ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…!

By Suvarna News  |  First Published Jun 17, 2021, 10:40 AM IST

ಮಾತನಾಡುವುದು ಒಂದು ಕಲೆ. ಸಂದರ್ಭಕ್ಕೆ ತಕ್ಕಂತೆ ಮಾತನಾಡಿ ಜನರ ಮನಸ್ಸನ್ನು ಗೆಲ್ಲುವುದು ಒಂದು ಕಡೆಯಾದರೆ, ಇನ್ನೊಂದೆಡೆ ಸರಿಯಾದ ಸಮಯದಲ್ಲಿ ತೂಕವುಳ್ಳ ಮಾತನಾಡಿ ಕೆಲಸವನ್ನು ಸಾಧಿಸುವುದು ಇವರಿಗೆ ಬಲು ಸುಲಭ. ಹಾಗಾಗಿ ಕೆಲವು ರಾಶಿಯವರಿಗೆ ಮಾತು ಬಂಡವಾಳವಾಗಿರುತ್ತದೆ. ಮಾತಿನಿಂದಲೇ ಎಲ್ಲವನ್ನೂ ಸಾಧಿಸಿಕೊಳ್ಳುವ ಕಲೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಹಾಗಾದರೆ ಮಾತಿನಿಂದ ಇತರರನ್ನು ಸೆಳೆಯುವ ಕಲೆಯನ್ನು ತಿಳಿದಿರುವ ಮಾತಿನ ಮಲ್ಲರು ಯಾವ್ಯಾವ ರಾಶಿಯವರೆಂದು ತಿಳಿಯೋಣ...
 


ರಾಶಿ ಚಕ್ರದಲ್ಲಿರುವ ಹನ್ನೆರಡು ರಾಶಿಯವರು ಒಂದೊಂದು ವಿಷಯದಲ್ಲಿ ವಿಶೇಷ ಚಾತುರ್ಯವನ್ನು ಉಳ್ಳವರಾಗಿರುತ್ತಾರೆ. ಕೆಲವರು ಕಲೆಯಲ್ಲಿ ನಿಪುಣತೆಯನ್ನು ಪಡೆದಿದ್ದರೆ, ಮತ್ತೆ ಕೆಲವರು ಮಾತಿನಲ್ಲಿ, ಬರಹದಲ್ಲಿ, ತಂತ್ರಜ್ಞಾನದಲ್ಲಿ ಹೀಗೆ ಹಲವಾರು ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ. ಹಾಗೆಯೇ ಇಲ್ಲಿ ಮಾತಿನಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆಯುವ ರಾಶಿಯವರ ಬಗ್ಗೆ ತಿಳಿಯೋಣ...

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿನಂತೆ, ಚೆನ್ನಾಗಿ ಮಾತನಾಡಿ ಇತರರನ್ನು ಮೋಡಿ ಮಾಡುವುದು ಒಂದು ಕಲೆ. ಅದು ಕೆಲ ರಾಶಿಯವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಹಾಗಾಗಿ ಸಂದರ್ಭ ಏನೇ ಇರಲಿ ಅದಕ್ಕೆ ತಕ್ಕಂತೆ ಮಾತನಾಡಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇಂಥವರು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಅಲ್ಲಿಯ ಜನರನ್ನು ಮಾತಿನಿಂದಲೇ ಬೆರಗು ಗೊಳಿಸುತ್ತಾರೆ. ಇಂಥಹ ವ್ಯಕ್ತಿಗಳ ಈ ಗುಣವೇ ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ. ಹಾಗಾದರೆ ಯಾವ್ಯಾವ ರಾಶಿಗಳು? ಆ ಪಟ್ಟಿಯಲ್ಲಿ ಬರುತ್ತವೆ ಎಂಬ ಬಗ್ಗೆ ತಿಳಿಯೋಣ..

ಇದನ್ನು ಓದಿ : ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು...! 

ಮಿಥುನ ರಾಶಿ
ಈ ರಾಶಿಯ ವ್ಯಕ್ತಿಗಳು ಹೆಚ್ಚು ವ್ಯಾವಹಾರಿಕವಾಗಿ ವರ್ತಿಸುತ್ತಾರೆ. ಮಿಥುನ ರಾಶಿಯವರು ಅಪರಿಚಿತರಾದರೂ ಸರಿ ಅವರನ್ನು ಮಾತಿಗೆಳೆದು ಬಿಡುತ್ತಾರೆ. ಈ ವ್ಯಕ್ತಿಗಳ ಮಾತಿನ ವೈಖರಿಗೆ ಎಲ್ಲರು ಆಕರ್ಷಿತರಾಗುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಹೆಚ್ಚು ಜನ ಸ್ನೇಹಿತರಿರುತ್ತಾರೆ. ಮಾತಿನಲ್ಲಿ ಇತರರನ್ನು ಸೆಳೆಯುವ ಕಲೆ ಇವರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಹಾಗಾಗಿ ಇವರು ಮಾತಿನ ಬಂಡವಾಳದ ಮೇಲೆಯೇ ಯಶಸ್ಸಿನ ಲಾಭವನ್ನು ಗಳಿಸಿಕೊಳ್ಳುವಷ್ಟು ಚಾತುರ್ಯವನ್ನು ಹೊಂದಿರುತ್ತಾರೆ.
 

