
ಗರುಡ ಪುರಾಣ ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದು. ಇದನ್ನು 18 ಮಹಾಪುರಾಣಗಳಲ್ಲಿ ಒಂದು ಎನ್ನಲಾಗುತ್ತದೆ. ಭಗವಂತ ವಿಷ್ಣು ಮತ್ತು ಗರುಡನ ನಡುವೆ ನಡೆದ ಸಂಭಾಷಣೆಯ ವಿವರಣೆಯು ಗರುಡ ಪುರಾಣದಲ್ಲಿದೆ. ಗರುಡ ಪುರಾಣವು ವಿಷ್ಣು ಪುರಾಣದ ಒಂದು ಭಾಗವಾಗಿದ್ದು, ಗರುಡ ಪುರಾಣದಲ್ಲಿ ನೀವು ಹುಟ್ಟು, ಸಾವಿನ ಜೊತೆ ಸಾವಿನ ನಂತ್ರದ ಜೀವನದ ಬಗ್ಗೆ ವಿವರವಾಗಿ ಹೇಳಲಾಗಿದೆ.
ಒಬ್ಬ ವ್ಯಕ್ತಿ ಜೀವನ (Life) ದಲ್ಲಿ ಹೇಗೆ ಸಂತೋಷ (Happiness) ಪಡೆಯಬೇಕು, ಜೀವನದಲ್ಲಿ ಹೇಗೆ ಯಶಸ್ವಿಯಾಗಬೇಕು ಎಂಬ ಸಂಗತಿಯನ್ನು ಕೂಡ ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣ (Garuda Purana) ದಲ್ಲಿ ಹೇಳಲಾದ ವಿಷಯಗಳನ್ನು ನೀವು ಪಾಲನೆ ಮಾಡಿದ್ರೆ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಗರುಡ ಪುರಾಣದ ಪ್ರಕಾರ ಕೆಲ ಸಂಗತಿಯನ್ನು ಯಾವಾಗ್ಲೂ ಅಪೂರ್ಣಗೊಳಿಸಬಾರದು. ನಮ್ಮ ಜೀವಿತಾವಧಿಯಲ್ಲಿ ನಾವು ಆ ಕೆಲಸವನ್ನು ಪೂರ್ಣಗೊಳಿಸದೆ ಹೋದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಜೀವನ ಸುಖಕರವಾಗಿ ನಡೆಯಬೇಕೆಂದ್ರೆ ನಾವು ಕೆಳಗಿನ ಕೆಲಸವನ್ನು ಅತ್ಯಗತ್ಯವಾಗಿ ಪೂರ್ಣಗೊಳಿಸಬೇಕು ಎನ್ನುತ್ತದೆ ಗರುಡ ಪುರಾಣ. ನಾವಿಂದು ಯಾವ ಕೆಲಸವನ್ನು ಅಪೂರ್ಣವಾಗಿ ಬಿಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.
ಈ ಕೆಲಸವನ್ನು ಅಪೂರ್ಣಗೊಳಿಸಬೇಡಿ :
ಬೆಂಕಿ (Fire) ಕಿಡಿ ಬಿಡಬೇಡಿ : ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದ್ರು ಎನ್ನುವ ಮಾತಿದೆ. ಗರುಡ ಪುರಾಣದಲ್ಲಿಯೂ ಬೆಂಕಿ ಬಗ್ಗೆ ಹೇಳಲಾಗಿದೆ. ಒಂದು ಸಣ್ಣ ಬೆಂಕಿ ಕಿಡಿ ಇಡೀ ಲಂಕೆಯನ್ನೇ ಸುಟ್ಟಿದ್ದು ನಿಮಗೆ ಗೊತ್ತು. ಹಾಗಾಗಿ ಎಲ್ಲಿ ಬೆಂಕಿ ಕಂಡರೂ ಅದನ್ನು ಆರಿಸದೆ ಬಿಡಬೇಡಿ ಎನ್ನುತ್ತದೆ ಗರುಡ ಪುರಾಣ. ಬೆಂಕಿ ಸಂಪೂರ್ಣ ಉರಿದು ಭಸ್ಮವಾಗುವವರೆಗೆ ಬಿಡಬೇಡಿ. ಹಾಗೆಯೇ ಬೆಂಕಿಯನ್ನು ಅರ್ಧಮರ್ಧ ನಂದಿಸಿ ಬಿಡಬೇಡಿ. ಇದು ಎಲ್ಲವನ್ನೂ ಹಾಳು ಮಾಡುತ್ತದೆ. ಸಾವು – ನೋವು ಇದ್ರಿಂದ ಉಂಟಾಗುತ್ತದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಬೆಂಕಿ ಆರಿಸುವ ಕೆಲಸ ಮಾಡಬೇಕು ಎನ್ನುತ್ತದೆ ಗರುಡ ಪುರಾಣ.
