ಈ ರಾಶಿಚಕ್ರದವರಿಗೆ ಹಣಕ್ಕಿಲ್ಲ ಕೊರತೆ: ನಿಮ್ಮ ರಾಶಿಯೂ ಪಟ್ಟಿಯಲ್ಲಿದೆಯೇ?

By Suvarna NewsFirst Published Jul 1, 2022, 5:45 PM IST
Highlights

Astrology Tips: ರಾಶಿ ಚಕ್ರದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಹೇಳಬಹುದು. ಹಾಗೆಯೇ ಆಯಾ ರಾಶಿಗಳಿಗೆ ಕೆಲವು ದೇವರ ಕೃಪೆ ಹುಟ್ಟಿನಿಂದಲೇ ಇರುತ್ತದೆ. ಹಾಗಾಗಿ ಅಂತಹ ವ್ಯಕ್ತಿಗಳು ಆರ್ಥಿಕವಾಗಿ ಸಬಲತೆಯನ್ನು ಹೊಂದಿರುತ್ತಾರೆ. ಪರಿಶ್ರಮದಿಂದ ಕಾರ್ಯ ನಿರ್ಮಹಿಸುವದರ ಜೊತೆಗೆ ಲಕ್ಷ್ಮೀ ದೇವಿಯ ಕೃಪೆ ಮತ್ತು ಅದೃಷ್ಟದ ಜೊತೆ ಇವರಿಗೆ ಸಿಗುತ್ತದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಹಿಂದೂ ಧರ್ಮದಲ್ಲಿ ದೇವಾನು ದೇವತೆಗಳ ಅನುಗ್ರಹ ಪಡೆಯುವುದಕ್ಕಾಗಿ ಪೂಜೆ, ಆರಾಧನೆಗಳನ್ನು ಶ್ರದ್ಧಾ – ಭಕ್ತಿಯಿಂದ ಮಾಡಲಾಗುತ್ತದೆ. ಹಾಗೇ ಮಾಡಿದಾಗ ಇಷ್ಟ ದೇವರ ಕೃಪೆಗೆ (Blessings) ಪಾತ್ರರಾಗುವುದಲ್ಲದೇ, ಅಂದುಕೊಂಡದ್ದನ್ನು ಪಡೆಯಬಹುದೆಂದು ಶಾಸ್ತ್ರ ಉಲ್ಲೇಖಿಸುತ್ತದೆ. ಎಲ್ಲ ದೇವರ ಕೃಪೆ ಸಿಗುವುದರ ಜೊತೆಗೆ ಈ ಕಲಿಯುಗದಲ್ಲಿ ಲಕ್ಷ್ಮೀ ದೇವಿಯ ಕೃಪೆಗಾಗಿ ಪೂಜಿಸುವವರು ಅನೇಕರು. ಲಕ್ಷ್ಮೀ ದೇವಿಯ ಕೃಪೆ ಸಿಕ್ಕರೆ ಅಂಥವರ ಮನೆಯಲ್ಲಿ ಧನ (Money) – ಧಾನ್ಯಗಳಿಗೆ ಯಾವುದೇ ರೀತಿಯ ಕೊರತೆ (Scarcity) ಬರುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಎಲ್ಲರೂ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. 

ಸಹಜವಾಗಿ ಎಲ್ಲರೂ ಲಕ್ಷ್ಮೀ ದೇವಿಯ ಆಶೀರ್ವಾದಕ್ಕಾಗಿ ಆರಾಧಿಸುತ್ತಾರೆ (Worship). ಆಕೆಯ ಕೃಪೆಯಿಂದ ಹಣವಂತರಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವು ರಾಶಿಯವರಿಗೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಜೀವನ ಪೂರ್ತಿ ಲಕ್ಷ್ಮೀ ದೇವಿಯ ಕೃಪೆ ಹೊಂದಿರುವ ಪುಣ್ಯವಂತ ರಾಶಿಗಳು (Zodiac sign) ಯಾವುವು ಎಂಬುದನ್ನು ತಿಳಿಯೋಣ.

ಮಿಥುನ ರಾಶಿ (Gemini):
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮಿಥುನ ರಾಶಿಯವರಿಗೆ ಹುಟ್ಟಿನಿಂದಲೇ ಅದೃಷ್ಟವಿರುತ್ತದೆ. ಇದರ ಜೊತೆ ಜೊತೆಗೆ ಲಕ್ಷ್ಮೀ ದೇವಿಯ ಕೃಪೆಯು ಇವರಿಗಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಹಣ ಮತ್ತು ಸಂಪತ್ತಿಗೆ (Wealth) ಯಾವುದೇ ಕೊರತೆ ಬರುವುದಿಲ್ಲ. ಆರ್ಥಿಕ ಸ್ಥಿತಿ (Economic Stability) ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲದೇ ಮಿಥುನ ರಾಶಿಯ ವ್ಯಕ್ತಿಗಳು ಪರಿಶ್ರಮಿಗಳಾಗಿರುತ್ತಾರೆ. ಪರಿಶ್ರಮದಿಂದ ಎಲ್ಲವೂ ಲಭ್ಯವಾಗುವಂತೆ ಮಾಡಿಕೊಳ್ಳುತ್ತಾರೆ. ಈ ರಾಶಿಯ ವ್ಯಕ್ತಿಗಳಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಪ್ರತಿಷ್ಟೆ ಲಭಿಸುತ್ತದೆ.

ಇದನ್ನು ಓದಿ: ಹೂಡಿಕೆ, ಬಂಗಾರ – ಭೂ ಖರೀದಿಗೆ ಬಂದಿದೆ ಈ ಯೋಗ!

