ಕೆಲವರು ಅದೃಷ್ಟವಂತರೇ ಸರಿ. ಅವರ ಬಗ್ಗೆ ಯಾರಿಗೂ ಶ್ರೀಮಂತರಾಗಬಹುದೆಂಬ ಸುಳಿವೇ ಇರುವುದಿಲ್ಲ. ಆದರೆ ಜೀವನದಲ್ಲಿ ಇದ್ದಕ್ಕಿದ್ದಂತೆ ಅವರು ಶ್ರೀಮಂತರಾಗಿಬಿಡುತ್ತಾರೆ. ಹಾಗಂಥ ಅದರಲ್ಲಿ ಅರ ಪರಿಶ್ರಮ ಇದ್ದೇ ಇರುತ್ತದೆ. ಅಂತ ಅದೃಷ್ಟ ಈ ಅಕ್ಷರದ ಹೆಸರಿನವರಿಗೆ ಹೆಚ್ಚು.
ಹೆಸರು ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಯಶಸ್ಸಿಗೆ ಹೆಸರು ಪ್ರಮುಖ ಕೊಡುಗೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಹೆಸರನ್ನು ಇಡುವಾಗ ವಿಶೇಷ ಕಾಳಜಿ ವಹಿಸಲಾಗುತ್ತದೆ. ಹುಟ್ಟಿದ ಸಮಯದ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನಗಳನ್ನು ಹೆಸರಿಸುವ ಮೊದಲು ಲೆಕ್ಕ ಹಾಕಲಾಗುತ್ತದೆ. ಆ ಸಮಯಕ್ಕನುಗುಣವಾಗಿ ಯಾವ ಅಕ್ಷರದ ಹೆಸರಿಟ್ಟರೆ ವ್ಯಕ್ತಿ ಔನ್ನತ್ಯಕ್ಕೇರುತ್ತಾನೆ ಎಂದು ವಿಶ್ಲೇಷಿಸಿ ಹೆಸರಿಡಲಾಗುತ್ತದೆ. ಹೆಸರಿನ ಈ ಪ್ರಾಮುಖ್ಯತೆಯ ದೃಷ್ಟಿಯಿಂದ, ಜ್ಯೋತಿಷ್ಯದಲ್ಲಿ ಹೆಸರು ಜ್ಯೋತಿಷ್ಯ ಎಂಬ ಹೆಸರಿನಿಂದ ಇಡೀ ಶಾಖೆ ಇದೆ. ಇದರಲ್ಲಿ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಹೇಳಲಾಗಿದೆ.
ಕೆಲವರು ಹುಟ್ಟಿದ ಸಮಯವೇ ಹಾಗಿರುತ್ತದೆ, ಅವರು ಬಹಳ ಬುದ್ಧಿವಂತರಾಗಿರುತ್ತಾರೆ ಜೊತೆಗೆ ಅಷ್ಟೇ ಕಠಿಣ ಪರಿಶ್ರಮಿಗಳೂ ಆಗಿ ಬೆಳೆಯುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಜೀವನದಲ್ಲಿ ಉನ್ನತ ಸ್ಥಾನವನ್ನು ಸಾಧಿಸುತ್ತಾರೆ. ಮತ್ತೆ ಕೆಲವರು ಹೆಚ್ಚು ಪರಿಶ್ರಮ ಇಲ್ಲದೆಯೂ ಅಥವಾ ಪರಿಶ್ರಮವಿದ್ದರೂ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಠಾತ್ ಶ್ರೀಮಂತಿಕೆ ಪಡೆಯುತ್ತಾರೆ. ಅಂಥವರ ಹೆಸರು ಈ ಕೆಳಗಿನ ಅಕ್ಷರಗಳಿಂದ ಆರಂಭವಾಗುತ್ತದೆ.
ಹಿಡಿ- ಮನೆಯಲ್ಲಿ ಇಲ್ಲಿಡಿ, 10 ನಿಯಮಗಳಿವೆ, ಮರೀಬೇಡಿ..
