ಈ ರಾಶಿಯವರು ಅತ್ಯಂತ ರೋಮ್ಯಾಂಟಿಕ್...

By Sushma Hegde  |  First Published Jun 20, 2023, 6:59 PM IST

ಪ್ರೀತಿ ಮತ್ತು ಪ್ರಣಯದ ವಿಷಯದಲ್ಲಿ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ರಾಶಿಚಕ್ರ ಚಿಹ್ನೆಗಳ ಆಧರದ ಮೇಲೆ ಅವರು ಅತ್ಯಂತ ರೋಮ್ಯಾಂಟಿಕ್ ವ್ಯಕ್ತಿಗಳೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು.  


ಪ್ರೀತಿ ಮತ್ತು ಪ್ರಣಯದ ವಿಷಯದಲ್ಲಿ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ರಾಶಿಚಕ್ರ ಚಿಹ್ನೆ (Zodiac sign) ಗಳ ಆಧರದ ಮೇಲೆ ಅವರು ಅತ್ಯಂತ ರೋಮ್ಯಾಂಟಿಕ್ ವ್ಯಕ್ತಿಗಳೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು.  ಜ್ಯೋತಿಷ್ಯ (Astrology) ದ ಪ್ರಕಾರ ಕೆಲ ರಾಶಿಯವರು ತುಂಬಾ ರೊಮ್ಯಾಂಟಿಕ್‌ ಆಗಿರುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಪ್ರತಿಯೊಬ್ಬರ ಪ್ರಕಾರ ಪ್ರಣಯ (romance) ದ ಅರ್ಥ ವಿಭಿನ್ನವಾಗಿರುತ್ತದೆ. ನೀವು ಎಷ್ಟು ರೋಮ್ಯಾಂಟಿಕ್ ಎಂಬುದು ನಿಮ್ಮ ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದ ಜ್ಯೋತಿಷಿಗಳು ಹೇಳುತ್ತಾರೆ. ತುಂಬಾ ರೋಮ್ಯಾಂಟಿಕ್ ಆಗಿರುವ ರಾಶಿಚಕ್ರ ಚಿಹ್ನೆಗಳು ಯಾವುವು ಗೊತ್ತಾ? ಇಲ್ಲಿದೆ ಡಿಟೇಲ್ಸ್...

Tap to resize

Latest Videos

ಮೀನ ರಾಶಿ (Pisces)

ಮೀನು ನೀರಿನ ಸಂಕೇತವಾಗಿದೆ. ಹೀಗಾಗಿ ಮೀನ ರಾಶಿಯವರು ಅತ್ಯಂತ ಸೂಕ್ಷ್ಮ ಮತ್ತು ಕಾಳಜಿ (concern) ಯುಳ್ಳವರು. ಇವರು ಯಾರನ್ನಾದರೂ ಇಷ್ಟಪಟ್ಟರೆ ಅವರ ಬಗ್ಗೆ ಪ್ರತಿಯೊಂದು ವಿವರಗಳನ್ನು ತಿಳಿದುಕೊಳ್ಳುತ್ತಾರೆ. ಮೀನ ರಾಶಿಯವರು ತಮ್ಮ ಪ್ರೀತಿ ಪಾತ್ರರಿಗೆ ಕ್ಯಾಂಡಲ್‌ ಲೈಟ್ ಡಿನ್ನರ್‌ಗಳು, ಕವನಗಳು ಮತ್ತು ಪತ್ರಗಳೊಂದಿಗೆ ಇಂಪ್ರೆಸ್ ಮಾಡುತ್ತಾರೆ. ಮೀನ ರಾಶಿವರನ್ನು ಅಗಾಧ ಪ್ರೇಮಿ (lover) . ಒಂದು ಮಾತನ್ನೂ ಹೇಳದೆ ನಿಮ್ಮನ್ನು ಮೆಚ್ಚಿಸಲು ಗಂಟೆಗಳ ಕಾಲ ಕಳೆಯಬಹುದು. ಇವರು ಸದಾ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ.

