ಈ ನಾಲ್ಕು ರಾಶಿಯವರದ್ದು ಆಕರ್ಷಕ ವ್ಯಕ್ತಿತ್ವ.... ನಿಮ್ಮ-ನಿಮ್ಮವರ ರಾಶಿ ಇದರಲ್ಲಿದೆಯಾ?

By Suvarna News  |  First Published May 27, 2021, 12:54 PM IST

ರಾಶಿ ಚಕ್ರಗಳು, ಜಾತಕಗಳು, ಹುಟ್ಟಿನ ಘಳಿಗೆಗಳು ಕೇವಲ ಡೇಟ್ ಆಫ್ ಬರ್ತ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇವುಗಳು ಆ ವ್ಯಕ್ತಿಯ ಅದೃಷ್ಟ, ದುರಾದೃಷ್ಟ, ಶಿಕ್ಷಣ, ವಿವಾಹ ಸಂಬಂಧ, ಐಶ್ವರ್ಯ, ಆರೋಗ್ಯ, ಆಯುಷ್ಯ ಸೇರಿದಂತೆ ಆಕರ್ಷಕ ವ್ಯಕ್ತಿತ್ವನ್ನೂ ತಿಳಿಸಿಕೊಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳಿದ್ದು, ಕೆಲವು ರಾಶಿಯವರ ವ್ಯಕ್ತಿತ್ವ ಹೆಚ್ಚು ಆಕರ್ಷಕವಾಗಿರುತ್ತದೆ. ಯಾವ ರಾಶಿಗಳು ಅವು ಎಂಬುದರ ಬಗ್ಗೆ ನೋಡೋಣ...


ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಗುಣ, ಸ್ವಭಾವಗಳ ಬಗ್ಗೆ  ತಿಳಿಯಲಾಗುತ್ತದೆ. ಹಾಗೆಯೇ ರಾಶಿಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ತಿಳಿಯಲಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಸ್ವಭಾವ, ವ್ಯಕ್ತಿತ್ವ, ರೂಪ, ಗುಣ ಎಲ್ಲವು ಭಿನ್ನವಾಗಿರುತ್ತದೆ. ಮೇಷ ಮತ್ತು ಸಿಂಹ ರಾಶಿಯವರು ಉತ್ತಮ ಛಲವನ್ನು ಹೊಂದಿರುವ ರಾಶಿಗಳಾದರೆ, ಕರ್ಕಾಟಕ, ಮೀನ ರಾಶಿಯವರು ಸೂಕ್ಷ್ಮ ಸ್ವಭಾವದ ರಾಶಿಗಳಾಗಿವೆ. ಕೆಲವು ರಾಶಿಯವರಿಗೆ ಇತರರನ್ನು ತಮ್ಮತ್ತ ಸೆಳೆದುಕೊಳ್ಳುವ ಕಲೆ ಹುಟ್ಟಿನಿಂದಲೇ ಬಂದಿರುತ್ತದೆ. ಮತ್ತೆ ಕೆಲವು ರಾಶಿಯವರು ಪ್ರಯತ್ನಿಸಿದರು ಬೇರೆಯವರನ್ನು ಆಕರ್ಷಿಸುವುದು ಕಷ್ಟಸಾಧ್ಯವಾಗಿರುತ್ತದೆ. 

ರಾಶಿಚಕ್ರದಲ್ಲಿರುವ  ಹನ್ನೆರಡು ರಾಶಿಗಳಲ್ಲಿ ಕೆಲವು ರಾಶಿಯವರ ವ್ಯಕ್ತಿತ್ವ ಹೆಚ್ಚು ಆಕರ್ಷಕವಾಗಿರುತ್ತದೆ. ಹಾಗಾದರೆ ಅಂತಹ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಇದನ್ನು ಓದಿ : ಶುಕ್ರ ಗ್ರಹದ ರಾಶಿ ಪರಿವರ್ತನೆ ಈ ರಾಶಿಗಳಿಗೆ ಶುಭಫಲ, ನಿಮ್ಮ ರಾಶಿ ಇದೆಯಾ? 

