹ (Leo) ರಾಶಿ : ಸಂಗಾತಿಯ ಮೇಲೆ ಹಿಡಿತ ಸಾಧಿಸುವ ಇನ್ನೊಂದು ರಾಶಿ ಹುಡುಗಿಯರೆಂದ್ರೆ ಸಿಂಹ ರಾಶಿಯ ಹುಡುಗಿಯರು. ಇವರು ಸದಾ ಎಲ್ಲರ ಜೊತೆ ಬೆರೆಯುವ ಸ್ವಭಾವ ಹೊಂದಿರುತ್ತಾರೆ. ಒಳ್ಳೆಯ ಗುಣ ಇವರಲ್ಲಿ ಹಾಸುಹೊಕ್ಕಾಗಿರುತ್ತದೆ. ಆದ್ರೆ ಹಠಮಾರಿತನ ಅವರಲ್ಲಿ ನೋಡ್ಬಹುದು. ಯಾರ ಮಾತನ್ನೂ ಇವರು ಕೇಳಲಾರರು. ಅನೇಕ ಬಾರಿ ಗಂಡನ ಎದುರು ವಾದಿಸುವ ಈ ಹುಡುಗಿ ಗಂಡನನ್ನು ನಿಯಂತ್ರಿಸುತ್ತಾಳೆ.  

ಬಯಸಿದವರೊಂದಿಗೆ ವಿವಾಹಕ್ಕಾಗಿ MahaShivratri 2023ರಂದು ಈ ರೀತಿ ಮಾಡಿ..

ಕನ್ಯಾ (Virgo) ರಾಶಿ :  ಕನ್ಯಾ ರಾಶಿಯ ಹುಡುಗಿಯರು ಕೂಡ ಹಠಮಾರಿ ಸ್ವಭಾವ ಹೊಂದಿರುತ್ತಾರೆ. ಆದ್ರೆ ಉತ್ತಮ ಜೀವನ ಸಂಗಾತಿಯಾಗಿರ್ತಾರೆ.  ಪತಿಯ ಮೇಲೆ ವಿಶೇಷ ಕಾಳಜಿ ಹೊಂದಿರುವ ಅವರು ಆತನನ್ನು ಅತಿ ಹೆಚ್ಚು ಪ್ರೀತಿ ಮಾಡ್ತಾರೆ. ಆದ್ರೆ ಗಂಡನ ಮುಂದೆ ಎಲ್ಲ ವಿಷ್ಯದಲ್ಲೂ ತನ್ನ ಇಚ್ಛೆಗೆ ಆದ್ಯತೆ ನೀಡ್ತಾಳೆ. ಗಂಡನ ಮುಂದೆ ಸದಾ ಪ್ರಾಬಲ್ಯ ಸಾಧಿಸ್ತಾಳೆ. 

ತುಲಾ (Libra) ರಾಶಿ : ತುಲಾ ರಾಶಿಯ ಹುಡುಗಿಯರಿಗೆ ತಾಳ್ಮೆ ಕಡಿಮೆ. ತುಂಬಾ ತ್ವರಿತ ಸ್ವಭಾವದವರು. ಅವರು ಸಾಮಾನ್ಯವಾಗಿ ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳುತ್ತಾರೆ. ಈ ಸ್ವಭಾವದಿಂದಾಗಿ ಅವರ ದಾಂಪತ್ಯದಲ್ಲಿ ಸಂತೋಷ ಕಡಿಮೆ. ಪ್ರತಿ ವಿಷ್ಯಕ್ಕೂ ಗಲಾಟೆ ನಡೆಯುತ್ತಿರುತ್ತದೆ. ಆದ್ರೆ ಬಹುತೇಕ ಕಿತ್ತಾಟದಲ್ಲಿ ಅವರು ಸಂಗಾತಿ ಮುಂದೆ ಮೇಲುಗೈ ಸಾಧಿಸುತ್ತಾರೆ. 

ಮಕರ ರಾಶಿ : ಮಕರ ರಾಶಿಯ ಹುಡುಗಿಯರು ಗಂಡ ಅಥವಾ ಬಾಯ್ ಫ್ರೆಂಡ್ ಹಿಡಿತದಲ್ಲಿ ಇಟ್ಟುಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ತಮ್ಮ ಇಚ್ಛೆಗೆ ಹೆಚ್ಚು ಆದ್ಯತೆಯನ್ನು ಅವರು ನೀಡ್ತಾರೆ. ತನ್ನ ನಿರ್ಧಾರದಂತೆ ಎಲ್ಲವೂ ನಡೆಯಬೇಕೆಂಬ ಸ್ವಭಾವ ಅವರದ್ದಾಗಿರುತ್ತದೆ. ಪತಿ ತಾನು ಹೇಳಿದಂತೆ ಕೇಳದೆ ಇದ್ದಲ್ಲಿ ಅವನನ್ನು ದಾರಿಗೆ ತರುವ ವಿಧಾನ ಇವರಿಗೆ ತಿಳಿದಿರುತ್ತದೆ. 

ಬಹಳ ಶಿಸ್ತಿನ ಸ್ವಭಾವ ಈ 5 ರಾಶಿಯವರದ್ದು..

ಮೀನ ರಾಶಿ : ಮೀನ ರಾಶಿಯ ಹುಡುಗಿಯರು ಕೂಡ ಪತಿಯನ್ನು ನಿಯಂತ್ರಿಸೋದಲ್ಲಿ ಮುಂದಿರುತ್ತಾರೆ. ಅವರು ನಿಜ ಜೀವನವನ್ನು ಬಿಟ್ಟು  ಕಾಲ್ಪನಿಕ ಜೀವನವನ್ನು ಹೆಚ್ಚು ಎಂಜಾಯ್ ಮಾಡ್ತಾರೆ. ಅವರು ಹಠಮಾರಿ ಸ್ವಭಾವದವರಾಗಿರುತ್ತಾರೆ. ಈ ಕಾರಣಕ್ಕಾಗಿಯೇ ಅವರು ಯಾವಾಗಲೂ ಪತಿಯನ್ನು ಆಳುತ್ತಾರೆ.
 

PREV
Read more Articles on
click me!

Recommended Stories

ಯಾರೇ ಅಡ್ಡ ಬಂದ್ರೂ ಧೈರ್ಯದಿಂದ ಮುನ್ನುಗ್ಗುವಂತಹ ಶಕ್ತಿಯಿರುವ 5 ರಾಶಿಗಳಿವು
ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