Zodiac Signs: ದೀರ್ಘ ಕಾಲದ ಬಾಂಧವ್ಯದಿಂದ ದೂರ ಓಡುವ ರಾಶಿಗಳು ಯಾವುವು?

By Suvarna NewsFirst Published Jan 11, 2023, 11:28 AM IST
Highlights

ಈ ರಾಶಿಗಳ ಜನ ಸಂಗಾತಿಯೊಂದಿಗೆ ಸಾಧ್ಯವಾದಷ್ಟೂ ಹಗುರವಾದ, ಅಲ್ಪಕಾಲೀನ, ಬದ್ಧತೆಯಿಲ್ಲದ ಸಂಬಂಧ ಹೊಂದಲು ಇಷ್ಟಪಡುತ್ತಾರೆ. ಇವರು ದೀರ್ಘಕಾಲದ ಪ್ರೀತಿ-ಪ್ರೇಮಕ್ಕೆ ಕಟ್ಟುಬೀಳುವುದು ಕಡಿಮೆ. ಇವರ ಮನೋಧರ್ಮವೇ ಹಾಗಿರುತ್ತದೆ. ವಿವಿಧ ತಾಪತ್ರಯಗಳಿಲ್ಲದ ಸಾಂಗತ್ಯದಲ್ಲಿ ಮಾತ್ರವೇ ಹಾಯಾಗಿರುತ್ತಾರೆ.

ಹರೆಯದ ಹುರುಪಿನಲ್ಲಿ, ಯೌವನದ ಬಿಸಿಯಲ್ಲಿ, ಪ್ರೀತಿ-ಪ್ರೇಮದ ಗುಂಗಿಗೆ ಬೀಳುವುದು ಸಾಮಾನ್ಯ. ಆದರೆ, ಅದು ಕೆಲವೇ ಸಮಯ ಮಾತು. ದೀರ್ಘಕಾಲದ ಬದ್ಧತೆ ಹೆಚ್ಚು ಜನರಲ್ಲಿ ಕಂಡುಬರುವುದಿಲ್ಲ. ಹೆಚ್ಚು ಸಮಯ ಒಂದೇ ಪ್ರೀತಿಯಲ್ಲಿ, ಒಬ್ಬರೊಂದಿಗೆ ಮಾತ್ರ ಭಾವನಾತ್ಮಕವಾಗಿ ಒಂದಾಗಿರಲು ಬಹಳಷ್ಟು ಯುವಮಂದಿಗೆ ಸಾಧ್ಯವಿಲ್ಲ. ಚಿಕ್ಕದೊಂದು ಭಿನ್ನತೆ ಬಂತೋ ಅಲ್ಲಿಗೆ ಸ್ನೇಹ ಸ್ಥಗಿತವಾಗುತ್ತದೆ. ಹಲವು ಸ್ನೇಹಿತರಿರುವ ಹಾಗೆಯೇ ಹಲ ಪ್ರೇಮಿಗಳನ್ನೂ ಹೊಂದಿರುವುದು ಸಹಜವಾಗುತ್ತಿದೆ. ಆದರೆ, ಎಲ್ಲರೂ ಹೀಗಿರುವುದಿಲ್ಲ. ದೀರ್ಘಕಾಲದ ಸ್ನೇಹ-ಪ್ರೀತಿಗೆ ಬದ್ಧತೆ ಹೊಂದಿರುತ್ತಾರೆ. ಅಂತಹ ಪ್ರೀತಿಯನ್ನು ಪ್ರಬುದ್ಧ ಪ್ರೀತಿ ಎಂದು ಗುರುತಿಸಬಹುದು. ಇಲ್ಲಿ ಮನುಷ್ಯರ ಸ್ವಭಾವ, ಗುಣಗಳೂ ಮುಖ್ಯವಾಗುತ್ತದೆ. ಏಕೆಂದರೆ, ಇಂತಹ ಪ್ರಬುದ್ಧತೆ ಎಲ್ಲರಲ್ಲೂ ಕಂಡುಬರುವುದಿಲ್ಲ ಎನ್ನುವುದು ಸತ್ಯ. ಕೆಲವು ರಾಶಿಗಳ ಜನರಿಂದ ನೀವು ದೀರ್ಘಕಾಲದ ಪ್ರೇಮ-ಪ್ರೀತಿಯನ್ನು ನಿರೀಕ್ಷಿಸುವುದು ಕಷ್ಟಸಾಧ್ಯ. ಜನ್ಮಜಾತವಾಗಿ ಅವರ ಗುಣವೇ ಹಾಗಿರುತ್ತದೆ. ಹಾಗೆಂದು, ಇವರ ಪ್ರೀತಿ ಸುಳ್ಳು ಎಂದರ್ಥವಲ್ಲ. ಆದರೆ, ದೀರ್ಘಕಾಲದ ಬಾಂಧವ್ಯಕ್ಕೆ ಇವರು ಹಿಂದೇಟು ಹಾಕುತ್ತಾರೆ. ಪ್ರೇಮವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಇದು ಎಲ್ಲರಲ್ಲೂ ಇರಬಹುದಾದ ಸ್ವಭಾವವಾದರೂ ಈ ಕೆಲ ರಾಶಿಗಳಲ್ಲಿ ತುಸು ಹೆಚ್ಚು ಪ್ರಮಾಣದಲ್ಲಿ ಕಾಣಬಹುದು.