ಮಿಥುನ ರಾಶಿ
ರಾಶಿ ಚಕ್ರದ ಮೂರನೇ ರಾಶಿಯಾಗಿರುವ ಮಿಥುನ ರಾಶಿಯವರು ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿ ವ್ಯಕ್ತಿಗಳತ್ತ ಹೆಚ್ಚು ಬೇಗ ಆಕರ್ಷಿತರಾಗುತ್ತಾರೆಂದು ಹೇಳಲಾಗುತ್ತದೆ. ಉತ್ತಮ ವಾಗ್ಮಿಯಾಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಮಾತಿನಿಂದ ಇತರರನ್ನು ಹೇಗೆ ಮನವೊಲಿಸಬೇಕೆಂಬುದನ್ನು ತಿಳಿದಿರುತ್ತಾರೆ. ಮಿಥುನ ರಾಶಿಯವರು ಸ್ವಭಾವದಲ್ಲಿ ತುಂಬಾ ಮೃದುತನವನ್ನು ಹೊಂದಿರುವುದಲ್ಲದೆ, ರೊಮ್ಯಾಂಟಿಕ್ ಸಹ ಆಗಿರುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿ ಹೆಚ್ಚಿನ ಪ್ರೇಮ ಸಂಬಂಧಗಳನ್ನು ಹೊಂದಿರುತ್ತಾರೆ. ಮಿಥುನ ರಾಶಿಯ ವ್ಯಕ್ತಿಗಳು ಹೋದಲ್ಲೆಲ್ಲ ತಮ್ಮ ಛಾಪನ್ನು ಮೂಡಿಸುವ ಕಲೆಗಾರರಾಗಿರುತ್ತಾರೆ.

ಇದನ್ನು ಓದಿ : ಬುಧನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಶುಭ ಯೋಗ, ನಿಮ್ಮ ರಾಶಿ ಇದೆಯಾ..? 

ಸಿಂಹ ರಾಶಿ
ಸಿಂಹ ರಾಶಿಯವರು ಪರಾಕ್ರಮಿಗಳು. ಈ ರಾಶಿಯವರ ಮಾತಿನ ವೈಖರಿಯು ಇತರರನ್ನು ಬೆರಗು ಮೂಡಿಸುತ್ತದೆ. ಇವರು ಮಾತಿನಲ್ಲಷ್ಟೇ ಅಲ್ಲ, ಕೃತಿಯಲ್ಲಿಯೂ ಪರಾಕ್ರಮಿಗಳಾಗಿದ್ದಾರೆ. ಇವರ ಆಕರ್ಷಕ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುವುದಲ್ಲದೆ, ತಮ್ಮತ್ತ ಇತರರನ್ನು ಸೆಳೆಯುವಲ್ಲಿ ನಿಸ್ಸೀಮರಾಗಿರುತ್ತಾರೆ. ಇವರಿಗೆ ಸಂಬಂಧಪಟ್ಟವರಲ್ಲಿ ಯಾರೂ ಸಹ ಇವರ ಮಾತುಗಳನ್ನು ಅಲ್ಲಗಳೆಯುವುದಿಲ್ಲ. ಅಷ್ಟರಮಟ್ಟಿಗೆ ಇವರ ಮೇಲೆ ಅವರಿಗೆ ನಂಬಿಕೆ – ವಿಶ್ವಾಸ ಇರುವಷ್ಟು ಆತ್ಮವಿಶ್ವಾಸವನ್ನು ಇವರು ಗಳಿಸಿಕೊಂಡು ಬಿಟ್ಟಿರುತ್ತಾರೆ. 