ವೃಷಭ ರಾಶಿ (Taurus) 

ಈ ರಾಶಿಯವರು ಎಲ್ಲರಿಗಿಂತ ತುಂಬಾ ಅಭಿವ್ಯಕ್ತಿಶೀಲ (Expressive) ರಾಗಿರುತ್ತಾರೆ. ಇವರು ಕೂಡ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಅವರಿಗೆ ಆಕರ್ಷಕ ಉಡುಗೊರೆಗಳನ್ನು ನೀಡುತ್ತಾರೆ. ಇವರು ಉತ್ತಮ ಪ್ರೇಮಿಗಳಾಗಿದ್ದು, ಲೈಂಗಿಕವಾಗಿ ಸಂಗಾತಿ ಜತೆ ಹೆಚ್ಚು ಬೆರೆಯುತ್ತಾರೆ.

ಈ ರಾಶಿಯವರ ಜತೆ ಹುಷಾರಾಗಿರಿ; ಗಾಸಿಪ್‌ ಮಾಡುವುದೇ ಇವರ ಚಾಳಿ

 


ಕಟಕ ರಾಶಿ (Cancer) 

ಈ ರಾಶಿಯವರು ತುಂಬಾ ರೋಮ್ಯಾಂಟಿಕ್. ಇವರು ನಿಷ್ಠಾವಂತ (faithful)  ಪ್ರೇಮಿಗಳಾಗಿದ್ದು, ಪ್ರೀತಿಯನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ತಮ್ಮ ಸಂಗಾತಿಯ ಇಷ್ಟಗಳನ್ನು  ಈಡೇರಿಸುತ್ತಾರೆ. ತಮ್ಮ  ಸಂಗಾತಿಯನ್ನು ಹೆಚ್ಚು ಮುದ್ದು ಮಾಡುತ್ತಾರೆ. ಅವರ ಪ್ರತಿಯೊಂದು ಮಾತುಗಳನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಬ್ಬರು ಅನೋನ್ಯತೆ (Privacy) ಯಿಂದ ಇರುತ್ತಾರೆ.

ತುಲಾ ರಾಶಿ (Libra)

ತುಲಾ ರಾಶಿಯವರು ಪ್ರೀತಿ (love) ಯಲ್ಲಿದ್ದಾಗ ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಇವರು ತಮ್ಮ ಸಂಗಾತಿಗೆ ಎಂದಿಗೂ ಮೋಸ ಮಾಡುವುದಿಲ್ಲ. ಇವರು ಉತ್ಸಾಹ, ಪ್ರಣಯ ಮತ್ತು ಲೈಂಗಿಕತೆ (sex) ಗೆ ಹೆಚ್ಚು ಮಹತ್ವ ಕೊಡುತ್ತಾರೆ. ಇವರು ಸಂಗಾತಿಯ ಸೌಂದರ್ಯವನ್ನು ಗೌರವಿಸುತ್ತಾರೆ. ಇವರು ಕೂಡ ಅತ್ಯಂತ ರೋಮ್ಯಾಂಟಿಕ್ ಮತ್ತು ಕಲಾತ್ಮಕ ವ್ಯಕ್ತಿಗಳು.

ಸಂಗಾತಿಯ ಸಕ್ಸಸ್ ಕಂಡ್ರೆ ‘ಈ ರಾಶಿ’ಯವರಿಗೆ ಹೊಟ್ಟೆ ಉರಿ

 

ವೃಶ್ಚಿಕ ರಾಶಿ (Scorpio)

ವೃಶ್ಚಿಕ ನೀರಿನ ಚಿಹ್ನೆಯಾಗಿದ್ದು, ಆದ್ದರಿಂದ ಈ ರಾಶಿಯವರು ತುಂಬಾ ಭಾವನಾತ್ಮಕತೆ (Emotionality) ಗೆ ಹೆಸರುವಾಸಿ. ಇವರು ಕೂಡ ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಹಾಗೂ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ. ಸಂಗಾತಿ ಜತೆ ಲೈಂಗಿಕ ಸಂಪರ್ಕ ಹೊಂದಲು ಇಷ್ಟ ಪಡುತ್ತಾರೆ. ಪ್ರಣಯದ ಬಗ್ಗೆ ಹೆಚ್ಚು ಗೌರವ  (respect) ಕೊಡುತ್ತಾರೆ.

ಇನ್ನು ಮೇಷ, ಮಿಥುನ (Gemini) , ಸಿಂಹ, ಕನ್ಯಾ, ಧನು, ಮಕರ ಮತ್ತು ಕುಂಭ ರಾಶಿ (Aquarius) ಯವರು ಸಮತೋಲಿತ ವ್ಯಕ್ತಿಗಳು. ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ.

click me!