ನಿಮ್ಮ ಜನ್ಮರಾಶಿಗೆ ಇವು ತಕ್ಕ ಆಹಾರವಲ್ಲ, ಸೇವಿಸುವಾಗ ಗಮನಿಸಿ!

Published : Feb 10, 2024, 01:08 PM IST
ನಿಮ್ಮ ಜನ್ಮರಾಶಿಗೆ ಇವು ತಕ್ಕ ಆಹಾರವಲ್ಲ, ಸೇವಿಸುವಾಗ ಗಮನಿಸಿ!

ಸಾರಾಂಶ

ನೀವು ಜನಿಸಿದ ರಾಶಿ- ನಕ್ಷತ್ರವೂ ನಿಮ್ಮ ದೇಹದ ಕಾರ್ಯವಿಧಾನ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುತ್ತದೆ. ನಿಮ್ಮ ರಾಶಿಚಕ್ರದ ಪ್ರಕಾರ ನೀವು ತಪ್ಪಿಸಬೇಕಾದ ಈ ಆಹಾರಗಳನ್ನು ನೋಡೋಣ.  

ಕೆಲವು ಆಹಾರ ಸೇವಿಸಿದಾಗ ನಿಮಗೆ ಕಿರಿಕಿರಿಯಾಗಬಹುದು; ಅನಾರೋಗ್ಯವಾಗಬಹುದು. ಕೆಲವು ಸಂತೋಷ ಉಂಟುಮಾಡಬಹುದು. ಇದು ಯಾಕೆ ಅಂತ ನೀವು ಎಂದಾದರೂ ಯೋಚಿಸಿದ್ದೀರಾ? ಆರೋಗ್ಯದ ಪ್ರಶ್ನೆ ಒಂದು. ಇನ್ನೊಂದು ಉತ್ತರ ನಿಮ್ಮ ಜನ್ಮರಾಶಿಗೂ ಸಂಬಂಧಪಟ್ಟಿದೆ. ನೀವು ಜನಿಸಿದ ರಾಶಿ- ನಕ್ಷತ್ರವೂ ನಿಮ್ಮ ದೇಹದ ಕಾರ್ಯವಿಧಾನ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುತ್ತದೆ. ನಿಮ್ಮ ರಾಶಿಚಕ್ರದ ಪ್ರಕಾರ ನೀವು ತಪ್ಪಿಸಬೇಕಾದ ಈ ಆಹಾರಗಳನ್ನು ನೋಡೋಣ.

ಮೇಷ: ಇವರು ಸಾಹಸವನ್ನು ಇಷ್ಟಪಡುತ್ತಾರೆ. ಸ್ವಭಾವತಃ ಸಾಕಷ್ಟು ಶಕ್ತಿಯುತರಾಗಿರುತ್ತಾರೆ. ಆದ್ದರಿಂದ ಎದೆಯುರಿ ಮತ್ತು ಚರ್ಮದ ಉರಿಯೂತವನ್ನು ತಪ್ಪಿಸಲು ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಿ. ಜೊತೆಗೆ ಕಾಫಿ ಮತ್ತು ಮದ್ಯವನ್ನು ಸೇವಿಸಬಾರದು.

ವೃಷಭ: ಇವರು ಬಲವಾದ ದೇಹ ಮತ್ತು ಉತ್ತಮ ಹಸಿವನ್ನು ಹೊಂದಿರುತ್ತಾರೆ. ಆರೋಗ್ಯಕರವಾಗಿ ಇರುವುದಕ್ಕಾಗಿ ಭಾರೀ ಕಾರ್ಬೋಹೈಡ್ರೇಟ್‌ಗಳನ್ನು ತಪ್ಪಿಸಿ. ಚಾಕೊಲೇಟ್ ಸೇವನೆಯನ್ನು ಮಿತವಾಗಿ ಇಟ್ಟುಕೊಳ್ಳಿ.

ಮಿಥುನ: ಕಾಫಿ, ಈಸ್ಟ್ ಆಹಾರ ಮತ್ತು ಬೇರು ತರಕಾರಿಗಳು ಇವರಿಗೆ ಒಳ್ಳೆಯದಲ್ಲ. ಹಸಿ ತರಕಾರಿಗಳ ಬ್ಲಾಂಡ್ ಸಲಾಡ್ ಅನ್ನು ತಪ್ಪಿಸಬೇಕು.

ಕಟಕ: ಇವರಿಗೆ ಕೆಟ್ಟ ಆಹಾರವೆಂದರೆ ಮೆಣಸಿನಕಾಯಿ, ಮೆಣಸು ಮತ್ತು ಮಸಾಲೆಯುಕ್ತ ಆಹಾರಗಳು. ಇವರು ಎಮೋಷನಲ್‌ ಈಟರ್ಸ್‌ ಕೂಡ. ಹೀಗಾಗಿ ಎಣ್ಣೆ ಆಹಾರಗಳು, ಅತಿಯಾದ ಉಪ್ಪು ಮತ್ತು ಸಂಸ್ಕರಿಸಿದ ಸಕ್ಕರೆಯಿಂದ ದೂರವಿರಬೇಕು.

ಸಿಂಹ: ಇವರು ಮಸಾಲೆಯುಕ್ತ ಆಹಾರಗಳು ಮತ್ತು ಡೈರಿ ಉತ್ಪನ್ನಗಳನ್ನು ತಪ್ಪಿಸಬೇಕು. ಇದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಕನ್ಯಾ: ಡೈರಿ ಉತ್ಪನ್ನಗಳು ಮತ್ತು ಚಾಕೊಲೇಟ್‌ಗಳು ಬಹಳ ಸಮೃದ್ಧವಾಗಿರುತ್ತವೆ. ಇವು ಇವರ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಲ್ಲ.

