Zodiac Signs: ಸಂಗಾತಿಗೆ ಸುಳ್ಳು ಹೇಳೋದ್ರಲ್ಲಿ ಈ ರಾಶಿಯವರು ನಿಸ್ಸೀಮರು

By Suvarna NewsFirst Published Aug 6, 2022, 4:09 PM IST
Highlights

ಸಂಬಂಧದಲ್ಲಿ ಸುಳ್ಳು ಹೇಳುವುದು ತಪ್ಪು. ಅದು ವಿಶ್ವಾಸದ ಬುನಾದಿಯನ್ನು ಅಲುಗಾಡಿಸುವಂಥ ಅಭ್ಯಾಸ. ಆದರೂ ಕೆಲವು ರಾಶಿಗಳ ಜನ ತಮ್ಮ ಸಂಗಾತಿ ಬಳಿ ಹಸಿಸುಳ್ಳನ್ನು ಹೇಳುತ್ತಾರೆ. ತಮ್ಮ ಪಾಡಿಗೆ ತಾವಿರಲು ಇಷ್ಟಪಡುವ ಇವರು ಆ ಕಾರಣಕ್ಕಾಗಿ ಸಂಗಾತಿಗೆ ಸುಳ್ಳು ಹೇಳುವಲ್ಲಿ ನಿಸ್ಸೀಮರು.

ಸುಳ್ಳು ಹೇಳುವುದು ಒಬ್ಬೊಬ್ಬರ ಪರಿಪಾಠ. ಬಾಯಿ ತೆಗೆದಾಕ್ಷಣ ಏನಾದರೂ ಸುಳ್ಳು ಮಾತನಾಡಿದರೆ ಅವರಿಗೆ ಖುಷಿ. ಇದರಲ್ಲೂ ಒಬ್ಬೊಬ್ಬರು ಒಂದೊಂದು ರೀತಿ. ಕೆಲವರು ತಮ್ಮ ಬಗ್ಗೆ ಅತಿಶಯೋಕ್ತಿಯಾಗಿ ಮಾತನಾಡಿ, ಸುಳ್ಳು ಸುಳ್ಳೇ ಹಾಗೆ ಮಾಡಿದೆ, ಹೀಗೆ ಮಾಡಿದೆ ಎಂದು ಕೊಚ್ಚಿಕೊಳ್ಳುತ್ತಾರೆ. ಅದಕ್ಕೆ ನಮ್ಮ ಆಡು ಮಾತಿನಲ್ಲಿ ಬಡಾಯಿ ಕೊಚ್ಚುವುದು ಎಂದೂ ಹೇಳುತ್ತಾರೆ. ಇದರಿಂದ ಕೇಳುಗರಿಗೆ ಬೋರಾಗಬಹುದೇ ವಿನಾ ಬೇರೆ ಅನಾಹುತ ಆಗುವುದು ಕಡಿಮೆ. ಇನ್ನು ಕೆಲವರು ಇತರರ ಬಗ್ಗೆ ಸುಳ್ಳು ಹೇಳುತ್ತಾರೆ. ಈ ಅಭ್ಯಾಸ ಎಲ್ಲಿಯವರೆಗೂ ಹೋಗಬಹುದು. ಕಣ್ಣಿಗೆ ಕಾಣದ್ದನ್ನೂ ಕಂಡಂತೆ ಬಣ್ಣಿಸಿ ಹೇಳಿ, ಯಾವ ಸಂಬಂಧವನ್ನಾದರೂ ಹದಗೆಡಿಸಿಬಿಡುತ್ತಾರೆ. ಇದಕ್ಕೆ ಚಾಡಿ ಹೇಳುವುದು ಎನ್ನಬಹುದು. ಆದರೆ, ಇದೆಲ್ಲದರ ಹೊರತಾಗಿಯೂ ದೈನಂದಿನ ಜೀವನದಲ್ಲಿ ಚಿಕ್ಕಪುಟ್ಟ ಸುಳ್ಳುಗಳನ್ನು ನಾವು ಹೇಳುತ್ತೇವೆ. ಅದರಲ್ಲಿ “ಎಲ್ಲವೂ ಸರಿಯಾಗಲಿ, ಒಳಿತಾಗಲಿʼ ಎನ್ನುವ ಸದುದ್ದೇಶವೇ ಹೆಚ್ಚಾಗಿ ಇರುತ್ತದೆ. ಕೆಟ್ಟ ಉದ್ದೇಶದಿಂದ ಹೇಳುವ ಸುಳ್ಳಿಗೂ, ಒಳ್ಳೆಯ ಉದ್ದೇಶದಿಂದ ಹೇಳುವ ಸುಳ್ಳಿಗೂ ವ್ಯತ್ಯಾಸ ಅಗಾಧ. ಆದರೂ ಸುಳ್ಳು ಸುಳ್ಳೇ. ಅದನ್ನು ಯಾವ ಕಾರಣಕ್ಕೂ ಆಡಬಾರದು ಎನ್ನುವ ಪರಿಜ್ಞಾನ ಇರಲೇಬೇಕು.

