ಈ ಅಕ್ಷಯ ತೃತೀಯ ನಂತರ ಇವರ ಭವಿಷ್ಯ ಮುಂಚಿನಂತಿರೋಲ್ಲ!

By Suvarna News  |  First Published Apr 25, 2020, 4:55 PM IST

ಈ ಅಕ್ಷಯ ತೃತೀಯದಂದು ರವಿ ಮತ್ತು ಚಂದ್ರ ಅತ್ಯುಚ್ಛ ಪ್ರಯಾಣ ತಲುಪಿ ತಮ್ಮ ಹೆಚ್ಚಿನ ಪ್ರಖರತೆಯನ್ನು ದಕ್ಕಿಸಿಕೊಳ್ಳುತ್ತಾರೆ. ಹೀಗೆ ಪಡೆಯುವಾಗ ಆಸುಪಾಸಿನಲ್ಲಿರುವ ಕೆಲವು ಪ್ರಭಾವಿ ಗ್ರಹಗಳಿಗೆ ತಮ್ಮ ಶಕ್ತಿಯ ಒಂದಂಶವನ್ನು ದಾನ ಮಾಡುತ್ತಾರೆ. ಈ ಶಕ್ತಿಯನ್ನು ಪಡೆಯುತ್ತಿರುವ ಗ್ರಹಗಳು ಯಾವ ರಾಶಿಯನ್ನು ಈ ಸನ್ನಿವೇಶದಲ್ಲಿ ಆಳುತ್ತಿವೆಯೋ ಅಂಥವರು ಹೆಚ್ಚಿನ ಪುಣ್ಯ, ಕೀರ್ತಿ, ಸುಖ, ಅಧಿಕಾರ, ಧನಕನಕಾದಿಗಳನ್ನು ಪಡೆಯುತ್ತಾರೆ.


ಅಕ್ಷಯ ತೃತೀಯ ಪುಣ್ಯದ ಹಬ್ಬ. ಅನೇಕ ಅಕ್ಷಯ ಘಟನೆಗಳು ಈ ಅಕ್ಷಯ ತದಿಗೆಯ ಜೊತೆಗೆ ಬೆಸೆದುಕೊಂಡಿವೆ. ಯಾವುದೇ ಶುಭ ಕೆಲಸಗಳನ್ನು ಅಂದು ಮಾಡಿದರೆ ಪುಣ್ಯಫಲ ಪ್ರಾಪ್ತಿಯಾಗುವುದು. ಮಹಾವಿಷ್ಣು ಹಾಗೂ ಮಹಾಲಕ್ಷ್ಮಿಯರು ಗಂಗಾದೇವಿಗೆ ಪೂಜೆ ಸಲ್ಲಿಸಿದ್ದು ಈ ದಿನ . ಗಂಗಾಮಾತೆ ಸ್ವರ್ಗದಿಂದ ಭೂಮಿಗೆ ಇಳಿದದ್ದು ಈ ದಿನವಂತೆ. ಈ ದಿವಸ ಕೃತ ಯುಗದ ಆರಂಭವಂತೆ. ಬಸವಣ್ಣ ಜನಿಸಿದ್ದು ಇಂದು. ಪರಶುರಾಮ ಜನಿಸಿದ್ದು ಇಂದು. ವೇದವ್ಯಾಸರು ಮಹಾಭಾರತ ಬರೆಯಲು ಗಣಪತಯನ್ನು ಒಪ್ಪಿಸಿ ಹೇಳಿ ಬರೆಸಲು ಆರಂಭಿಸಿದ್ದು ತದಿಗೆಯಂದು. ಹೀಗಾಗಿ ಈ ದಿವಸ ಪರಮ ಪುಣ್ಯದಾಯಕ.
ಈ ಅಕ್ಷಯ ತೃತೀಯದಂದು ರವಿ ಮತ್ತು ಚಂದ್ರ ಅತ್ಯುಚ್ಛ ಪ್ರಯಾಣ ತಲುಪಿ ತಮ್ಮ ಹೆಚ್ಚಿನ ಪ್ರಖರತೆಯನ್ನು ದಕ್ಕಿಸಿಕೊಳ್ಳುತ್ತಾರೆ. ಹೀಗೆ ಪಡೆಯುವಾಗ ಆಸುಪಾಸಿನಲ್ಲಿರುವ ಕೆಲವು ಪ್ರಭಾವಿ ಗ್ರಹಗಳಿಗೆ ತಮ್ಮ ಶಕ್ತಿಯ ಒಂದಂಶವನ್ನು ದಾನ ಮಾಡುತ್ತಾರೆ. ಈ ಶಕ್ತಿಯನ್ನು ಪಡೆಯುತ್ತಿರುವ ಗ್ರಹಗಳು ಯಾವ ರಾಶಿಯನ್ನು ಈ ಸನ್ನಿವೇಶದಲ್ಲಿ ಆಳುತ್ತಿವೆಯೋ ಅಂಥವರು ಹೆಚ್ಚಿನ ಪುಣ್ಯ, ಕೀರ್ತಿ, ಸುಖ, ಅಧಿಕಾರ, ಧನಕನಕಾದಿಗಳನ್ನು ಪಡೆಯುತ್ತಾರೆ.