ತುಲಾ: ಇವರು ಆರೋಗ್ಯಕರ ದೈಹಿಕ ರಚನೆಯನ್ನು ಹೊಂದಿರುತ್ತಾರೆ. ಆದರೆ ದುರ್ಬಲ ಮೂತ್ರಪಿಂಡಗಳನ್ನು ಹೊಂದಿರಬಹುದು. ಆದ್ದರಿಂದ ಕಾರ್ಬೊನೇಟೆಡ್ ಪಾನೀಯಗಳು, ಆಲ್ಕೋಹಾಲ್ ಮತ್ತು ಸಂಸ್ಕರಿಸಿದ ಸಕ್ಕರೆ ಒಳ್ಳೆಯದಲ್ಲ.

ವೃಶ್ಚಿಕ: ರೆಡ್‌ ಮೀಟ್‌ ಮತ್ತು ಆಲ್ಕೋಹಾಲ್ ನಿಮ್ಮ ಮಾನಸಿಕ ಯೋಗಕ್ಷೇಮ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಲ್ಲ. ಅಲ್ಲದೆ, ಸಾಧ್ಯವಾದಷ್ಟು ಎಣ್ಣೆಯುಕ್ತ ಮತ್ತು ಯೀಸ್ಟ್ ಆಹಾರಗಳನ್ನು ತಪ್ಪಿಸಲು ಪ್ರಯತ್ನಿಸಿ.

ಈ ನಾಲ್ಕು 4 ರಾಶಿಯ ಜನರು ಹೆಚ್ಚಾಗಿ ಲವ್ ಮ್ಯಾರೇಜ್ ಆಗೋದು

ಧನು: ಇವರು ಆಗಾಗ್ಗೆ ತೂಕದ ಸಮಸ್ಯೆಗಳನ್ನು ಎದರಿಸುತ್ತಾರೆ. ಆದ್ದರಿಂದ ಚಾಕೊಲೇಟ್‌ಗಳು, ಸಾಸ್‌ಗಳು ಮತ್ತು ಸಕ್ಕರೆಯಿಂದ ದೂರವಿರಬೇಕು. ಜೇನುತುಪ್ಪ, ಬಾಳೆಹಣ್ಣುಗಳು ಮತ್ತು ಓಟ್‌ಮೀಲ್‌ಗಳಂತಹ ಆಹಾರವನ್ನು ತಪ್ಪಿಸಲು ಪ್ರಯತ್ನಿಸಿ.

ಮಕರ: ಇವರ ಮೂಳೆಗಳು ಮತ್ತು ಹಲ್ಲುಗಳು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ. ಆದ್ದರಿಂದ ಇವರಿಗೆ ಬಹಳಷ್ಟು ಕ್ಯಾಲ್ಸಿಯಂ-ಭರಿತ ಆಹಾರಗಳು ಬೇಕಾಗುತ್ತವೆ. ಹೆಚ್ಚಿನ ಸೋಡಿಯಂ ಇರುವ, ಚಾಕೊಲೇಟ್‌ಗಳು, ಕಾಳುಗಳು ಮತ್ತು ಉರಿಯೂತದ ಆಹಾರವನ್ನು ತಪ್ಪಿಸಬೇಕು.

ಒತ್ತಡದಿಂದ ಈ ರಾಶಿಗೆ ಹಾರ್ಮೋನ್ ಸಮಸ್ಯೆ

ಕುಂಭ: ಇವರು ಸಾಕಷ್ಟು ಮಾನಸಿಕ ದೃಢತೆ ಹೊಂದಿದವರಲ್ಲ. ಆದ್ದರಿಂದ ಮೂಡ್ ಅನ್ನು ಇನ್ನಷ್ಟು ತಗ್ಗಿಸುವ ಆಹಾರಗಳನ್ನು ತಪ್ಪಿಸಬೇಕು- ಮದ್ಯ, ಸೋಡಾ ಇತ್ಯಾದಿ. ಅಲ್ಲದೆ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕುವ ಆಹಾರವನ್ನು ತಪ್ಪಿಸಬೇಕು, ಉದಾಹರಣೆಗೆ ಅತಿಯಾದ ಉಪ್ಪು, ಕೊಬ್ಬು ಮತ್ತು ಸಕ್ಕರೆ.

ಮೀನ: ಇವರು ಆಲ್ಕೋಹಾಲ್‌ಗೆ ಸಾಕಷ್ಟು ಆಕರ್ಷಿತರಾಗುತ್ತಾರೆ. ಮಿತಿಯಿಲ್ಲದೆ ಹೋಗಬಹುದು. ಆದ್ದರಿಂದ ಹೆಚ್ಚು ಆಲ್ಕೋಹಾಲ್ ಅನ್ನು ತಪ್ಪಿಸಬೇಕು. ಎಣ್ಣೆಯುಕ್ತ, ಯೀಸ್ಟ್ ಮತ್ತು ಉಪ್ಪು ಆಹಾರವನ್ನು ತಪ್ಪಿಸಬೇಕು.

PREV
Read more Articles on
click me!

Recommended Stories

ಪೂರ್ವ ಭಾದ್ರಪದ ನಕ್ಷತ್ರದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಸಂಚಾರ, ಈ ನಾಲ್ಕು ರಾಶಿಗೆ ಅಪಾರ ಸಂಪತ್ತು, ಯಶಸ್ಸು
ಈ ಸಂಖ್ಯೆಯಲ್ಲಿ ಜನಿಸಿದ ಜನರಿಗೆ ಸರ್ಕಾರಿ ಕೆಲಸ ಭಾಗ್ಯ, ಗೌರವ, ಹೆಸರು, ಹಣ