ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಬಯಸುತ್ತಾರೆ. ಆದರೆ, ಹೆಚ್ಚಿನವರು ತಮ್ಮ ಹಣ ಕಾಸಿನ ಸೌಲಭ್ಯಗಳಿಗಾಗಿ ತಮ್ಮ ಸಂಗಾತಿಯನ್ನು ಅವಲಂಬಿಸಿರುತ್ತಾರೆ. ಆದರೆ, ಕೆಲವು ಮಹಿಳೆಯರು ತಮ್ಮ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುತ್ತಾರೆ. ಅವರ ಈ ನಿರ್ಧಾರಕ್ಕೆ ಅವರ ರಾಶಿ ಚಕ್ರಗಳ ಕಾರಣ ಇರುತ್ತದೆ. ಇಲ್ಲಿರುವ ಕೆಲವು ರಾಶಿ ನಕ್ಷತ್ರದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಇಷ್ಟ ಪಡುತ್ತಾರೆ.
ದುರದೃಷ್ಟಕರ ಸಂಗತಿ ಏನೆಂದರೆ, ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯನ್ನು ಆರ್ಥಿಕವಾಗಿ ಅವಲಂಬಿಸುವ ಕೆಟ್ಟ ಅಭ್ಯಾಸ ಹೊಂದಿರುತ್ತಾರೆ. ಆದಾಗ್ಯೂ, ಹೆಚ್ಚಿನ ಮಹಿಳೆಯರು ತಮ್ಮ ಸ್ವಂತ ಹಣಕಾಸಿನ ಅಗತ್ಯತೆಗಳನ್ನು ಮತ್ತು ತಮ್ಮ ಮಕ್ಕಳು ಮತ್ತು ಪೋಷಕರ ಅಗತ್ಯಗಳನ್ನು ನೋಡಿಕೊಳ್ಳುವ ಜೊತೆಗೆ ತಮ್ಮ ಶಿಕ್ಷಣವನ್ನು ನೋಡಿಕೊಳ್ಳುವ ಮೂಲಕ ತಮ್ಮ ಕಾಲಿನ ಮೇಲೆ ತಾವೇ ನಿಂತಿರುತ್ತಾರೆ. ಆದರೆ, ಇದು ಎಲ್ಲರಿಂದಲೂ ಸಾಧ್ಯವಿಲ್ಲ. ವಾಸ್ತವವಾಗಿ, ಇಲ್ಲಿರುವ ಕೆಲವು ರಾಶಿಚಕ್ರ ಚಿಹ್ನೆಗಳ ಮಹಿಳೆಯರು ತಾವು ಯಾರೊಬ್ಬರ ಮೇಲೆಯೂ ಆರ್ಥಿಕವಾಗಿ ಅವಲಂಬಿತರಾಗಿ ಉಳಿಯದೆ ಸ್ವಾವಲಂಬಿಗಳಾಗಿ ಬದುಕುತ್ತಾರೆ.
ಕುಂಭ ರಾಶಿ (Aquarius)
ಕುಂಭ ರಾಶಿಯ ಜನರು ವಿಶೇಷ (Special) ಸ್ವಭಾವವನ್ನು ಹೊಂದಿರುತ್ತಾರೆ. ಅವರು ತಮ್ಮ ಜೀವನದಲ್ಲಿ ತಮ್ಮ ಆಕಾಂಕ್ಷೆಗಳನ್ನು ಬೆಂಬಲಿಸದ ಸ್ನೇಹಿತರನ್ನು (Friends) ಮತ್ತು ಕುಟುಂಬದ ಸದಸ್ಯರನ್ನು ತ್ವರಿತವಾಗಿ ಕತ್ತರಿಸಿಕೊಂಡು ಅಂಥವರಿಂದ ದೂರ ಉಳಿಯಲು ತೀರ್ಮಾನಿಸುತ್ತಾರೆ. ವೃತ್ತಿ ಬೆಳವಣಿಗೆಯ ಹೊರ ಪಡಿಸಿ, ಅವರು ವೈಯಕ್ತಿಕ (Personal) ಜೀವನದಲ್ಲಿ ಬೆಳವಣಿಗೆಯ ಅನ್ವೇಷಣೆಯಲ್ಲಿ ಸದಾ ತೊಡಗಿಕೊಳ್ಳುತ್ತಾರೆ. ಮತ್ತು ಇದು ಅವರ ಜೀವನದ ಹಾದಿಯಲ್ಲಿ ಹೆಚ್ಚಿನ ಸಂಪತ್ತು ಮತ್ತು ಆಸ್ತಿಯನ್ನು ಸಂಗ್ರಹಿಸಲು ಸಹಾಯ (Help) ಮಾಡುತ್ತದೆ. ಆದರೆ, ಅದರ ನಂತರ ಅವರು ತಮ್ಮ ಸಂಗಾತಿಯ ಮೇಲೆ ಚೆಲ್ಲಾಟವಾಡುವ ಮೂಲಕ ತಮ್ಮ ಸಂಪಾದನೆಯ ಹಣವನ್ನು (Money) ಹಾಳುಮಾಡಲು ಒಲವು ತೋರುತ್ತಾರೆ.
ಇದನ್ನೂ ಓದಿ:ಒಳ್ಳೆಯತನವನ್ನು ನಂಬಿ ಮೋಸ ಹೋಗುವ ರಾಶಿಗಳಿವು!