·        ಮೇಷ (Aries)
ಮೇಷ ರಾಶಿಯ ಜನ ಆರಂಭದಲ್ಲಿ ಬದ್ಧತೆಯುಳ್ಳ (Commit) ಬಾಂಧವ್ಯವನ್ನು (Relation) ನಿರೀಕ್ಷೆ ಮಾಡುತ್ತಾರೆ. ಒಮ್ಮೆ ತಮ್ಮ ಸಂಬಂಧ ಗಟ್ಟಿಯಾಗುವ ಹಂತಕ್ಕೆ ಬಂತು ಎಂದಾದಾಗ ಇವರಲ್ಲಿರುವ ಸಾಹಸೀ (Adventure) ಮನೋಭಾವ ಎಚ್ಚೆತ್ತುಕೊಳ್ಳುತ್ತದೆ. ಪರಿಣಾಮವಾಗಿ, ಸಂಗಾತಿಯೊಂದಿಗೆ ವಿನೋದವಾಗಿ ಸಮಯ ಕಳೆಯಲು ಬಯಸುತ್ತಾರೆ. ಅದ್ಭುತ ಸಂಪರ್ಕ ಇಟ್ಟುಕೊಳ್ಳಲು ಯತ್ನಿಸುತ್ತಾರೆಯೇ ವಿನಾ ಏನಾದರೂ ಅರ್ಥವತ್ತಾದುದನ್ನು ಸಾಧಿಸಲು ಸಿದ್ಧವಾಗಿರುವುದಿಲ್ಲ. ಅವರ ಪಾಲಿಗೆ, ಪ್ರೀತಿ-ಪ್ರೇಮದ (Love Life) ವಿಚಾರಗಳು ಬದುಕನ್ನು ಇನ್ನಷ್ಟು ಆಪ್ತವನ್ನಾಗಿಸಿಕೊಳ್ಳುವ ಮಾರ್ಗ. ಪ್ರವಾಸ ಮಾಡುವುದು, ಹೊಸ ಸಂಗತಿಗಳನ್ನು (Partner) ಜತೆಗಾಗಿ ಸಾಧಿಸಲು ಬಯಸುತ್ತಾರೆ. ಆದರೆ, ದೀರ್ಘಕಾಲದ ಜವಾಬ್ದಾರಿ (Responsibility) ಹೊಂದಲು ಹಿಂದೇಟು ಹಾಕುತ್ತಾರೆ.

Latest Videos

ಉದಯ: ಶನಿ ಕಣ್ಣು ಬಿಟ್ಟರೆ ಬಡವನೂ ಶ್ರೀಮಂತನಾಗುತ್ತಾನೆ, ಯಾವ ರಾಶಿಗೆ ಆ ಲಕ್?

·        ಮಿಥುನ (Gemini)
ಸೋಷಿಯಲ್ ಬಟರ್ ಫ್ಲೈ (Social Butterfly) ಎಂದೇ ಹೆಸರುವಾಸಿಯಾಗಿರುವ ಮಿಥುನ ರಾಶಿಯ ಮಂದಿ ಜಗತ್ತಿನ ಬಗ್ಗೆ ಅದ್ಭುತ ಕುತೂಹಲ (Curiosity) ಹೊಂದಿರುತ್ತಾರೆ. ಪ್ರತಿಯೊಂದು ಮನುಷ್ಯರ ಬಗ್ಗೆ ಸಾಕಷ್ಟು ಆಸಕ್ತಿ (Interest) ಹೊಂದಿರುತ್ತಾರೆ. ಪ್ರೀತಿ-ಪ್ರೇಮಕ್ಕೆ ಶ್ರೀಕಾರ ಹಾಕುವ ಮುನ್ನ ಅವರನ್ನು ಆಕರ್ಷಿಸಲು ಹತ್ತಾರು ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಏಕೆಂದರೆ, ಇವರು ಹೊಸತರ ಬಗೆಗೆ ಸಾಕಷ್ಟು ಉತ್ಸಾಹ ಹೊಂದಿರುತ್ತಾರೆ. ಸಹಜವಾಗಿ ಎಲ್ಲರ ಬಗ್ಗೆ ಕುತೂಹಲಿಗಳಾಗಿರುವ ಇವರು ಇದೇ ಕಾರಣದಿಂದ ಇನ್ನೊಬ್ಬರ ಬಗ್ಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ. ಇವರು ತಮ್ಮನ್ನು ಸದಾಕಾಲ ಏನಾದರೊಂದು ಆಸಕ್ತಿಕರ ಕಾರ್ಯದಲ್ಲಿ ಎಂಗೇಜ್ (Engage) ಆಗಿರುವಂತೆ ನೋಡಿಕೊಳ್ಳುವುದು ಅಗತ್ಯ.

ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗ; ಕನ್ಯಾ, ಧನು ಸೇರಿ ಈ ರಾಶಿಗಳಿಗೆ ಭಾಗ್ಯೋದಯದ ಕಾಲ

·        ತುಲಾ (Libra)
ತುಲಾ ರಾಶಿಯ ಸಂಪರ್ಕಕ್ಕೆ ಬರುವ ಎಲ್ಲರೂ ಇವರ ಆಪ್ತತೆ ಹಾಗೂ ಲವಲವಿಕೆಯ (Playfulness) ಅನುಭವಕ್ಕೆ ಪಾತ್ರರಾಗುತ್ತಾರೆ. ಇವರು ಸಾಮಾನ್ಯವಾಗಿ ಕ್ಯಾಷುವಲ್ (Casual) ಪ್ರೇಮವನ್ನು ಬಯಸುತ್ತಾರೆ. ಏಕೆಂದರೆ, ಭಾರವೆನಿಸದ, ಹಗುರವಾದ (Light) ಹಾಗೂ ಆನಂದದಾಯಕ (Happy) ಸಾಮಾಜಿಕವಾದ ಒಡನಾಟವನ್ನಷ್ಟೇ ಇವರು ಬಯಸುತ್ತಾರೆ. ಸಂಬಂಧಕ್ಕೆ ಬದ್ಧರಾಗಲು ತಮ್ಮ ಸಮಯ ತೆಗೆದುಕೊಳ್ಳುತ್ತಾರೆ. ಶಾರ್ಟ್ ಟರ್ಮ್ (Short Term) ಸಂಬಂಧಗಳಿಗೇ ಹೆಚ್ಚು ಆತುಕೊಳ್ಳುತ್ತಾರೆ. ಅವುಗಳೇ ಹೆಚ್ಚು ಶಕ್ತಿದಾಯಕ ಹಾಗೂ ಮೌಲ್ಯವುಳ್ಳದ್ದೆನ್ನುವ ಭಾವನೆಗೆ ಬೀಳುತ್ತಾರೆ. ವರ್ಚಸ್ಸಿನಿಂದ (Charisma) ಕೂಡಿರುವ ಇವರಿಗೆ ಹೊಸಬರೊಂದಿಗೆ ಮಾತುಕತೆ, ಸಂಬಂಧ ಏರ್ಪಡಿಸಿಕೊಳ್ಳುವುದು ಕಷ್ಟವೇ ಅಲ್ಲ.  

·        ಧನು (Sagittarius)
ಧನು ರಾಶಿಯ ಜನ ಕ್ಯಾಷುವಲ್ ಪ್ರೇಮ ಸಂಬಂಧವನ್ನು ಬೆಂಬಲಿಸುತ್ತಾರೆ. ಯಾರೊಂದಿಗಾದರೂ ಸಂಬಂಧಕ್ಕೆ ಬದ್ಧರಾಗಲು ಸಾಕಷ್ಟು ಸಮಯ (Time) ತೆಗೆದುಕೊಳ್ಳುತ್ತಾರೆ. ಸಾಹಸಮಯ ಹಾಗೂ ಹೊಸತರ ಅನ್ವೇಷಣೆಯ (New Adventure) ಬಗ್ಗೆ ವಿಪರೀತ ಕುತೂಹಲ ಹೊಂದಿರುವ ಇವರು ತಮ್ಮ ಬದುಕಿನ ಪ್ರತಿ ಹಂತದಲ್ಲೂ ಇದನ್ನು ನಿರೀಕ್ಷೆ ಮಾಡುತ್ತಾರೆ. ಸಂಗಾತಿಯ ನಿಯಂತ್ರಣ (Control), ಕಟ್ಟುಪಾಡುಗಳಿಗೆ (Obligations) ಪ್ರತಿಕ್ರಿಯೆ ಮಾಡದೇ ದುಗುಡವಿಲ್ಲದ ಸಂಬಂಧ ಹೊಂದಲು, ಖುಷಿಯಾಗಿರಲು ಬಯಸುತ್ತಾರೆ.

click me!