ಉದ್ಯೋಗದ ಸ್ಥಳದಲ್ಲಿ ಎಲ್ಲರಿಗೂ ಈ ರಾಶಿಯವರೆಂದರೆ ಅಚ್ಚುಮೆಚ್ಚು!

By Suvarna News  |  First Published Nov 23, 2022, 5:15 PM IST

ಉದ್ಯೋಗದ ಸ್ಥಳದಲ್ಲಿ ಎಲ್ಲರೂ ಮೆಚ್ಚುವಂತೆ ವರ್ತನೆ ಹೊಂದಿರುವುದು ಸುಲಭವಲ್ಲ. ಆದರೆ, ಕೆಲವು ರಾಶಿಗಳ ಜನರಿಗೆ ಇದು ಸುಲಭದ ಕೆಲಸವಾಗಿರುತ್ತದೆ. ಏಕೆಂದರೆ, ಇವರು ಸಹೋದ್ಯೋಗಿಗಳಿಗಾಗಿ ತಾವು ರಿಸ್ಕ್ ತೆಗೆದುಕೊಳ್ಳುತ್ತಾರೆ, ಅವರನ್ನು ಮೆಚ್ಚಿಸಲು ಯತ್ನಿಸುತ್ತಾರೆ.
 


ಉದ್ಯೋಗದ ಸ್ಥಳವೆಂದ ಮೇಲೆ ಹತ್ತಾರು ಜನ ಒಟ್ಟಿಗೆ ಕೆಲಸ ಮಾಡುತ್ತಾರೆ. ಅದೊಂಥರ ಎರಡನೇ ಮನೆಯಂತಾಗುತ್ತದೆ. ಬಹಳಷ್ಟು ವರ್ಷ ಒಂದೇ ಆಫೀಸ್ ಅಥವಾ ಸ್ಥಳದಲ್ಲಿ ಕೆಲಸ ಮಾಡಿದಾಗ ಹೆಚ್ಚು ಆಪ್ತತೆ ಮೂಡುವುದು ಸಹಜ. ಜತೆಯಲ್ಲಿ ಕೆಲಸ ಮಾಡುವವರ ಬಗ್ಗೆಯೂ ಪ್ರೀತಿ-ಆದರಗಳು ಇರುವುದು ಸಾಮಾನ್ಯ. ಸಹೋದ್ಯೋಗಿಗಳ ನಡುವೆ ಪ್ರತಿದಿನ ಒಡನಾಟವಾಗುತ್ತಿರುವ ಸಮಯದಲ್ಲಿ ಹಲವು ಜನರಿಗೆ ಸಹೋದ್ಯೋಗಿಗಳಿಗಾಗಿ, ಅವರ ಖುಷಿಗಾಗಿ ಏನಾದರೂ ಮಾಡಬೇಕೆನ್ನಿಸುತ್ತದೆ. ತಮ್ಮ ಇಷ್ಟಾನಿಷ್ಟಗಳನ್ನು ಮರೆತು ಅವರ ನೆರವಿಗೆ ಧಾವಿಸುತ್ತಾರೆ. ತಮ್ಮ ನಡೆನುಡಿಗಳಿಂದ ಸಹೋದ್ಯೋಗಿಗಳನ್ನು ಇಂಪ್ರೆಸ್ ಮಾಡಲು ಯತ್ನಿಸುತ್ತಾರೆ. ಬಹಳಷ್ಟು ಜನ ಇದರಲ್ಲಿ ಹೆಚ್ಚಿನ ಸ್ವಾರ್ಥವನ್ನೇನೂ ಹೊಂದಿರುವುದಿಲ್ಲ. ಆದರೆ, ಈ ಮೂಲಕ ಅವರು ಉದ್ಯೋಗದ ಸ್ಥಳದಲ್ಲಿ ಎಲ್ಲರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಲು ಯತ್ನಿಸುತ್ತಾರೆ. ಇನ್ನೊಬ್ಬರಿಗೆ ಸಹಾಯ ಮಾಡುತ್ತ ತಮ್ಮ ಬಗ್ಗೆ ಹಾಗೂ ತಮ್ಮ ಕೆಲಸದ ಹೆಮ್ಮೆ ಪಡುತ್ತಾರೆ. ಸಹೋದ್ಯೋಗಿಗಳ ಪ್ರೀತಿ, ಗೌರವ ಹಾಗೂ ಬೆಂಬಲ ಪಡೆಯಲು ನಿರಂತರವಾಗಿ ಅವರ ಬಗ್ಗೆ ಕಾಳಜಿ ವಹಿಸುತ್ತಾರೆ. ತಮ್ಮ ಅಗತ್ಯಗಳಿಗೆ ಅವರು ಹೆಚ್ಚು ಬೆಲೆ ನೀಡುವುದಿಲ್ಲ. ಇತರರನ್ನು ಇಂಪ್ರೆಸ್ ಮಾಡಲು ಯಾವ ಮಟ್ಟಕ್ಕೂ ಪ್ರಯತ್ನ ನಡೆಸುತ್ತಾರೆ. ಇಂಥವರನ್ನು ಪೀಪಲ್ ಪ್ಲೀಸರ್ ಎನ್ನುತ್ತಾರೆ. ಕೆಲವು ರಾಶಿಗಳ ಜನ ತಮ್ಮ ಉದ್ಯೋಗದ ಸ್ಥಳದಲ್ಲಿ ಈ ರೀತಿ ವರ್ತಿಸುವುದು ಕಂಡುಬರುತ್ತದೆ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ (Zodiac Sign) ಸಹೋದ್ಯೋಗಿಗಳು (Colleagues) ನಿಮಗಿದ್ದರೆ ನೀವು ಅದೃಷ್ಟವಂತರು ಎನ್ನಬಹುದು. ಏಕೆಂದರೆ, ಇವರು ತಮ್ಮ ಸಹೋದ್ಯೋಗಿಗಳ ಬಗ್ಗೆ ನಿಜವಾಗಿಯೂ ಕಾಳಜಿ (Care) ಹೊಂದಿರುತ್ತಾರೆ. ಸಹೋದ್ಯೋಗಿಗಳ ಅಭಿವೃದ್ಧಿಯ ಕುರಿತು ಆಳವಾದ ಭಾವನೆ, ಅವರ ಕೆಲಸದ ಬಗ್ಗೆ ಗರಿಷ್ಠ ಮಟ್ಟದ ತೃಪ್ತಿ (Satisfaction) ಹೊಂದಿರುತ್ತಾರೆ. ತಮ್ಮ ಈ ಭಾವನೆಯಿಂದ ಜನರ ಜೀವನದಲ್ಲಿ ಸಕಾರಾತ್ಮಕ (Positive) ಬದಲಾವಣೆಯಾಗುವುದನ್ನು ಗುರುತಿಸುತ್ತಾರೆ. ಉದ್ಯೋಗದಲ್ಲಿ (Profession) ಸುಸ್ತಾದರೆ, ಜೀವನದಲ್ಲಿ ಬೇಸರವಾದರೆ ಇವರು ನಿಮ್ಮ ಸಹಾಯಕ್ಕೆ ಧಾವಿಸುತ್ತಾರೆ.

