Zodiac Signs: ನಿಮ್ಮ ಹುಡುಗನಿಗೆ ಸ್ವಲ್ಪವೂ ಸಹಿಸಲಾಗದ ವಿಷಯವಿದು..

By Suvarna News  |  First Published Jan 18, 2022, 2:25 PM IST

ರಾಶಿಗೆ ಅನುಗುಣವಾಗಿ ನಿಮ್ಮ ಹುಡುಗನಿಗೆ ಏನು ಇಷ್ಟವಾಗೋಲ್ಲ, ಆತ ದ್ವೇಷಿಸುವುದು ಏನನ್ನು ಎಂದು ತಿಳಿದಿದ್ದರೆ ಆತನೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವುದು ಸುಲಭವಲ್ಲವೇ?


ಪ್ರತಿ ರಾಶಿಯೂ ಅದನ್ನು ಹೊಂದಿದ ವ್ಯಕ್ತಿಯ ಬಗ್ಗೆ ಕೆಲ ವಿಷಯಗಳನ್ನು ಬಿಟ್ಟುಕೊಡುತ್ತದೆ. ಅವರ ಸ್ವಭಾವದ ಅರಿವಿದ್ದಾಗ ಸಂಬಂಧಗಳನ್ನು ಉತ್ತಮಗೊಳಿಸಿಕೊಳ್ಳುವುದು ಸುಲಭವಾಗುತ್ತದೆ. ಪ್ರತಿ ರಾಶಿಯ ಪುರುಷರಿಗೆ ಏನೆಂದರೆ ಆಗುವುದಿಲ್ಲ, ಅವರು ದ್ವೇಷಿಸುವುದು ಏನನ್ನು ನೋಡೋಣ.

ಮೇಷ(Aries): ಇವರೊಂದಿಗೆ ಜಗಳದಲ್ಲಿ ತೊಡಗುವುದು ಖಂಡಿತಾ ಉತ್ತಮ ಕೆಲಸವಲ್ಲ. ಇವರಿಗೆ ಮೂಗಿನ ತುದಿಯಲ್ಲೇ ಕೋಪ. ಬಹಳ ಸಣ್ಣ ವಿಷಯಗಳಿಗೂ ಇವರ ಮೂಡ್ ಕೆಡುತ್ತದೆ. ಎಲ್ಲ ರಾಶಿಗಳಿಗಿಂತ ಹೆಚ್ಚು ಕೋಪಿಷ್ಠರು, ಜಗಳಗಂಟರು ಹಾಗೂ ತಕ್ಷಣ ಪ್ರತಿಕ್ರಿಯಿಸುವ ಸ್ವಭಾವದವರು ಇವರು. ಹಾಗಾಗಿ, ಇವರೊಂದಿಗೆ ಜಗಳ ಮಾಡಲು ಬರುವವರನ್ನು ಕಂಡರೆ ಇವರಿಗಾಗುವುದಿಲ್ಲ. 

Tap to resize

Latest Videos

undefined

ವೃಷಭ(Taurus): ಇವರಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಅತಿಯಾದ ಪ್ರೀತಿ ಹೊಂದಿರುವವರು ಇವರು. ಹಾಗಾಗಿ ಅವುಗಳನ್ನು ಅವರೇ ಸ್ವತಃ ಕೊಡದೇ ತೆಗೆದುಕೊಳ್ಳುವ ಧೈರ್ಯ ಮಾಡಬೇಡಿ. ಒಂದು ವೇಳೆ ಅವರಿಗೆ ನೀವು ತುಂಬಾ ಇಷ್ಟವೆಂದಿದ್ದರೆ ಅವರೇ ಆ ವಸ್ತುವನ್ನು ನಿಮಗೆ ಕೊಡಬಹುದು. ವಸ್ತುವಿನ ವಿಷಯ ಹೋಗಲಿ, ಇವರಿಗಿಷ್ಟವಾದ ವ್ಯಕ್ತಿ(person)ಯನ್ನು ಅವರಿಂದ ಕಸಿಯುವ ಕೆಲಸ ಮಾಡಿದಿರೋ ನಿಮ್ಮನ್ನು ಜೀವನ ಪರ್ಯಂತ ದ್ವೇಷಿಸುತ್ತಾರೆ ಇವರು. 

ಮಿಥುನ(Gemini): ಇವರದು ಸ್ನೇಹ ಸ್ವಭಾವ. ಮಾತಾಡುವುದು ಇವರಿಗಿಷ್ಟ. ಇವರು ಮಾತಾಡುವಾಗ ಮಧ್ಯೆ ಬಾಯಿ ಹಾಕುವುದು(interrupt) ಇಲ್ಲವೇ ನಿರಾಸಕ್ತಿ ತೋರಿಸಿದರೆ ಇವರಿಗಾಗುವುದಿಲ್ಲ. ಇದರಿಂದ ನೊಂದುಕೊಳ್ಳುತ್ತಾರೆ ಇಲ್ಲವೇ ನಿಮ್ಮ ಬಳಿ ಮುಂದೆ ಮನಸ್ಸು ಬಿಚ್ಚಿ ಮಾತಾಡುವುದೇ ಬಿಡಬಹುದು. 

