ಸಂಗಾತಿಗಾಗಿ ಕೆಲಸ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವು ಪುರುಷ ಅಥವಾ ಮಹಿಳೆಯರು ಸಂಗಾತಿಯ ಖುಷಿಯಾಗಿ ತಾವು ಶ್ರಮವಹಿಸುತ್ತಾರೆ. ಅವರ ಎಲ್ಲ ಕೆಲಸಗಳನ್ನೂ ತಾವೇ ಹೊತ್ತುಕೊಂಡು ನಿಭಾಯಿಸುತ್ತಾರೆ. ಈ ಗುಣವನ್ನು ಕೆಲವೇ ರಾಶಿಗಳ ಜನರಲ್ಲಿ ಕಾಣಬಹುದು.
ಪತಿ-ಪತ್ನಿಯರಲ್ಲಿ ಪರಸ್ಪರ ಹೊಂದಾಣಿಕೆ ಇದ್ದಾಗ ಸಂಸಾರ ಸುಖಮಯವಾಗುತ್ತದೆ. ಅದರಲ್ಲೂ ಪರಸ್ಪರ ಪ್ರೀತಿ, ಸಹಾನುಭೂತಿಯಿದ್ದರೆ ಜೀವನ ಇನ್ನೂ ಸುಂದರ. ಸಂಗಾತಿಯ ಬಗ್ಗೆ ಸಹಾನುಭೂತಿ ಇದ್ದಾಗ ಅವರ ಪರವಾಗಿ ಕೆಲಸ ಮಾಡುತ್ತೇವೆ. ಒಬ್ಬರು ಮತ್ತೊಬ್ಬರ ಬಗ್ಗೆ ಸಹಾನುಭೂತಿಯಿಂದ ವರ್ತಿಸಿದಾಗ ಏನನ್ನೂ ನಿರೀಕ್ಷಿಸದೆ ಅವರ ಪರವಾಗಿ ಏನಾದರೂ ಕೆಲಸ ಮಾಡುವ ಮನೋಭಾವ ತನ್ನಿಂತಾನೇ ಮೂಡುತ್ತದೆ. ಸ್ವಾರ್ಥದ ಎಳೆಯಿಲ್ಲದೆ ಸಂಗಾತಿಗಾಗಿ ಏನಾದರೂ ಮಾಡುವ ಗುಣ ಹೆಚ್ಚುತ್ತದೆ. ಆದರೆ, ಈ ಗುಣ ಎಲ್ಲರಲ್ಲೂ ಕಂಡುಬರುವುದಿಲ್ಲ. ಕೆಲವು ಜನರಲ್ಲಿ ಮಾತ್ರ ಧಾರಾಳವಾಗಿ ಕಂಡುಬರುತ್ತದೆ. ಕೆಲವು ರಾಶಿಗಳ ಜನ ತಮ್ಮ ಸಂಗಾತಿಯ ಪರವಾಗಿ ಕೆಲಸ ಮಾಡುವುದನ್ನು ನೋಡಬಹುದು. ಅವರನ್ನು ನೋಡಿ ಇತರರಿಗೆ “ಇವರೇಕೆ ಸಂಗಾತಿಗಾಗಿ ಇಷ್ಟೆಲ್ಲ ತ್ಯಾಗ ಮಾಡುತ್ತಾರೆ?’ ಎಂದೂ ಅನ್ನಿಸಬಹುದು. ಆದರೆ, ಅವರ ಪಾಲಿಗೆ ಇದು ತ್ಯಾಗವಲ್ಲ, ಸಂಗಾತಿಯ ಖುಷಿಗಾಗಿ ತುಂಬು ಮನಸ್ಸಿನಿಂದ ಅವರಿಗೆ ಬೆಂಬಲ ನೀಡುವಂಥದ್ದು. ಹೆಚ್ಚಿನ ನಿರೀಕ್ಷೆಗಳಿಲ್ಲದೆ, ಸ್ವಾರ್ಥವೂ ಇಲ್ಲದೆ ಸಂಗಾತಿಯ ಸಂತೋಷಕ್ಕಾಗಿ ಅವರು ತಮ್ಮ ಸಮಯ, ಶ್ರಮವನ್ನು ಹೂಡಿಕೆ ಮಾಡುತ್ತಾರೆ. ಇದು ಸ್ವತಃ ಅವರಿಗೂ ಖುಷಿ ಕೊಡುತ್ತದೆ. ಈ ಗುಣವನ್ನು ಕೆಲವೇ ರಾಶಿಗಳಲ್ಲಿ ಕಾಣಬಹುದು.
