Astrological Remedies: ತಡ ವಿವಾಹಕ್ಕೆ ಕೆಲ ಪರಿಹಾರಗಳು

By Suvarna NewsFirst Published Dec 10, 2021, 11:52 AM IST
Highlights

ಮನೆಯಲ್ಲಿ ಪ್ರಾಯಕ್ಕೆ ಬಂದ ಅವಿವಾಹಿತರಿಗೆ ಕಂಕಣಬಲ ಕೂಡಿ ಬರುತ್ತಿಲ್ಲವೆಂದರೆ ಅದಕ್ಕೆ ಗ್ರಹಗತಿಗಳು, ದೋಷಗಳು ಕಾರಣವಾಗಿರುತ್ತವೆ. ಈ ದೋಷಗಳ ನಿವಾರಣೆಗೆ ಜ್ಯೋತಿಷ್ಯದಲ್ಲಿ ಕೆಲ ಪರಿಹಾರಗಳಿವೆ.

ಮನೆ ಮಕ್ಕಳ ವಿವಾಹ(Marriage)ವು ಪ್ರಾಯ ಮೀರಿದರೂ ಆಗುತ್ತಿಲ್ಲ ಎಂದರೆ ಯಾರಿಗಾದರೂ ಆತಂಕವೇ. ಯಾವ ವಯಸ್ಸಿನಲ್ಲಿ ಏನಾಗಬೇಕೋ ಅದಾದರೇ ಚೆನ್ನ. ಆದರೆ, ಕೆಲವೊಮ್ಮೆ ಪ್ರಾಯ ದಾಟುತ್ತಿದ್ದರೂ ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವುದಿಲ್ಲ. ಇದಕ್ಕೆ ಮೇಲ್ನೋಟಕ್ಕೆ ಉದ್ಯೋಗ, ಗುರಿಸಾಧನೆ, ಇಷ್ಟಕಷ್ಟ ಮತ್ತಿತರೆ ಯಾವುದೇ ಕಾರಣಗಳು ಕಂಡು ಬಂದರೂ, ಗ್ರಹಗತಿಗಳೇ ಹಿಂದಿನಿಂದ ಮನಸ್ಸು ಹಾಗೂ ಕೃತಿಯನ್ನು ನಿಗ್ರಹಿಸುತ್ತಿರುತ್ತವೆ. ವಿವಾಹ ತಡವಾಗುತ್ತಿರುವುದಕ್ಕೆ ಜ್ಯೋತಿಷ್ಯ(astrology)ದಲ್ಲಿ ಹಲವು ಕಾರಣಗಳು ಸಿಗಬಹುದು. ಸಧ್ಯಕ್ಕೆ, ಹೀಗೆ ತಡವಾದ ವಿವಾಹಕ್ಕೆ ಏನೆಲ್ಲ ಪರಿಹಾರ(remedies)ಗಳನ್ನು ಜ್ಯೋತಿಷ್ಯ ನೀಡುತ್ತದೆ ಎಂಬುದನ್ನು ಕಂಡುಕೊಳ್ಳೋಣ.

  • ಹುಡುಗಿಯ ಮದುವೆ ತಡವಾಗುತ್ತಿದ್ದರೆ, ಆಕೆ 16 ಸೋಮವಾರ(Monday)ಗಳ ಕಾಲ ಉಪವಾಸ ಆಚರಿಸಿ, ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ನಂತರ ಭಕ್ತಿಯಿಂದ ತನ್ನ ವಿವಾಹ ಬೇಗ ಆಗುವಂತೆ ಕೇಳಿಕೊಳ್ಳಬೇಕು. 
     
  • ವಿವಾಹ ವಯಸ್ಸಿನ ಹೆಣ್ಣುಮಕ್ಕಳು ಈ ಶ್ಲೋಕವನ್ನು ಪ್ರತಿ ದಿನ ಹೇಳಿಕೊಳ್ಳಬೇಕು.
    'ಓಂ ಕಾತ್ಯಾಯಿನಿ ಮಹಾಭಾಗೇ ಮಹಾಯೋಗಿನಿ ಆದೀಶ್ವರೀಂ ನಂದ ಗೋಪ ಸುತಂ ದೇವಿ ಪತಿಯಂ ಮೇ ಕುರುತೇ ನಮಃ'
     
  • ಗೌರಿ ಶಂಕರ ಮಂತ್ರವನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದು ಕೂಡಾ ಕಂಕಣಬಲ ಹೆಚ್ಚಿಸುತ್ತದೆ. 
    'ಹೇ ಗೌರಿಶಂಕರ ಅರ್ಧಾಂಗಿನೀ ಯಥಾ ತವಂ ಶಂಕರ ಪ್ರಿಯ, ತಥಾ ಮ ಕುರು ಕಲ್ಯಾಣಿ ಕಂಟ ಕಂಟಮ್ ಸುದುರ್ ಲಾಭಂ'
     
  • ವಿವಾಹಾಕಾಂಕ್ಷಿ ಯುವತಿಯು ಪ್ರತಿದಿನ ಹಸು(cow)ವಿಗೆ ಹುಲ್ಲು(grass) ಅಥವಾ ಹಸಿರು ಸೊಪ್ಪುಗಳನ್ನು ತಿನ್ನಿಸಬೇಕು. 

    Marriage Fear ಈ ನಾಲ್ಕು ರಾಶಿಯವರಿಗೆ ಮದುವೆ ಅಂದ್ರೇನೆ ಭಯ..
     
