ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ರಾಶಿಯ ಸ್ವಭಾವವು ಅದರ ಅಧಿಪತಿ ಗ್ರಹದ ಪ್ರಭಾವಕ್ಕೊಳಪಟ್ಟಿರುತ್ತದೆ ಎಂದು ಹೇಳಲಾಗುತ್ತದೆ. ಕೆಲವು ರಾಶಿಯ ಮೇಲೆ ನಿರ್ದಿಷ್ಟ ದೇವತೆಗಳ ಕೃಪೆ ಸದಾಕಾಲ ಇರುತ್ತದೆ. ತುಲಾ, ಕುಂಭ ಮತ್ತು ಮಕರ ರಾಶಿಗಳ ಮೇಲೆ ಶನಿ ದೇವರ ಕೃಪೆ ಸದಾ ಇರುತ್ತದೆ. ಹಾಗೆಯೇ ಕೆಲವು ರಾಶಿಗಳ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಹಾಗಾದರೆ ಆ ರಾಶಿಗಳ ಯಾವುವು? ಎಂದು ತಿಳಿಯೋಣ..
ಸುಖ-ಸಮೃದ್ಧಿ ಮತ್ತು ಸಂಪತ್ತನ್ನು ಕರುಣಿಸುವ ದೇವತೆ ಮಹಾಲಕ್ಷ್ಮೀ. ಮನಸ್ಸಿನಿಂದ ಲಕ್ಷ್ಮೀದೇವಿಯನ್ನು ಆರಾಧಿಸಿ ಪೂಜೆ ಮಾಡಿದಲ್ಲಿ ಸಕಲ ಇಷ್ಟಾರ್ಥಗಳು ಫಲಿಸುತ್ತವೆ ಎಂದು ಹೇಳಲಾಗುತ್ತದೆ. ಶಾಸ್ತ್ರದಲ್ಲಿ ಹೇಳಿರುವಂತೆ ಪ್ರತಿ ಶುಕ್ರವಾರದಂದು, ರಾಧಾಷ್ಟಮಿಯಂದು, ಶರದ್ ಪೂರ್ಣಿಮೆಯ ದಿನ, ರುಕ್ಮಿಣಿ ಅಷ್ಟಮಿಯಂದು, ವರದ ಲಕ್ಷ್ಮೀದಿನದಂದು ಮತ್ತು ದೀಪಾವಳಿಯಲ್ಲಿ ಮಾಡುವ ಲಕ್ಷ್ಮೀ ಪೂಜೆ ಅತಿ ಮಹತ್ವದ್ದು. ಕಾರ್ತಿಕ ಮಾಸ ಕೃಷ್ಣ ಪಕ್ಷದ ಅಮವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡಿದರೆ, ವ್ಯಕ್ತಿಯ ದಾರಿದ್ರ್ಯ ದೂರವಾಗಿ, ಧನಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಲಕ್ಷ್ಮೀದೇವಿಯ ಕೃಪೆ ಎಲ್ಲರಿಗೂ ಬೇಕು. ಧನ-ಧಾನ್ಯಗಳ ಅಧಿದೇವತೆ ಲಕ್ಷ್ಮೀಯೇ ಆಗಿದ್ದು, ಸಮಸ್ತ ಜಗತ್ತಿಗೂ ಯಶಸ್ಸು, ವೈಭವ ಮತ್ತು ಕೀರ್ತಿಯನ್ನು ಪಾಲಿಸುವ ದೇವತೆಯಾಗಿದ್ದಾಳೆ. ಲಕ್ಷ್ಮೀಯ ಕೃಪೆಯುಳ್ಳವರಿಗೆ ಯಾವುದೇ ಆತಂಕವಿರುವುದಿಲ್ಲ, ಅಂಥ ಮನೆಯಲ್ಲಿ ಧನ-ಧಾನ್ಯ ಮತ್ತು ಸಮೃದ್ಧಿಯು ಅಪಾರವಾಗಿರುತ್ತದೆ.
ಲಕ್ಷ್ಮೀಯು ನಿಮ್ಮ ಮನೆಯಲ್ಲಿ ವಾಸ ಮಾಡಬೇಕೆಂದರೆ ಮನೆಯನ್ನು ಶುಚಿಯಾಗಿಟ್ಟಿರಬೇಕು. ಯಾವ ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅಂಥವರ ಮನೆಗೆ ಲಕ್ಷ್ಮೀದೇವಿ ಪ್ರವೇಶಿಸುವುದಿಲ್ಲ.
ಇದನ್ನು ಓದಿ: ಈ 5 ರಾಶಿಯವರು ತುಂಬಾ ಸ್ಟೈಲಿಶ್ ಆಗಿರೋಕೆ ಇಷ್ಟಪಡ್ತಾರಂತೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಗಳಲ್ಲಿ ಕೆಲವು ರಾಶಿಯನ್ನು ಅದೃಷ್ಟವಂತ ರಾಶಿಗಳೆಂದು ಹೇಳಲಾಗುತ್ತದೆ. ಈ ಅದೃಷ್ಟವಂತ ರಾಶಿಗಳ ಮೇಲೆ ಲಕ್ಷ್ಮೀಯ ಕೃಪಾಶೀರ್ವಾದ ಸದಾ ಇರುವುದಾಗಿ ಹೇಳಲಾಗುತ್ತದೆ. ಹಾಗಾಗಿ ಈ ರಾಶಿಯವರಿಗೆ ಧನ-ಧಾನ್ಯಗಳ ಕೊರತೆ ಎಂದಿಗೂ ಆಗುವುದಿಲ್ಲ. ಅಷ್ಟೇ ಅಲ್ಲದೆ ಸಮಾಜದಲ್ಲಿ ಗೌರವಾದರಗಳು ಸಹ ಹೆಚ್ಚುತ್ತವೆ. ಹಾಗಾದರೆ ಅದೃಷ್ಟವಂತ ರಾಶಿಗಳ್ಯಾವುದು ತಿಳಿಯೋಣ...
ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರಗ್ರಹ. ಹಾಗಾಗಿ ಶುಕ್ರ ಗ್ರಹದ ಪ್ರಭಾವ ಈ ರಾಶಿಯ ಮೇಲಿರುತ್ತದೆ. ಶುಕ್ರಗ್ರಹವು ಸುಖ-ಧನ, ಐಶ್ವರ್ಯ ಮತ್ತು ವೈಭವಗಳ ಕಾರಕ ಗ್ರಹವಾಗಿದೆ. ಶುಕ್ರ ಗ್ರಹದ ಶುಭ ಪ್ರಭಾವ ವೃಷಭ ರಾಶಿಯವರಿಗಿರುತ್ತದೆ. ಈ ರಾಶಿಯವರಿಗೆ ಅದೃಷ್ಟವು ಸದಾ ಜೊತೆಯಿರುತ್ತದೆ. ಈ ರಾಶಿಯವರಿಗೆ ಸಂಪತ್ತಿನ ಕೊರತೆ ಎಂದಿಗೂ ಆಗುವುದಿಲ್ಲ. ಕಡಿಮೆ ಪ್ರಯತ್ನದಿಂದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ.
ಇದನ್ನು ಓದಿ: ಸ್ನೇಹ ಬೆಳೆಸಬಹುದಾದ ಯೋಗ್ಯ ರಾಶಿಗೆ ಸೇರಿದವರಾ ನೀವು?
ಕರ್ಕಾಟಕ ರಾಶಿ
ಶ್ರೀಮಂತ ಮತ್ತು ಐಷಾರಾಮಿ ಜೀವನ ನಡೆಸುವ ಭಾಗ್ಯವನ್ನು ಹೊಂದಿರುವ ರಾಶಿ ಕರ್ಕಾಟಕ ರಾಶಿ. ಈ ರಾಶಿಯವರಿಗೆ ಅದೃಷ್ಟವು ಜೊತೆಗಿರುತ್ತದೆ. ಈ ರಾಶಿಯವರು ಹೆಚ್ಚು ಪರಿಶ್ರಮಿಗಳು ಮತ್ತು ದೃಢ ವಿಶ್ವಾಸವನ್ನು ಹೊಂದಿರುವವರಾಗಿರುತ್ತಾರೆ. ಯಾವುದನ್ನಾದರು ಮಾಡಬೇಕೆಂದು ನಿಶ್ಚಯಿಸಿಕೊಂಡರೆ ಅದನ್ನು ಖಂಡಿತವಾಗಿ ಪೂರ್ತಿಗೊಳಿಸುತ್ತಾರೆ. ಇವರ ಕೆಲಸಗಳು ಎಂದಿಗೂ ತೊಡಕುಗಳಿಂದ ಅರ್ಧಕ್ಕೆ ನಿಲ್ಲುವುದಿಲ್ಲ. ಇವರಿಗೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತದೆ.
ಸಿಂಹ ರಾಶಿ
ಸಿಂಹರಾಶಿಯವರು ಹೆಚ್ಚು ಪರಿಶ್ರಮಿಗಳು ಮತ್ತು ಕಾರ್ಯ ಕುಶಲತೆಯನ್ನು ಬಲ್ಲವರಾಗಿರುತ್ತಾರೆ. ಐಷಾರಾಮಿ ಜೀವನ ನಡೆಸುವ ಸಲುವಾಗಿ ಹೆಚ್ಚು ಶ್ರಮಪಡುತ್ತಾರೆ. ನಾಯಕತ್ವದ ಕ್ಷಮತೆ ಇವರಲ್ಲಿ ಹೆಚ್ಚಿರುತ್ತದೆ. ಕಷ್ಟವಾದ ಕೆಲಸಗಳನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡಿ ಮುಗಿಸುವ ಶಕ್ತಿ ಈ ರಾಶಿಯವರಿಗಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಯಶಸ್ಸು ಸಿಗುತ್ತದೆ. ಜೊತೆಗೆ ಲಕ್ಷ್ಮೀಯ ಕೃಪಾಕಟಾಕ್ಷ ಇವರ ಮೇಲಿರುತ್ತದೆ.
ಇದನ್ನು ಓದಿ: ರಾಶಿಯನುಸಾರ ನಿಮ್ಮ ಸ್ನೇಹಿತರು-ಶತ್ರುಗಳ್ಯಾರೆಂದು ತಿಳಿಯಿರಿ..!
ವೃಶ್ಚಿಕ ರಾಶಿ
ಈ ರಾಶಿಯವರು ಭಾಗ್ಯಶಾಲಿ ರಾಶಿಯವರ ಪಟ್ಟಿಯಲ್ಲಿ ಸೇರುತ್ತಾರೆ. ಇವರಿಗೆ ಹಣವನ್ನು ಸಂಪಾದಿಸುವ ಇಚ್ಛೆ ಹೆಚ್ಚಿರುತ್ತದೆ. ಇವರು ಹೆಚ್ಚು ಪರಿಶ್ರಮಿಗಳಾಗಿರುತ್ತಾರೆ. ಇವರಿಗೆ ಆರ್ಥಿಕ ಸಮಸ್ಯೆ ಎಂದಿಗೂ ಕಾಡುವುದಿಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಸ್ವತಃ ಕಂಡುಕೊಳ್ಳುತ್ತಾರೆ. ಹಣ ಇವರನ್ನು ಹುಡುಕಿಕೊಂಡು ಬರುತ್ತದೆ ಎಂದು ಸಹ ಹೇಳುತ್ತಾರೆ.