ಸಿಂಹ ರಾಶಿ (Leo):
ಸಿಂಹ ರಾಶಿಯ ವ್ಯಕ್ತಿಗಳ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುವುದಾಗಿ ಶಾಸ್ತ್ರ ಹೇಳುತ್ತದೆ. ಈ ರಾಶಿಯ ವ್ಯಕ್ತಿಗಳು ಹೆಚ್ಚು ಶ್ರಮವನ್ನು (Effort) ವಹಿಸಿ ಕೆಲಸ ಮಾಡುವ ಗುಣವನ್ನು ಹೊಂದಿರುತ್ತಾರೆ. ಅದೇ ಪರಿಶ್ರಮದಿಂದಲೇ ಪ್ರತಿ ಕಾರ್ಯದಲ್ಲೂ ಯಶಸ್ಸನ್ನು (Success) ಗಳಿಸುತ್ತಾರೆ. ಈ ವ್ಯಕ್ತಿಗಳ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಅಷ್ಟೇ ಅಲ್ಲದೆ ಅದೃಷ್ಟ ಸಹ ಇವರ ಜೊತೆಗಿರುತ್ತದೆ.

ಇದನ್ನೂ ಓದಿ: Numerology Today: ಸಂಖ್ಯೆ 2ಕ್ಕೆ ಆಪ್ತ ಬಂಧುಗಳಿಂದ ಧನನಷ್ಟ

ತುಲಾ ರಾಶಿ (Libra):
ತುಲಾ ರಾಶಿಯ ವ್ಯಕ್ತಿಗಳು ಪರಿಶ್ರಮಿಗಳು ಮತ್ತು ನೋಡಲು ಆಕರ್ಷಕ (Attractive) ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರ ವ್ಯಕ್ತಿತ್ವದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದುಕೊಳ್ಳುವ ಕಲೆಯನ್ನು ಪಡೆದಿರುತ್ತಾರೆ. ಹಾಗಾಗಿ ಕೈ ಹಿಡಿದ ಕಾರ್ಯಗಳನ್ನೆಲ್ಲ ಯಶಸ್ವಿಯಾಗಿ ಮುಗಿಸಿಬಿಡುತ್ತಾರೆ. ಲಕ್ಷ್ಮೀ ದೇವಿಯ (Goddess Lakshmi) ಕೃಪೆಯಿಂದಾಗಿ ಈ ವ್ಯಕ್ತಿಗಳ ಜೀವನ ಸುಖಮಯವಾಗಿರುತ್ತದೆ.

ಧನು ರಾಶಿ (Sagittarius):
ಎಲ್ಲ ಕೆಲಸಗಳಲ್ಲೂ ಧನು ರಾಶಿಯ ವ್ಯಕ್ತಿಗಳು ನಿಪುಣರಾಗಿರುತ್ತಾರೆ. ಈ ವ್ಯಕ್ತಿಗಳ ಕೆಲಸದ ಶೈಲಿ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಈ ವ್ಯಕ್ತಿಗಳಿಗೆ ಜೀವನದ ಪ್ರತಿ ಹಂತದಲ್ಲೂ ಅದೃಷ್ಟ ಜೊತೆಗಿರುತ್ತದೆ. ಈ ರಾಶಿಯ ವ್ಯಕ್ತಿಗಳು ಸಂಪತ್ತಿನ ದೇವಿಯಾದ ಲಕ್ಷ್ಮೀ ಮತ್ತು ಶುಕ್ರ ದೇವನ ಕೃಪೆಯಿಂದಾಗಿ ಹೆಚ್ಚಿನ ಹಣವನ್ನು ಗಳಿಸುತ್ತಾರೆ.

ಇದನ್ನು ಓದಿ: ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ ಉದ್ಯೋಗ, ಹಣದಲ್ಲಿ ಬಂಪರ್ ಯೋಗ!

ಮೀನ ರಾಶಿ (Pisces)
ಮೀನ ರಾಶಿಯ ವ್ಯಕ್ತಿಗಳು ಪರಿಶ್ರಮಿಗಳಾಗಿರುತ್ತಾರೆ. ಈ ವ್ಯಕ್ತಿಗಳ ಆರ್ಥಿಕ ಸ್ಥಿತಿ ಅತ್ಯಂತ ಉತ್ತಮವಾಗಿರುತ್ತದೆ. ಮೀನ ರಾಶಿಯ ವ್ಯಕ್ತಿಗಳು ಸ್ವಭಾವದಲ್ಲಿ ಪ್ರಮಾಣಿಕ (Prompt) ಮತ್ತು ದಯಾಗುಣವನ್ನು ಹೊಂದಿರುತ್ತಾರೆ. ಪರಿಶ್ರಮದ ಬಲದ ಮೇಲೆ ಸಕಲ ಕಾರ್ಯಗಳಲ್ಲೂ ಜಯ ಗಳಿಸುತ್ತಾರೆ. ಇವರಿಗೆ ಎಲ್ಲ ಕೆಲಸಕ್ಕೂ ಅದೃಷ್ಟ (Luck) ಸಾಥ್ ನೀಡುತ್ತದೆ. ಒಟ್ಟಾರೆಯಾಗಿ ಪರಿಶ್ರಮದಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಅಷ್ಟೇ ಅಲ್ಲದೆ ಅಂತಹ ವ್ಯಕ್ತಿಗಳಿಗೆ ಎಲ್ಲ ಕೆಲಸಗಳಿಗೂ ಅದೃಷ್ಟವು ಸಹ ಜೊತೆಯಾಗಿರುತ್ತದೆ.

click me!