Tap to resize

Latest Videos



ತುಲಾ ರಾಶಿ
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಇವರ ವ್ಯಕ್ತಿತ್ವವೂ ಬಹಳ ಆಕರ್ಷಕವಾಗಿರುತ್ತದೆ. ಯಾರಿಗೇ ಆದರೂ ಸಹ ಇವರನ್ನೊಮ್ಮೆ ನೋಡಿದರೆ ಸಾಕು, ಮೋಡಿ ಮಾಡಿದವರಂತೆ ಇವರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿ ಬಿಟ್ಟಿರುತ್ತಾರೆ. ಇದರ ಜೊತೆಗೆ ಇವರ ವಾಕ್ಚಾತುರ್ಯಕ್ಕೆ ಮಾರುಹೋಗದವರೇ ಇಲ್ಲವಂತೆ. ಅಷ್ಟರ ಮಟ್ಟಿಗೆ ಅರಳು ಹುರಿದಂತೆ ಇವರ ಮಾತುಗಳು ಸ್ಫುಟವಾಗಿ ಹಾಗೂ ಸ್ಪಷ್ಟವಾಗಿ ಹೊರಹೊಮ್ಮುವುದರ ಜೊತೆಗೆ ವಿಚಾರಶೀಲವಾಗಿ ಮತ್ತು ಅರ್ಥಗರ್ಭಿತವಾಗಿ ಇವರ ಮಾತುಗಳು ಇರಲಿವೆ. ಇವರು ತಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪ್ರೀತಿಗೆ ನೀಡುತ್ತಾರೆ. ಹಾಗಾಗಿ ಇವರ ಪ್ರೀತಿಯನ್ನು ಪಡೆದವರು ನಿಜಕ್ಕೂ ಅದೃಷ್ಟವಂತರೇ ಸರಿ ಎಂದು ಹೇಳಲಾಗುತ್ತದೆ. ಇಂಥವರು ಒಮ್ಮೆ ಪ್ರೀತಿಸಲು ಪ್ರಾರಂಭಿಸಿದರೆ, ಕೊನೆವರೆಗೂ ತಮ್ಮ ನಂಬಿಕೆಯನ್ನು ಸಡಿಲಗೊಳಿಸುವುದಿಲ್ಲ. ಇವರು ಮಾತನಾಡುವಾಗಲೂ ಸಹ ಯಾವುದೇ ಗೊಂದಲವನ್ನು ಇಟ್ಟುಕೊಳ್ಳದೆ, ಗೊಂದಲವನ್ನು ಮಾಡದೆ, ಅತ್ಯಂತ ಸರಳವಾಗಿ ಎಲ್ಲರೂ ಸರಿ ಅನ್ನಿಸುವಂತೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಈ ಚತುರತೆಯೇ ಉಳಿದವರು ಇವರನ್ನು ಮೆಚ್ಚಿಕೊಳ್ಳುವಂತೆ ಮಾಡಿಬಿಡುತ್ತದೆ. 

ಇದನ್ನು ಓದಿ : ವೃಷಭ ರಾಶಿಯಲ್ಲಿ ರಾಹು ಗ್ರಹ, ಈ 5 ರಾಶಿಯವರಿಗೆ ಹಾನಿ ಭಯ..! 

ಮಕರ ರಾಶಿ
ಈ ರಾಶಿಯವರು ನೋಡಲು ಆಕರ್ಷಕ ಹಾಗೂ ಬಹಳ ಸುಂದರವಾಗಿರುತ್ತಾರೆ. ಇದರಿಂದ ಇವರನ್ನು ನೋಡಿದವರೆಲ್ಲರೂ ಬಹಳ ಬೇಗ ಮನಸೋಲುತ್ತಾರೆ. ಅಂದದಲ್ಲಷ್ಟೇ ಅಲ್ಲದೆ ಉಳಿದ ವಿಚಾರಗಳಲ್ಲಿಯೂ ಎದುರಿನವರನ್ನು ತಮ್ಮ ಪ್ರಭಾವಕ್ಕೊಳಪಡಿಸುವಲ್ಲಿ ಇವರು ನಿಸ್ಸೀಮರು. ಇವರ ಮಾತನಾಡುವ ರೀತಿ, ಸ್ಟೈಲ್ ಎಲ್ಲವೂ ಬಹಳ ಭಿನ್ನವಾಗಿರುತ್ತದೆ. ಇದು ಹಲವರನ್ನು ಅನುಕರಿಸುವಂತೆ ಮಾಡುವುದಲ್ಲದೆ, ಮಾಡೆಲ್ ರೀತಿಯಲ್ಲಿ ಈ ರಾಶಿಯವರು ಕಾಣುತ್ತಾರೆ. ವ್ಯಕ್ತಿತ್ವದ ವಿಷಯದಲ್ಲಿ ಇವರು ಬಹಳ ಶ್ರೀಮಂತರು. 

click me!