Vastu Tips: ಒಂದೇ ಬಾರಿ ಪ್ಲೇಟಿಗೆ ಮೂರು ರೊಟ್ಟಿ ಹಾಕ್ಬಾರ್ದು, ಯಾಕೆ ಗೊತ್ತಾ?
ರೋಗ (Disease) ಸರಿಯಾದ ಔಷಧಿ : ರೋಗ ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಲಘುವಾಗಿ ಪರಿಗಣಿಸಬಾರದು. ಏಕೆಂದರೆ ಕೆಲವೊಮ್ಮೆ ಸಣ್ಣ ರೋಗ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ. ರೋಗ ಪತ್ತೆಯಾದ ತಕ್ಷಣ ಅಥವಾ ದೈಹಿಕ ನೋವು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ. ರೋಗ ಸಂಪೂರ್ಣ ಕಡಿಮೆಯಾಗುವವರೆಗೂ ಚಿಕಿತ್ಸೆ ಪಡೆಯಿರಿ. ಯಾವುದೇ ಕಾರಣಕ್ಕೂ ಔಷಧಿಯನ್ನು ಅರ್ಧಕ್ಕೆ ನಿಲ್ಲಿಸಬೇಡಿ.
ಸಾಲ ಮರುಪಾವತಿ ಮರೆಯಬೇಡಿ : ಸಾಲ ಪಡೆಯುವುದೇ ದೊಡ್ಡ ತಪ್ಪು. ಅನಿವಾರ್ಯವಾದಾಗ ಜನರು ಸಾಲ ಪಡೆಯುತ್ತಾರೆ. ಸಾಲದ ಶೂಲದಲ್ಲಿ ಸಿಕ್ಕಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಸಾಲ ಪಡೆದ ಮೇಲೆ ಅದನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಬೇಕು. ಸರಿಯಾದ ಸಮಯಕ್ಕೆ ಸಾಲವನ್ನು ವಾಪಸ್ ನೀಡದೆ ತಪ್ಪು ಮಾಡಬೇಡಿ ಎನ್ನುತ್ತದೆ ಗರುಡ ಪುರಾಣ. ಸಾಲ ಮರುಪಾವತಿ ದಿನವನ್ನು ಮುಂದೂಡಿದ್ರೆ ಸಾಲಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡಬೇಕಾಗುತ್ತದೆ. ಇದ್ರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸಾಲ ಮರುಪಾವತಿಯನ್ನು ಅರ್ಧಕ್ಕೆ ಬಿಡಬಾರದು. ಸಾಲವನ್ನು ಸಂಪೂರ್ಣ ಪಾವತಿ ಮಾಡ್ಬೇಕು.
Astrology: ಸಹಾನುಭೂತಿಯೇ ಇಲ್ಲದ ರಾಶಿಗಳಿವು!
ಆದಷ್ಟು ಬೇಗ ಶತ್ರುತ್ವ ಕೊನೆಗೊಳಿಸಿ : ಆದಷ್ಟು ಬೇಗ ಶತ್ರುತ್ವವನ್ನು ಕೊನೆಗಾಣಿಸಿ. ಯಾರೊಂದಿಗೂ ದ್ವೇಷ ಸಾಧಿಸಬೇಡಿ. ಯಾವುದೋ ಕಾರಣಕ್ಕೆ ದ್ವೇಷ ಹುಟ್ಟಿಕೊಂಡಿದ್ದರೂ ಅದನ್ನು ಆದಷ್ಟು ಬೇಗ ಮುಗಿಸಿ ಎನ್ನುತ್ತದೆ ಗರುಡ ಪುರಾಣ. ಶತ್ರುಗಳಿಂದ ಅಪಾಯ ನಿಶ್ಚಿತ. ನಿಮ್ಮ ಮೇಲೆ ಹಗೆ ಸಾಧಿಸುವ ಶತ್ರುಗಳು ನಿಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಶತ್ರುತ್ವ ಮುಂದುವರೆಸುವ ತಪ್ಪು ಮಾಡ್ಬೇಡಿ.