ಸಂಬಂಧದ (Relationship) ಮಟ್ಟಿಗೆ ಬಂದರಂತೂ ಸುಳ್ಳಿನಿಂದ (Lie) ನಂಬಿಕೆಯ (Trust) ಬುನಾದಿ ನಿರ್ಮಾಣವಾಗುವುದಿಲ್ಲ. ಸಂಗಾತಿಗಳಲ್ಲಿ ಪರಸ್ಪರ ವಿಶ್ವಾಸ ಇರಬೇಕಾದರೆ ಸುಳ್ಳಿನ ಛಾಯೆಯೂ ಸೋಕಬಾರದು. ಆದರೆ, ಕೆಲ ಜನರಿರುತ್ತಾರೆ. ತಮ್ಮ ಸಂಗಾತಿಯಲ್ಲಿ ಸುಳ್ಳು ಹೇಳುತ್ತಾರೆ, ಅದು ಮತ್ಯಾವ ಕಾರಣಕ್ಕೂ ಅಲ್ಲ, ತಮಗಾಗಿ ಹೆಚ್ಚಿನ ಸಮಯ ಕೊಟ್ಟುಕೊಳ್ಳಲು. ಇದು ಅಂತಹ ಅಪಾಯಕಾರಿ ಸುಳ್ಳೇನೂ ಅಲ್ಲ. ಆದರೂ ಸಂಗಾತಿಗೆ ತಮ್ಮ ಕೆಲವು ಸಂಗತಿಗಳನ್ನು ಮುಚ್ಚಿಡುತ್ತಾರೆ ಹಾಗೂ ಅವರನ್ನು ಕತ್ತಲಲ್ಲಿ ಇಡುತ್ತಾರೆ. ಹೀಗಾಗಿ, ಇದೂ ಸಹ ತೊಂದರೆಗೆ ಕಾರಣವಾಗಬಹುದು. ತಮಗೆ ಹೆಚ್ಚಿನ ಸಮಯ ಕೊಟ್ಟುಕೊಳ್ಳಲು ಸಂಗಾತಿಗೆ ಸುಳ್ಳು ಹೇಳುವ ಅಭ್ಯಾಸವನ್ನು ಈ ರಾಶಿಗಳ (Zodiac Sign) ಜನರಲ್ಲಿ ಕಾಣಬಹುದು. 

ಈ ರಾಶಿಯವರಗೆ ನಿಮ್ಮ ಬಗ್ಗೆ ಪ್ರೀತಿ ಇದೆಯೋ, ದ್ವೇಷವಿದೆಯೋ ಗೊತ್ತಾಗೋಲ್ಲ!

•   ವೃಶ್ಚಿಕ (Scorpio)
ವೃಶ್ಚಿಕ ರಾಶಿಯವರು ಅತ್ಯಂತ ಸೋಷಿಯಲ್‌ (Social) ಆಗಿರುವಂತೆ ಭಾಸವಾಗುತ್ತಾರೆ. ಆದರೆ, ಇವರು ಸಾಮಾನ್ಯವಾಗಿ ಅಂತರ್ಮುಖಿ (Introvert) ಆಗಿರುತ್ತಾರೆ. ಕಚೇರಿಯಲ್ಲಿ ಇವರು ಬೇರೆಯದೇ ರೀತಿಯಲ್ಲಿ ತಮ್ಮನ್ನು ತೋರ್ಪಡಿಸಿಕೊಳ್ಳುತ್ತಾರೆ. ತಮ್ಮ ಪಾಡಿಗೆ ತಾವಿದ್ದು, ಸೋಷಿಯಲ್‌ ಮೀಡಿಯಾಗಳನ್ನು ಸುಮ್ಮನೆ ತಿರುವುತ್ತ ಕುಳಿತಿರುವುದು ಇವರಿಗೆ ಇಷ್ಟ. ಸಂಗಾತಿ ಇದಕ್ಕೆ ಆಕ್ಷೇಪಿಸಿದರೆ ಆಫೀಸ್‌ ಕೆಲಸವೆಂದು ಸುಳ್ಳು ಹೇಳಬಲ್ಲರು. ಗಂಟೆಗಟ್ಟಲೆ ಸಮಯವನ್ನಾದರೂ ಅವರು ತಮ್ಮ ಫೋನ್‌ ಸ್ಕ್ರೀನ್‌ ಮೇಲೆ ಕೈಯ್ಯಾಡಿಸುತ್ತ ಕಳೆಯಬಲ್ಲರು. ತಮ್ಮಷ್ಟಕ್ಕೆ ತಾವಿರಬೇಕು ಎನ್ನುವದಷ್ಟೇ ಅವರ ಉದ್ದೇಶ. 