ಕಟಕ(Cancer): ಇವರು ಸ್ವಲ್ಪ ಅಭದ್ರತೆ ಅನುಭವಿಸುತ್ತಿರುತ್ತಾರೆ. ತಮ್ಮ ಮೇಲಿನ ನೆಗೆಟಿವ್ ಮಾತುಗಳನ್ನು ತೆಗೆದುಕೊಳ್ಳಲಾರರು. ಇವರೊಂದಿಗೆ ಭಾವನಾತ್ಮಕವಾಗಿ ಆಟವಾಡಬೇಡಿ. ಕೌಟುಂಬಿಕ ಮೌಲ್ಯ(family values)ಗಳನ್ನು ಗೌರವಿಸದ ವ್ಯಕ್ತಿಗಳೆಂದರೆ ಇವರಿಗಾಗುವುದಿಲ್ಲ. ಇವರೊಂದಿಗೆ ಮಾತನಾಡುವಾಗ ತುಂಬಾ ಎಚ್ಚರವಾಗಿರಬೇಕು. ಏಕೆಂದರೆ ತುಂಬಾ ಸೂಕ್ಷ್ಮ ಸ್ವಭಾವದವರಾದ ಇವರು ಬೇಗ ಮನಸ್ಸು ನೋಯಿಸಿಕೊಳ್ಳುತ್ತಾರೆ. 

ಸಿಂಹ(Leo): ಇವರಿಗೆ ಎಲ್ಲರ ಮಧ್ಯೆ ಗಮನ ಸೆಳೆದು ನಿಲ್ಲುವುದಿಷ್ಟ. ಇವರು ಉತ್ತಮ ನಾಯಕತ್ವ ಗುಣ ಹೊಂದಿದವರು ಕೂಡಾ. ಇವರ ಎದುರೇ ಇವರ ಕಡೆಗಿನ ಗಮನ(attention)ವನ್ನು ಮತ್ತೊಬ್ಬರು ಕಸಿದು ಅತಿಯಾದ ಅಟೆನ್ಷನ್ ತೆಗೆದುಕೊಳ್ಳುತ್ತಿದ್ದರೆ ಇವರಿಗಾಗುವುದಿಲ್ಲ. 

ಕನ್ಯಾ(Virgo): ಪರ್ಫೆಕ್ಷನಿಸ್ಟ್ ಆಗಿರಲು ಬಯಸುವ ಇವರಿಗೆ ಯಾರಾದರೂ ನೀನು ಮಾಡಿದ್ದು ತಪ್ಪು ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ. ಮತ್ತೊಬ್ಬರು ಯದ್ವಾತದ್ವಾ ಇರುವುದು ಇವರಿಗಿಷ್ಟವಾಗುವುದಿಲ್ಲ. ಇವರೆದುರು ಅಹಂಕಾರ(arrogant) ಪ್ರದರ್ಶಿಸುವ ಧೈರ್ಯ ಮಾಡಿದವರಿಗೆ ಬುದ್ಧಿ ಕಲಿಸದೆ ಬಿಡುವವರಲ್ಲ.

Successful Zodiacs: ಈ ನಾಲ್ಕು ರಾಶಿಯವರು ಹುಟ್ಟಿರೋದೇ ಯಶಸ್ಸು ಕಾಣೋಕೆ!

ತುಲಾ(Libra): ಆಯ್ಕೆಗಳನ್ನು ನೀಡುವುದು, ಸವಾಲುಗಳನ್ನು ಒಡ್ಡುವುದು ಇವರಿಗಿಷ್ಟವಾಗುವುದಿಲ್ಲ. ಯಾವುದಾದರೂ ಒಂದು ಬದಿ ಆಯ್ಕೆ ಮಾಡುವಂತೆ ಒತ್ತಾಯಿಸಿದರೆ ಇವರಿಗೆ ಕೋಪ ಬರುತ್ತದೆ. ವಾದಗಳು, ಅವರೆದುರು ಕೈ ತೋರಿ ಮಾತಾಡುವುದನ್ನು ತಡೆದುಕೊಳ್ಳಲಾರರು. ಎಲ್ಲ ರಾಶಿಯವರಿಗಿಂತ ಹೆಚ್ಚು ಶಾಂತವಾಗಿರುವವರು ಹಾಗೂ ಬಹಳ ಸಹಿಸಿಕೊಳ್ಳುವವರು ಇವರು. ಆದರೆ, ತಾಳ್ಮೆ ತಪ್ಪಿದರೆ ಎಂದೂ ಮರೆಯದ ಏಟು ಕೊಡುತ್ತಾರೆ. 

