‘ಅಪ್ಪ ಐ ಲವ್ ಯು ಪಾ’: ಯಾವ ರಾಶಿಯ ತಂದೆ-ಮಕ್ಕಳ ನಡುವೆ ಹೊಂದಾಣಿಕೆ ಇರುತ್ತೆ?

By Sushma Hegde  |  First Published Jun 26, 2023, 5:17 PM IST

ತಂದೆ-ಮಕ್ಕಳ ಬಾಂಧವ್ಯವು ಒಂದು ವಿಶಿಷ್ಟವಾದ ಮತ್ತು ಅಮೂಲ್ಯವಾದ ಸಂಬಂಧ. ಅದು ಮಗುವಿನ ಜೀವನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತಂದೆ-ಮಕ್ಕಳ ನಡುವೆ ಹೊಂದಾಣಿಕೆ ಇರುವುದು ತುಂಬಾ ಮುಖ್ಯ, ಇದಕ್ಕೆ ರಾಶಿಚಕ್ರವೂ ಕಾರಣ.


ತಂದೆಯ ತ್ಯಾಗಕ್ಕೆ ಯಾವುದು ಸರಿಸಾಟಿಯಿಲ್ಲ. ತಂದೆ-ಮಕ್ಕಳ ಬಾಂಧವ್ಯವು ಒಂದು ವಿಶಿಷ್ಟವಾದ ಮತ್ತು ಅಮೂಲ್ಯವಾದ ಸಂಬಂಧ. ಅದು ಮಗುವಿನ ಜೀವನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತಂದೆ-ಮಕ್ಕಳ ನಡುವೆ ಹೊಂದಾಣಿಕೆ ಇರುವುದು ತುಂಬಾ ಮುಖ್ಯ, ಇದಕ್ಕೆ ರಾಶಿಚಕ್ರ (Zodiac) ವೂ ಕಾರಣ. ಈ ಕುರಿತು ಇಲ್ಲಿದೆ ಮಾಹಿತಿ.

ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯ ತುಂಬಾ ಸುಂದರ. ಹುಟ್ಟಿದಾಗಿನಿಂದ ಹಿಡಿದು ಬೆಳೆಯುವವರೆಗೆ ಮಕ್ಕಳನ್ನು ತಂದೆ (father) ಯ  ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಾನೆ. ನಮ್ಮ ಜೀವನದಲ್ಲಿ ತಂದೆಯ ಪಾತ್ರ ದೊಡ್ದು. ರಾಶಿಚಕ್ರದ ಚಿಹ್ನೆಗಳ ಹೊಂದಾಣಿಕೆಯು ತಂದೆ-ಮಕ್ಕಳ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ.  ಈ ಕುರಿತು ಇಲ್ಲಿದೆ ಡಿಟೇಲ್ಸ್.

Tap to resize

Latest Videos

 

ಮೇಷ ರಾಶಿ

ಮೇಷ ರಾಶಿ (Aries) ಯ ತಂದೆ ಉತ್ಸಾಹಭರಿತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಸಿಂಹ ಅಥವಾ ಧನು ರಾಶಿಯ ಮಕ್ಕಳೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತಾರೆ. ರೋಮಾಂಚಕ ಅನುಭವಗಳನ್ನು ಹಂಚಿಕೊಳ್ಳುವ ರೋಮಾಂಚಕ ಮತ್ತು ಕ್ರಿಯಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಾರೆ.

 

ವೃಷಭ ರಾಶಿ 

ವೃಷಭ ರಾಶಿ (Taurus) ಯವರು ವಿಶ್ವಾಸಾರ್ಹತೆಗೆ ಹೆಸರಾಗಿದ್ದು, ಶಾಂತ ಸ್ವಭಾದವರು ಆಗಿದ್ದಾರೆ. ಕನ್ಯಾರಾಶಿ ಅಥವಾ ಮಕರ ರಾಶಿಯ ಮಕ್ಕಳೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ತಂದೆಯು ಮಗುವಿನ ಸಂಬಂಧದಲ್ಲಿ ಭದ್ರತೆಯ ಭಾವ ಬೆಳೆಸುತ್ತಾರೆ.

 

ಮಿಥುನ ರಾಶಿ

ಮಿಥುನ ರಾಶಿ (Gemini) ಯ ತಂದೆಯು ಸಾಮಾಜಿಕತೆ ಕಾಳಜಿಯುಳ್ಳ ವ್ಯಕ್ತಿ. ತುಲಾ ಅಥವಾ ಕುಂಭ ರಾಶಿಯ ಮಕ್ಕಳು ಇವರಿಗೆ ಅತ್ಯುತ್ತಮ ಹೊಂದಾಣಿಕೆ ಆಗುತ್ತಾರೆ. ಮುಕ್ತ ಸಂವಹನ ಹಾಗೂ ಪರಸ್ಪರ ಪ್ರೀತಿ ಇರುತ್ತದೆ.

ಅಡುಗೆ ಮನೆಯಲ್ಲಿ ‘ಈ ‘ವಸ್ತುಗಳನ್ನು ಇಟ್ಟರೆ ನಿಮಗೆ ಮುಂದೆ ಅನ್ನ ಸಿಗಲ್ಲ..!