• ವೃಷಭ (Taurus)
ವೃಷಭ ರಾಶಿಯ (Zodiac Sign) ಜನ ತಮ್ಮ ಪ್ರೀತಿಪಾತ್ರರಿಗಾಗಿ (Lovers) ಫೇವರ್ ಮಾಡುವುದರಲ್ಲಿ ಎತ್ತಿದ ಕೈ. ಇವರು ಸದಾಕಾಲ ಮಟೀರಿಯಲಿಸ್ಟಿಕ್ ಆಗಿ ಯೋಚನೆ ಮಾಡುವುದಿಲ್ಲ. ಅಂತರಾಳದಿಂದ ಇವರು ಸಂಗಾತಿಯ (Partner) ಜತೆಗಿರುತ್ತಾರೆ. ತಮ್ಮ ಅಮೂಲ್ಯ ಸಮಯವನ್ನು ಸಂಗಾತಿಗಾಗಿ ವಿನಿಯೋಗಿಸುವುದರಲ್ಲಿ ಸಂತಸ (Happy) ಕಾಣುತ್ತಾರೆ. ಕೆಲವೊಮ್ಮೆ, ತಮ್ಮಂತೆ ಸಂಗಾತಿಯೂ ತಮಗಾಗಿ ಏನಾದರೂ ಕೆಲಸ ಮಾಡಲಿ ಎಂದು ಪ್ರತಿಯಾಗಿ ಬಯಸುತ್ತಾರೆ. ಸಂಗಾತಿಯ ಖುಷಿಯಾಗಿ ಏನು ಬೇಕಾದರೂ ಮಾಡುವ ಗುಣ ಇವರದ್ದು. ಇವರು ಸಂಗಾತಿಯಿಂದ ಎಂದಿಗೂ ನೆಗೆಟಿವ್ ಪ್ರತಿಕ್ರಿಯೆ (Response) ಸ್ವೀಕರಿಸುವುದಿಲ್ಲ.
Zodiac signs: ಜನರ ನಗುವಲ್ಲಿ ತಮ್ಮ ನೋವು ಮರೆಯುವ ವ್ಯಕ್ತಿತ್ವ ಈ ರಾಶಿಯದ್ದು
• ಕರ್ಕಾಟಕ (Cancer)
ಕರ್ಕಾಟಕ ಎಂದರೆ ಆರೈಕೆ ಮಾಡುವ ಹಾಗೂ ಕಾಳಜಿ (Care) ವಹಿಸುವ ಗುಣವುಳ್ಳ ರಾಶಿ. ತಮ್ಮ ಸಂಗಾತಿಯ ಎಲ್ಲ ಕೆಲಸವನ್ನೂ (Works) ಮಾಡಿಕೊಡುತ್ತಾರೆ. ಸಂಸಾರದ ನೊಗ ತಮ್ಮ ಮೇಲೆ ಇದೆ ಎನ್ನುವ ಭಾವನೆ ಸಂಗಾತಿಯಲ್ಲಿ ಮೂಡಲು ಅವಕಾಶ ನೀಡುವುದಿಲ್ಲ. ಸಂಗಾತಿಯ ಜವಾಬ್ದಾರಿಗಳನ್ನೂ (Responsibility) ತಮ್ಮದೇ ಎಂಬಂತೆ ಮಾಡುತ್ತಾರೆ. ಅವರಿಗೆ ಯಾವುದೇ ಹೊರೆಯಾಗಲು ಬಿಡುವುದಿಲ್ಲ. ಪತಿ ಅಥವಾ ಪತ್ನಿಯ ಲಗ್ಗೇಜ್ ಗಳನ್ನು ತಾವೇ ಹೊರುತ್ತಾರೆ. ಸಂಗಾತಿಯ ಬೇಡಿಕೆಗಳನ್ನು (Demand) ಪೂರೈಸಲು ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಸಂಗಾತಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಸದಾಕಾಲ ನೆರವು ನೀಡುತ್ತಾರೆ.