Tap to resize

Latest Videos



ತುಲಾ ರಾಶಿ
ತುಲಾ ರಾಶಿಯವರು ಸಹ ಮಾತಿನ ಮಲ್ಲರಾಗಿರುತ್ತಾರೆ. ಈ ರಾಶಿಯವರಿಗೆ ಸ್ನೇಹಿತರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಎಲ್ಲರನ್ನು ಇವರು ಬೇಗ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಿದರೆ, ಎದುರಿಗಿರುವವರ ಮನಸ್ಸನ್ನು ಗೆಲ್ಲಬಹುದು ಎಂಬ ಬಗ್ಗೆ ಇವರು ಚೆನ್ನಾಗಿ ಅರಿತಿರುತ್ತಾರೆ. ಈ ರಾಶಿಯವರು ಮಿತ್ರರನ್ನಷ್ಟೇ ಅಲ್ಲದೆ ಶತ್ರುಗಳನ್ನು ಸಹ ತಮ್ಮ ಮಾತಿನ ಚತುರತೆಯಿಂದ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಈ ರಾಶಿಯವರು ನೀಡುವ ಸಲಹೆಯನ್ನು ಎಲ್ಲರೂ ಸ್ವೀಕರಿಸುತ್ತಾರೆ. ಶತ್ರುಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳುವ ಇವರ ಗುಣ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.

ಇದನ್ನು ಓದಿ : ಈ ಕನಸುಗಳು ಬಿದ್ದರೆ ದುಡ್ಡು ಬರೋದು ಗ್ಯಾರಂಟಿ..‍! 

ವೃಶ್ಚಿಕ ರಾಶಿ
ಈ ರಾಶಿಯ ವ್ಯಕ್ತಿಗಳು ಅತ್ಯಂತ ತಿಳಿವಳಿಕೆ ಉಳ್ಳವರು ಮತ್ತು ಬುದ್ಧಿವಂತರು ಆಗಿರುತ್ತಾರೆ. ಈ ರಾಶಿಯವರ ಮೇಲೆ ಇತರರು ಬೇಗ ನಂಬಿಕೆ ಇಡುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರು ಇತರರ ಭಾವನೆಗಳಿಗೆ ಬೆಲೆಕೊಡುವ ಸ್ವಭಾವದವರಾಗಿರುತ್ತಾರೆ. ಹೆಚ್ಚು ಆತ್ಮವಿಶ್ವಾಸವುಳ್ಳ ಈ ರಾಶಿಯವರು ಮಾತಿನಲ್ಲಿ ಅಷ್ಟೇ ನಿಪುಣರಾಗಿರುತ್ತಾರೆ. ಈ ರಾಶಿಯವರು ತಮ್ಮ ಮಾತಿನಿಂದ ಇತರರನ್ನು ಹೆಚ್ಚು ಪ್ರಭಾವಿತಗೊಳಿಸುತ್ತಾರೆ. ಹಾಗೆಯೆ ಚೆನ್ನಾಗಿ ಮಾತನಾಡುವ ಕಲೆಯನ್ನು ತಿಳಿದಿರುವ ಈ ರಾಶಿಯವರು ಜನರ ಮನಸ್ಸನ್ನು ಬೇಗ ಗೆಲ್ಲುತ್ತಾರೆ. ಈ ಗುಣದಿಂದ ತಮ್ಮ ಯಶಸ್ಸಿನ ದಾರಿಯನ್ನು ಕಂಡುಕೊಳ್ಳುತ್ತಾರೆ.

ಇದನ್ನು ಓದಿ : ಪ್ರೀತಿ ಮತ್ತು ಸ್ನೇಹದಲ್ಲಿ ಈ 4 ರಾಶಿಯವರಿಗೆ ಹೆಚ್ಚು ಮೋಸವಂತೆ...!  

ಕುಂಭ ರಾಶಿ
ಈ ರಾಶಿಯವರು ಜ್ಞಾನಿಗಳು ಮತ್ತು ವ್ಯವಹಾರದ ಬಗ್ಗೆ ಸಹ ಉತ್ತಮ ಜ್ಞಾನವನ್ನು ಹೊಂದಿದವರಾಗಿರುತ್ತಾರೆ. ತಮ್ಮ ವಿಚಾರಗಳನ್ನು ಎಲ್ಲರ ಎದುರಿಗೆ ಹೇಳಲು ಯಾವುದೇ ರೀತಿಯ ಸಂಕೋಚ ಇವರಿಗಿರುವುದಿಲ್ಲ. ಮಾತಿನಿಂದ ಇತರರನ್ನು ಗಟ್ಟಿಗೊಳಿಸುವುದು, ಆತ್ಮವಿಶ್ವಾಸವನ್ನು ಹೆಚ್ಚಿಸಿ, ಹೊಸ ಹುರುಪನ್ನು ತುಂಬುವುದು ಇವರ ಸ್ವಭಾವವಾಗಿರುತ್ತದೆ. ಇವರು ಉತ್ತಮ ಸಲಹಾಗಾರರು ಆಗಬಹುದಾಗಿರುತ್ತದೆ. ಬೇಸರದಲ್ಲಿದ್ದವರಿಗೆ ತಮ್ಮ ಮಾತಿನಿಂದ ಸಾಂತ್ವನವನ್ನು ಹೇಳಿ ಧೈರ್ಯ ತುಂಬುವ ಈ ರಾಶಿಯವರ ಗುಣ ಎಲ್ಲರನ್ನೂ ಸೆಳೆಯುತ್ತದೆ. ಕುಂಭ ರಾಶಿಯವರ ಈ ಗುಣವೇ ಇವರ ಮುಂದಿನ ಯಶಸ್ಸಿಗೆ ದಾರಿದೀಪವಾಗುತ್ತದೆ. 

click me!