 

ಕಟಕ ರಾಶಿ

ಕಟಕ ರಾಶಿ (Cancer) ಯ ತಂದೆಯು ಮತ್ತು ಭಾವನಾತ್ಮಕ ವ್ಯಕ್ತಿ. ವೃಶ್ಚಿಕ ಅಥವಾ ಮೀನ ರಾಶಿಯ ಮಕ್ಕಳು ಅವರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಇಬ್ಬರ ನಡುವೆ ಭಾವನಾತ್ಮಕ ಸಂಬಂಧ, ಸಹಾನುಭೂತಿ ಇರಲಿದೆ.

 

ಸಿಂಹ ರಾಶಿ

ಸಿಂಹ ರಾಶಿ (Leo) ಯ ತಂದೆಯು ನಾಯಕತ್ವದ ಗುಣ ಹೊಂದಿದ್ದಾರೆ. ತಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇವರು ಮೇಷ ಅಥವಾ ಧನು ರಾಶಿ ಮಕ್ಕಳೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತಾರೆ.

 

ಕನ್ಯಾ ರಾಶಿ

ಕನ್ಯಾರಾಶಿ (Virgo)  ತಂದೆಯು ವೃಷಭ ಅಥವಾ ಮಕರ ರಾಶಿಯ ಮಕ್ಕಳೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಮಕ್ಕಳಿಗೆ ಶಿಸ್ತಿನ ಪಾಠ ಮಾಡುತ್ತಾರೆ.

 

ತುಲಾ ರಾಶಿ

ತುಲಾ ರಾಶಿ (Libra) ಯ ತಂದೆಯು ನ್ಯಾಯ, ರಾಜತಾಂತ್ರಿಕತೆ ಮತ್ತು ಸಾಮರಸ್ಯವನ್ನು ಗೌರವಿಸುತ್ತಾರೆ. ಮಿಥುನ ಅಥವಾ ಕುಂಭ ರಾಶಿಯ ಮಕ್ಕಳೊಂದಿಗೆ ಅತ್ಯುತ್ತಮವಾಗಿ ಹೊಂದಾಣಿಕೆ ಆಗುತ್ತಾರೆ.

ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಬೇಡಿ; ನಿಮ್ಮ ದಿನ ಹಾಳಾಗುತ್ತೆ ಹುಷಾರ್..!

 

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ (Scorpio) ಯ ತಂದೆಯು ಮಕ್ಕಳ ರಕ್ಷಣೆಗೆ ಆದ್ಯತೆ ನೀಡುತ್ತಾರೆ. ಕಟಕ ಅಥವಾ ಮೀನ ರಾಶಿಯ ಮಕ್ಕಳು ಅವರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಉತ್ತಮ ಭಾವನಾತ್ಮಕ ಸಂಬಂಧ ನಂಬಿಕೆ ಬೆಳೆಸುತ್ತಾರೆ.

 

ಧನು ರಾಶಿ 

ಧನು ರಾಶಿ (Sagittarius) ಯ ತಂದೆ ಮುಕ್ತ ಮನೋಭಾವವನ್ನು ಹೊಂದಿರುತ್ತಾರೆ. ಇವರು ಮೇಷ ಅಥವಾ ಸಿಂಹ ರಾಶಿಯ ಮಕ್ಕಳೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತಾರೆ. 

 

ಮಕರ ರಾಶಿ

ಮಕರ ರಾಶಿ (Capricorn) ಯ ತಂದೆಯು ಶಿಸ್ತುಬದ್ಧರು ಮತ್ತು ದೃಢನಿಶ್ಚಯವುಳ್ಳವರು. ವೃಷಭ ಅಥವಾ ಕನ್ಯಾರಾಶಿಯ ಮಕ್ಕಳು ಅವರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ.

 

ಕುಂಭ ರಾಶಿ

ಕುಂಭ ರಾಶಿ (Aquarius) ಯ ತಂದೆಯು ಪ್ರಗತಿಪರ ಚಿಂತನೆಯನ್ನು ಸ್ವೀಕರಿಸುತ್ತಾರೆ. ಅವರು ತಮ್ಮ ಮಕ್ಕಳನ್ನು ಪೆಟ್ಟಿಗೆಯ ಹೊರಗೆ ಯೋಚಿಸಲು ಪ್ರೋತ್ಸಾಹಿಸುತ್ತಾರೆ. ಮಿಥುನಾ ಅಥವಾ ತುಲಾ ಏರಾಶಿಯ ಮಕ್ಕಳೊಂದಿಗೆ ಅತ್ಯುತ್ತಮವಾಗಿ ಹೊಂದಾಣಿಕೆ ಆಗುತ್ತಾರೆ.

 

ಮೀನ ರಾಶಿ

ಮೀನ ರಾಶಿ (Pisces) ಯ ತಂದೆಯು ಸೂಕ್ಷ್ಮ ಮತ್ತು ಸಹಾನುಭೂತಿಯುಳ್ಳವರು. ಕಟಕ ಅಥವಾ ವೃಶ್ಚಿಕ ರಾಶಿಯ ಮಕ್ಕಳು ಅವರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಸಹಾನುಭೂತಿ, ಸೃಜನಶೀಲತೆ ವಾತಾವರಣವನ್ನು ಬೆಳೆಸುತ್ತಾರೆ.

click me!