ಗುರುವಿನ ಹಿಮ್ಮುಖ ಚಲನೆ: ಈ ರಾಶಿಗಳಿಗೆ ಶುಭಫಲ, ನಿಮಗೂ ಇದೆಯಾ?

By Suvarna NewsFirst Published Jun 16, 2021, 6:46 PM IST
Highlights

ಜೂನ್‌ 20ರಿಂದ ಗುರುವು ಹಿಮ್ಮುಖವಾಘಿ ಚಲಿಸಿ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಹಿಮ್ಮುಖ ಅಥವಾ ವಕ್ರ ಚಲನೆಯಿಂದ ಯಾರಿಗೆ ಶುಭ? ತಿಳಿಯೋಣ.

ಇದೇ ವಾರ, ಜೂನ್‌ 20ರಂದು ಗುರುಗ್ರಹವು ಕುಂಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ರಾಶಿಯಲ್ಲಿ ಒಟ್ಟು 120 ದಿನಗಳ ಕಾಲ ವಕ್ರಿಯಾಗಿ ಸಂಚರಿಸುವ ಗುರು ಮತ್ತೆ ಮಾರ್ಗಿಯಾಗಿ ಸಂಚರಿಸುತ್ತಾನೆ. ಈ ಮಧ್ಯೆ ಗುರುವು ಮಕರ ರಾಶಿಯಲ್ಲೂ ಸಂಚರಿಸುತ್ತಾನೆ. ವಕ್ರಿಯ ಸ್ಥಿತಿಯಲ್ಲೇ ಸೆಪ್ಟೆಂಬರ್‌ 14ರಂದು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದಾದ ನಂತರ ನವೆಂಬರ್‌ 12ರಂದು ಮತ್ತೆ ಕುಂಭ ರಾಶಿ ಪ್ರವೇಶಿಸುತ್ತಾನೆ. ಗುರುವಿನ ಹಿಮ್ಮುಖ ಚಲನೆ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಗುರುವಿನ ಶುಭಫಲವನ್ನು ಪಡೆಯುವ ರಾಶಿಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.

​ಮೇಷ ರಾಶಿ
ಮೇಷ ರಾಶಿಯವರು ಕೆರಿಯರ್‌ನಲ್ಲಿ ಉನ್ನತಿ ಪಡೆಯುವುದಕ್ಕೆ ಇದೇ ಸಮಯ, ಗುರುಬಲ ಎನ್ನುತ್ತಾರಲ್ಲ, ಅದು ಈ ಸಮಯದಲ್ಲಿ ನಿಮಗೆ ಕೂಡಿಬರುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ಅರಸಿಕೊಂಡು ಬರುತ್ತವೆ, ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆಯೂ ಇರುತ್ತದೆ.

​ಮೀನ ರಾಶಿ
ಗುರು ವಕ್ರಿಯಾಗಿರುವಾಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ನಿಮ್ಮ ಹಳೆಯ ಬಾಕಿಗಳು ಹಿಂದಿರುಗಬಹುದು. ತಮಗೆ ಬರಬೇಕಾಗಿದ್ದ ಹಣವನ್ನು ಪಡೆಯಬಹುದು. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ, ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಹಾಗೇ ನಿಮಗೆ ಸಾಲಗಾರರ ಕಾಟ ಇಲ್ಲದಾಗುತ್ತದೆ. ಹಳೆಯ ಬಾಕಿಗಳನ್ನೂ ತೀರಿಸಿ ಕೈ ತೊಳೆದುಕೊಳ್ಳುತ್ತೀರಿ.

​ಸಿಂಹ ರಾಶಿ
ಸಿಂಹ ರಾಶಿಯವರು ಗುರುವಿನ ಈ ಸಂಚಾರದಿಂದ ವ್ಯವಹಾರದಲ್ಲಿ ಲಾಭ ಪಡೆಯಬಹುದು. ಆದರೆ ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಅನಗತ್ಯವಾಗಿ ಯಾರೊಂದಿಗೂ ವಾದ ಮಾಡಬೇಡಿ. ಮದುವೆಗೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆಸ್ತಿ ಗಳಿಕೆಯ ಯೋಗವೂ ಇದೆ. ದೇವರ ಕೃಪೆಗೆ ಪಾತ್ರರಾಗಲು ಪಂಚಾಕ್ಷರಿ ಮಂತ್ರ ಪಠಿಸಿ.

​ವೃಶ್ಚಿಕ ರಾಶಿ
ಗುರುವಿನ ಹಿಮ್ಮುಖ ಚಲನೆಯಿಂದ ನೀವು ಕಚೇರಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಲಾಭಗಳ ಯೋಗವೂ ಇದೆ. ನೀವು ಹೂಡಿಕೆಯಿಂದ ಲಾಭ ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತು ನಿಮ್ಮ ವಿಚಾರದಲ್ಲಿ ಅಕ್ಷರಶಃ ನಿಜವಾಗಲಿದೆ. ಗುರುವಿನ ಜೊತೆಗೆ ಶನಿಯ ಅನುಗ್ರಹವೂ ಇರುವುದರಿಂದ ನೀವು ಕೈ ಹಾಕಿದಲ್ಲೆಲ್ಲ ಯಶಸ್ಸು ಹಿಂಬಾಲಿಸಿಕೊಂಡು ಬರುತ್ತದೆ. 

​ಧನು ರಾಶಿ
ಕೌಟುಂಬಿಕ ಜೀವನದಲ್ಲಿ ಕೆಲವು ಏರಿಳಿತಗಳು ಇರಬಹುದು. ಆತ್ಮೀಯರಾಗಿರುವ ಯಾರೊಂದಿಗಾದರೂ ಬಿರುಕು ಮೂಡಬಹುದು. ಆದರೆ ಕುಂಭ ರಾಶಿಯಲ್ಲಿ ವಕ್ರಿಯಾಗುವ ಗುರುವಿನ ಪ್ರಭಾವದಿಂದ ನಿಮ್ಮಲ್ಲಿ ಧೈರ್ಯ ಹೆಚ್ಚಾಗುತ್ತದೆ. ವ್ಯಾಪಾರಿಗಳು ಲಾಭ ಗಳಿಸಬಹುದು. ಈ ಅವಧಿಯಲ್ಲಿ ಸೌಕರ್ಯಗಳು ಹೆಚ್ಚಾಗಬಹುದು. ಮನೆಗೆ ಹೊಸ ಹೊಸ ಸುವಸ್ತುಗಳನ್ನು ಕೊಂಡು ತರುವ ಯೋಗವಿದೆ. 
 

click me!