ತುಲಾ ರಾಶಿ (Libra)
ತುಲಾ ರಾಶಿಯ ವ್ಯಕ್ತಿಯು ತಾವು ಒಬ್ಬ ಉನ್ನತ ವ್ಯಕ್ತಿಯಾಗಿರಬೇಕು ಹಾಗೆ ಸ್ವಾವಲಂಬಿ (Independent) ಜಿವನೆ ನಡೆಸಬೇಕು ಎಂದೇ ಬಯಸುತ್ತಾರೆ. ಬದಲಿಗೆ, ಬೇರೆ ಇನ್ನೊಬ್ಬ ವ್ಯಕ್ತಿಗೆ ತಮ್ಮ ಜವಾಬ್ದಾರಿಯನ್ನು (Responsibility) ತೆಗೆದುಕೊಳ್ಳಲು ಎಂದಿಗೂ ಬಿಡುವುದಿಲ್ಲ. ಅದು ಭಾವನಾತ್ಮಕವಾಗಿಯೂ (Emotionally) ಆಗಿರಬಹುದು ಇಲ್ಲವೇ ಆರ್ಥಿಕವಾಗಿ ಕೂಡ ಆಗಿರಬಹುದು, ಅವರು ಪ್ರತಿಯೊಂದು ವಿಷಯದಲ್ಲಿಯೂ ತಮ್ಮ ಮೇಲೆ ತಮ್ಮದೇ ಆದ ಹಿಡಿತ ಇಟ್ಟುಕೊಳ್ಳಲು ಬಯಸುತ್ತಾರೆ. ಮತ್ತು ತಮ್ಮ ವೃತ್ತಿಜೀವನದಲ್ಲಿ (worklife) ತಮ್ಮ ಹೆಸರನ್ನು ಉತ್ತುಂಗಕ್ಕೆ ಏರಿಸುವ ಕಡೆಗೆ ಒಲವು ತೋರುತ್ತಾರೆ, ಅದು ಅವರಿಗೆ ಆರ್ಥಿಕ ಭದ್ರತೆಯನ್ನು (Security) ತರುತ್ತದೆ. ಸಂಗಾತಿಯ ಮೇಲಿನ ಪ್ರೀತಿಯಿಂದ ಅವರು ಆಗಾಗ್ಗೆ ತಮ್ಮ ಸಂಗಾತಿಯನ್ನು ಅದ್ದೂರಿ ಉಡುಗೊರೆಗಳೊಂದಿಗೆ (Gifts) ಮುದ್ದಿಸಲು ಪ್ರಯತ್ನಿಸುತ್ತಾರೆ ಮತ್ತು ಅವರನ್ನು ಆರ್ಥಿಕವಾಗಿಯೂ (Finance) ಸುರಕ್ಷಿತವಾಗಿರಿಸಲು ಮುಂದಾಗುತ್ತಾರೆ.
ಇದನ್ನೂ ಓದಿ:ಈ ರಾಶಿಗಳ ಜನ ಸಂಗಾತಿಯೊಂದಿಗೆ ಮಕ್ಕಳಂತೆ ಬಿಹೇವ್ ಮಾಡ್ತಾರೆ
ಮಕರ ರಾಶಿ (Capricorn)
ಮಕರ ರಾಶಿಯು ದುರ್ಬಲವಾಗಿ ಬದುಕುವುದಕ್ಕೆ ಇಷ್ಟ ಪಡುವುದಿಲ್ಲ. ಆದ್ದರಿಂದ ಅವರು ತಮ್ಮನ್ನು ತಾವು ನಿರ್ಮಿಸಿಕೊಳ್ಳಲು ಮತ್ತು ತಮ್ಮ 20 ರ ದಶಕದ ಆರಂಭದಲ್ಲಿ ಆರ್ಥಿಕ ಭದ್ರಕೋಟೆಯನ್ನು ಸಂಗ್ರಹಿಸಲು ತಮ್ಮ ಕೈಲಾದಷ್ಟು ಪ್ರಯತ್ನ (Try) ಮಾಡುತ್ತಾರೆ. ಮದುವೆಯಾದಾಗ, ಅವರು ತಮ್ಮನ್ನು ಮತ್ತು ಕುಟುಂಬವನ್ನು (Family) ತಾವಾಗಿಯೇ ನೋಡಿಕೊಳ್ಳುವ ಸಾಮರ್ಥ್ಯ ಹೊಂದಿರುವುದು ತಮ್ಮ ಸಂಗಾತಿಗೆ (Partner) ತಿಳಿಸಲು ಇಷ್ಟ ಪಡುತ್ತಾರೆ. ಮತ್ತು ಹಾಗೆಯೇ ನಡೆದುಕೊಳ್ಳುತ್ತಾರೆ ಕೂಡ. ಏಕೆಂದರೆ, ಅವರು ಯಾರಿಂದಲೂ ಸಹಾಯವನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಮಕರ ರಾಶಿಯು ತಾವು ಸ್ವಾವಲಂಬಿ ಜೀವನ (Life) ನಡೆಸಬೇಕು ಎಂದು ಬಯಸುತ್ತಾರೆ. ತಾವು ಇತರರಿಗೆ ಯಾವುದೇ ರೀತಿಯಲ್ಲಿಯೂ ಹೊರೆಯಾಗುವುದನ್ನು ಸಹಿಸುವುದಿಲ್ಲ.
ಎಲ್ಲದರಲ್ಲೂ ಸಮಾನತೆ (Equality) ಬಯಸುವ ಹೆಣ್ಣು ಮಕ್ಕಳು ಈಗ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪ್ರಯತ್ನಿಸುತ್ತಾರೆ. ಇಲ್ಲಿರುವ ರಾಶಿಯ ಜನರು ಅದನ್ನು ನೀರೂಪಿಸಿ (Prove) ತೋರಿಸುತ್ತಾರೆ. ಇಂತಹ ಮಹಿಳೆಯರು ನಿಮ್ಮ ಸುತ್ತ ಮುತ್ತಲೂ ನೀವು ಗಮನಿಸಿರಬಹುದು.