ಕೇರಳದ ಮುಸ್ಲಿಂ ವಿದ್ಯಾರ್ಥಿಗಳಾದ ಮೊಹಮ್ಮದ್ ಬಶೀತ್ ಹಾಗೂ ಮೊಹಮ್ಮದ್ ಜಬೀರ್ ರಾಮಾಯಣ ಕ್ವಿಜ್ ವಿಜೇತರಾಗಿರುವುದು ಅಚ್ಚರಿ ಮೂಡಿಸಿದೆ. ಅದರಲ್ಲೂ ಇಬ್ಬರೂ ಸ್ಪರ್ಧೆ ಗೆಲ್ಲಲು ಕಾರಣ ರಾಮಾಯಣ! ಈ ಸುದ್ದಿ ನೀವು ಹುಬ್ಬೇರಿಸುತ್ತೀರಿ
ಮಲಪ್ಪುರಂ (ಆ.6): ಮುಸಲ್ಮಾನರು ತುಂಬಾ ಧಾರ್ಮಿಕ ನಿಷ್ಠರು. ಅವರು ಕುರಾನ್ ಹೊರತು ಯಾವುದೇ ಧಾರ್ಮಿಕ ಗ್ರಂಥಗಳನ್ನು ನಂಬುವುದಿಲ್ಲ. ಅದರ ಅಧ್ಯಯನ ಮಾಡುವುದು ಅಪರೂಪವೇ ಸರಿ. ಮುಸ್ಲಿಂ ವಿದ್ಯಾರ್ಥಿಯೊಬ್ಬ ಶ್ಲೋಕ್ ಹೇಳಿದರೆ ನಮಗೆಷ್ಟು ಅಶ್ಚರ್ಯ ಆಗಬಹುದು? ನೀವು ಹುಬ್ಬೇರುಸುವಂಥ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಮುಸ್ಲಿಂ ವಿದ್ಯಾರ್ಥಿಗಳಾದ ಮೊಹಮ್ಮದ್ ಬಶೀತ್ ಹಾಗೂ ಮೊಹಮ್ಮದ್ ಜಬೀರ್ ರಾಮಾಯಣ ಕ್ವಿಜ್ ವಿಜೇತರಾಗಿರುವುದು ಅಚ್ಚರಿ ಮೂಡಿಸಿದೆ. ಅದರಲ್ಲೂ ಇಬ್ಬರೂ ಸ್ಪರ್ಧೆ ಗೆಲ್ಲಲು ಕಾರಣ ಕೂಡಾ ಜನರ ಹುಬ್ಬೇರಿಸುವಂತೆ ಮಾಡಿದೆ.
ಬಶೀತ್ ಹಾಗೂ ಜಬೀರ್ ಇಬ್ಬರೂ ವಾಲನ್‌ಚೆರಿ ಕೆಕೆಎಸ್‌ಎಂ ಇಸ್ಲಾಮಿಕ್ ಹಾಗೂ ಕಲಾ ಕಾಲೇಜಿನ ವಾಫಿ ಕೋರ್ಸಿನ ವಿದ್ಯಾರ್ಥಿಗಳಾಗಿದ್ದಾರೆ. ಈ ಇಸ್ಲಾಮಿಕ್ ಕಾಲೇಜಿನ ಪಠ್ಯಕ್ರಮದಲ್ಲೇ ರಾಮಾಯಣವನ್ನೂ ಅಳವಡಿಸಲಾಗಿದೆ. ಕಾಲೇಜಿನ ಬೃಹತ್ ಪುಸ್ತಕಾಲಯದಲ್ಲಿ ರಾಮಾಯಣ ಸೇರಿದಂತೆ ವಿವಿಧ ಧಾರ್ಮಿಕ ಗ್ರಂಥಗಳು ಲಭ್ಯವಿದೆ. ಹಿಂದೂ ಧರ್ಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಕಾಲೇಜು ವಿದ್ಯಾರ್ಥಿಗಳಿಗೆ ನೆರವಾಗಿರುವುದು ಸ್ಪರ್ಧೆ ಗೆಲ್ಲಲು ಕಾರಣವಾಗಿದೆ.
ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಕೇರಳ, ವಧುವಿಗೂ ಮಸೀದಿಗೆ ಅವಕಾಶ
‘ಎಲ್ಲ ಭಾರತೀಯರು ಭಾರತದ ಸಂಸ್ಕೃತಿ ಹಾಗೂ ಇತಿಹಾಸದ ಭಾಗವಾಗಿರುವ ರಾಮಾಯಣ ಹಾಗೂ ಮಹಾಭಾರತವನ್ನು ಓದಲೇಬೇಕು. ಈ ಗ್ರಂಥಗಳನ್ನು ಓದಿ ಅರ್ಥೈಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಮ ಹಾಗೂ ರಾಮಾಯಣದ ಸಂದೇಶದಿಂದ ನಾವು ಸ್ಫೂರ್ತಿ ಪಡೆದುಕೊಳ್ಳಬೇಕು’ ಎಂದು ಜಬೀರ್ ಹೇಳಿದ್ದಾನೆ.
‘ಯಾವುದೇ ಧರ್ಮ ದ್ವೇಷವನ್ನು (Enmity) ಕಲಿಸುವುದಿಲ್ಲ, ಶಾಂತಿ ಸೌಹಾರ್ದತೆಯನ್ನು ಮಾತ್ರ ಬೋಧಿಸುತ್ತದೆ. ವಿವಿಧ ಧಾರ್ಮಿಕ ಗ್ರಂಥಗಳನ್ನು ಓದುವುದು ಇತರೆ ಸಮುದಾಯವರ ಜನರು ಹಾಗೂ ಅವರ ನಂಬಿಕೆಗಳ ಬಗ್ಗೆ ಅರಿತುಕೊಳ್ಳಲು ನೆರವಾಗುತ್ತದೆ’ ಎಂದು ಬಶೀತ್ ಅಭಿಪ್ರಾಯ ಪಟ್ಟಿದ್ದಾನೆ.
ರಹಸ್ಯವಾಗಿ ಮೆಕ್ಕಾ ತಲುಪಿದ ಮುಸ್ಲೀಮೇತರ ವ್ಯಕ್ತಿ, ವಿಶ್ವದ ಮುಸ್ಲೀಮರ ಆಕ್ರೋಶ!
ಎಲ್ಲೆಡೆ ಹಿಂದೂ-ಮುಸ್ಲಿಮ್ ಸಾಮರಸ್ಯ (Communal Harmony) ಕೆದಡುತ್ತಿದೆ. ಕೋಮು ಗಲಭೆ ಹೆಚ್ಚುತ್ತಿದೆ. ಕೋಮು ದ್ವೇಷದಿಂದಲೇ ಅಲ್ಲಲ್ಲಿ ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಸುದ್ದಿ ಕೇಳುತ್ತಿರುವ ಬೆನ್ನಲ್ಲೇ ಈ ಮುಸ್ಲಿಮರು ಹಿಂದೂ ಪೌರಾಣಿಕ ಗ್ರಂಥಗಳ (Hindu Epics) ಬಗ್ಗೆ ಮಾತನಾಡುವುದು ಹಾಗೂ ಅದನ್ನು ಓದುವ ಬಗ್ಗೆ ಮನ ಮುಟ್ಟುವಂತೆ ವಿವರಿಸುವುದು ನೋಡಿದರೆ ಭಾರತದ ಐಕ್ಯತೆ ಮಂತ್ರದ ಬಗ್ಗೆ ಹೆಮ್ಮೆ ಎನಿಸುತ್ತದೆ. ವಿವಿಧತೆಯಲ್ಲಿ ಐಕ್ಯತೆ ಎಂಬುವುದು ಅಕ್ಷರಶಃ ಸಹ ನಿಜವೆನಿಸುತ್ತದೆ.