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿ

Tap to resize

Latest Videos

undefined

ಕಟಕ, ಸಿಂಹ:

ಈ ಎರಡು ರಾಶಿಗಳು ಅಕ್ಷಯ ತೃತೀಯದ ಬಳಿಕ ಸೋಮ ಮತ್ತು ಶುಕ್ರ ಗ್ರಹಗಳ ಪ್ರಭಾವದಿಂದ ಹೆಚ್ಚಿನ ಅಧಿಕಾರ ಸ್ಥಾನಗಳನ್ನು ಪಡೆಯಲಿದ್ದಾರೆ. ಮನೆಯಲ್ಲಿ ನೀವು ಹೇಳಿದ್ದೇ ನಡೆಯುತ್ತದೆ. ಕಚೇರಿಯಲ್ಲಿ ನಿಮ್ಮ ಆಲೋಚನೆಗಳಿಗೆ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಭಡ್ತಿಯೂ ಸಿಗಬಹುದು. ಹೆಚ್ಚಿನ ಕೆಲಸದ ಹೊರೆ ಉಂಟಾಗಬಹುದು ಆದರೆ ಅದನ್ನು ನೀವು ಸಲೀಸಾಗಿ ನಿಭಾಯಿಸುತ್ತೀರಿ. ಈ ಹೆಚ್ಚಿನ ಕೆಲಸದ ಜವಾಬ್ದಾರಿಯಿಂದ ಎಲ್ಲವೂ ನಿಮ್ಮದಾಯಿತು ಎಂದು ಬೀಗಬೇಡಿ. ಯಾಕೆಂದರೆ ವಕ್ರನಾಗಿ ಶನಿ ಇದ್ದಾನೆ. ಈತನನ್ನು ಒಲಿಸಿಕೊಂಡರೆ ಎಲ್ಲ ಶುಭಫಲ ನಿಶ್ಚಿತ.

ವೃಶ್ಚಿಕ, ಕನ್ಯಾ :

ಈ ಅಕ್ಷಯ ತೃತೀಯ ಬಳಿಕ ನಿಮಮ್ಮ ಕೈಯಲ್ಲಿ ಧನರಾಶಿ ಬಂದು ಸ್ಥಾಪಿತವಾಗುತ್ತದೆ. ಇದುವರೆಗೆ ನಿಮಗೆ ಹಣ ಬರುತ್ತಿತ್ತು, ಹೋಗುತ್ತಿತ್ತು. ಬಂದದ್ದೂ ಹೋದದ್ದೂ ಗೊತ್ತಾಗುತ್ತಿರಲಿಲ್ಲ. ಇನ್ನು ಹಾಗಲ್ಲ. ನೀವು ಬಯಸಿದ ಕೆಲಸಕಾರ್ಯಗಳಿಗೆ ಖರ್ಚು ಮಾಡಬಹುದಾದಷ್ಟು ಹಣ ನಿಮಗೆ ಸಿಗುತ್ತದೆ. ಅದರಿಂಧ ಸುಖ ಸಂತೋಷಗಳೂ ನಿಮಗೆ ದೊರೆಯುತ್ತವೆ. ಹಣವನ್ನು ಮಿತವಾಗಿ ಖರ್ಚು ಮಾಡುವ ಕಲೆಯನ್ನು ಮಾತ್ರ ಕಲಿಯಬೇಕು. ಚಂದ್ರನ ಕೃಪಾಕಟಾಕ್ಷ ನಿಮಗಿದೆ. ಹಾಗಾಗಿ ಆರೋಗ್ಯದ ಮಟ್ಟಿಗೆ ನೀವು ಸರ್ವತಂತ್ರ ಸ್ವತಂತ್ರ. 

ಗ್ರಹಗಳ ದಿಕ್ಕನ್ನೇ ಬದಲಿಸುವ ಶಕ್ತಿ ಧ್ಯಾನಕ್ಕಿದೆ, ನೀವೂ ಹೀಗೆ ಮಾಡಿ

ಧನು, ಮಕರ :

ಒಂದು ಹೊತ್ತಿನ ಊಟಕ್ಕಾಗಿ ಕಷ್ಟಪಟ್ಟ ದಿನಗಳನ್ನು ನೀವು ಕಂಡಿದ್ದೀರಿ. ಈಗ ಸುಖದ ದಿನಗಳನ್ನು ಕಾಣಲು ತಯಾರಾಗಿ. ನಿಮ್ಮ ಜಾತಕದ ಮೇಲಿನ ಸಾಲಿನಲ್ಲಿ ಶುಭಪ್ರದಾಯಕ ಗ್ರಹಗಳೆಲ್ಲ ಸಾಲುಗಟ್ಟಿವೆ. ಸೂರ್ಯನ ಪ್ರಭಾವದಿಂದ ಇನ್ನಷ್ಟು ಪ್ರಸನ್ನವಾಗಿ, ಈ ರಾಶಿ ಸಂಜಾತನನ್ನು ಆಶೀರ್ವದಿಸುತ್ತಿವೆ. ಹಣಕಾಸು ಹಾಗೂ ಅಧಿಕಾರದಲ್ಲಿ ನೀವು ಸುಖದ ದಿನಗಳನ್ನು ಕಾಣಲಿದ್ದೀರಿ. ಆರೋಗ್ಯವೂ ಚೆನ್ನಾಗಿರುತ್ತದೆ. ಶಿವ ಮಹಾರ್ಚನೆಯಿಂಧ ಇನ್ನಷ್ಟು ಸೌಭಾಗ್ಯ. ಪಶುಪತಿಯ ಅನುಗ್ರಹ ಬೇಕು. ಯಾವುದೇ ದುಷ್ಟ ಗ್ರಹಗಳ ಕಾಟ ನಡೆಯುವುದಿಲ್ಲ. 

click me!