  • ಒಳ್ಳೆಯ ಮುಹೂರ್ತದಲ್ಲಿ ಬಾಳೆಮರ(banana tree)ದ ಬೇರನ್ನು ತಂದು ವಿವಾಹಾಪೇಕ್ಷಿತರು ಪೂಜಿಸಬೇಕು. ನಂತರ ಹಳದಿ(yellow) ಬಣ್ಣದ ಬಟ್ಟೆಯಲ್ಲಿ ಅದನ್ನು ಸುತ್ತಿ ತೆಗೆದಿಡಬೇಕು. 
     
  • ಯುವತಿಯ ವಿವಾಹ ತಡವಾಗುತ್ತಿದ್ದರೆ, ತನ್ನ ಸರದಲ್ಲಿ ಆ್ಯಂಬರ್ ಜೆಮ್‌ಸ್ಟೋನ್‌(Amber gemstone)ನಿಂದ ಮಾಡಿದ ಶಿವಲಿಂಗವನ್ನು ಆಕೆ ಧರಿಸಬೇಕು. ಈ ಸರ ಎಲ್ಲರಿಗೆ ಕಾಣುವಂತೆ ಧರಿಸಬೇಕು. ಇದು ಆಕೆಯ ಸಂಗಾತಿಯನ್ನು ಅವಳ ಬಳಿಗೆ ಆಕರ್ಷಿಸುತ್ತದೆ.
     
  • ರಾಹು(Rahu) ದೋಷದಿಂದ ವಿವಾಹ ತಡವಾಗುತ್ತಿದ್ದರೆ ದುರ್ಗೆಯ ಆರಾಧನೆಯನ್ನು ಮನಸ್ಸಿನಿಂದ ಮಾಡಿ. ದುರ್ಗೆಯು ದೋಷ ಪರಿಹಾರ ಮಾಡುತ್ತಾಳೆ. 

    Zodiac Signs : ಈ ಎರಡು ರಾಶಿಗಳು ಎಂದಿಗೂ ಒಂದಾಗಲು ಸಾಧ್ಯವಿಲ್ಲ
     
  • ನವಗ್ರಹ ದೇವಾಲಯಕ್ಕೆ ಪದೇ ಪದೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದಲೂ ಗ್ರಹ ಸಂಬಂಧಿ ದೋಷಗಳನ್ನು ಕಳೆದುಕೊಳ್ಳಬಹುದು. 
     
  • ತುಳಸಿ ವಿವಾಹ ನಡೆಸುವುದರಿಂದ ಅವಿವಾಹಿತರಿಗೆ ಶೀಘ್ರ ಕಂಕಣಬಲ ಕೂಡಿ ಬರುತ್ತದೆ. 
     
  • 25-30 ವರ್ಷ ವಯಸ್ಸಿನ ಅವಿವಾಹಿತರು ಗುರುವಾರ(Thursday) ಹಳದಿ ಬಣ್ಣದ ದಿರಿಸನ್ನೇ ಧರಿಸಬೇಕು. ಪ್ರತಿ ಸೋಮವಾರ(Monday) ಬೆಳಗ್ಗೆ ಶಿವಲಿಂಗಕ್ಕೆ ಜಲ ಹಾಗೂ ಕ್ಷೀರಾಭಿಷೇಕ ಮಾಡುತ್ತಾ 'ಓಂ ಪಾರ್ವತಿಪತಯೇ ನಮಃ' ಎಂದು 108 ಬಾರಿ ಹೇಳಬೇಕು. ಇದನ್ನು ಕನಿಷ್ಠ 9 ಗುರುವಾರಗಳಾದರೂ ಮಾಡಬೇಕು. 
     
  • 30-35 ವರ್ಷಗ ಅವಿವಾಹಿತರು ತಮ್ಮ ಮನೆಯ ಮುಂದೆ ಬಾಳೆಗಿಡವನ್ನು ನೆಡಬೇಕು. ಗುರುವಾರದಂದು ಉಪ್ಪಿನ ಸೇವನೆ ತ್ಯಜಿಸಿ, 'ಓಂ ಬ್ರುಂ ಬೃಹಸ್ಪತಯೇ ನಮಃ' ಎಂದು ವಿಷ್ಣುವಿನ ವಿಗ್ರಹದೆದುರು ಕುಳಿತು ಕನಿಷ್ಠ ಮೂರು ಬಾರಿಯಾದರೂ ಹೇಳಬೇಕು. 
     
  • ಹೆಣ್ಣು ವಿವಾಹ ತಡ ತಡೆಯಲು 43 ದಿನಗಳ ಕಾಲ ಅಶ್ವತ್ಥ ವೃಕ್ಷ(peepal tree)ಕ್ಕೆ ನೀರೆರೆದು, ತುಪ್ಪದ ದೀಪ ಹಚ್ಚಬೇಕು. ಮುಟ್ಟಿನ ದಿನ ಹಾಗೂ ಭಾನುವಾರದಂದು ಈ ಕಾರ್ಯ ಮಾಡಬಾರದು. 
     
  • ವಿವಾಹ ತಡವಾಗುತ್ತಿರುವ ಹೆಣ್ಣು ಗಂಡುಗಳು ತಮ್ಮ ಸ್ನಾನದ ನೀರಿಗೆ ಸ್ವಲ್ಪ ಅರಿಶಿನ(turmeric) ಸೇರಿಸಿ ಹೊಯ್ದುಕೊಳ್ಳಬೇಕು. ಬಳಿಕ ಹಣೆಗೆ ಕೇಸರಿಯುಕ್ತ ತಿಲಕವನ್ನು ಇಟ್ಟುಕೊಳ್ಳಬೇಕು. 
click me!