• ಕನ್ಯಾ (Virgo)
ಕನ್ಯಾ ರಾಶಿಯ ಜನ ಪರಿಪೂರ್ಣತೆಗೆ ಮತ್ತೊಂದು ಹೆಸರು. ಸಂಗಾತಿಗೆ ಯಾವ ಸಮಯದಲ್ಲಿ ಯಾವ ವಸ್ತುವಿನ ಅಗತ್ಯವಿದೆ ಎನ್ನುವುದನ್ನು ಚೆನ್ನಾಗಿ ಅರಿತಿರುತ್ತಾರೆ ಹಾಗೂ ಅದನ್ನು ಪೂರೈಸಲು ಸಿದ್ಧವಾಗಿರುತ್ತಾರೆ. ಸಂಗಾತಿ ಖುಷಿಯಾಗಿರಲು, ಆರಾಮದಾಯಕ (Relax) ಮೂಡಿನಲ್ಲಿರಲು ಎಲ್ಲ ಕಾರ್ಯಗಳ ಭಾರವನ್ನು ತಾವೇ ಹೊತ್ತುಕೊಳ್ಳುತ್ತಾರೆ. ತಮ್ಮ ಮಿತಿಗಿಂತ ಕೆಲಸ ಹಚ್ಚಿಕೊಳ್ಳುತ್ತಾರೆ. ಸಂಗಾತಿಯ ಬೇಕು ಬೇಡಗಳನ್ನು ಚೆನ್ನಾಗಿ ಗ್ರಹಿಸುವುದರಲ್ಲಿ ಇವರನ್ನು ಮೀರಿಸುವವರು ಯಾರೂ ಇಲ್ಲ.
Colleagues ಜೊತೆ ಗುಟ್ ಗುಟ್ಟಾಗಿ ಡೇಟಿಂಗ್ ಮಾಡೋ ರಾಶಿಗಳಿವು!
• ತುಲಾ (Libra)
ತುಲಾ ರಾಶಿಯ ಜನ ಸಂಗಾತಿಗೆ ಬದ್ಧತೆ (Commit) ಹಾಗೂ ನಿಷ್ಠೆ ಹೊಂದಿರುತ್ತಾರೆ. ಸಂಬಂಧಗಳ ವಿಚಾರದಲ್ಲಿ ತುಲಾ ರಾಶಿಯವರು ವಿಶಿಷ್ಟ ಧೋರಣೆ ಹೊಂದಿರುತ್ತಾರೆ. ಕೆಲವು ವಿಚಾರಗಳಲ್ಲಿ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಸ್ವಲ್ಪವೂ ಯತ್ನಿಸುವುದಿಲ್ಲ ಆದರೆ ಸಂಗಾತಿಯ ಖುಷಿಗಾಗಿ ಯಾವುದೇ ಕಾರ್ಯ ನಿಭಾಯಿಸುತ್ತಾರೆ. ಸಂಗಾತಿಗೆ ತಮ್ಮ ಪ್ರೀತಿಯನ್ನು (Love) ತೋರ್ಪಡಿಸಿಕೊಳ್ಳುವುದು ಎಂದರೆ ಇವರಿಗೆ ಇಷ್ಟ. ಗೆಳತಿಗಾಗಿ ವೆಚ್ಚ ಮಾಡಲು ಹಿಂದೇಟು ಹಾಕುವುದಿಲ್ಲ. ಸ್ಥಿರವಾದ ಸಂಬಂಧದಲ್ಲಿರುವಾಗ ತುಲಾ ರಾಶಿಯ ಜನ ಸಾಮರಸ್ಯಕ್ಕೆ (Harmony) ಮತ್ತೊಂದು ಹೆಸರಾಗಿರುತ್ತಾರೆ.