Tap to resize

Latest Videos

Pisces ಪುರುಷ , Virgo ಮಹಿಳೆ ನಡುವಿನ ಹೊಂದಾಣಿಕೆ ಹೇಗಿದೆ ಗೊತ್ತಾ!?

•    ಸಿಂಹ (Leo)
ಸಿಂಹ ರಾಶಿಗಳ ಜನ ಅಹಂಕಾರಿಗಳು (Arrogant) ಎಂದೆನಿಸಿದರೂ ಅದು ಸತ್ಯವಲ್ಲ. ಈಗೋ (Ego) ಹೊಂದಿರುವುದಿಲ್ಲ. ನಡೆನುಡಿಯಲ್ಲಿ ಕೃತ್ರಿಮ (Artificial) ಇರುವುದಿಲ್ಲ. ತಮ್ಮ ಸ್ವಂತಿಕೆ ಹಾಗೂ ಚಟುವಟಿಕೆಯ ಬಗ್ಗೆ ಸಹೋದ್ಯೋಗಿಗಳು ಮೆಚ್ಚಲಿ, ಶಹಬ್ಬಾಸ್ ಎನ್ನಲಿ, ಮೆಚ್ಚುಗೆಯ ಮಾತುಗಳನ್ನಾಡಲಿ ಎಂದು ಬಯಸುತ್ತಾರೆ. ಸಹೋದ್ಯೋಗಿಗಳ ಬಗ್ಗೆ ಕಾಳಜಿ ಹೊಂದಿದ್ದು, ಅವರ ಕಷ್ಟಗಳಿಗೆ ನಿಲ್ಲುತ್ತಾರೆ. ಅವರಿಂದ ಕೆಲಸ ತೆಗೆಯುವುದು ಹೇಗೆಂಬ ಚುರುಕುತನವನ್ನೂ ಹೊಂದಿರುತ್ತಾರೆ. ಹಾಗೆಯೇ, ಅವರಿಂದ ಮೆಚ್ಚುಗೆ ಗಳಿಸುವುದು ಹೇಗೆಂಬುದನ್ನೂ ತಿಳಿದಿರುತ್ತಾರೆ. ಇದಕ್ಕಾಗಿ ಇವರು ತಮ್ಮ ಅಸ್ಖಲಿತ ಜಾಣ್ಮೆಯ ಮಾತುಗಳ (Communication Skills) ನೆರವನ್ನು ಪಡೆದುಕೊಳ್ಳುತ್ತಾರೆ. 

•    ಕನ್ಯಾ (Virgo)
ಈ ರಾಶಿಯ ಜನ ಅತ್ಯುತ್ತಮ ತರ್ಕಬದ್ಧ (Rational) ಗುಣ ಹೊಂದಿರುತ್ತಾರೆ.  ಕೆಲಸದ ಪ್ರತಿ ಸೂಕ್ಷ್ಮ ಮಾಹಿತಿ ಅರಿತಿರುವುದರಿಂದ ಸಹೋದ್ಯೋಗಿಗಳು ಇವರಿಂದಾಗಿ ನಿರಾಳವಾಗಿರುತ್ತಾರೆ. ಯಾವುದೇ ಮಾಹಿತಿ (Information) ಬೇಕಿದ್ದರೂ ಇವರನ್ನು ಕೇಳುತ್ತಾರೆ. ಯಾವುದೇ ಕೆಲಸದಲ್ಲಿ ಇವರು ಪರಿಪೂರ್ಣತೆ (Perfection) ಬಯಸುತ್ತಾರೆ. ಹೀಗಾಗಿ, ಅದನ್ನು ಮೂಡಿಸಲು ಸಹೋದ್ಯೋಗಿಗಳಿಗೆ ಸಹಕಾರ ನೀಡುತ್ತಾರೆ. ಅವರಿಂದ “ಬೆಸ್ಟ್’ ಎನಿಸುವ ಕೆಲಸ ಮಾಡಿಸುತ್ತಾರೆ. ತಮಗೆ ಎಷ್ಟು ನಷ್ಟವಾದರೂ ಸರಿ, ಸಹೋದ್ಯೋಗಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡುತ್ತಾರೆ. ಅವರು ಖುಷಿಯಾಗಿರಬೇಕೆಂದು ಬಯಸುತ್ತಾರೆ.

Zodiac Sign: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

•    ತುಲಾ (Libra)
ತುಲಾ ರಾಶಿಯ ಜನ ಇತರರಿಗೆ ನೋವುಂಟು (Pain) ಮಾಡಲು ಬಯಸುವುದಿಲ್ಲ. ಹೀಗಾಗಿ, ಇವರು ಪಡೆಯುವುದಕ್ಕಿಂತ (Take) ಹೆಚ್ಚು ನೀಡುವುದೇ (Give) ಅಧಿಕ. ಯಾವುದೇ ಸಹಾಯ (Help), ಕೆಲಸ ಕೇಳಿದರೂ ಇಲ್ಲವೆನ್ನಲು ಇವರಿಂದ ಸಾಧ್ಯವಿಲ್ಲ. ಇವರ ಬಳಿ ಏನೇ ಕೇಳಿ, “ಖಂಡಿತ, ಮಾಡೋಣ’ ಎನ್ನುವ ಉತ್ತರ ಬರುವುದು ಗ್ಯಾರೆಂಟಿ. ಸಹೋದ್ಯೋಗಿಗಳಿಗೆ ಅಪಾರ ನೆರವು (Assist) ನೀಡುತ್ತಾರೆ.

click me!