Mokshada Ekadashi 2022: ಈ ದಿನ ಈ ಪರಿಹಾರ ಕೆಲಸ ಮಾಡಿದ್ರೆ ಶ್ರೀಹರಿಯ ಒಲುಮೆ ಸಿದ್ಧಿ

By Suvarna NewsFirst Published Dec 1, 2022, 4:59 PM IST
Highlights

ಹಿಂದೂ ಧರ್ಮದಲ್ಲಿ ಮೋಕ್ಷದ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ದಿನದಂದು ಶ್ರೀ ಹರಿವಿಷ್ಣುವಿನ ಪೂಜೆಯೊಂದಿಗೆ ಉಪವಾಸದ ಆಚರಣೆ ಮಾಡಬೇಕು. ಇದಲ್ಲದೆ, ಈ ಜ್ಯೋತಿಷ್ಯ ಕ್ರಮಗಳನ್ನು ಮಾಡುವುದರಿಂದ, ನೀವು ವಿಷ್ಣುವಿನ ಅನುಗ್ರಹ ಪಡೆಯುತ್ತೀರಿ.

ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕವನ್ನು ಮೋಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮಂಗಳಕರವಾಗಿರುತ್ತದೆ. ಈ ದಿನ ಉಪವಾಸ ಆಚರಿಸಿ ಶ್ರೀ ಹರಿಯನ್ನು ಪೂಜಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಎಲ್ಲ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.

ಧರ್ಮಗ್ರಂಥಗಳ ಪ್ರಕಾರ, ಮೋಕ್ಷದ ಏಕಾದಶಿಯ ದಿನದಂದು ಭಗವದ್ಗೀತೆಯು ಭಗವಾನ್ ಶ್ರೀ ಕೃಷ್ಣನ ಬಾಯಿಂದ ಹುಟ್ಟಿತು. ಅದೇ ಸಮಯದಲ್ಲಿ, ಈ ಪವಿತ್ರ ಏಕಾದಶಿಯ ಕಥೆಯನ್ನು ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದನು. ಈ ದಿನದ ಉಪವಾಸವು ಕರ್ಮದ ಬಂಧನದಿಂದ ವ್ಯಕ್ತಿಯನ್ನು ಮುಕ್ತಗೊಳಿಸುತ್ತದೆ. 

ಮತ್ತೊಂದೆಡೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೋಕ್ಷದ ಏಕಾದಶಿಯ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ, ವ್ಯಕ್ತಿಯು ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಸಹ ಪಡೆಯಬಹುದು. ಈ ವರ್ಷದ ಮೋಕ್ಷದ ಏಕಾದಶಿಯು 3ನೇ ಡಿಸೆಂಬರ್ 2022, ಶನಿವಾರದಂದು ಬರುತ್ತದೆ. ಈ ದಿನ ಯಾವ ಕ್ರಮಗಳನ್ನು ಮಾಡಬೇಕೆಂದು ತಿಳಿಸಲಾಗಿದೆ. 

New Year 2023: ಹೊಸ ವರ್ಷ ಮೇಷ ರಾಶಿಗೆ ಕೊಂಚ ಸಿಹಿ, ಕೊಂಚ ಕಹಿ

ಮೋಕ್ಷದ ಏಕಾದಶಿಯಂದು ಈ ವಿಶೇಷ ಪರಿಹಾರವನ್ನು ಮಾಡಿ
ತುಳಸಿ ಪೂಜೆ

ಮೋಕ್ಷದ ಏಕಾದಶಿಯ ದಿನ ಸಂಜೆ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದರೊಂದಿಗೆ 11 ಪರಿಕ್ರಮಗಳನ್ನು ಮಾಡುವಾಗ 'ಓಂ ವಾಸುದೇವಾಯ ನಮಃ' ಮಂತ್ರವನ್ನು ಜಪಿಸಿ. ಆದರೆ ಏಕಾದಶಿಯ ದಿನ ತುಳಸಿ ಗಿಡಕ್ಕೆ ನೀರು ಕೊಡಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ತುಳಸಿ ಮಾತೆ ಈ ದಿನ ನೀರಿಲ್ಲದ ಉಪವಾಸವನ್ನು ಆಚರಿಸುತ್ತಾಳೆ. ಇದಲ್ಲದೆ, ಈ ದಿನ ತುಳಸಿ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ವಿಷ್ಣು ಸಹಸ್ರನಾಮ
ಮೋಕ್ಷದ ಏಕಾದಶಿಯ ದಿನ ವಿಷ್ಣು ಸಹಸ್ರನಾಮ ಪಠಿಸಿ. ಇದನ್ನು ಭಕ್ತಿಯಿಂದ ಮಾಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ.

ಹಳದಿ ಚೆಂಡು ಹೂವು
ಮೋಕ್ಷದ ಏಕಾದಶಿಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವಾಗ ಹಳದಿ ಮಾರಿಗೋಲ್ಡ್ ಹೂಗಳನ್ನು ಅರ್ಪಿಸಿ. ಚೆಂಡು ಹೂವು ಇಲ್ಲದಿದ್ದರೆ, ಬೇರೆ ಯಾವುದೇ ಹಳದಿ ಹೂವನ್ನು ನೀಡಬಹುದು.

2022ರ ಅಂತ್ಯದೊಳಗೆ ಈ 5 ವಸ್ತುಗಳನ್ನು ಮನೆಗೆ ತನ್ನಿ, ಹೊಸ ವರ್ಷದಲ್ಲಿ ಹಣದ ಸಮಸ್ಯೆ ಇರೋಲ್ಲ!

ಅಶ್ವತ್ಥ ಮರಕ್ಕೆ ನೀರು ನೀಡಿ
ಲಕ್ಷ್ಮಿ ದೇವಿಯು ವಿಷ್ಣುವಿನೊಂದಿಗೆ ಅಶ್ವತ್ಥ ಮರದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಏಕಾದಶಿಯ ದಿನ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಶ್ರೀ ಹರಿ ಬೇಗನೆ ಪ್ರಸನ್ನನಾಗುತ್ತಾನೆ.

ಪಾನ್ ಪರಿಹಾರ
ಹಣದ ಲಾಭಕ್ಕಾಗಿ ಮೋಕ್ಷದ ಏಕಾದಶಿಯಂದು ವೀಳ್ಯದೆಲೆಯಿಂದ ಈ ಪರಿಹಾರವನ್ನು ಮಾಡಿದರೆ ಶುಭವಾಗುತ್ತದೆ. ಇದಕ್ಕಾಗಿ ಶುಭ್ರವಾದ ವೀಳ್ಯದೆಲೆಯನ್ನು ತೆಗೆದುಕೊಂಡು ಅದರಲ್ಲಿ ಕುಂಕುಮದಿಂದ ‘ಶ್ರೀ’ ಎಂದು ಬರೆದು ಈ ವೀಳ್ಯದೆಲೆಯನ್ನು ವಿಷ್ಣುವಿನ ಪಾದಕ್ಕೆ ಭಕ್ತಿಯಿಂದ ಅರ್ಪಿಸಿ. ಮರುದಿನ ಅದನ್ನು ಹಣ ಇಟ್ಟಿರುವ ಜಾಗದಲ್ಲಿ ಅಂದರೆ ವಾಲ್ಟ್ ಅಥವಾ ಕಬೋರ್ಡ್ ನಲ್ಲಿ ಇಡಿ. ಹೀಗೆ ಮಾಡುವುದರಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುವುದಿಲ್ಲ.

click me!