•    ವೃಷಭ (Taurus)
ವೃಷಭ ರಾಶಿಯವರು ಇತರರ ಕಂಪೆನಿಯನ್ನು ಇಷ್ಟಪಟ್ಟರೂ ಕೆಲವೊಮ್ಮೆ ತಮ್ಮೊಂದಿಗೆ ಕಾಲ ಕಳೆಯಲು (Own Company) ಬಯಸುತ್ತಾರೆ. ವಿಡಿಯೋ ಗೇಮ್‌ ಆಡುತ್ತಲೋ, ಸುಮ್ಮನೆ ತೂಕಡಿಸುತ್ತಲೋ (Snooze) ಸಮಯ ಕಳೆಯಲು ಇಚ್ಛಿಸುತ್ತಾರೆ. “ಸಮಯ ಹೇಗೆ ಕಳೆದೆ?ʼ ಎನ್ನುವ ಪ್ರಶ್ನೆ ಸಂಗಾತಿಯಿಂದ ಬಂದರೆ ಸುಳ್ಳು ಹೇಳುತ್ತಾರೆ. ಅವರು ತಮ್ಮ ಸಂಗಾತಿಗೆ ಬೇಸರ ಉಂಟುಮಾಡಲು ಇಷ್ಟಪಡುವುದಿಲ್ಲ. ದಿನದಲ್ಲಿ ಕೆಲ ಸಮಯವನ್ನಾದರೂ ತಮ್ಮ ಪಾಡಿಗೆ ತಾವು ಕಳೆಯುವುದು (Give Some Space to Ourselves) ಇವರಿಗೆ ಭಾರೀ ಇಷ್ಟ.

ನೀವು ಸಿಂಹ ರಾಶಿಯವರಾಗಿದ್ರೆ ಈ ಬಣ್ಣಗಳನ್ನು ಹೆಚ್ಚು ಬಳಸಿ..

•    ಸಿಂಹ (Leo)
ಸಿಂಹ ರಾಶಿಯವರಿಗೆ ಸೋಮಾರಿಯಾಗಿ (Slacker) ಕಾಲ ಕಳೆಯುವುದು ಎಂದರೆ ಬಲುಇಷ್ಟ. ಕ್ರಿಯಾಶೀಲರಾಗಿ (Active) ಇರುವುದು ಎಲ್ಲ ಸಮಯದಲ್ಲೂ ಅವರಿಗೆ ಇಷ್ಟವಾಗುವುದಿಲ್ಲ. ಅದರಲ್ಲೂ ಮನೆಕೆಲಸ (Home Chores) ವಿಚಾರದಲ್ಲಿ ಇವರು ಸೋಮಾರಿಯೇ. ಕೆಲಸ ಮಾಡಿ ಸುಸ್ತಾದಂತೆ, ಬಳಲಿದಂತೆ ಸೋಗು ಹಾಕುತ್ತಾರೆ. ವೀಕೆಂಡ್‌ ಅಥವಾ ರಜಾ ದಿನಗಳಂದು ಇವರನ್ನು ಎಬ್ಬಿಸಿ, ಕೆಲಸಕ್ಕೆ ಹಚ್ಚುವುದು ಕಷ್ಟ. ಮನೆಕೆಲಸ ಮಾಡಲು ಬೇಸರಿಸಿಕೊಳ್ಳುವ ಇವರು, ಸಂಗಾತಿಗೆ (Partner) ಸುಲಭವಾಗಿ ಸುಳ್ಳು ಹೇಳುತ್ತಾರೆ. ಹುಷಾರಿಲ್ಲವೆಂದು ನಾಟಕ ಮಾಡುತ್ತಾರೆ. ಹೆಚ್ಚು ಸಮಯ ರೆಸ್ಟ್‌ (Rest) ಮಾಡಬಹುದು ಎನ್ನುವುದಷ್ಟೇ ಇದರ ಹಿಂದಿರುವ ಉದ್ದೇಶವಾಗಿರುತ್ತದೆ. 

click me!