ವೃಶ್ಚಿಕ(Scorpio): ಇವರ ತಡೆದುಕೊಳ್ಳುವ ಶಕ್ತಿ ಕಡಿಮೆ. ಹಾಗಾಗಿ, ಇವರ ಬಳಿ ಸುಳ್ಳು ಹೇಳುವ ಧೈರ್ಯ ಎಂದಿಗೂ ಮಾಡಬೇಡಿ. ಬೇಜವಾಬ್ದಾರಿ(irresponsible) ಜನರೆಂದರೆ ಇವರಿಗಾಗುವುದಿಲ್ಲ. ಆರಂಭದಿಂದಲೂ ಈ ರಾಶಿಯ ಪುರುಷರೊಂದಿಗೆ ಸಂಪೂರ್ಣ ಪ್ರಾಮಾಣಿಕವಾಗಿದ್ದರೆ ಯಾವಾಗಲೂ ನೀವು ಸೇಫ್ ಆಗಿರಬಹುದು. ಏಕೆಂದರೆ, ಒಮ್ಮೆ ಸುಳ್ಳು ಹೇಳಿ ಸಿಕ್ಕಿ ಬಿದ್ದರೆ ಮತ್ತೆಂದೂ ಇವರು ನಿಮ್ಮನ್ನು ನಂಬಲಾರರು. 

ಧನುಸ್ಸು(Sagittarius): ಯಾವುದೇ ಕೆಲಸವನ್ನು ಮಾಡುವಂತೆ ಒತ್ತಾಯಪಡಿಸುವುದು ಧನು ರಾಶಿಯ ಪುರುಷರಿಗಾಗುವುದಿಲ್ಲ. ಇವರನ್ನು ನಿಯಂತ್ರಿಸಲು ಯತ್ನಿಸುವುದು ಅಥವಾ ನಿಯಮಗಳನ್ನು ಹೇರುವುದನ್ನು ಸಹಿಸಲಾರರು. ಅತಿಯಾಗಿ ಇವರಿಗೆ ಅವಲಂಬಿತರಾದರೆ ಉಸಿರುಗಟ್ಟಿದಂತಾಗಿ ಇವರು ನಿಮ್ಮನ್ನು ಬಿಟ್ಟೇ ಹೋಗಬಹುದು. ಹಾಗಾಗಿ ಅವರ ನಿರ್ಧಾರಗಳಲ್ಲಿ ಮಧ್ಯೆ ಬಾಯಿ ಹಾಕಬೇಡಿ.

Personality Traits: ಈ ರಾಶಿಯವರು ತಮ್ಮ ಭಾವನೆಗಳನ್ನು ಮುಚ್ಚಿಡೋದ್ರಲ್ಲಿ ನಂಬರ್ ಒನ್!

ಮಕರ(Capricorn): ಇವರಿಗೆ ನಟಿಸುವವರೆಂದರೆ ಆಗುವುದಿಲ್ಲ. ನೀವೇನಲ್ಲವೋ ಅದರಂತೆ ತೋರಿಸಿಕೊಳ್ಳಲು ಹೊರಟಿರೆಂದರೆ ನಿಮ್ಮನ್ನು ದೂರವಿಡಲು ಸರ್ವಪ್ರಯತ್ನಗಳನ್ನೂ ಮಾಡುತ್ತಾರೆ ಇವರು. ಕೇರ್ಲೆಸ್ ಆಗಿರೋ, ಕೆಲಸ ಮಾಡದೆ ಉದಾಸೀನವಾಗಿ ಸಮಯ ಕಳೆಯುವವರೆಂದರೆ ಇವರಿಗೆ ಆಗುವುದಿಲ್ಲ. ನೀವು ಏನಾಗಿದ್ದೀರೋ ಹಾಗೆಯೇ ಇದ್ದರೆ ಅವರದನ್ನು ಇಷ್ಟ ಪಡತ್ತಾರೆ. 

ಕುಂಭ(Aquarius): ಬಹಳ ಸ್ವತಂತ್ರ ಮನಸ್ಥಿತಿಯವರಾದ ಇವರು ತಮ್ಮದೇ ನಿಯಮಗಳನ್ನು ಫಾಲೋ ಮಾಡುತ್ತಿರುತ್ತಾರೆ. ಹಾಗಾಗಿ, ಅದನ್ನು ಬದಲಿಸುವ ಪ್ರಯತ್ನ ಎಂದಿಗೂ ಮಾಡಬೇಡಿ. ಇವರು ತಮ್ಮನ್ನು ಹೇಗಿದ್ದಾರೋ ಹಾಗೆಯೇ ಪ್ರೀತಿಸುತ್ತಾರೆ. ಏಕೆಂದರೆ ತುಂಬಾ ವಿಶಿಷ್ಠ ವ್ಯಕ್ತಿತ್ವ ಇವರದು. ಅದನ್ನು ಬದಲಿಸಲು ಹೋಗಿ ಬರ್ಬಾದ್ ಆಗದಿರಿ. 

ಮೀನ(Pisces): ಇವರು ಬಹಳ ಸೂಕ್ಷ್ಮ ಸ್ವಭಾವದವರು(sensitive) ಹಾಗೂ ಭಾವಜೀವಿಗಳು. ಬೇಕೆಂದೇ ನೋಯಿಸುವವರನ್ನು ಕಂಡರೆ ಇವರಿಗಾಗುವುದಿಲ್ಲ. 

click me!