ಎ ಹೆಸರಿನ ಜನರು: ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಶ್ರಮಶೀಲರು, ಬುದ್ಧಿವಂತರು ಮತ್ತು ಕೆಲಸದ ಬಗ್ಗೆ ಪ್ರಾಮಾಣಿಕರು. ಅವರ ಶ್ರಮಕ್ಕೆ ತಕ್ಕ ಫಲ ಸಿಗಲು ಸಮಯ ಹಿಡಿಯುತ್ತದೆ. ಆದರೆ ಈ ಹೆಸರುಗಳ ಜನರ ಜೀವನದಲ್ಲಿ ಇದ್ದಕ್ಕಿದ್ದಂತೆ ಪವಾಡಗಳು ಸಂಭವಿಸುತ್ತವೆ ಮತ್ತು ಅವರ ಅದೃಷ್ಟವು ರಾತ್ರೋರಾತ್ರಿ ಬದಲಾಗುತ್ತದೆ. ಅವರು ಇದ್ದಕ್ಕಿದ್ದಂತೆ ಪ್ರಗತಿಯನ್ನು ಪಡೆಯುತ್ತಾರೆ, ಅವರು ಶ್ರೀಮಂತರಾಗುತ್ತಾರೆ. ಅಯ್ಯೋ ನಮ್ಮ ಜೀವನ ಬದಲೇ ಆಗುತ್ತಿಲ್ಲವಲ್ಲ ಎಂದವರು ಒದ್ದಾಡುವ ಸಮಯದಲ್ಲೇ ಲಾಟರಿ ಹೊಡೆದ ಹಾಗೆ ಬದುಕು ಬದಲಾಗಬಹುದು.
ಆರ್ ಹೆಸರಿನ ಜನರು : ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಶೀಲರು ಮತ್ತು ಬುದ್ಧಿವಂತರು. ಅವರು ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು. ಅವರಿಗೆ ಕಾರ್ಯಗಳಲ್ಲಿ ಅಪಾರ ನಂಬಿಕೆ. ಅವರು ಜೀವನದಲ್ಲಿ ಅನೇಕ ಬಾರಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಆದರೆ ಅದಕ್ಕೆಲ್ಲ ಕೊರಗುತ್ತಾ ಕೂರುವವರು ಅವರಲ್ಲ. ಏಕೆಂದರೆ ಜೀವನ ಚಿಕ್ಕದು, ಸಂತೋಷವಾಗಿರಬೇಕೆಂಬ ಮನೋಸ್ಥಿತಿ ಅವರದು. ಕಡೆಗೂ ಅವರಿಗೆ ಮೋಸವಾಗುವುದಿಲ್ಲ. ಅವರು ಹಠಾತ್ ಪ್ರಗತಿಯನ್ನು ಪಡೆಯುವ ಬಲವಾದ ಅವಕಾಶಗಳನ್ನು ಹೊಂದಿದ್ದಾರೆ ಮತ್ತು ಅವರ ಜೀವನದಲ್ಲಿ ಇದ್ದಕ್ಕಿದ್ದಂತೆ ಸಂಪತ್ತಿನ ಮಳೆಯಾಗುತ್ತದೆ. ಆಗಲೂ ಅಹಂಕಾರ ನೆತ್ತಿಗೇರಿಸಿಕೊಳ್ಳದ ಸ್ವಭಾವ ಇವರದು.
Zodiac Traits: ಈ ರಾಶಿಯವರು ಸ್ವಾರ್ಥಕ್ಕಾಗಿ ಸ್ನೇಹಿತರಿಗೆ ವಂಚಿಸಲೂ ಹೇಸೋರಲ್ಲ!
ಎಸ್ ಹೆಸರಿನ ಜನರು: ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಪಡೆಯುತ್ತಾರೆ. ಆದರೆ ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ. ಅನೇಕ ಬಾರಿ ಈ ಹೆಸರುಗಳನ್ನು ಹೊಂದಿರುವ ಜನರು ಎಲ್ಲಾ ಪ್ರಯತ್ನಗಳ ನಂತರವೂ ಯಶಸ್ಸನ್ನು ಪಡೆಯುವುದಿಲ್ಲ. ಅವರು ಗೆಲುವಿನ ಹತ್ತಿರ ಹೋಗಿ ಹೋಗಿ ಸೋಲು ನೋಡುತ್ತಿರುತ್ತಾರೆ. ಇದೇ ತಮ್ಮ ಜೀವನ ಎಂದೂ ಒಪ್ಪಿಕೊಳ್ಳುವ ಹಂತಕ್ಕೆ ಹೋಗುತ್ತಾರೆ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಎಲ್ಲವೂ ಬದಲಾಗುತ್ತದೆ. ಅವರ ಜೀವನವು ಪವಾಡಕ್ಕಿಂತ ಕಡಿಮೆಯಿರುವುದಿಲ್ಲ. ಅವರ ಜೀವನದಲ್ಲಿ ಸಂಪತ್ತು ಇದ್ದಕ್ಕಿದ್ದಂತೆ ಬರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.